Meenakshi "meeನ"

Tragedy Action Thriller

2  

Meenakshi "meeನ"

Tragedy Action Thriller

ಆ ನೆನಪೇ ಮಲ್ಲಿಗೆಯ ಪರಿಮಳ

ಆ ನೆನಪೇ ಮಲ್ಲಿಗೆಯ ಪರಿಮಳ

9 mins
129



ಬಾಯಲ್ಲಿ ಹಲ್ಲು ಇಲ್ಲದೆ, ಚೆಂದದ ಮುದಕಿ ಕಣ್ಣಿಗೆ ಸೋಡಾ ಗ್ಲಾಸ್ ಹಾಕಿಕೊಂಡು ಬಾಲ್ಕನಿ ಯಲ್ಲಿ ಕುಳಿತು , ಹೋಗೋ ಬರೊ ದಾರಿ ಹೋಕರನ್ನು ನೋಡುತ್ತಾ ಯಾವುದೋ ನೆನಪಿನ ಲೋಕಕ್ಕೆ ಜಾರಿದಳು.....ಆಗಾಗ ಜಾರುವ ಸೋಡಾ ಗ್ಲಾಸ್ ಮತ್ತೆ ಮೂಗಿನ ಮೇಲೆ ಸರಿಯಾಗಿ ಕೂರಿಸಲು ಯತ್ನಿಸುತ್ತಿದ್ದಳು...

" ಹೀಗೆ ಅಲ್ಲವಾ ನಾನು ಒಂದು ಕಾಲದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಿಯಾಡ್ತಾ ಇದ್ದೆ. ಈ ಜೀವನ ನೇ ಒಂದು ತರ... ಇವತ್ತು ಹೀಗೆ.. ನಾಳೆ ಇಂನ್ಹೆಗೋ ಇರುತ್ತೆ....

ಅಪ್ಪ , ಅಮ್ಮ ಯಾವತ್ತೂ ಹೇಳುತಿದ್ದ ಮಾತು.., ಕುದರೆ ಕಾಲಾ ನಿಂದು..? ಯಾವತ್ತೂ ಒಂದು ಕಡೆ ನಿಲ್ಲೋಲ್ಲ ಅಂತಿಯಲ್ಲ ಅಂತ ಕಿಚಾಯಿಸ್ತಾ ಇದ್ದರು..

ಅವರಿಗೆ ಗೊತ್ತಿಲ್ಲದ ಸಂಗತಿ.., ಮಗಳು ಸುಮನಾ ಗೌಪ್ಯವಾಗಿ ಸರ್ಕಾರಕ್ಕೆ ಸೇವೆ ಮಾಡುತ್ತ ಬಂದಳೆಂದು. ನನ್ನ ಹೊರತು ಯಾರಿಗೂ ಗೊತ್ತು ಆಗಲೇ ಇಲ್ಲ.., ಇಲ್ಲಿಯವವರೆಗೂ ಕೂಡ.

ರಿಸರ್ಚ್ ಆಯಿಂಡ್ ಅನಲಿಸ್ಸ್ ವಿಂಗ್ ಗೆ ಅದೇ ತಾನೇ ಒಳಗೆ ಕಾಲು ಇಟ್ಟಿದ್ದೆ. ಹೋದ ಸ್ವಲ್ಪ ದಿನದಲ್ಲೇ ಎಲ್ಲ ಸುಳ್ಳು ದಾಖಲೆಗಳ ಸೃಷ್ಟಿಸಿ , ನನ್ನ ಪಾಕಿಸ್ತಾನಕ್ಕೆ ಕಳುಹಿಸಿದರು.. ದಾಖಲೆಯನ್ನು ಯಾರೇ ನೋಡಿದರು ಸುಳ್ಳು ಅಂತ ಹೇಳಲು ಸಾಧ್ಯವೇ ಇಲ್ಲ.. ನಾ ಪಾಕಿಸ್ತಾನಿ ಪ್ರಜೆ ಯಾಗಿ ಹೋಗಿದ್ದೆ. ಸತ್ಯದ ತಲೆ ಮೇಲೆ ಹೊಡೆದ ಹಾಗೆ ಇದ್ದವು ಪ್ರತಿ ದಾಖಲೆ ಗಳು..


ಪಾಕಿಸ್ತಾನ ವನ್ನು ರಾಜಾರೋಷವಾಗಿ ನುಸುಳಿದ ಕೆಲ ದಿನಗಳಲ್ಲೇ ನಾನು ಲಷ್ಕರ್ ಈ ತೈಬ್ ಸೇರಬೇಕಿತ್ತು... ಅದಕ್ಕೆಲ್ಲ ನಮ್ಮವರು ಬೇಕಾದ ವ್ಯವಸ್ಥೆ ಮಾಡಿದ್ದರು.. ಮತ್ತೆ ನನಗೂ ಅಲ್ಲಿ ಹೇಗೆ ಇರಬೇಕೆಂಬ ಟ್ರೈನಿಂಗ್ ಕೂಡ ಕೊಟ್ಟಿದ್ದರು.. ಸತತವಾಗಿ ಆರು ತಿಂಗಳ ಟ್ರೈನಿಂಗ್ ಅದು. ಸ್ವಲ್ಪ ಹೆಚ್ಚು ಕಡಿಮೆ ಆಯಿತು ಅಂದರು ನಮ್ಮ ಪ್ರಾಣ ನಮ್ಮ ಕೈಯಲ್ಲೇ ಹೋಗುವ ಕಲೆ ಕೂಡ ಕಲಿಸಿಬಿಟ್ಟರಲ್ಲ ಅವರು...

ಯಾರು ಯಾರನ್ನೋ ಭೇಟಿಯಾದ ಮೇಲೆ , ಭೇಟಿಯಾದ ಎಲ್ಲರೂ ನನ್ನನ್ನು ಒಮ್ಮೆ ಮೇಲಿನಿಂದ ಕೆಳಗಿನ ವರೆಗೆ ನೋಡುವವರೆ... ಅಲ್ಲಿ ಯಾರಿಗೂ ನನ್ನ ಹೆಸರು ಕೂಡ ಬೇಡವಾಗಿತ್ತು. ಆದರೂ ಒಬ್ಬ ಕೇಳಿಯೇ ಬಿಟ್ಟ.. ಧೈರ್ಯದಿಂದ ಹೇಳಿದೆ ನನ್ನ ಹೆಸರು ಶಾಹಿದಾ ಅಂತ . ಕಡೆಗೆ ಅವರ ಏನೇನೋ ಗುಪ್ತ ಸಮಾಲೋಚನೆಯನ ನಂತರ ನಾನು ಲಷ್ಕರ್ ಎ ತೈಬ್ ಸೇರಿ ಬಿಟ್ಟಿದ್ದೆ... ಅದರ ಒಬ್ಬ ಪ್ರಮುಖ ಸದಸ್ಯೆ ಆಗಿ ಹೋಗಿದ್ದೆ.

