Meenakshi "meeನ"

Crime Thriller

1.9  

Meenakshi "meeನ"

Crime Thriller

ಒಂಟಿ ಬಂಗಲೆಯ ರಹಸ್ಯ..!

ಒಂಟಿ ಬಂಗಲೆಯ ರಹಸ್ಯ..!

24 mins
524


                   ಚುಮು ಚುಮು ಚಳಿಯಲ್ಲಿ ಬೆಳಕಾದರೂ ಹೊದ್ದು ಮಲಗಿದ್ದ ಮಗಳನ್ನು, "ಏಳೇ... ಮರಿ...ಇವತ್ತು ನಿಮ್ಮ ಸ್ಕೂಲ್ನಲ್ಲಿ ಎಕ್ಸಾಮ್ ಅಂತ ಹೇಳತಿದ್ದೆ", "ಏಳು ಬೇಗ ಎದ್ದು ರೆಡಿ ಆಗು".

           ಅಮ್ಮ ...."ನನಗೆ ಯಾವ ಎಕ್ಸಾಮ್"....

ಅಂತ ಮತ್ತೆ ಬದಿ ಹೊರಳಿ ಮಲಗಿದಳು.

         "ಲೇ.....ಕತ್ತೆ ನಿನ್ನ ಸ್ಕೂಲ್ ಅಲ್ಲಿ ಇವತ್ತಿನಿಂದ ಪರೀಕ್ಷೆ ಶುರುವಾಗುತ್ತವೆ". "ಏಳೇ... ಎದ್ದು ರೆಡಿ ಆಗಿ ಬಾ". "ತಿಂಡಿ ತಿಂದು ಹೋಗುವಿಯಂತೆ", ಅಂತ ಬೈದ ಅಮ್ಮನ ಮಾತಿಗೆ ಮುಖದ ಮೇಲಿನ ಹೊದಿಕೆ ತಗೆದು, ಕೋಪದಿಂದ ಈ ಅಮ್ಮ "ದ್ ಗ್ರೇಟ್ ಭೂಮಿತಾಯಮ್ಮ" ಎಕ್ಸಾಮ್ ಬರಿಯೋದು ನಾನೇ ಅಂದುಕೊಂಡಳ? ನಾನು ಆ ಸ್ಕೂಲ್ ಟೀಚರ್ ಅನ್ನೋದು ಮರೆತು ನನ್ನನ್ನೆ ಸ್ಟುಡೆಂಟ್ ಮಾಡಿ ಬಿಟ್ಟಳಾ. ಅಂತ ಅಮ್ಮನನ್ನು ಬೈದುಕೊಂಡು ವಾಶ್ರೋಮ್ ಹೋಗಿ ನಿತ್ಯ ಕರ್ಮಗಳನ್ನು ಮುಗಿಸಿ ರೆಡಿಯಾಗಿ ಮೆಟ್ಟಿಲು ಇಳಿದು ಬಂದಳು ಆಕೆ.

        

                ಹಾಲಿನಂತ ಮೈ ಬಣ್ಣ, ಅದಕ್ಕೂ ಮುದ್ದಾದ ಮುಖದಲ್ಲಿ ಸದಾ ಮುಗುಳುನಗು. ತಿಳಿ ನೀಲಿ ಬಣ್ಣದ ಸೀರೆ, ಅದಕ್ಕೊಪ್ಪುವ ಓಲೆ ಹಾಗೂ ಕೈ ಬಳೆ. ಹಂಸದ ಹಾಗಿರುವ ನಡಿಗೆ. ಇವಳನ್ನು ವರ್ಣಿಸುತ್ತಾ..ಹೆಸರು ಹೇಳೋದೇ ಮರೆತು ಬಿಟ್ಟೆ...ನಡಿಗೆಗೆ ತಕ್ಕ ಹೆಸರು ಹಂಸ.      

         ಅಮ್ಮ ಭೂಮಿಕಾ, ಮಗಳು ತಯಾರಾಗಿದ್ದು ನೋಡಿ, ದೃಷ್ಟಿ ಆಗಿಬಿಡುತ್ತೇನೋ ಅನ್ನುವಷ್ಟು ಮುದ್ದಾಗಿ ರೆಡಿ ಆಗಿದಿಯಲ್ಲೆ ಅಂತ ರೇಗಿಸಕ್ಕೆ ಶುರು ಮಾಡಿಬಿಡುತ್ತಾರೆ.

      "ಅಮ್ಮಾ ಸುಮ್ಮನಿರು ನನಗೆ ಮೊದಲೇ ತಡವಾಗಿದೆ", ಸ್ಕೂಲ್ ಅಲ್ಲಿ ಮಕ್ಕಳಿಗೆ ಎಕ್ಸಾಮ್ ಇವತ್ತು, ಅದೇ ಟೆನ್ಷನ್ ಅಲ್ಲಿ ಇದಿನಿ".

           "ನಾನು ಬೆಳಿಗ್ಗೆ ಇಂದ ಅದೇ ಹೇಳತಿರೋದು ಮಕ್ಕಳಿಗೆ ಎಕ್ಸಾಮ್ ಶುರು ಆದ್ರೆ ನಿಂದೆ ಅನ್ನೋತರ ಆಡ್ತಿಯ","ಅದಕ್ಕೆ ಬೇಗ ಎದ್ದು ರೆಡಿಯಾಗಿ ಹೋಗು ಅಂದಿದ್ದು".

         "ಆಯಿತಮ್ಮ ಈಗ ತಿಂಡಿ ಕೊಡು ತಿಂನ್ಕೊಂಡು ಹೋಗತಿನಿ".

             "ನಿನ್ನ ಫೇವರೇಟ್ ಉಪ್ಪಿಟ್ಟು ಮಾಡಿದಿನಿ ತಿನ್ನು" ಅಂತ ಪ್ಲೇಟ್ ಗೆ ತಿಂಡಿ ಹಾಕಿಕೊಟ್ಟು ಅಡಿಗೆ ಮನೆಗೆ ಹೋಗುತ್ತಾರೆ. ಹಂಸನು ತಿಂಡಿ ತಿಂದು ಸ್ಟ್ರಾಂಗ್ ಟೀ ಕುಡಿದು ಅಮ್ಮನಿಗೆ ಟಾಟಾ ಮಾಡಿ ತನ್ನ ಪ್ರೀತಿಯ ಅಂಬಾರಿ ಅಂದ್ರೆ ಸ್ಕೂಟರ್ ಹತ್ತಿ ಹೋಗುತ್ತಾಳೆ.

             

                  ಅರ್ಧ ಗಂಟೆ ಬೇಗ ಹೋಗಿ ಮಕ್ಕಳಿಗಿಂತ ಮೊದಲೇ ಇವಳೇ ಪ್ರಿಪೇರ್ ಆಗುತ್ತಾಳೆ. ಇಡೀ ದಿನ ಎಕ್ಸಾಮ್ ಅಂತ ಟೈಂ ಹೋಗಿದ್ದೆ ಗೊತ್ತಾಗದೆ ಮನೆಗೆ ತಡವಾಗಿ ಹೋಗುತ್ತಾಳೆ, ಇನ್ನೊಂದು ಕಾರಣನು ಇರುತ್ತೆ. ಮನೆಗೆ ಬಂದು ಫ್ರೆಶ್ ಆಗಿ ಬಂದು, ಅಮ್ಮನ ಮಡಿಲಲ್ಲಿ ಮಲಗಿಕೊಂಡು "ಅಮ್ಮ ಇವತ್ತು ಸ್ಕೂಲ್ ಅಲ್ಲಿ ಒಂದು ವಿಷಯ ಹೇಳಿದರು". ಹಣೆ ಮೇಲೆ ಕೈ ಆಡಿಸುತ್ತಾ "ಏನಮ್ಮ ಅದು ಇಷ್ಟು ಬೇಜಾರ ಆಗುವಂತದು". "ಅಮ್ಮ ನಂಗೆ ಮುಂದಿನ ವರ್ಷದಿಂದ ಬೇರೆ ಊರಿಗೆ "ವರ್ಗಾವಣೆ ಮಾಡುತ್ತಿದ್ದಾರೆ" ಅಂತ ತನ್ನ ಬೇಸರ ವ್ಯಕ್ತಪಡಿಸಿದಳು.

