ಭಯಾನಕ
ಭಯಾನಕ
ಒಂದು ದೊಡ್ಡ ಆಸ್ಪತ್ರೆಯಲ್ಲಿ ಒಂದೇ ದಿನ ಹದಿನೈದು ರೋಗಿಗಳು ಪ್ರಾಣ ಬಿಟ್ಟಿದ್ದರು. ಎಲ್ಲಾ ಹೆಣಗಳುಕೆಳ ಮಹಡಿಯಲ್ಲಿತ್ತು. ಅಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸಮಾಡುವವನು ಇದೇ ಮೊದಲಸಲ ಇಷ್ಟೊಂದು ಹೆಣಗಳನ್ನು ಒಂದೇ ದಿನ ನೋಡುತ್ತಿರುವುದಾಗಿ ಮತ್ತೊಬ್ಬನಿಗೆ ಹೇಳಿದ. ಒಂದಿದ್ದರೂ ಅಷ್ಟೇ ಹದಿನೈದು ಇದ್ದರೂ ಅಷ್ಟೇ ನನಗೇನು ಭಯ ಇಲ್ಲ ,ನಾನು ದಿನವೂ ಹೆಣ ನೋಡೋನು ಅಂತ ಧೈರ್ಯವಾಗಿ ಹೇಳುತಿದ್ದ . ಕೆಲಸಕ್ಕೆ ಹೊಸದಾಗಿ ಸೇರಿದ್ದ ಮತ್ತೊಬ್ಬ ಏನೇ ಹೇಳು ನನಗೆ ಅಲ್ಲಿ duty ಹಾಕಿದರೆ ಮಾಡಲ್ಲ. ಬೇಕಾದರೆ ಕೆಲಸ ಬಿಟ್ಟು ಹೋಗ್ತೀನಿ ಅಂದ. ಅಲ್ಲಿಗೆ ಮತ್ತೆ ಇಬ್ಬರು ಇವರನ್ನ ಬಂದು ಸೇರಿಕೊಂಡರು ಆಗ ರಾತ್ರಿ ಹನ್ನೊಂದೂವರೆ ಸಮಯ.ತನಗಂತೂ ಯಾವ ಭಯವೂ ಇಲ್ಲವೆಂದು ಬೇಕಾದರೆ ದೀಪ ಇಲ್ಲದಿದ್ದರೂ ಮೊಬೈಲ್ ಲೈಟ್ ನಲ್ಲಿ ಹೋಗಿ ಎಲ್ಲಾ ಹೆಣಗಳನ್ನ ಮುಟ್ಟಿ ಬರ್ತೀನಿ ಅಂತ ಜಂಭದಿಂದ ಹೇಳಿದ.ನೀನು ಹಾಗೆ ಹೋಗಿ ಮುಟ್ಟಿ ಬಂದರೆ ನೂರು ರೂಪಾಯಿ ಕೊಡ್ತೀನಿ ಅಂತ ಒಬ್ಬ ಹೇಳಿದ. ಅದಕ್ಕೆ ಮತ್ತೂಬ್ಬ ನಾನೂ ನೂರು ರೂಪಾಯಿ ಕೊಡ್ತೀನಿ ಅಂದ. ಮೊದಲೇ ಇವನಿಗೆ ಕುಡಿತದ ಹುಚ್ಚು. ಇನ್ನೂರು ರೂಪಾಯಿ ಆಸೆಗೆ ಒಪ್ಪಿದ. ಅವನು ಅಲ್ಲಿಗೆ ಹೋಗುವ ಮೊದಲು ಅಲ್ಲಿನ ದೀಪ ಆರಿಸುವುದಾಗಿ ಹೇಳಿದರು. ಅದಕ್ಕೂ ಒಪ್ಪಿಕೊಂಡ. ಇನ್ನೊಬ್ಬ ನೀನು ಎಲ್ಲಾ ಹದಿನೈದು ಹೆಣಗಳನ್ನ ಮುಟ್ಟಿ ಬಂದಿರುವುದಕ್ಕೆ ಸಾಕ್ಷಿ ಬೇಕು . ಅದಕ್ಕೆ ನಾನು ನಿನಗೆ ಚಾಕೊಲೇಟ್ ತಂದು ಕೊಡ್ತೀನಿ ಅದನ್ನ ಅವುಗಳ ಬಾಯಿಯೊಳಗೆ ಹಾಕಿ ಬಾ. ನಾವು ಬೆಳಗ್ಗೆ ನೋಡಿ , ನಿನಗೆ ಇನ್ನೂರು ರೂಪಾಯಿ ಕೊಡ್ತೀವಿ ಅಂದ. ಪಾಪ ಹಣದಾಸೆಗೆ ಅದಕ್ಕೂ ಒಪ್ಪಿದ.