ನನಗೆ ವಹಿಸಿದ್ದ ಕೆಲಸ, ಅಲ್ಲಿಯ ಎಲ್ಲ ಪ್ರಮುಖ ಘಟನೆಗಳ ವಿಚಾರಗಳ ವರದಿ ಮಾಡುವುದು... ಆದರೆ , ನನ್ನ ಮುಖ್ಯ ಗುರಿ ಇದ್ದಿದ್ದು...ಹಫೀಜ್ ಸಯೀದ್ ನನ್ನು ಬೇಟೆಯಾಡುವುದು. ಅದು ಸುಲಭದ ಮಾತಲ್ಲ ಅಂತ ನನಗೂ ಗೊತ್ತಿತ್ತು... It's all about to die...


ನಿಜ, ಸಾವಿನ ಹೆದರಿಕೆ ಒಂದು ಸಾಕು , ಎಲ್ಲ ಯೋಜನೆ ಹಾಳು ಮಾಡಿ ಹಾಕಲು. ಆದರೆ ವಿಂಗ್ ನವರು ಮೊದಲೇ ಸಾವಿನ ಭಯ ಹೋಗಿಸಿ.., ಅದೊಂದು ಬರಿ ಸಾವು ಅನ್ನೋ ತರ ಕಲಿಸಿ ಬಿಡ್ತಾರೆ..

ಸೇರಿಕೊಂಡ ಸ್ವಲ್ಪ ದಿನ ಕಷ್ಟವಾಗಿತ್ತು.., ಅವರ ಘೋಷಣೆ.., ಪ್ರತಿದಿನ ಒಂದೇ ಮಾತನ್ನು ತಲೆಗೆ ತುಂಬುವ ಅವರ ರೀತಿ.. ಹಿಂಸೆ ಯಾಗಿ ಹೊಯತು.. ಆದರೂ.., ನಾನು ಪಡೆದ ಟ್ರೈನಿಂಗ್ ಇಲ್ಲಿ ಸಹಾಯಕ್ಕೆ ಬಂದಿತು.

ನನ್ನ ಮೊದಲ ಕೆಲಸ, ಇಲ್ಲಿ ನನ್ನ ಲೀಡರ್ ನ ನಂಬಿಕೆ ಗಳಿಸುವುದು. ಒಂದು ಹೆಣ್ಣಾಗಿ ಮಾನ ಕಾಪಾಡಿಕೊಂಡು ಕ್ರೂರ ಮೃಗಗಳ ನಡುವೆ, ಆ ರಾಕ್ಷಸರ ನಂಬಿಕೆ ಗಳಿಸುವುದು ಅಸಾಧ್ಯದ ಮಾತಾಗಿತ್ತು...

ಆದರೆ ನಾನು ಎಲ್ಲದಕ್ಕೂ ಸಿದ್ಧಳಾಗಿ ಬಂದಿದ್ದೆ... ದಿನಗಳೇ ಕಳೆದವು , ಪ್ರತಿ ದಿನ ಇವರ ಘೋಷಣೆ.., ಬ್ರೈನ್ ವಾಶ್ ಮಾಡೋ ರೀತಿ.. ಅಭ್ಯಾಸ ವಾಗಿ ಹೋಗಿತ್ತು.. ಎಷ್ಟರ ಮಟ್ಟಿಗೆ ಎಂದರೆ.., ನಾನು ಬಂದ ಕಾರಣ ಮರೆಯಬೇಕಿತ್ತು.. ಕೆಲ ದಿನಗಳ ವರೆಗೆ. , ಅನಿವಾರ್ಯವಾಗಿತ್ತು ಅದು ನನಗೂ. ನನ್ನ ಮೊದಲ ಹೆಜ್ಜೆ ಹಫೀಜ್ ಸಯೀದ್ ಕಡೆ ಇಡೋ ಸಮಯ ಬಂದಾಗಿತ್ತು. ಭಾರತದ ಒಂದು ಪ್ರಾಂತದ ಮೇಲೆ ದಾಳಿ ಮಾಡಿ ಬರುವ ನಿಟ್ಟಿನಲ್ಲಿ ಸಾಧ್ಯವಾಗಿತ್ತು.. ಭಾರತ ನನಗೆ ಮೂಲೆ ಮೂಲೆ ಪರಿಚಯ.. ಅದರಲ್ಲೂ ನಾವು ಗಲಾಟೆ ಮಾಡುವ ಸ್ಥಳ ಕತ್ತಲಲ್ಲೂ ಸರಿಯಾಗಿ ಓಡಾದ ಬಲ್ಲೆ ನಾ.. ಅಷ್ಟು ಪರಿಚಯದ ಸ್ಥಳ.. ಒಬ್ಬ ರಾಕ್ಷಸನ ಹತ್ಯೆಗೂ ಮೊದಲೂ ಕೆಲ ಅಮಾಯಕ, ಮುಗ್ಧ ಜೀವಗಳು ನರಕ ನೋಡಬೇಕಿತ್ತು.


ಖುಷಿಯ ಸಂಗತಿ ಅಂದರೆ.., ಆ ಅಮಾಯಕ , ಮುಗ್ಧ ಜೀವಿಗಳು ಎನಿಸಿಕೊಂಡವರು.. ಎಲ್ಲೋ.. ಯಾವುದೋ ಸಂಘಟನೆಯ ಕಾರ್ಯಕರ್ತರು.. ಅದು ಭಾರತ ದೇಶಕ್ಕೆ ಹಾನಿ ಮಾಡಲು. ಹಾಗಾಗಿ ನನ್ನ ಮನಸಾಕ್ಷಿ ನನ್ನ ಚುಚ್ಚಲು ಇಲ್ಲ.


ನನ್ನ ಲೀಡರ್ ಹೇಳಿದ ಎಲ್ಲ ಕೆಲಸವನ್ನು ಭಾರತದಲ್ಲಿ ಚಾಚು ತಪ್ಪದೆ ಮಾಡಿ ಬಂದಿದ್ದೆವು.. ಆ ಒಂದು ಸಣ್ಣ ಗುಂಪಿಗೆ , ಮರಳಿ ಬರುವ ವರೆಗೂ ನಾನು ಮುಂದಾಳತ್ವ ವಹಿಸಿದ್ದೆ... ಅದೇ ನನ್ನನ್ನು ಮುಂದಿನ ಮತ್ತೊಂದು ಮೆಟ್ಟಿಲಿಗೆ ಕರೆದುಕೊಂಡು ಹೋಗಿದ್ದು.

ಎಲ್ಲವನ್ನು ಸರಿಯಾಗಿ ನಿಭಾಯಿಸಿ, ನನ್ನ ಸಂಗಡಿಗರ ಯಾರೊಬ್ಬರಿಗೂ ಹಾನಿಯಾಗದಂತೆ ಮರಳಿ ಕರೆದುಕೊಂಡು ಬಂದಿದ್ದೆ.. ಇದು ನನ್ನ ಮೊದಲ ಸಾಧನೆ , ಲಷ್ಕರ್ ಎ ತೈಬ ದಲ್ಲಿ.