                 

          "ಬಂಗಾರಿ ನಂಗೆ ನೀನು ದುಡಿದು ತರಬೇಕು ಅಂತ ಏನಿಲ್ಲ ಮಗಳೆ, ಕಣ್ಣು ಮುಂದೆ ಇದ್ರೆ ಸಾಕು. ನಿಮ್ಮ ಅಪ್ಪ ಮಾಡಿ ಇಟ್ಟಿದ್ದು ಸಾಕಷ್ಟು ಇದೆ. ಇರೋ ಒಬ್ಬ ಮಗಳು ಅಷ್ಟು ದೂರ ಹೋಗಿ ಕೆಲಸ ಮಾಡೋದು ಬೇಡ ಮಗಳೇ". ನಿಮ್ಮ ಅಪ್ಪನ ಕಳೆದುಕೊಂಡ ದಿನಾನೆ ಹೋಗ್ತಾ ಇದ್ದೆ ನಾನು. ಅವರ ನೆನಪು ಈ ಮನೆಯಲ್ಲಿ ಇನ್ನು ಹಸಿರಾಗಿದೆ. ಆ ನೆನಪಲ್ಲಿ, ನಿನಗಾಗಿ ನೋವೆಲ್ಲ ಮರೆತು ಬದಕುತ್ತಾ ಇದಿನಿ. ಇನ್ನು ನೀನು ದೂರ ಹೋಗತಿನಿ ಅಂದ್ರೆ, ನಾನು ಒಬ್ಬಳೇ ಇಲ್ಲಿ ಏನ ಮಾಡಲಿ ನೀನೆ ಹೇಳು", ಅಂತ ಕಣ್ಣಂಚಲ್ಲಿ ಸಣ್ಣ ನೀರಿನ ಪಸೆ... ನೋಡಿದ ಹಂಸ,

            "ಇದೊಂದು ಸಲ ಹೋಗತಿನಿ ಅಮ್ಮ, ಅಲ್ಲಿ ಏನಾದ್ರು ಮಾಡಿ ಮತ್ತೆ ಇಲ್ಲೇ ಎಲ್ಲಾದ್ರೂ ಹತ್ರ ಟ್ರಾನ್ಸ್ಫರ್ ಆಗುತ್ತೇನು ಅಂತ ಪ್ರಯತ್ನ ಮಾಡತಿನಿ ಅಮ್ಮ. ನೀನು ನನ್ನ ಅಳುತ್ತಾ ಕಳುಹಿಸಿಕೊಡಬೇಡ. ಅದು ಅಲ್ದೆ ಇನ್ನು ಸ್ವಲ್ಪ ದಿನ ಇದೆ ಎಕ್ಸಾಮ್ ಎಲ್ಲ ಆಗಿ, ರಜೆ ಕಳೆದು ಹೋಗುತ್ತೇನೆ". ಅಂತ ಅಮ್ಮನಿಗೆ ಸಮಾಧಾನ ಮಾಡಿದಳು.

               ಹೀಗೆ ಹದಿನೈದು ದಿನ ಕಳೆಯಿತು ಎಕ್ಸಾಮ್, ಮಕ್ಕಳ ಅಳು...ಪ್ರೀತಿಯ ಶಿಕ್ಷಕಿ ಬಿಟ್ಟು ಹೋಗ್ತಾ ಇದಾಳೆ ಅಂತ. ಮಕ್ಕಳ ಜೊತೆ ಒಂದು ಸಣ್ಣ ಟ್ರಿಪ್ ಮುಗಿಸಿ ಉಳಿದ ದಿನಗಳನ್ನು ಅಮ್ಮನ ಜೊತೆ ಕಳೆದಳು. ಹೀಗೆ ಎರಡು ತಿಂಗಳು ಕಳೆಯಿತು. ಹಂಸ ಹಳ್ಳಿಗೆ ಹೋಗುವ ದಿನ ಬಂದೇ ಬಿಟ್ಟಿತು. ಅಮ್ಮನ ಕಿವಿ ಮಾತು "ಒಬ್ಬಳೇ ಇರ್ತಿಯಾ ಹುಷಾರಾಗಿ ಇರು. ಇಲ್ಲಿ ಹಾಗೆ ಯಾರ ತಂಟೆಗೂ ಹೋಗಬೇಡ. ಅಲ್ಲಿ ಯಾರ ಪರಿಚಯನು ಇಲ್ಲ. ನೀನು ಒಬ್ಬಳೆ ಇರೋದು. ಮನೆ ಸ್ಕೂಲ್ ಅಂತ ಜವಾಬ್ದಾರಿ ಹೆಚ್ಚುತ್ತೆ ಮಗಳೇ ಹುಷಾರಾಗಿ ಇರು". ಅಂತ ಹೇಳಬೇಕಾದ್ರೆ, "ಅಮ್ಮ ನಾನು ಬೇರೆ ಊರಿಗೆ ಹೋಗ್ತಾ ಇರೋದು. ಬೇರೆ ಗ್ರಹಕ್ಕಲ್ಲ" ಅಂತ ರೇಗಿಸ್ತಾಳೆ.

                       

              "ಇದೆ ಈ ನಿನ್ನ ತುಂಟಾಟ ಮಿಸ್ ಮಾಡಿಕೊಳ್ಳುತ್ತೇನೆ, ನಿನ್ನನ್ನಲ್ಲ" ಅಂತ ಅಂದಾಗ

          "ಅಮ್ಮ...ನೀನೇನು ಕಡಿಮೆ ಇಲ್ಲ " ಅಂತ ಜೋರಾಗಿ ನಗುತ್ತಾರೆ. "ಸರಿ ಅಮ್ಮ ನನಗೆ ಲೇಟ್ ಆಗುತ್ತೆ, ಊರಿಗೆ ಹೋದಮೇಲೆ ಕಾಲ್ ಮಾಡುತ್ತೇನೆ" ಅಂತ ಆಶೀರ್ವಾದ ಪಡೆದು ತನ್ನ ಗುರಿಯತ್ತ ಹೆಜ್ಜೆಹಾಕುತ್ತಾಳೆ.

             

         ಮಧ್ಯಾಹ್ನ ಪ್ರಯಾಣ, ಬಸ್ಸಲ್ಲಿ ಬೇಸರ, ನೋವು, ನೆನಪುಗಳ ಯೋಚನೆ ಜೊತೆ ಪ್ರಯಾಣ ಸಾಗಿಸುತ್ತ, ಸಾಯಂಕಾಲ ಊರು ತಲುಪುತ್ತಾಳೆ.

           

            ಪರಿಚಯವಿಲ್ಲದ ಊರು, ಪರಿಚಯ ವಿಲ್ಲದ ಜನ. ಹಂಸಳ ಹಳೆಯ ಶಾಲೆಯ ಹೆಡ್ ಮಾಸ್ಟರ್ ಪರಿಚಯದವರ ಊರು ಆದಕಾರಣ, ನೇರವಾಗಿ ಆ ಊರಿನ ಜಮೀನ್ದಾರ ಸೂರ್ಯನಾರಾಯಣನ ಮನೆಗೆ ಹೋಗುತ್ತಾಳೆ. ಅಲ್ಲಿ ಜಮೀನ್ದಾರರಿಗೆ ಭೇಟಿಯಾಗಿ ಹೆಡ್ ಮಾಸ್ಟರ್ ಕೊಟ್ಟ ಪತ್ರ ಕೊಡುತ್ತಾಳೆ.

              ಆ ಪತ್ರ ನೋಡಿದ ಕೂಡಲೇ ಅವರಿಗೆ ತಮ್ಮ ಗುರುಗಳ ನೆನಪಾಗಿ ಖುಷಿಯಾಗುತ್ತೆ. "ಹಂಸ ನಾ ನಿನ್ನ ಹೆಸರು..? ನೀನು ನಮ್ಮ ಗುರುಗಳ ಕಡೆಯವಳು, ಏನು ಸಹಾಯ ಬೇಕಾದ್ರೂ ಕೇಳು",ಅಂತ ಹೇಳುತ್ತಾರೆ. ಅದಕ್ಕೆ ಹಂಸ "ನನಗೆ ಇರಲು ಒಂದು ಮನೆ ಕೊಡಿಸಿ ಮನೆ ಸಿಕ್ಕರೆ ನಂಗೆ ತುಂಬಾ ಸಹಾಯ ಆಗುತ್ತೆ" ಅಂತಾಳೆ.

                    ಆಗ ಜಮೀನ್ದಾರ ಊರಾಚೆ ಇರುವ ತನ್ನ ಬಂಗಲೆಯಲ್ಲಿ ಇರಲು ಅನುಮತಿ ಕೊಡುತ್ತಾನೆ.

   


ಜಮೀನ್ದಾರ ಹಾಗೆ ಹೇಳಿದ ತಕ್ಷಣ ಆತನ ಹೆಂಡತಿಯಿಂದ ಅಲ್ಲಿರುವ ಕೆಲಸಗಾರರೆಲ್ಲರಿಗೂ ಭಯವಾಗುತ್ತದೆ ಊರಾಚೆ ಬಂಗಲೆಯ ಹೆಸರು ಕೇಳಿ.

           ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಹಂಸ ಯಾಕಿರಬಹುದು ಅಂತ ಯೋಚನೆ ಮಾಡಿದರು, ಸದ್ಯಕ್ಕೆ ಇರುವದಕ್ಕೆ ಒಂದು ನೆಲೆ ಸಿಕ್ಕಿತು, ಆಮೇಲೆ ಏನಾದ್ರು ತೊಂದರೆ ಆದರೆ ಮನೆ ಬದಲಾಯಿಸಬಹುದು ಅಂತ ಅಂದುಕೊಂಡು ಮನೆಯ ಕೀ ಗಾಗಿ ಕಾಯುತ್ತಾಳೆ. 

         ಕೀ ಕೊಡುವಾಗ ತನ್ನ ಮೀಸೆಯಡಿ ಕುಹಕವಾಗಿ ನಕ್ಕ ಜಮೀನ್ದಾರ, ತನ್ನ ಆಳನ್ನು ಜತೆಮಾಡಿ ಕಳುಹಿಸಿಕೊಡುತ್ತಾನೆ. ಹಂಸ ಮನೆ ನೋಡಲು ಒಬ್ಬ ಆಳಿನ ಜೊತೆ ಆ ಬಂಗಲೆ ಕಡೆ ಹೆಜ್ಜೆಹಾಕಿದಳು. ಹೋಗುವದಕ್ಕೂ ಮೊದಲು ಜಮೀನ್ದಾರನಿಗೆ ಧನ್ಯವಾದಗಳು ಹೇಳಲು ಮರೆಯಲಿಲ್ಲ.

               

           ಒಂದೊಂದು ಹೆಜ್ಜೆ ಅವಳ ಬದುಕಿನ ತಿರುವು ಬದಲಾಯಿಸುತ್ತ..? ಇಲ್ಲ ಅವಳಿಂದ ಏನಾದ್ರು ಬದಲಾಗುತ್ತಾ? ದಾರಿಯಲ್ಲಿ ಇಬ್ಬರ ಮಧ್ಯೆ ಮಾತಿಲ್ಲ. ಮನೆ ತಲುಪಿದ ನಂತರ ಮನೆ ತೋರಿಸಿ, ಹೊರಗಿಂದನೆ, ವಾಪಸ ತನ್ನ ಮನೆಗೆ ಹಿಂತಿರುಗಿದ ಆಳು , ಗಡ ಗಡನೆ

ನಡುಗುತ್ತಾ ಮಲಗಿ ಕೊಳ್ಳುತ್ತಾನೆ.

 

          ಈ ಕಡೆ ಮನೆಯೊಳಗೆ ಕಾಲಿಟ್ಟ ಹಂಸ, ತುಂಬಾ ದಿನದಿಂದ ವಾಸವಿರದ ಮನೆ ಒಂದು ವಾರ ಸ್ವಚ್ಛ ಮಾಡಿದ್ರು ಮುಗಿಯದೆ ಇರುವಷ್ಟು ಗಲೀಜು ಮತ್ತೆ ಅಷ್ಟು ದೊಡ್ಡ ಮನೆ. ಆ ಮನೆ ನೋಡಿ ಒಬ್ಬಳೆ ಇರಬೇಕು ಅಂತ ಸ್ವಲ್ಪ ಭಯ ಪಟ್ಟಳು ಹಂಸ. ಆದರೂ ಇರಲೆ ಬೇಕು ಅಲ್ವಾ, ಅಂತ ಧೈರ್ಯ ತಂದುಕೊಂಡು ಮನೆಯೊಳಗೆ ಹೋಗಿ, ತಾನಿರುವ ಕೋಣೆ ಒಂದು ಸ್ವಚ್ಛ ಮಾಡಿಕೊಂಡು ಮಲಗೊಣ, ಬೆಳಿಗ್ಗೆ ಎದ್ದು ಎಲ್ಲ ಕ್ಲೀನ ಮಾಡಿದರೆ ಆಯಿತು ಅಂತ ಅಂದುಕೊಂಡಳು.

         ಆದರೆ ಹೊಟ್ಟೆ ಹಸಿವು ಬಿಡಬೇಕಲ್ಲ ಹಂಗೆ ಮಲಗೋದಿಕ್ಕೆ. ಊರಿನಿಂದ ಬರುತ್ತಾ ಬೇಸರದಲ್ಲಿ ಮಧ್ಯಾಹ್ನ ಏನು ತಿಂದಿರಲಿಲ್ಲ. ಈಗ ಇಲ್ಲಿನು ಏನು ಇಲ್ಲ. ಕುಡಿಯುವದಕ್ಕೆ ಒಂದು ಗ್ಲಾಸ್ ನೀರು ಇರಲ್ಲ. ಏನು ಮಾಡಬೇಕು, ಅಕ್ಕ ಪಕ್ಕ ಯಾವ ಮನೇನು ಇರಲ್ಲ. ಅಡಿಗೆ ಮನೆಯಲ್ಲಿ ಏನಾದ್ರು ಪಾತ್ರೆ ಇರಬಹುದು ಅಂತ ಹೋಗಿ ನೋಡತಾಳೆ.

         

          ಅಸ್ತವ್ಯಸ್ತವಾಗಿ ಬಿದ್ದಿದ್ದ ಪಾತ್ರೆಗಳಲ್ಲಿ ಒಂದು ಕೊಡ ತಗೊಂಡು ಹೊರಗಡೆ ಹೋಗುತ್ತಾಳೆ. ನಲ್ಲಿನೊ ಅಥವಾ ಬಾವಿ ಏನಾದ್ರು ಇದ್ರೆ ನೀರು ತಗೊಬಹುದು ಅಂತ. ಹೊರಗಡೆ ಬಂದು ಮನೆ ಸುತ್ತ ಒಂದು ರೌಂಡ್ ಹಾಕುತ್ತಾಳೆ. ನಲ್ಲಿ ಸಿಗಲ್ಲ, ಆದ್ರೆ ಮನೆ ಹಿಂದುಗಡೆ ಒಂದು ಬಾವಿ ಸಿಗುತ್ತೆ. ಅಲ್ಲಿಂದ ನೀರು ಸೇದಿ ಕೊಡ ತೆಗೆದುಕೊಂಡು ಮನೆಗೆ ಹೋಗುತ್ತಾಳೆ. ಆದರೆ ಅವಳಿಗೆ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಅಂತ ಅನಿಸುತ್ತದೆ. ಹಿಂತಿರುಗಿ ನೋಡಿದರೆ ಯಾರು ಇರಲ್ಲ. ತನ್ನ ಭ್ರಮೆ ಅಂದುಕೊಂಡು ಒಳಗೆ ಬಂದು ಮುಂಬಾಗಿಲು ಹಾಕಿ ತನ್ನ ರೂಮ್ ಗೆ ಹೋಗುತ್ತಾಳೆ. ವಾಪಸ ಅಡಿಗೆ ಮನೆಗೆ ಬಂದು ಗ್ಲಾಸ್ ತಗೊಂಡು ಹೋಗಿ ನೀರು ಕುಡಿದು ಮಲಗಬೇಕು ಅನ್ನೋಷ್ಟರಲ್ಲಿ ಬಾಗಿಲು ಬಡಿದ ಸೌಂಡ್ ಕೇಳಿ ಎದ್ದು ಹೋಗಿ ಬಾಗಿಲು ತಗಿಯುತ್ತಾಳೆ.

          

     ಜಮೀನ್ದಾರ ಮನೆಯ ಆಳು ಬೀರ ಊಟದ ಡಬ್ಬಿ, ನೀರು ತಗೊಂಡುಬಂದು ನಿಂತಿರುತ್ತಾನೆ. ಡಬ್ಬಿ, ನೀರು ಕೊಟ್ಟು "ತಗೊಳಿ ಜಮೀನ್ದಾರು ಕೊಟ್ಟು ಕಳುಹಿಸಿದ್ದು. ನಮ್ಮೂರಿಗೆ ಬಂದ ಅತಿಥಿ ಹಾಗೆ ಹಸಿದುಕೊಂಡು ಇರಬಾರದು ಅಂತ ಕೊಟ್ಟು ಕಳುಹಿಸಿದ್ದಾರೆ. ಊಟ ಮಾಡಿ ಮಲಗಿ. ನಾಳೆ ಎಲ್ಲ ಸ್ವಚ್ಛ ಮಾಡುವದಕ್ಕೆ ಹೇಳಿದ್ದಾರೆ ಜಮೀನ್ದಾರು. ನಾನು ಎಲ್ಲ ಸ್ವಚ್ಛ ಮಾಡುತ್ತೇನೆ, ನೀವು ಊಟ ಮಾಡಿ ಮಲಗಿ". ಅಂತ ಹೇಳಿ ತನ್ನ ಮನೆ ದಾರಿ ಹಿಡಿದ.