ಅವರೆಲ್ಲ ಹೇಳಿದಂತೆ ಮೊಬೈಲ್ ಲೈಟ್ ಆನ್ ಮಾಡ್ಕೊಂಡು ಕೆಳಗೆ ಲಿಫ್ಟ್ ನಲ್ಲಿ ಹೋಗಿ ಒಂದೊಂದೇ ಹೆಣಗಳ ಬಾಯಲ್ಲಿ ಚಾಕೊಲೇಟ್ ಇಡುತ್ತಾ ಬಂದ. ಆರು ಹೆಣ ಆದಮೇಲೆ ಏಳನೇ ಹೆಣದ ಬಾಯಲ್ಲಿ ಚಾಕೊಲೇಟ್ ಇಟ್ಟಾಗ ಆ ಹೆಣ ಇನ್ನೊಂದು ಕೊಡು ಅಂತ ಬಾಯಿ ಬಿಟ್ಟು ಹೇಳಿತು. ಅಲ್ಲಿಂದ ಕತ್ತಲಲ್ಲಿ ಕಿರುಚುತ್ತಾ ಬಿದ್ದು ಎದ್ದು ಬಾಗಿಲ ಹತ್ತಿರ ಬರುವ ಹೊತ್ತಿಗೆ ನಿತ್ರಾಣ ವಾಗಿದ್ದ. ಮಾತನಾಡಲೂ ಆಗದ ಸ್ಥಿತ ಯಲ್ಲಿದ್ದ. ಆಗ ಸುಮಾರು ಎರಡು ಗಂಟೆ . ಯಾರೋ ಒಂದು ಹೆಣದ ವಾರಸುದಾರರು ಅಲ್ಲಿಗೆ ನೋಡಲು ಬಂದಾಗ ಇವನು ಬಾಗಿಲಲ್ಲಿ ಬಿದ್ದಿರುವುದನ್ನು ನೋಡಿ duty ಡಾಕ್ಟರ್ ಗೆ ತಿಳಿಸಿದರೂ ಅವನನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.. ಮಾರನೇ ದಿನ ಅವನ ಸಾವಿಗೆ , ಇವರ ಹುಡುಗಾಟವೇ ಕಾರಣವೆಂದು ತಿಳಿದು. ಎಲ್ಲರೂ ಬೆಚ್ಚಿಬಿದ್ದರು. ಅಂದು ರಾತ್ರಿ ನಡೆದಿದ್ದು ಏನೇಂದರೆ, ಒಬ್ಬ ಅವನಿಗೆ ಹೆದರಿಸಲು ಹೆಣಗಳ ಮಧ್ಯೆ ಮೊದಲೇ ಹೋಗಿ ಮಲಗಿದ್ದ . ಅವನೇ ಇನ್ನೊಂದು ಚಾಕೊಲೇಟ್ ಕೇಳಿದ್ದು.ಇದು ನಂತರದ ತನಿಖೆಯಿಂದ ತಿಳಿದ ವಿಷಯ.