ಸಂಘಟನೆ ಸೇರಿ ಆರು ತಿಂಗಳೇ ಕಳೆದು ಹೋಗಿತ್ತು. ಆ ಆರು ತಿಂಗಳಲ್ಲಿ ನನಗೆ ಇವರ ಯಾವ ಚಟುವಟಿಕೆಯ ಮಾಹಿತಿ ಒಂದು ಇಂಚಿನಷ್ಟು ಕೂಡ ದೊರೆತಿರಲಿಲ್ಲ..

ಈ ಸಂಘಟನೆಗಳೇ ಹಾಗೆ.. ಯಾವ ಮಾಹಿತಿಕೂಡ ಸೋರಿಕೆ ಆಗುವುದೇ ಇಲ್ಲ.. ಸರ್ಕಾರಕ್ಕಿಂತ ಕಠಿಣ ಕಾನೂನು ಇಲ್ಲಿ.

ಹಂತ ಹಂತವಾಗಿ ಮೆಟ್ಟಿಲು ಹತ್ತುತ್ತಾ ಬಂದೆ.., ನಾನು ಪೂರ್ತಿಯಾಗಿ ಲಷ್ಕರ್ ಎ ತೈಬ್ ಸಂಘಟನೆಯೊಳಗೆ ಮುಳುಗಿ ಹೋಗಿದ್ದೆ. ಈ ಮೂರು ವರ್ಷದಲ್ಲಿ.

ಈಗ ನನಗೆ ಹಫೀಜ್ ಸಯೀದ್ ಕಣ್ಣಿಗೇಟುವ ಕುರಿಯಂತೆ ಕಾಣಿಸುತ್ತಿದ್ದ ಹೊರತು, ಅವನ ಆಸು ಪಾಸು ಸುಳಿಯಲು ಅವಕಾಶ ವಿರುತ್ತಿರಲಿಲ್ಲ.

ಈ ಮೂರು ವರ್ಷದಲ್ಲಿ ಸಾಕಷ್ಟು ಮಾಹಿತಿ ಒದಗಿಸುವ ಅವಕಾಶ ಸಿಕ್ಕಿತ್ತು.

ನಾನು ಇಲ್ಲಿ ಸೇರುವ ಮೊದಲೇ, ಭಾರತದಲ್ಲಿ ನನ್ನ ಆಫೀಸರ್ ಹೇಳಿರೊ ಪ್ರಕಾರ , ಇಲ್ಲಿ ನನ್ನ ಹೊರತು ಇನ್ನೊಬ್ಬ ನನ್ನ ಸಹಾಯಕ್ಕೆ ಇರುತ್ತಾನೆ. ಅದು ನಾನು ಬಂದು ಸ್ವಲ್ಪ ದಿನ ಕಳೆದು.. ಹಾಗೂ ನಾನು ಮಾಹಿತಿ ಕೊಡುತ್ತ ಇರಬೇಕಾದರೆ..

ಹೌದು.., ಸರ್ಕಾರ ಸುಮ್ಮನೆ ಒಬ್ಬರನ್ನು ಇನ್ನೊಬ್ಬರ ಸಹಾಯಕ್ಕೆ ಕಳಿಸುವುದಿಲ್ಲ. ಅದು ಆ ಇನ್ನೊಬ್ಬರಿಂದ ಸರ್ಕಾರಕ್ಕೆ ಯಾವ ಸಹಾಯ ವಾಗುತ್ತಿಲ್ಲ ಅಂತ ಗೊತ್ತಿದ್ದು.. , ನನ್ನಿಂದ ಮಾಹಿತಿ ದೊರೆತ ನಂತರ ಖಂಡಿತ ಇಲ್ಲೊಬ್ಬ ಬರುತ್ತಾನೆ ಅಂತ ಖಾತರಿ ಇತ್ತು ನನಗೆ.. ಆದರೆ ಇನ್ನೂ ಆತನ ಪತ್ತೆ ಆಗಿಲ್ಲ ನನಗೆ. ಅಥವಾ ಅವ ಬಂದೆ ಇಲ್ವಾ..? ಉಹೊಂ... ನನಗೆ ಯಾವುದು ಗೊತ್ತಿಲ್ಲ...

ಗೊತ್ತಿರುವುದಷ್ಟೇ... , ಇಲ್ಲಿನ ಮಾಹಿತಿ ಗೌಪ್ಯವಾಗಿ ನನ್ನ ದೇಶಕ್ಕೆ ಒದಗಿಸುವುದು, ಹಾಗೂ ಇಲ್ಲಿ ನನ್ನ ಮುಖಂಡ ಹೇಳಿದ ಹಾಗೆ ಕೇಳುವುದು. ಈ ಎರಡನ್ನು ಚಾಚು ತಪ್ಪದೆ ಮಾಡಿಕೊಂಡು ಬಂದೆ..., ನಾಲ್ಕು ವರ್ಷ ಕಳೆಯುವುದರೊಳಗೆ ಒಬ್ಬ ಹೊಸಬನ ಆಗಮ ವಾಯಿತು.

ಹೌದು.., ಇಲ್ಲಿ ಪ್ರತಿ ದಿನ ಒಬ್ಬ ಹೊಸಬ ಸದಸ್ಯನಾಗುತ್ತಾನೆ.. ಆದರೆ.., ನಾಲ್ಕು ವರ್ಷ ಕಳೆದ ಮೇಲೆ ಆದ ಹೊಸಬನ ಆಗಮನ ನನಗೆ ಏನೋ ಉತ್ಸಾಹ ತಂದಂತಾಯಿತು.

ಅವನೊಬ್ಬ ಪಕ್ಕ ಮುಸ್ಲಿಂ.., ನನ್ನ ಹಾಗೆ. ಅವನನ್ನು ನೋಡಿದರೆ , ಅವ ಮುಸ್ಲಿಂ ಅಲ್ಲ ಅಂತ ಯಾರು ಹೇಳುತ್ತಿರಲಿಲ್ಲ. ಅವನಿಗೊಂದು ಹೆಸರು ಕೂಡ ಇತ್ತು, ಶಬ್ಬೀರ... ಅವ ನನ್ನ ಹಾಗೆ ಪಾಕಿಸ್ತಾನ ಪ್ರಜೆಯಾಗಿ ಬಂದಿರಲಿಲ್ಲ... ಅವನೊಬ್ಬ ಅಫಘಾನಿಸ್ತಾನ ಪ್ರಜೆ ಯಾಗಿದ್ದ.

ಅವನನ್ನು ಅಫಘಾನಿಸ್ತಾನದಿಂದ ಕರೆತರಲಾಗಿತ್ತು.. ಈ ಸಂಘಟನೆಗೆ. ಯಾವ ಹುಡಗಿ ನೋಡಿದರು ಒಂದೇ ನೋಟದಲ್ಲಿ ಪ್ರೀತಿಸಿ ಬಿಡುವಳು ಅಷ್ಟು ಸುಂದರ ಯುವಕ. ಗುಳಿ ಬೀಳುವ ಕೆನ್ನೆ, ಕುರುಚಲು ಗಡ್ಡದಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತಿತ್ತು , ಅದು ಅವ ನಕ್ಕಾಗ. ಪ್ರಶಾಂತವಾದ ಕಪ್ಪು ಮೋಡಗಳ ಹಾಗೆ ಕಣ್ಣು , ಆರು ವರೆ ಅಡಿ ಎತ್ತರದ ದೇಹ. ಆ ದೇಹಕ್ಕೆ ತಕ್ಕಂತೆ ಮೈ ಕಟ್ಟು.