             

        ಹಂಸ ಅವನು ಹೋಗುವ ದಾರಿ ನೋಡುತ್ತಾ... ತನ್ನಲ್ಲೆ ಅಂದುಕೊಳ್ಳುತ್ತಾಳೆ. "ಅಷ್ಟು ಜನ ಆಳುಗಳಲ್ಲಿ ದೈರ್ಯವಂತ ಬೀರ ಅಂತ". ಯೋಚನೆಯಿಂದ ಹೊರಬಂದು, ತುಂಬಾ ಹಸಿದಿದ್ದ ಹಂಸ ಊಟದ ಡಬ್ಬಿ ತಗೆಯುತ್ತಾಳೆ. ಊಟ ತುಂಬಾ ರುಚಿಯಾಗಿರುತ್ತದೆ. ಹೊಟ್ಟೆತುಂಬಾ ತಿಂದು ಕೊನೆಯ ಬಾಕ್ಸ್ ತಗೆದು ನೋಡುತ್ತಾಳೆ ಅದರಲ್ಲಿ ಊಟ ಇರಲ್ಲ ಬದಲಾಗಿ ಒಂದು ಚೀಟಿ ಇರುತ್ತದೆ. ಕೈ ತೊಳೆದುಕೊಂಡು ಓದೋಣ ಅಂತ ಅಂದು ಕೈ ತೊಳೆದು, ನೀರು ಕುಡಿದು ಚೀಟಿ ತಗೆದು ನೋಡುತ್ತಾಳೆ. ಅದನ್ನು ಓದಿ ಬೆಚ್ಚಿ ಬಿದ್ದ ಹಂಸ ಅದರ ಯೋಚನೆಯಲ್ಲೆ ಮಲಗುತ್ತಾಳೆ.

                     

               ಬೆಳಿಗ್ಗೆ ಬೇಗ ಎದ್ದು ಜಾಗಿಂಗ್ ಮುಗಿಸಿ ಬರುವಷ್ಟರಲ್ಲಿ ಬೀರ ಮನೆಯ ಬಾಗಿಲಿನಲ್ಲಿ ಬಂದು ಹಂಸಳಿಗಾಗಿ ಕಾದು ನಿಂತಿರುತ್ತಾನೆ. ರಾತ್ರಿ ಸರಿಯಾಗಿ ಮುಖ ನೋಡದ ಹಂಸ ಈಗ ಸರಿಯಾಗಿ ನೋಡುತ್ತಾಳೆ. 6 ಅಡಿಗೂ ಎತ್ತರ, ಎಂತ ಧೈರ್ಯವಂತರಿಗೂ ಹೆದರಿಸುವ ಕಣ್ಣು. ತೋಟದಲ್ಲಿ ಮೈ ಬಗ್ಗಿಸಿ ಕೆಲಸ ಮಾಡಿ ಒರಟಾದ ಮೈ. ಒಂದೆ ಸಲಕ್ಕೆ ಹತ್ತಾರು ಜನರನ್ನು ಹೊಡೆದುರುಳಿಸಬಲ್ಲ ಕಟ್ಟುಮಸ್ತಾದ ದೇಹ". ಹಂಸ ಬಂದ ತಕ್ಷಣ ತಲೆ ತಗ್ಗಿಸಿ ನಿಂತು ತಾನು ತಂದ ಟಿಫಿನ್ ಕೊಟ್ಟು , "ಹೊಸ ಜಾಗ ರಾತ್ರಿ ಚೆನ್ನಾಗಿ ನಿದ್ದೆ ಬಂತಾ ಟೀಚರ್ ಅಮ್ಮಾ" ಅಂತಾನೆ. ಅವಳಿಗೆ ಆಗ ಪತ್ರದ ಬಗ್ಗೆ ಯೋಚನೆ ಬಂದು ಅದೇ ಯೋಚನೆಯಲ್ಲಿ ಬೀರನಿಗೆ "ಹು ಚೆನ್ನಾಗಿ ನಿದ್ದೆ ಮಾಡಿದೆ" ಅಂತ ಹೇಳಿ, "ಹೌದು ಬೀರ ರಾತ್ರಿ ಊಟದ ಡಬ್ಬಿ ಯಾರು ಕೊಟ್ಟಿದ್ದು" ಅಂತ ಕೇಳುತ್ತಾಳೆ. ಅದಕ್ಕೆ ಬೀರ "ಅಡುಗೆಮನೆ ಕೆಲಸದ ಗೌರಮ್ಮ ಕೊಟ್ಟಿದ್ದು" ಅಂತ ಹೇಳುತ್ತಾನೆ. "ಹೌದಾ ಸರಿ ಬಾ ಇಬ್ಬರು ತಿಂಡಿ ತಿನ್ನೋಣ". "ಟೀಚೆರಮ್ಮ ನಂದು ಆಯಿತು, ನಾನು ತಿಂನ್ಕೊಂಡು ಬಂದೆ" ಅಂತ ಹೇಳಿದ. ಸರಿ ಅಂತ ಕ್ಯಾರಿಯರ್ ತಗೊಂಡು ಬೀರನ ಜೊತೆ ಒಳ ನಡೆಯುತ್ತಾಳೆ. ಫ್ರೆಶ್ ಆಗಿ ಬಂದು ಇನ್ನೊಮ್ಮೆ ತಿನ್ನು ಅಂತ ಬೀರನಿಗೂ ಹಾಕಿ ಕೊಟ್ಟು ತಾನು ತಿನ್ನುತ್ತಾಳೆ.

        

             ಇಬ್ಬರು ಮನೆ ಸ್ವಚ್ಛಮಾಡಲು ಮಾಡಲು ಸಿದ್ಧರಾದರು. ಹಂಸ ಬೀರನಿಗೆ, "ಬೀರ ಅಡಿಗೆ ಮನೆಯಿಂದ ಶುರುಮಾಡೋಣ"ಅಂತ ಅಲ್ಲಿಂದಾನೆ ಶುರು ಮಾಡುತ್ತಾರೆ. ಹಂಸ ಅಡಿಗೆ ಮನೆಯಲ್ಲಿ ಹೊಸದಾಗಿ ಹಾಕಿದ ಟೈಲ್ಸ್ ನೋಡಿ ಅದನ್ನು ಸ್ವಚ್ಛ ಮಾಡಿ ಬೀರ ನಿಗೆ ಕೇಳುತ್ತಾಳೆ, "ಇಲ್ಲಿ ಮಾತ್ರ ಯಾಕೆ ಹೊಸದಾಗಿ ಹಾಕಿದ್ದಾರೆ" ಅಂತ. ಅದರ ಬಗ್ಗೆ ಬೀರನಿಗೂ ಗೊತ್ತಿರಲ್ಲ. "ನನಗೂ ಗೊತ್ತಿಲ್ಲ ಅಮ್ಮ". ಅಂತ ಹೇಳುತ್ತಾನೆ. ಉಳಿದಿದ್ದು ಹಾಲ್, ಇನ್ನು ಎರಡು ರೂಮ್ ಅದನ್ನು ಇಬ್ಬರು ಸೇರಿ ಸ್ವಚ್ಛ ಮಾಡುತ್ತಾರೆ. ಆದರೆ ಆ ಎರಡು ರೋಮಲ್ಲಿ ಒಂದು ರೂಮ್ ಗೆ ಬೀಗ ಹಾಕಿರುತ್ತದೆ. ಯಾಕೆ ಬೀಗ ಹಾಕಿದ್ದಾರೆ ಅಂತ ಅನುಮಾನ ಬಂದ್ರು, ತನ್ನ ಅನುಮಾನ ಬೀರನಿಗೆ ತೋರಿಸದೆ ಸಾಯಂಕಾಲದೊಳಗೆ ಎಲ್ಲವೂ ಸ್ವಚ್ಛ ಮಾಡಿ, ಹೇಗಿದ್ರು ಎಲ್ಲ ಸ್ವಚ್ಛ ಆಗಿದೆ ಇನ್ನು ಮುಂದೆ ಜಮೀನ್ದಾರು ಮನೆಯಿಂದ ಊಟ ಬೇಡ ಅಂತ ಹೇಳಬೇಕು ಅಂತ ಅಂದುಕೊಂಡು ಬೀರನಿಗೂ ಅದೇ ಹೇಳುತ್ತಾಳೆ. ಬೀರ ಸರಿ ಅಂತ ಒಪ್ಪುತ್ತಾನೆ. 