ಅವನ ನೋಡುತ್ತಿದ್ದಂತೆ ನಾನು ಹೆಣ್ಣು ಎನ್ನುವುದು ನೆನಪಾಯಿತು. ಅಥವಾ ಅವನೆ ನೆನಪಿಸಿ ಬಿಟ್ಟ. ಒಟ್ಟಿನಲ್ಲಿ ನಾನು ಅವನನ್ನು ಪ್ರೀತಿಸಿ ಬಿಟ್ಟೆ... ಮಾತಿನಲ್ಲಿ ಅತಿಯಾದ ಸಲುಗೆ ಇರಲಿಲ್ಲ . ಅವನೇ ಹಾಗೆ ಕೆಲಸದಲ್ಲಿ ತೊಡಗಿದ ಎಂದರೆ.., ಅತಿ ಗಂಭೀರ.. ಮಾತು ತುಂಡರಿಸಿದ ಹಾಗೆ... , ಅದೇ ನನಗೆ ಇನ್ನಷ್ಟು ಇಷ್ಟವಾಗಿದ್ದು. ಆದರೆ ಹೇಳುವುದು ಹೇಗೆ..? ಈ ನಾಲ್ಕು ವರ್ಷದಲ್ಲಿ ಎಲ್ಲವನ್ನು ಕಳೆದುಕೊಂಡು ಬಿಟ್ಟಿದ್ದೆ. ಅದು ಅವನಿಗೂ ಗೊತ್ತು . ನಾನೊಂದು ಯಂತ್ರವಾಗಿದ್ದೆ.. ಶಬ್ಬೀರ್ ನನ್ನು ನೋಡಿದ ಮೇಲೆನೆ.. ಮನುಷ್ಯಳಾಗಿದ್ದು , ಅದಕ್ಕೂ ಮಿಗಿಲಾಗಿ ಹೆಣ್ಣಾಗಿದ್ದು..

" ಅವನೇ ಒಂದು ದಿನ ಬಂದ ನನ್ನ ಹತ್ತಿರಕ್ಕೆ.., ನೀನು ಇಲ್ಲಿ ಬಂದಿದ್ದ ಕಾರಣ ಏನು..? ಈಗ ಮಾಡ್ತಾ ಇರೋದು ಏನು ಅಂತ ಕೇಳಿ ಬಿಟ್ಟ. "

ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೂ ಭಯವಾಗಿ ಹೋಗಿತ್ತು.., ಅವನ ಆ ಮಾತು ಕೇಳಿ. ಮನುಷ್ಯರ ಮನಸ್ಸು ಓದುತ್ತಾನಾ ಇವ ಅಂತ ಅನುಮಾನ ಮೂಡಿತು.

ನಾನು ಏನೊಂದು ಹೇಳದೆ ನನ್ನ ಪಾಡಿಗೆ ನಾನು ಅಲ್ಲಿಂದ ನಡೆದೇ... ಗೊತ್ತಿತ್ತು ನನಗೆ ನಾನು ಬಂದ ಕಾರಣ.. ಆದರೆ , ಪ್ರೀತಿ..! ಕರ್ತವ್ಯ ಮರೆತು ಇರಲಿಲ್ಲ ನಾನು. ಆದರೆ ನನ್ನ ಮನದೊಳಗೆ ಆದ ಬದಲಾವಣೆ..? ಹೇಳಿ ಕೇಳಿ ಆಗುವಂಥದ್ದು ಅಲ್ಲ.. ಪ್ರೀತಿ ಅದು ಆಯಿತು ಅಷ್ಟೆ... !

ಅಲ್ಲಿಂದ ನಮ್ಮಿಬ್ಬರ ಒಡನಾಟ ಸ್ವಲ್ಪ ಜಾಸ್ತಿ ಯಾಯಿತು.. ಯಾರಿಗೂ ಅನುಮಾನ ಬಾರದ ರೀತಿ.. ಯಾಕೆಂದರೆ ನಾವು ಮಾತನಾಡುತ್ತ ಇರಲಿಲ್ಲ.. ನಾವು ಕಲಿತ ಕೋಡ್ ವರ್ಡ್.. ಉಪಯೋಗಿಸುತ್ತಿದ್ದೆವು.. ನಮ್ಮಿಬ್ಬರ ಹೊರತು ಯಾರಿಗೂ , ನಾವು ಸಂಭಾಷಿಸುತ್ತಿದ್ದೆವು ಅಂತ ಗೊತ್ತಾಗುವ ಹಾಗೆ ಇರಲಿಲ್ಲ.

ನಾನು ಹಫೀಜ್ ಸಯೀದ್ ನ ಆಪ್ತರಿಗೆ ಆಪ್ತಳಾಗಿ ಹೋಗಿದ್ದೆ. ನನ್ನ ಕಾರ್ಯ ವೈಖರಿ ಎಲ್ಲರ ಗಮನ ಸೆಳೆದಿತ್ತು.

ಒಂದು ದಿನ ಹಫೀಜ್ ಸಯೀದ್ ಖುದ್ದಾಗಿ ಬಂದು ಎಲ್ಲ ಲೀಡರ್ ಗಳನ್ನು ಭೇಟಿಯಾಗಿ ಯಾವುದೋ ಮುಖ್ಯ ಸಮಾಚಾರ ಹೇಳುವವ ನಿದ್ದ. ( ಕಡೆಗೂ ಆ ಸಮಾಚಾರ ಏನು ಅಂತ ಗೊತ್ತಾಗಲೇ ಇಲ್ಲ...) ಅದಕ್ಕೊಂದು ಪಾರ್ಟಿ ಸಹ ಇಟ್ಟುಕೊಂಡಿದ್ದರು. ಅಲ್ಲಿ ಕೇವಲ ಅವನ ಆಪ್ತರಿಗೆ ಹಾಗೂ.. ಕೆಲ ಲೀಡರ್ ಗಳಿಗೆ ಮಾತ್ರ ಪ್ರವೇಶ.

ಆಶ್ಚರ್ಯ ವೆಂಬಂತೆ ನನಗೂ ಆಹ್ವಾನ ದೊರೆತಿತ್ತು ಆ ಪಾರ್ಟಿಗೆ. ಹಫೀಜ್ ಸಯೀದ್ನ ಆಪ್ತ ಅಹ್ಮದ್ ಖಾನ್ ನಿಂದ.

ಆದರೆ, ಶಬ್ಬೀರ್ ನಿಗೆ ಆಹ್ವಾನ ಇರಲಿಲ್ಲ.. ನನಗೊಬ್ಬಳಿಗೆ ಮಾತ್ರ ಇತ್ತು. ಪಾರ್ಟಿ ಇನ್ನೂ ಒಂದು ವಾರ ಬಾಕಿ ಇತ್ತು. ಈ ಒಂದು ವಾರದಲ್ಲಿ ನಮಗೆ ಮಾತಾಡಲು ಅಲ್ಲ... ಸನ್ನೆಯ ಮುಖಾಂತರ ಸಂಭಾಷಿಸಲು ಅವಕಾಶವಿತ್ತು. ಅದು ದಿನದಲ್ಲಿ ಹೆಚ್ಚೆಂದರೆ ಐದು ನಿಮಿಷ.

ಆ ಐದು ನಿಮಿಷದಲ್ಲಿ ನಾವು ನೂರಾರು ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಅಂತೂ ಒಂದು ಯೋಜನೆ ಮಾಡಿದೆವು.. ಶಬ್ಬೀರ್ ಅಡಿಗೆ ಮಾಡುವುದರಲ್ಲಿ ನಿಪುಣ ನಿದ್ದ. ಅದೇ ನಮಗೆ ಇಲ್ಲಿ ಈಗ ಪ್ಲಸ್ ಪಾಯಿಂಟ್ ಆಯಿತು.

ಆ ಪಾರ್ಟಿಯಲ್ಲಿ ನಾನು ಅಡುಗೆ ಉಸ್ತುವಾರಿ ವಹಿಸಿಕೊಂಡೇ, ಆಗ ನನಗೆ ಸುಲಭವಾಯಿತು ಶಬ್ಬೀರ್ ನನ್ನು ಪಾರ್ಟಿಯ ಅಡಿಗೆ ಮನೆಗೆ ಬಿಟ್ಟುಕೊಳ್ಳಲು.

ಶಬ್ಬೀರ್ ಬಂದು ವರುಷಗಳೇ ಕಳೆಯುತ್ತ ಬಂದಿತ್ತು. ಆದರೂ ನಾವು ಯಾವತ್ತೂ ಎದಿರು ಬದಿರು ಕುಳಿತು ಮಾತನಾಡಿರಲಿಲ್ಲ , ಪಾರ್ಟಿಯಲ್ಲೂ ಕೂಡ ಮಾತನಾಡಲಿಲ್ಲ. ನನ್ನ ಪಾಡಿಗೆ ನಾನು ಮೇಲುಸ್ತುವಾರಿ ವಹಿಸಿದ್ದೆ. ಅವನ ಪಾಡಿಗೆ ಅವನು ಅಡಿಗೆ ಮನೆಯಲ್ಲಿ ಅಡಿಗೆ ಮಾಡುವುದರ ಜೊತೆಗೆ ನಮ್ಮ ಪ್ಲ್ಯಾನ್ ಕಾರ್ಯರೂಪಕ್ಕೆ ತರುತ್ತಿದ್ದ.

ಮುಖ್ಯವಾದ ವಿಷಯ ಹೇಳೋದು ಮರೆತಿದ್ದೆ.., ನನ್ನ ಶಬ್ಬೀರ್ ನಿಗೆ ಮದುವೆ ಆಗಿ ಮುದ್ದಾದ ಮಕ್ಕಳು ಇದ್ದರು. ಅವನ ನಿಜ ಹೆಸರು ಏನು ಅಂತ ಒಂದೆರೆಡು ಸಲ ಕೇಳಿದರು ಹೇಳಲೇ ಇಲ್ಲ ಅವ. ನಾನೇ ಕೇಳೋದು ಬಿಟ್ಟೆ. ಕಡೆಗೆ ನಾನೇ ಅವನಿಗೆ ಒಂದು ಚೆಂದದ ಹೆಸರು ಇಟ್ಟೆ " ನನ್ನವ " ಅಂತ.

ಅವ ತನ್ನ ಹೆಂಡತಿಯನ್ನು ಅದೆಷ್ಟು ಇಷ್ಟ ಪಡುತ್ತಿದ್ದ ಎಂದರೆ.., ಅದೆಷ್ಟು ಸುಂದರ ಕನ್ಯೆಯರು ಅವರಾಗೆ ಮೈ ಮೇಲೆ ಬಿದ್ದರು ದೂರ ತಳ್ಳಿ ಬಿಡುತ್ತಿದ್ದ. ಅವನಿಗೆ ಕಾಮನೆಗಳೇ ಇರಲಿಲ್ಲ. ಅವನಿಗೆ ಹೆಣ್ಣು ಗಂಡು.. ಅಂತ ಯಾವತ್ತೂ ಬೇರೆ ಬೇರೆ ಅನಿಸಲೇ ಇಲ್ಲ. ಅದೆಷ್ಟೋ ಸಲ ಹೇಳಿದ, ಇದೊಂದು ದೇಹ ಅಷ್ಟೇ..! ಆಕಾರ ಬದಲಾವಣೆಯ ಮೇಲೆ.. ಅದು ಹೆಣ್ಣು , ಗಂಡು ಅಂತ ಹೆಸರು ಕೊಟ್ಟು ಬಿಡ್ತೀವಿ.. ಆದರೆ ನನಗೆ ಇದೊಂದು ಬರಿ ದೇಹ.. ಅಷ್ಟೇ ಅಂತ ಹೇಳಿ ಬಿಡುತ್ತಿದ್ದ. ಅವನ ಹಲವು ಮಾತಿಗೆ ನಾನು ಬೆರಗಾಗಿ ಹೋಗುತ್ತಿದ್ದೆ.

ಯಾವುದೋ ದೇಶದಲ್ಲಿ ಅವನ ಹೆಂಡತಿ ಮಕ್ಕಳು ಅವನಿಗಾಗಿ ಕಾದು ಕುಳಿತಿದ್ದಾರೆ.. ತನ್ನ ಗಂಡ, ತನ್ನ ಅಪ್ಪ ಜೀವಂತವಾಗಿ ವಾಪಸ ಬಂದೆ ಬರುತ್ತಾನೆ ಎಂಬ ನಂಬಿಕೆ ಮೇಲೆ.

ಆದರೆ ಇಲ್ಲಿನ ಪರಿಸ್ಥಿತಿ ನಮಗೆ ಮಾತ್ರ ಗೊತ್ತು. ಯಾವ ಸಮಯದಲ್ಲಿ ಹೆಣವಾಗಿ ಭೂಗತವಾಗಿ ಹೋಗಿರುತ್ತೇವೆ ಅಂತ ನಮಗೂ ಗೊತ್ತಿರುವುದಿಲ್ಲ.

ಅವನಿಗೆ ಮದುವೆ ಯಾಗಲಿ.., ಮಕ್ಕಳು ಇರಲಿ.. ಆದರೂ ಅವ ನನ್ನವನೆ... ನಾನು ಪ್ರೀತಿಸುವುದನ್ನು ತಡೆಯಲು ಅವನಿಂದ ಕೂಡ ಸಾಧ್ಯವಿಲ್ಲ. ಅದೊಂದು ಚೆಂದದ ಅನುಭೂತಿ ಅಂತ ನನ್ನವ ಸಿಕ್ಕಿದ ಮೇಲೆ ನೆ ಅರಿವಿಗೆ ಬಂದಿದ್ದು.