                     ನಂತರ ಇಬ್ಬರು ತರಕಾರಿ, ಮನೆಗೆ ಬೇಕಾದ ಸಾಮಾನುಗಳನ್ನು ತರಲು ಮಾರ್ಕೆಟ್ ಗೆ ಹೋಗುತ್ತಾರೆ. ಎಲ್ಲ ತೆಗೆದುಕೊಂಡು ವಾಪಸ ಮನೆಗೆ ಬರಲು ಸಂಜೆ ಯಾಗಿರುತ್ತದೆ. ಅಷ್ಟರಲ್ಲಿ ಇನ್ನೊಬ್ಬ ಆಳು ಊಟ ತಂದು ಕೊಡುತ್ತಾನೆ. ಹಂಸ "ವಾಪಸ ಕಳಿಸೋದು ಸರಿ ಅಲ್ಲ ನಾಳೆ ಇಂದ ಬೇಡ ನಾನೇ ಮಾಡಿಕೊಳ್ಳುತ್ತೇನೆ". ಎಂದು ಹೇಳಿ ಇಬ್ಬರನ್ನು ಬೀಳ್ಕೊಡುತ್ತಾಳೆ. ಬೀರ ಮತ್ತೆ ಇನ್ನೊಬ್ಬ ಆಳು ಮನೆಗೆ ಹೋಗುತ್ತಾರೆ.

              ಹಂಸ "ಇವತ್ತು ಎಷ್ಟು ಕೆಲಸ ಮಾಡಿದೆ ನಾನು, ಕೆಲಸ ಮಾಡಿ ಸುಸ್ತಾಗಿ ಹೋಯಿತು. ಮೊದಲು ಊಟ ಮಾಡಿ ಬೇಗ ಮಲಗಬೇಕು ನಾ " ಅಂತ ಊಟ ಮಾಡುತ್ತಾಳೆ. ಇವತ್ತು ಕೂಡಾ ಊಟದ ಡಬ್ಬಿಯಲ್ಲಿ ಒಂದು ಪತ್ರ ಇರುತ್ತದೆ. ಅದರಲ್ಲೂ ಹಳೆ ಪತ್ರದಲ್ಲಿ ಬರೆದ ಹಾಗೆಯೆ ಇರುತ್ತದೆ. ಅದೇ ಯೋಚನೆಯಲ್ಲಿ ಮಲಗುತ್ತಾಳೆ. ಇದ್ದಕ್ಕಿದ್ದಂತೆ ಯಾರೋ ಕೂಗಿ ಕರೆದ ಹಾಗೆ ಆಗಿ ಎಚ್ಚರವಾಗುತ್ತದೆ. 

           ಎದ್ದು ನೋಡತಾಳೆ ಟೈಂ 11- 45 ಗಂಟೆ. ಎಲ್ಲ ಕಡೆ ನೋಡಿದರು ಯಾರು ಇರುವುದಿಲ್ಲ. ಕನಸು ಅಂದು ಕೊಂಡು , ಬಾಯರಿಕೆಯಿಂದ ನೀರು ಕುಡಿಯಲು ಪಕ್ಕದ ಟೇಬಲ್ ಮೇಲಿದ್ದ ಬಾಟಲ್ ತಗೋತಾಳೆ, ಆದರೆ ಅದು ಖಾಲಿ ಯಾಗಿರುತ್ತೆ. ಹಂಸಳಿಗೆ ಆಶ್ಚರ್ಯವಾಗುತ್ತದೆ. ಅದು ಹೇಗೆ ರಾತ್ರಿ ಮಲಗಬೇಕಾದ್ರೆ ತುಂಬಿದ ಬಾಟಲ್ ಖಾಲಿ ಆಗೋಗುತ್ತೆ ಅಂತ. ಏನೋ ನಡೀಯುತ್ತಿದೆ ಈ ಮನೆಯಲ್ಲಿ ಅದು ನನಗೆ ಗೊತ್ತಾಗುತ್ತಿಲ್ಲ ಅಂತ ಅಂದುಕೊಂಡು, ಎದ್ದು ಅಡಿಗೆ ಮನೆಗೆ ಹೋಗುತ್ತಾಳೆ. ನೀರು ಕುಡಿದು ವಾಪಸ ತನ್ನ ಕೋಣೆಗೆ ಹೋಗುತ್ತಿರಬೇಕಾದಾದ್ರೆ, ಹೊರಗಡೆ ಹಿತ್ತಲ ಬಾವಿಯ ಹತ್ತಿರ ಗೆಜ್ಜೆ ಶಬ್ದ ಕೇಳುತ್ತದೆ.

             ಹಂಸ ...ಭಯದಿಂದ "ಇಷ್ಟು ತಡ ರಾತ್ರಿಯಲ್ಲಿ ಯಾರಿರಬಹುದು, ಅಕ್ಕ ಪಕ್ಕನು ಯಾರ ಮನೆಗಳು ಇಲ್ಲ". ಯಾರು ನೋಡೋಣ ಅಂತ ಹಿತ್ತಲ ಬಾಗಿಲು ತಗೆದು ನೋಡುತ್ತಲೆ ಮೈ ಬೆವೆತು ಹೋಯಿತು. ಬಾವಿಯ ಹತ್ತಿರ , ಬಾವಿ ಕಡೆ ಮುಖ ಮಾಡಿ ವಿಕಾರವಾಗಿ ಸದ್ದು ಮಾಡುತ್ತಾ ನಿಂತಿರುವ ಹೆಣ್ಣನ್ನು ಕಂಡು. ಭಯದಲ್ಲಿ ಯಾ...ಯಾರು.. ಯಾರು ನೀವು ಅಂತ ಆ ತಣ್ಣನೆಯ ಬೆಳದಿಂಗಳ ಚಂದಿರನ ತಂಪಲ್ಲೋ ಬೆವೆತು ಹೋದಳು ಹಂಸ.

            ಹಂಸಳ ಸದ್ದಿಗೆ ತಿರುಗಿದ ಆ ಆಕಾರ, ಹಂಸ ನೋಡುತ್ತಲೆ ಬೆಚ್ಚಿಬಿದ್ದಳು. ಕೆಂಪು ಕೆಂಡದಂತೆ ಕೋಪವ ತೋರುತ್ತಿರುವ ಕಣ್ಣು, ಈಗ ತಾನೇ ರಕ್ತ ಕುಡಿದಿದೆ ಏನೋ ಅನ್ನುವತರ ಕೆಂಪಗೆ ಹೊರ ಚಾಚಿರುವ ನಾಲಿಗೆ, ವಿಕಾರವಾದ ಮುಖ. ನೋಡುತ್ತಲೆ ಹಂಸ ಪ್ರಜ್ಞೆ ಇಲ್ಲದೆ ಬಿದ್ದು ಬಿಡುತ್ತಾಳೆ.

                  ಬೆಳಿಗ್ಗೆ ರೂಮಿನಿಂದ ಹೊರ ಬಂದ ಹಂಸ, "ನಾನು ಹೇಗೆ ರೂಮಲ್ಲಿ ಮಲಗಿದೆ, ರಾತ್ರಿ ಹಿತ್ತಲಲ್ಲಿ ಇದ್ದವಳು ಆ ಭಯಂಕರ ರೂಪ ನೋಡಿ, ಆಮೇಲೆ ಏನಾಯಿತು ಗೊತ್ತಾಗಲಿಲ್ಲ. ಈಗ ನೋಡಿದ್ರೆ ರೂಮನಿಂದ ಹೊರ ಬರುತ್ತ ಇದಿನಿ. ಎಷ್ಟೇ ಯೋಚಿಸಿದ್ರು ಏನು ಜ್ಞಾಪಕಕ್ಕೆ ಬರುತ್ತಿರಲಿಲ್ಲ". ಅದೇ ಯೋಚನೆಯಲ್ಲಿ ಮುಖ ತೊಳೆದು ಫ್ರೆಶ್ ಆಗಿ ಬಂದು ಹಾಲ್ ಅಲ್ಲಿ ಕುಳಿತುಕೊಳ್ಳುತ್ತಾಳೆ.