ಅವನ ಇಷ್ಟು ದಿನದ ನೆನಪುಗಳೇ ಸಾಕು.. ನನ್ನ ಜೀವನದಲ್ಲಿ ನಿತ್ಯ ಮಲ್ಲಿಗೆಯ ಘಮ ಪಸರಿಸಲು. ಇತ್ತೀಚಿಗೆ ಅದು ಅವನಿಗೂ ಗೊತ್ತಾಗಿ ಹೋಗಿದೆ. ಅದರಿಂದ ನನಗೇನು ಬೇಸರವಿಲ್ಲ. ಕೆಲವೊಮ್ಮೆ ಹುಚ್ಚಿ ನೀನು ಅಂತಾನೆ.. ಅವ ಏನೇ ಹೇಳಿದರೂ ಖುಷಿ ನನಗೆ. ..., ನಗು ನನಗೆ..

ಅಡಿಗೆ ಮಾಡುತ್ತ ಹೇಳಿದ, " ಇದೆ ಕೊನೆಯ ದಿನ ಆಗಬಹುದು ನಮ್ಮಿಬ್ಬರದು.. ಅಥವಾ ಇಬ್ಬರಲ್ಲಿ ಯಾರದೋ ಒಬ್ಬರದು ಕೂಡ. ನನ್ನ ಕೊನೆ ದಿನ ವಾದರೆ , ಅವ ಹೇಳಿದ ಜಾಗದಲ್ಲಿ ಒಂದು ಪತ್ರ ಇದೆ ಅದನ್ನು ನಾನು ಆ ವಿಳಾಸಕ್ಕೆ ತಲುಪಿಸಬೇಕು ಅಂತ ಹೇಳಿದ. ಅದು ಅವನ ಹೆಂಡತಿಯ ವಿಳಾಸ ಅಂತ ಗೊತ್ತಾಗಿ ಹೋಯಿತು ನನಗೆ. ನಾನು ಹು ಅಂದೆ , ನನಗೂ ಕೇಳಿದ ನಿನ್ನದು ಏನಾದ್ರು ತಲುಪಿಸುವ ವಸ್ತು ಇದೆಯಾ ಅಂತ.

ನನಗೆ ನಗು ಬಂತು , ನನಗೆ ಅಂತ ಇರೋದು ಅಪ್ಪ ಅಮ್ಮ ಮಾತ್ರ ಅವರನ್ನು ಆಗಾಗ ಹೋಗಿ ಕಾಣು ಎಂದೇ. ಅವರ ಮಗಳು ದೇಶಕ್ಕಾಗಿ ಪ್ರಾಣ ಕಳೆದುಕೊಂಡಳು ಅಂತ ಒಂದು ಮಾತು ಹೇಳಿಬಿಡು ಅಂದೆ.. ಅವ ಕೂಡ ನಕ್ಕು ಹು ಅಂದ. ಇಬ್ಬರಿಗೂ ಆ ನಗು ಯಾಕೆ ಬಂತು ಅಂತ ಇಲ್ಲಿವರೆಗೂ ಗೊತ್ತಾಗಲಿಲ್ಲ ನನಗೆ. " ಅಂತ

ನೆನಪಿನಿಂದ ಹೊರ ಬಂದು , ಬಾಲ್ಕನಿ ಇಂದ ಎದ್ದು ಚಳಿ ಅಂತ ಒಳ ನಡೆದಳು.. ಊರುಗೋಲು ಹಿಡಿದುಕೊಂಡು. ಊರುಗೋಲು ಹಿಡಿಯುವಷ್ಟು ವಯಸ್ಸಾಗಿ ಹೋಯಿತು ನನಗೆ.. ಆದರೂ ನನ್ನ ಶಬ್ಬೀರ್ ಮಾತ್ರ ನನಗೆ ಇನ್ನೂ ಅದೇ ಹುಡುಗನಂತೆ ಕಾಣುತ್ತಾನೆ.. ಯಾಕೆಂದರೆ ಅವ ಈಗ ಎಲ್ಲಿ ಇದಾನೆ, ಹೇಗೆ ಇದಾನೆ ಯಾವ ಮಾಹಿತಿ ಇಲ್ಲ..

ಅಲ್ಲ.., ಮಾಹಿತಿ ಸಿಕ್ಕಿತ್ತು ಕೂಡ, ಮಿಷನ್ ಯಶಸ್ವಿಯಾಗಿ ಮುಗಿಸಿಕೊಂಡು ಬಂದೆವು , ಹೌದು.. ಅದೇನೋ ಗ್ರಹಚಾರ ಇಬ್ಬರು ಬದುಕಿ ವಾಪಸ ತಾಯ್ನಾಡಿಗೆ ಬಂದೆವು. " ಅಂತ ನಗು ಬಂದು ಬಿಟ್ಟಿತು ಆ ಮುದುಕಿಗೆ...

ಹಫೀಜ್ ಸಯೀದ್ ನನ್ನು ಮುಗಿಸಲು ಇದೆ ಸರಿಯಾದ ಸಮಯ. ಈ ಸಮಯ ಜಾರಿದರೆ ಖಂಡಿತ ನಾವು ಯಾವತ್ತೂ ಅವನನ್ನು ಮುಗಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತು.. ಇದೆ ಕೊನೆ ಕ್ಷಣ ಎಂದು , ಊಟ ಮಾಡುತ್ತ ಕುಳಿತಿದ್ದ ಸಯೀದ್ , ದೂರದ ಕಿಟಕಿಯ ಹತ್ತಿರ ಶಬ್ಬೀರ್ ನಿಂತಿದ್ದ ನೇರವಾಗಿ ಅವನ ಹಣೆಗೆ ಗುರಿ ಇಟ್ಟು.. ಇನ್ನೇನಿದ್ದರೂ ನನ್ನ ಕೆಲಸ... ಅಲ್ಲಿನ ಬೆಳಕನ್ನು ಸ್ವಲ್ಪ ಹೊತ್ತು ಮರೆ ಮಾಚುವುದು.

ನಾನು ನನ್ನ ಕೆಲಸ ಅಚ್ಚುಕಟಾಗಿ ನಿಭಾಯಿಸಿದೆ. ಅಲ್ಲಿನ ಫ್ಯೂಸ್ ತಗೆದವಳೇ.. ಸೀದಾ ಹೊರನಡೆದೆ ಪಾರ್ಟಿಯಿಂದ , ನಮ್ಮ ಒಂದು ಗುಪ್ತ ಸ್ಥಳಕ್ಕೆ.