                    ಶಾಲೆ ಶುರುವಾಗಲು ಇನ್ನು ಕೆಲ ದಿನಗಳು ಬಾಕಿ ಇವೆ. ನಿತ್ಯಕರ್ಮಗಳನ್ನೆಲ್ಲ ಮುಗಿಸಿ ಅದೇ ಯೋಚನೆಯಲ್ಲಿ ಮುಳುಗಿದ್ದಳು ಹಂಸ. ರಾತ್ರಿಯ ಭಯಾನಕ ದೃಶ್ಯ ನೆನೆದು ಇನ್ನೊಮ್ಮೆ ಬೆವೆತು ಹೋದಳು. ಅದೇ ಭಯದಲ್ಲಿ ತಿಂಡಿ ತಿಂದು ಅದು ಏನು ಅಂತ ಕಂಡುಹಿಡಿಯಲೆ ಬೇಕು ಅಂತ ಗಟ್ಟಿ ನಿರ್ಧಾರ ಮಾಡಿ, ರೂಮಿನಿಂದ ಹುಡುಕಾಟ ಶುರು ಮಾಡುತ್ತಾಳೆ. ಬೀರು ಎಲ್ಲ ತಡಕಾಡಿದರು ಏನು ಸಿಗುವುದಿಲ್ಲ. ಟೇಬಲ್ ಎಲ್ಲನು ಹುಡುಕಿದರು, ಅಲ್ಲೋ ಏನು ಅನುಮಾನ ಬರೋತರ ಯಾವ ವಸ್ತುಗಳು ಇರುವುದಿಲ್ಲ.

                      ಏನ ಮಾಡೋದು ಅಂತ ಬಾವಿ ಹತ್ತಿರ ಹೋಗುತ್ತಾಳೆ. ಅಲ್ಲಿ ನೋಡಿದ ವಿಕಾರವಾದ ಹೆಂಗಸಿನ ಸುಳಿವು ಏನಾದರೂ ಸಿಗುತ್ತ ಅಂತ ಬಾವಿಯ ಸುತ್ತ ಮುತ್ತ ನೋಡುತ್ತಾಳೆ. ಬಾವಿಯಲ್ಲಿ ಇಣುಕಿ ನೋಡುತ್ತಾಳೆ ಬಾವಿ ನೀರು ಯಾರು ಬಳಸದೆ ಇದ್ದಿದ್ದರಿಂದ, ಒಳಗಡೆ ಮರದ ಎಲೆ, ಕಟ್ಟಿಗೆ ಎಲ್ಲ ಬಿದ್ದು ತುಂಬಾ ಗಲೀಜಾಗಿರುವುದರಿಂದ ಏನು ಸರಿಯಾಗಿ ಕಾಣಿಸುವುದಿಲ್ಲ. "ಬಂದ ದಿನ ರಾತ್ತಿ ಈ ನೀರು ಕುಡಿತಿದ್ದೆ ನಾ ಬೀರ ತಂದು ಕೊಡದೆ ಹೋಗಿದ್ದರೆ". ಅಂತ ಹಾಗೆ ತನ್ನ ಕೋಣೆಯ ಕಿಟಕಿಯ ಹತ್ತಿರ ಬಂದು ನೋಡುತ್ತಾಳೆ. ಏನಾದರೂ ಸಿಗುತ್ತಾ ಅಂತ. ಉಂ..ಹೂಂ...ಏನು ಸಿಗುವುದಿಲ್ಲ...

            ಇಷ್ಟೆಲ್ಲ ಹುಡುಕಾಟ ಮುಗಿಸೋವಷ್ಟರಲ್ಲಿ ಸಾಯಂಕಾಲ ಆಗಿರುತ್ತದೆ. ಮಧ್ಯಾಹ್ನ ಊಟನು ಮಾಡಿರಲ್ಲ. ಸುತ್ತ ಮುತ್ತ ಕಾಡಿನ ವಾತಾವರಣ ಚಳಿ ಶುರುವಾಗುತ್ತದೆ. ಟೀ ಕುಡಿಬೇಕು ಅಂತ, ಟೀ ಮಾಡುವದಕ್ಕೆ ಅಡಿಗೆ ಮನೆಗೆ ಹೋಗುತ್ತಾಳೆ. ಆಗ ಅಲ್ಲಿಯ ಒಂದು ಮೂಲೆಯ ಹೊಸ ಟೈಲ್ಸ್ ಕಡೆ ಕಣ್ಣು ಹೋಗುತ್ತದೆ. ಮತ್ತೆ ಅನುಮಾನ ಬಂದು, ಅಲ್ಲಿ ಏನು ಇರಬಹುದು ಅಂತ, ಟೀ ಕುಡಿದು ನೋಡಬೇಕು ಅಂದುಕೊಂಡು ಟೀ ಮಾಡಿ ಕುಡಿದು ಅಡಿಗೆ ಮನೆಯಲ್ಲಿ ಹೋಗಿ ಅದನ್ನೆ ನೋಡುತ್ತಾ ಒಡೆಯಲು ನಿಂತಿರುತ್ತಾಳೆ. ಆಗ ಜಮೀನ್ದಾರ ಮನೆಯಿಂದ ಬೀರ ಬರುತ್ತಾನೆ. ಇಷ್ಟೋತ್ತಲ್ಲಿ ಬಂದ ಬೀರನನ್ನು ನೋಡಿ ಈಗ ಬಂದಿರುವ ಕಾರಣ ಕೇಳುತ್ತಾಳೆ. ಹಂಸ ಮಾಡುತ್ತಿರುವ ಕೆಲಸ ನೋಡಿ ಗಾಬರಿಯಲ್ಲಿದ್ದ ಬೀರ, "ಕೆಲಸ ಏನಿಲ್ಲ ಟೀಚೆರ್ ಅಮ್ಮ... ಅದು...ಅದು...ಹಾಂ... ಜಮೀನ್ದಾರು ತುಂಬಾ ಗಾಬರಿಯಲ್ಲಿದ್ದರು ಮೇಡಂ ಹೆಗಿದ್ದಾರೆ, ಎಲ್ಲ ಅನುಕೂಲ ಇದೆಯಾ ಇಲ್ವಾ ಅಂತ ನೋಡಿಕೊಂಡು ಬರುವುದಕ್ಕೆ ಹೇಳಿದರು".

           ಬೀರನ ಮುಖದಲ್ಲಿದ್ದ ಗಾಬರಿ ಅವನ ಒಡೆಯನ ಕಾಳಜಿ ಗಮನಿಸದೆ ಇರಲಿಲ್ಲ ಹಂಸ. ಆದರೂ ಏನು ಕೇಳದೆ, "ಥ್ಯಾಂಕ್ಯೂ ಬೀರ ನನಗೆ ಎಲ್ಲ ಅನುಕೂಲ ಇದೆ. ಆದರೆ ಒಂದು ಸಹಾಯ ಬೇಕಿತ್ತು ಅಂತ ಕೇಳುತ್ತಾಳೆ". ಅದಕ್ಕೆ ಬೀರ "ಏನು ಸಹಾಯ ಅಂತ ಕೇಳುತ್ತಾನೆ". ಹಂಸ ಟೈಲ್ಸ್ ಕಡೆ ತೋರಿಸಿ "ಅದನ್ನು ಒಡೆದು ಏನಿದೆ ಅಂತ ನೋಡೋಣ ಅಂತ ಕೇಳುತ್ತಾಳೆ".

              ಬೀರನಿಗೆ ಕುತೂಹಲ ಇದ್ದರು ತನ್ನ ಒಡೆಯನ ಭಯದಿಂದ "ಬೇಡ.. ಬೇಡ... ಭಯವಾಗುತ್ತದೆ ಧಣಿಗಳಿಗೆ ಗೊತ್ತಿಲ್ಲದಂಗೆ ಅವರ ಮನೆ ಒಡೆದು ಏನಿದೆ ಅಂತ ಕಳ್ಳತನದಲ್ಲಿ ನೋಡುವುದಕ್ಕೆ, ಹಾಗೂ ನೋಡಿದಿವಿ ಅಂತ ಅವರಿಗೆ ಗೊತ್ತಾದರೆ, ನನಗೆ ತುಂಬಾ ತೊಂದ್ರೆ ಆಗುತ್ತದೆ ಬೇಡ" ಅಂತ ಹೇಳುತ್ತಾನೆ. ಹಂಸ ಬೀರನಿಗೆ ಜಾಸ್ತಿ ಒತ್ತಾಯ ಮಾಡದೆ , ಸರಿ ಅಂತ ಸುಮ್ಮನಾಗುತ್ತಾಳೆ. ಬೀರ ತನ್ನ ಮನಸಲ್ಲೇ, "ಏನು ಕೆಲಸ ಇಲ್ಲ, ಜಾಸ್ತಿ ಹೊತ್ತು ಇದ್ದರೆ ಇವರು ಮತ್ತೆ ಒತ್ತಾಯ ಮಾಡಬಹುದು ಅಂತ , "ನಾನು ಇನ್ನು ಹೊರಡುತ್ತೇನೆ" ಅಂತ ಅಲ್ಲಿಂದ ಹೊರಡುತ್ತಾನೆ. ಆದರೆ ಹಂಸಳಿಗೆ ಅನುಮಾನ ಕಡಿಮೆಯಾಗಿರಲ್ಲ. ರಾತ್ರಿ ನಡೆದ ಘಟನೆ, ಬೀರನ ಅನುಮಾನದ ನಡುವಳಿಕೆ ಹಂಸನ ಅನುಮಾನ ಹೆಚ್ಚು ಮಾಡಿರುತ್ತವೆ.

              ಆ ಯೋಚನೆಯಿಂದ ಹೊರಗೆ ಬರುವುದಕ್ಕೆ ಆಗದೆ, ಏನು ಮಾಡಬೇಕು....ಮನೆ ಬಿಟ್ಟು ಹೊಗಲಾ ಅಂತ ಯೋಚನೆ, ಕೆಲಸನು ಬೇಡ ಏನು ಬೇಡ ಅಮ್ಮನ ಜೊತೆ ಹಾಯಾಗಿ ಇದ್ದು ಬಿಡೋಣ ಅಂತ. ಆದರೆ ಮುಂದಿನ ನಿಮಿಷದಲ್ಲಿ ಮತ್ತೆ.."ಬೇಡ, ಇಷ್ಟಕ್ಕೆಲ್ಲ ಹೆದರಿ ಕೆಲಸ ಬಿಡುವುದು ಬೇಡ. ಹೆದರಿಕೆ ಜಾಸ್ತಿ ಆದರೆ ಬೇರೆ ಮನೆ ನೋಡೋಣ" ಅಂತ ಅಂದುಕೊಂಡು ಎದ್ದು ಅಡಿಗೆ ಮಾಡುವುದಕ್ಕೆ ಅಡಿಗೆ ಮನೆಗೆ ಹೋಗುತ್ತಾಳೆ. ಮತ್ತೆ ಅದೇ ಟೈಲ್ಸ್ ನೆಲ ನೋಡಿ ಕುತೊಹಲ ಹೆಚ್ಚಾಗುತ್ತದೆ. ಆದರೂ ಅದರ ಯೋಚನೆ ಬಿಟ್ಟು "ನಾಳೆಯಿಂದ ಶಾಲೆ ಶುರುವಾಗುತ್ತದೆ, ಬೇಗ ಹೋಗಬೇಕು, ಬೇಗ ಏಳಬೇಕು ಅದು ಅಲ್ದೆ ಜಾಯ್ನಿಂಗ್ ಪ್ರೋಸಿಜೆರ್ ಎಲ್ಲ ಇರುತ್ತದೆ. ಬೇಗ ಹೋಗಬೇಕು ಅಂದ್ರೆ, ಬೇಗ ಊಟ ಮಾಡಿ ಮಲಗಬೇಕು" ಅಂತ ಅಂದುಕೊಂಡು, ಎಲ್ಲ ಕೆಲಸ ಮುಗಿಸಿ ಊಟ ಮಲಗುತ್ತಾಳೆ.

            ದಣಿವಾಗಿದ್ದರಿಂದ ಹಂಸ ಬೇಗ ನಿದ್ದೆಗೆ ಜಾರುತ್ತಾಳೆ. ಮಧ್ಯರಾತ್ರಿಯಲ್ಲಿ ಕೋಣೆಯ ಕಿಟಕಿಯಿಂದ ಒಂದು ಹೆಣ್ಣಿನ ಗೆಜ್ಜೆಯ ಸದ್ದು ಹಾಗೂ ಅವಳ ನೆರಳು ಹಂಸಳ ಮೇಲೆ ಬೀಳುತ್ತದೆ. ಆ ಸದ್ದಿಗೆ ವಾತಾವರಣದಲ್ಲಿನ ಗಾಳಿಗೂ ಕೂಡಾ ಏನೋ ಒಂತರ ಭಯ ...ಆ ಜೋರಾದ ಗಾಳಿಗೆ ಎಚ್ಚರವಾದ ಹಂಸ ಆ ನೆರಳನ್ನು ನೋಡಿ ಭಯಗೊಂಡು ಸಾವರಿಸಿಕೊಂಡು ಯಾರು ಅಂತ ಕೇಳುತ್ತಾಳೆ. ನಿನ್ನೆ ರಾತ್ರಿಕಂಡ ವಿಕಾರವಾದ ಮುಖ ಇರುವುದಿಲ್ಲ. ಒಂದು ಸುಂದರವಾದ ಹೆಣ್ಣಿನ ಮುಖ. ಆದರೆ ಮುಖದಲ್ಲಿ ಕೋಪ, ದ್ವೇಷ ಎದ್ದು ಕಾಣುತ್ತಿತ್ತು. ಮತ್ತೊಮ್ಮೆ ಯಾರು ನೀವು ಅಂತ ಕೇಳುತ್ತಾಳೆ. ಆಗ ಆ ಹೆಣ್ಣು ಕುಹಕವಾಗಿ ನಕ್ಕು, "ನಾನು ಜಮೀನ್ದಾರನ ಮೊದಲನೆಯ ಹೆಂಡತಿ" ಅಂತ ಹೇಳುತ್ತಾಳೆ. ಹೌದ..., ಅಲ್ವಾ ಅಂತ ಅನುಮಾನವಿದ್ದರು ತೋರಿಸದೆ "ಇಷ್ಟು ರಾತ್ರಿ ಹೊತ್ತಿನಲ್ಲಿ ಅದು ಒಬ್ಬರೆ ಯಾಕೆ ಬಂದಿರಿ" ಅಂತ ಕೇಳುತ್ತಾಳೆ. "ಏನಾದರೂ ಕೆಲಸ ಇದ್ದರೆ ಆಳು ಕಳುಹಿಸಿದ್ದರೆ ಆಗುತ್ತಿತ್ತು. ಅವರ ಜೊತೆ ನಾನೆ ಬರುತ್ತಿದ್ದೆ" ಅಂತ ಮಾತಾನಾಡುತ್ತಿರುತ್ತಾಳೆ. ಆದರೆ ಆ ಹೆಣ್ಣು ಹಂಸಳನ್ನು ಇನ್ನಷ್ಟು ಕೋಪದಿಂದ ನೋಡುತ್ತಿರುತ್ತಾಳೆ. ಅವಳ ಕೋಪಕ್ಕೆ ಸುತ್ತಲಿನ ಮರ ಗಿಡದಲ್ಲಿ ನೆಮ್ಮದಿಯಾಗಿ ಮಲಗಿದ್ದ ಪಕ್ಷಿಗಳು ಒಮ್ಮೆಲೇ ನೋವಿನ ಕಿರುಚಾಟ ಶುರುಮಾಡಿದವು, ಆ ಹೆಣ್ಣಿನ ವಿಕೃತ ನಗುವಿಗೆ ಹಂಸಳ ಮೈ ಪುರಾ ಬೆವೆತು ಹೋಗಿರುತ್ತದೆ. "ಇಲ್ಲ ನನ್ನ ವಾಸ ಇಲ್ಲೆ ಅಂತ ಕಡೆ ಕೈ ಮಾಡಿ ತೋರಿಸುತ್ತಾಳೆ. ಹಂಸ ನಿಧಾನವಾಗಿ ಅವಳು ಕೈ ಮಾಡಿದ ಕಡೆ ನೋಡುತ್ತಾಳೆ, ಆದರೆ ಅಲ್ಲಿ ಬಾವಿ ಬಿಟ್ಟು ಬೇರೆ ಏನು ಇರುವುದಿಲ್ಲ. ಗೊಂದಲಗೊಂಡ ಹಂಸ ಅಲ್ಲಿ ಬಾವಿ ಬಿಟ್ಟು ಬೇರೆ ಏನು ಇಲ್ಲ ಅಂತ ಆ ಹೆಣ್ಣಿನ ಕಡೆ ತಿರುಗುವಷ್ಟರಲ್ಲಿ ಅಲ್ಲಿ ಯಾರು ಇರುವುದಿಲ್ಲ. ಮತ್ತೆ ಬಾವಿ ಕಡೆ ನೋಡಿದಾಗ, ಯಾವುದೋ ಆಕೃತಿ ಬಾವಿಯೊಳಗೆ ಹೋದ ಅನುಭವ. ಧೈರ್ಯದಿಂದ ಬಾವಿಯಲ್ಲಿ ಇಣುಕಿದಾಗ ಏನು ಕಾಣಿಸಲ್ಲ ಮತ್ತು ಯಾರು ಇರೋದಿಲ್ಲ. ಏನಿದೆಲ್ಲ ಅಂದುಕೊಂಡು ವಾಪಸ ತನ್ನ ಕೋಣೆಗೆ ಬಂದು ಕಣ್ಣು ಮುಚ್ಚಿ ಮಲಗಿದಳು.