ನನಗೆ ಶಬ್ಬೀರ್ ಮೇಲೆ ಯಾವ ಅನುಮಾನ ವಿರಲಿಲ್ಲ.. ಅವ ಹೇಳಿದ ಕೆಲಸ ಖಂಡಿತ ಮುಗಿಸಿ ಬರುತ್ತಾನೆ ಅಂತ.. ಆದರೆ ಭಯ ಇದ್ದಿದ್ದು.., ಅವ ರಾಕ್ಷಸ ಆಗಿ ಹೋದರೆ.., ಅಲ್ಲಿ ಎಲ್ಲ ಅವನ ಆಪ್ತರನ್ನು ಕೂಡ ಬಿಡುವುದಿಲ್ಲ ಅವ.. ಎಲ್ಲರ ದೇಹ ನೆಲಕಚ್ಚುವ ಹಾಗೆ ಮಾಡಿ ಬಿಡುತ್ತಾನೆ. ಮಾಡಿದರು ತೊಂದರೆ ಇಲ್ಲ.. ಆದರೆ ಆ ಸಮಯದಲ್ಲಿ ಅವ ಸಿಕ್ಕಿ ಬಿದ್ದರೆ..? ಮುಗಿತು ಅವನ ಕಥೆ ಅಲ್ಲೇ... ಅವನ ಹೆಣ ಕೂಡ ಸಿಗುವುದಿಲ್ಲ.. ನಮಗೆ. ಅವ ನನ್ನ ದೇಶದವ ಅಂತ ಹೇಳಲು ಯಾವ ಸಾಕ್ಷಿ ಕೂಡ ಇಲ್ಲ.. ಇರೋದು ಇಲ್ಲ..

ಇದೆ ಯೋಚನೆಯಲ್ಲಿ ನಾನು ನಿದ್ದೆ ಮಾಡದೆ , ನಿಮಿಷ ನಿಮಿಷಕ್ಕೂ ಗಡಿಯಾರ ನೋಡುತ್ತಾ ಅವ ಬರುವ ದಾರಿ ಕಾಯುತ್ತಾ ಇದ್ದೆ.

ಸೂರ್ಯ ಮೋಡದ ಮರೆಯಲ್ಲಿ ಆಗ ತಾನೇ ಉದಯಿಸುತ್ತಿದ್ದ... ನನ್ನವನ ಸುಳಿವೆ ಇಲ್ಲ... ದುಃಖ ವತ್ತರಿಸಿಕೊಂಡು ಬಂತು. ನಮ್ಮ ಟ್ರೈನಿಂಗ್ ನಲ್ಲಿ ನಮಗೆ ಎಲ್ಲ ಭಾವನೆಗಳನ್ನು ಕೊಂದು ಹಾಕಿರುತ್ತಾರೆ.. ಆದರೆ ನಾನು ಹೆಣ್ಣು ಅಲ್ವಾ.., ಅವನನ್ನ ಪ್ರೀತಿಸಿ ಬಿಟ್ಟೆ... ಆ ಪ್ರೀತಿ ಈಗ ಕಣ್ಣೀರಾಗಿ ಹರಿಯುತ್ತಿತ್ತು..

ಯಾವುದೋ ಒಂದು ಕೈ ಕಣ್ಣೀರು ವರೆಸುವ ಅನುಭವ ವಾಯಿತು. ಹೌದು..! ನನ್ನವ ಬಂದಿದ್ದಾನೆ. ಜೀವಂತವಾಗಿ ಬಂದಿದ್ದಾನೆ... ಅದೇ ಖುಷಿ ನನಗೆ.

ಅಲ್ಲಿಂದ ಇಬ್ಬರ ಪಾಸ್ಪೋರ್ಟ್ ಚೇಂಜ್ ಆಯಿತು. ನಾನು ಸೌದಿ ದೇಶದ ಪ್ರಜೆ ಯಾಗಿದ್ದೆ.. ನನ್ನವ ಇನ್ನಾವುದೋ.. ಕತಾರ್ ದೇಶದ ಪ್ರಜೆ...

ಸಂತಸ ಅನುಭವಿಸುವ ಕ್ಷಣ ಕೂಡ ಇಲ್ಲ ನಮ್ಮಲ್ಲಿ... ಒಂದು ಕ್ಷಣ ಮೈ ಮರೆತರೂ ಅಲ್ಲಿಗೆ ಮುಗಿತು ನಮ್ಮ ಉಸಿರು ನಿಂತಂತೆ... ಈ ಎಲ್ಲ ಪಾಠ ವಿಂಗ್ ಕಲಿಸಿರುತ್ತೆ ಮೊದಲೇ....

ಮುಂದಿನ ಕೆಲಸ ವೆಂಬಂತೆ.., ಫ್ರೆಶ್ ಆಗಲು ನಡೆದೆವು.. ಆಗ ನನ್ನವನ ಬೆನ್ನು ನೋಡಿದೆ... ಇಡೀ ಬೆನ್ನು ರಕ್ತದಿಂದ ತೋಯದು ಹೋಗಿತ್ತು. ಗಾಬರಿಯಾಗಿ ಓಡಿ ಹೋದೆ ಅವನೆಡೆಗೆ...

ಆಗ ಹೇಳಿದ..., " ಹಫೀಜ್ ಸಯೀದ್ ನನ್ನು ಹೊಡೆದು ಬಿಟ್ಟೆ.. ಆದರೆ, ಉಳಿದವರನ್ನು ಹಾಗೆ ಬಿಟ್ಟು ಬರಲು ನನ್ನ ಈ ಗನ್ ಒಪ್ಪಲಿಲ್ಲ... ಆಗ ಎಲ್ಲರಿಗೂ ಒಂದು ಗತಿ ಕಾಣಿಸುವಾಗ.. ತಿರುಗಿ ನನಗೂ ಕೊಟ್ಟ ಉಡುಗೊರೆ ಇದು " ಅಂತ ಹೇಳಿ ನಕ್ಕ.

ಗೊತ್ತಿತ್ತು ನನಗೆ, ಏನಾದರೊಂದು ಇಂತದು ಮಾಡಿಕೊಂಡು ಬರ್ತಿಯಾ ಅಂತ ಬೈಯುತ್ತಾ.. ಅವನ ಮೈಯಲ್ಲಿ ಹೊಕ್ಕ ಮೂರು ಬುಲೆಟ್ ತಗೆದೆ ಚಾಕುವಿನ ಸಹಾಯದಿಂದ. ಪ್ರಥಮ ಚಿಕಿತ್ಸೆ ಮಾಡಿದೆ. ನಾನು ಸ್ನಾನ ಮಾಡಿ ತಯಾರಾಗಿ ಹೊರ ಬಂದೆ.

ಅಲ್ಲಿಂದ ನಮ್ಮ ದಾರಿ ಬೇರೆ ಬೇರೆ ಯಾಗಿ ಹೋಯಿತು. ನಾನು ಸೌದಿ ಇಂದ ಭಾರತಕ್ಕೆ ಬಂದೆ...

ನನ್ನವ, ಕತಾರ್ ದಿಂದ ಎಲ್ಲಿಗೆ ಹೋದ ಅಂತ ತುಂಬಾ ಹುಡುಕಾಡಿದೆ.., ಭಾರತಕ್ಕೆ ಬಂದ ಮೇಲೆ. ಹುಡುಕಾಡುತ್ತಾ ತಿಂಗಳು ಕಳೆದ ಮೇಲೆ ನನ್ನ ಒಬ್ಬ ಖಾಸಾ ವ್ಯಕ್ತಿಯಿಂದ ಒಂದು ಲಕೋಟೆ ಬಂತು.

ಅದರಲ್ಲಿ ನನ್ನವನ ಖಚಿತ ವಿಳಾಸ ಇದೆ ಅಂತ ಹೇಳಿದ್ದ ಆ ಖಾಸಾ ವ್ಯಕ್ತಿ. ಅಂತ ಅದೇ ಲಕೋಟೆ ಕೈಯಲ್ಲಿ ಹಿಡಿದುಕೊಂಡು ನಕ್ಕಳು.. ಕಣ್ಣಲ್ಲಿ ನೀರು , ವಯಸ್ಸಾದರು ಕಣ್ಣೀರು ಬತ್ತಿರಲಿಲ್ಲ...

ಬಂದ ಸ್ವಲ್ಪ ದಿನದಲ್ಲಿ ಮತ್ತೆ ರಿಪೋರ್ಟ್ ಮಾಡಿಕೊಂಡೆ, ಅಪ್ಪ ಅಮ್ಮನಿಗೆ ಮದುವೆ ಆಗೋಲ್ಲ ಅಂತ ಹೇಗೋ ಸಮಾಧಾನ ಮಾಡಿ ಒಪ್ಪಿಸಿದೆ.,

ಆದರೆ ಅಲ್ಲಿನ ಚೀಫ್ ಹೇಳಿದ್ದು ಕೇಳಿ ರೋಮಾಂಚನ ವಾಯಿತು... ಶಬ್ಬೀರ್ , ಹಫೀಜ್ ಸಯೀದ್ ನನ್ನು ಹೊಡೆದ ರೀತಿ ವಿವರಿಸುತ್ತಿದ್ದರು.. ಆ ಕತ್ತಲಲ್ಲೂ ಅವನ ಕಣ್ಣ ಬೆಳಕೆ ಸಾಕಿತ್ತು ಎಲ್ಲರನ್ನು ಹೊಡೆದು ಮುಗಿಸಲು... ನಿಜ ಕತ್ತಲಲ್ಲೂ ಬೇಟೆಯಾಡಲು ನಮಗೆ ಟ್ರೈನಿಂಗ್ ಕೊಟ್ಟಿರುತ್ತಾರೆ. ಆದರೆ, ಅವ ನನ್ನವ ಅಲ್ವಾ.., ಅದಕ್ಕಾಗೆ ಇರಬೇಕು ಕಣ್ಣಲ್ಲಿ ಮಿಂಚು ಮರೆಯಾಗಿ ಹೋಯಿತು...

ಮುಂದೆ ಬೇರೆ ಬೇರೆ ದೇಶಕ್ಕೆ ಮಿಷನ್ ಗಾಗಿ ಹೋದೆ ಆದರೆ , ನನ್ನವ ಸಿಗಲೇ ಇಲ್ಲ... ಅವನಿಗಾಗೆ ನಾನು ಎಲ್ಲ ಮಿಷನ್ ಒಪ್ಪಿಬಿಡುತ್ತಿದ್ದೇ. ಅವ ಯಾವುದಾದರೂ ಒಂದು ಕೇಸ್ ನಲ್ಲಿ ಸಿಕ್ಕೇ ಸಿಗುತ್ತಾನೆ ಎಂಬ ನಂಬಿಕೆಯಲ್ಲಿ... ಆದರೂ ನನ್ನವ ಸಿಗಲೇ ಇಲ್ಲ...

ಭಾರತಕ್ಕೆ ಬಂದ ತಿಂಗಳಲ್ಲೇ ನನಗೆ ನನ್ನವನ ವಿಳಾಸ ಸಿಕ್ಕಿತ್ತು. ಆದರೆ ಅವನ ಹುಡುಕಿ ಹೊರಟರೆ.. ? ಏನಂತ ಹುಡಕಿ ಹೋಗಲಿ...! ಅವ ಯಾವತ್ತು ನನ್ನ ಇಷ್ಟ ಪಡಲೇ ಇಲ್ಲ.. ನಾನೇ ಪ್ರೀತಿಸಿ ಬಿಟ್ಟೆ. ಈಗ ಈ ಲಕೋಟೆ ತೆರೆದು ನೋಡಿದರೆ , ಹೋಗುವ ಹಂಬಲ ಹೆಚ್ಚಾಗುತ್ತದೆ... ನನ್ನ ಮೇಲೆ ನನಗೆ ನಿಯಂತ್ರಣ ಇರುವುದಿಲ್ಲ.. ಖಂಡಿತ ಹೋಗುತ್ತೇನೆ ನಾನು .

ಅದಕ್ಕೆ ಈ ಲಕೋಟೆ ತೆರೆದು ನೋಡುವುದೇ ಬೇಡ " ಅಂತ ನಲವತ್ತು ವರ್ಷಗಳಿಂದ ಆ ಲಕೋಟೆಯನ್ನೊಮ್ಮೆ ದಿನ ನೋಡಿ ಕಣ್ಣಿರುಡುತ್ತಾಳೆ... ನನ್ನವ ಕಡೆಗೂ ಸಿಗಲೇ ಇಲ್ಲ ಅಂತ. "

ಅವ ಹೇಳಿದ್ದ ಅಲ್ವಾ.., ನಾ ನಿನಗೆ ಸಿಗೊಲ್ಲ ಅಂತ ಹೇಳಿದ ಹಾಗೆ ಮಾಡಿದ ಕಳ್ಳ... " ಅಂತ ನೋವಿನ ನಗೆ ನಕ್ಕಳು.. ಕನ್ನಡಕ ತೆಗೆದು ಕಣ್ಣೀರು ವರೆಸಿಕೊಂಡಳು.

ಇಲ್ಲ.., ಆದರೂ ಸಿಗುತ್ತಿದ್ದ..., ಅವನ ಮಾತು ನಿಜ ಮಾಡಬೇಕೆಂದು ಅಲ್ಲವಾ ನಾನು ಇಷ್ಟು ವರ್ಷವಾದರೂ ಅವನ ಕಾಣಲು ಹೋಗಲೇ ಇಲ್ಲ....

ಅವನ ನೆನಪುಗಳೇ ನನಗೆ ನಿತ್ಯ ಮಲ್ಲಿಗೆ... ಈ ಗಾಳಿಯಲ್ಲಿ ಕೂಡ ಅವನ ಪರಿಮಳ , ಅರಳುವ ಹೂವಲ್ಲಿ ಅವನ ನಗೆ .... ಅಷ್ಟೇ ಸಾಕಾಗಿತ್ತು ಈ ಜೀವಕ್ಕೆ...

ಮುಕ್ತಾಯ.....


Rate this content
Log in

Similar kannada story from Tragedy