                  ಕಣ್ಣು ಬಿಟ್ಟಾಗ, ಆಗತಾನೆ ಸೂರ್ಯ ಮೋಡಗಳ ಮರೆಯಿಂದ ಇಣುಕಿ ಹಾಕಲು ಹವಣಿಸುತ್ತಿದ್ದ. ಬೆಳಗಿನ ಮಂಜು ಅವನನ್ನು ಕಷ್ಟ ಪಟ್ಟು ತಡೆ ಹಿಡಿದು ನಿಂತಿದ್ದವು. ಆದರೆ ಸೂರ್ಯನ ಪ್ರೀತಿಗೆ ಸೋತು ಮಂಜು ಕರಗಿದವು. ಈದೆಲ್ಲ ನೋಡುತ್ತಾ...ಎಲ್ಲವೂ ಹೊಸದಾಗಿ ಕಂಡಂತೆ, ಹಾಗೆ ತನ್ನನ್ನೇ ಮರೆತು ಹೋದಳು ಹಂಸ. ರಾತ್ರಿಯ ಆ ಭಯಾನಕ ಪಕ್ಷಿಗಳ ಕಿರುಚಾಟ, ಬೆಳಗಿನ ಈ ಹಕ್ಕಿಗಳ ಚಿಲಿಪಿಲಿ ಕಲರವ ಎಷ್ಟು ವ್ಯತ್ಯಾಸ ಎರಡಕ್ಕೂ ಅಂತ ಯೋಚನೆಯಲ್ಲಿ ಸಮಯಹೋದದ್ದೇ ಗೊತ್ತಾಗಲಿಲ್ಲ.

ಇನ್ನು ತಡ ಮಾಡಬಾರದು ಅಂತ ಬೇಗ ಬೇಗ ರೆಡಿ ಆಗಿ ಶಾಲೆಗೆ ಹೋದಳು.

            ಮೊದಲ ದಿನ ಶಾಲೆಗೆ, ಅಲ್ಲಿನ ಶಿಕ್ಷಕರು ಹೇಗೆ..? ಮಕ್ಕಳು ಹೇಗೆ ಅಂತ ಯೋಚಿಸಿಕೊಂಡು ಶಾಲೆ ತಲುಪಿದಳು. ಅಲ್ಲಿನ ಹೆಡ್ ಮಾಸ್ಟರ್ ಕಡೆ ಜಾಯ್ನಿಂಗ್ ಲೆಟರ್ ಕೊಟ್ಟು, "ನನ್ನ ಹೆಸರು ಹಂಸ" ಅಂತ ಪರಿಚಯ ಮಾಡಿಕೊಳ್ಳುತ್ತಾಳೆ. "ಇರುವದಕ್ಕೆ ಮನೆ ನೋಡಿಕೊಂಡಿಯಾ..? ಎಲ್ಲಿ ಇರೋದು ನೀನು" ಅಂತ ಕೇಳುತ್ತಾರೆ.

      ಅದಕ್ಕವಳು "ಜಮೀನ್ದಾರರ ಊರ ಹೊರಗಿನ ಬಂಗಲೆ ಯಲ್ಲಿ ಇದಿನಿ, ಹೇಗೂ ಸ್ಕೂಲ್ಗೆ ಹತ್ತಿರ ವಾಗುತ್ತದೆ. ಅದಕ್ಕೆ ಅಲ್ಲೇ ಉಳಿದುಕೊಂಡಿದಿನಿ" ಅಂತ ಹೇಳುತ್ತಾಳೆ. "ಊರಾಚೆಯ ಬಂಗಲೆಯ" ಹೆಸರು ಕೇಳಿದ ತಕ್ಷಣ ಹೆಡ್ ಮಾಸ್ಟರ್ ಹಣೆಲಿ ಸಣ್ಣದಾಗಿ ಬೆವರು ಮೂಡಲು ಶುರುವಾಯಿತು. ಮುಖದಲ್ಲಿನ ಗಾಬರಿ ಎಷ್ಟೇ ತಡೆ ಹಿಡಿದರು ಎದುರಿಗಿದ್ದ ಹಂಸಳಿಗೆ ಗೊತ್ತಾಗದೆ ಇರಲಿಲ್ಲ. ಏನಾಯಿತು ಸಾರ್ ಅಂತ ಕೇಳಿಯೇಬಿಟ್ಟಳು. ಅದಕ್ಕವರು, "ಇ... ಇಲ್ಲಮ್ಮ ನಂಗೇನಾಗಿದೆ" ಹಣೆ ವರೆಸಿಕೊಂಡು, "ಸರಿ ಮಾ ಹಂಸ ನೀನು ಇಲ್ಲಿ ಸಹಿ ಮಾಡು" ಅಂತ ಸಹಿ ಮಾಡಿಸಿಕೊಂಡು, ಅವಳಿಗೆ ತರಗತಿ ತೋರಿಸುತ್ತಾರೆ. ಐದನೇ ತರಗತಿಯ ಮಕ್ಕಳಲಿಗೆ ಕ್ಲಾಸ್ ಟೀಚರ್ ಆಗಿ ನೇಮಕ ಆಗಿರುತ್ತಾಳೆ. ಅವತ್ತಿನ ದಿನವೆಲ್ಲ ಎಲ್ಲ ಸ್ಟಾಫ್ ಪರಿಚಯ, ಮಕ್ಕಳ ಪರಿಚಯ ಮಾಡಿಕೊಳ್ಳುವುದರಲ್ಲೇ ದಿನ ಹೋಗುತ್ತದೆ.

                       ಶಾಲೆ ಮುಗಿದು ಸಾಯಂಕಾಲ ಮನೆಗೆ ಹೋಗುವಾಗ, ದಾರಿ ಮಧ್ಯೆ ಒಂದಿಬ್ಬರು ಹೆಂಗಸರು ಮಾತಾನಾಡುವದನ್ನು ಕೇಳುತ್ತಾಳೆ. "ಹೊಸದಾಗಿ ಬಂದಿರುವ ಟೀಚರ್ ಅಮ್ಮ, ಜಮೀನ್ದಾರರ ಭೂತ ಬಂಗಲೆಯಲ್ಲಿ ವಾಸವಾಗಿದ್ದಾರಂತೆ, ಪಾಪ ಆ ವಮ್ಮನಿಗೆ ಏನು ಗೊತ್ತಿಲ್ಲ, ಆದರೆ ಜಮೀನ್ದಾರು ಎಲ್ಲ ಗೊತ್ತಿದ್ದು, ಆ ಸಣ್ಣ ಹುಡುಗಿನ ಅದು ಒಬ್ಬಳೆ, ಅಲ್ಲಿ ಇರುವದಕ್ಕೆ ಹೇಳಿದ್ದಾರೆ. ಇನ್ನು ಮುಂದೆ ಅದೇನು ಕಾದಿದೆಯೋ" ಅಂತ ಮಾತನಾಡುತ್ತ ಇರುತ್ತಾರೆ.

                ಇದನ್ನೆಲ್ಲ ಕೇಳಿದ ಹಂಸಳಿಗೆ ಭಯವಾಗುತ್ತದೆ. ಭೂತಬಂಗಲೇ ನಾ..? ಅದು ಅಂತ ಅಂದುಕೊಂಡು, ಅದೇ ಯೋಚನೆಯಲ್ಲಿ ಮನೆ ತಲುಪುತ್ತಾಳೆ. ಈಗ ಅವಳಿಗೆ ಭಯಕ್ಕಿಂತ ಜಾಸ್ತಿ ಅನುಮಾನ ಶುರುವಾಗುತ್ತದೆ.

ಈಗಿನ ಕಾಲದಲ್ಲೂ ದೆವ್ವ ಭೂತ ಅಂತ ನಂಬುತ್ತಿದ್ದಾರಲ್ಲ ಜನ ಅಂತ. ಆದರೂ ಹಿಂದೆ ತಾನು ನೋಡಿದ್ದ ಭಯಾನಕ ದೃಶ್ಯ ನೆನೆದು ಮತ್ತೆ ಬೆಚ್ಚಿ ಬಿಳುತ್ತಾಳೆ. ನಿಜ ಇರಬಹುದಾ ಇದೆಲ್ಲ ಅಂತ ಅನುಮಾನ ಕಾಡುತ್ತದೆ.

          ಹಿತ್ತಲಲ್ಲಿ ಕೈ, ಕಾಲು, ಮುಖ ತೊಳೆದು, ಸೀದಾ ಅಡಿಗೆ ಮನೆಗೆ ಹೋಗುತ್ತಾಳೆ. ಅಲ್ಲಿ ಟೈಲ್ಸ್ ತಗಿಯುವದಕ್ಕೆ ಪ್ರಯತ್ನ ಮಾಡುತ್ತಾಳೆ. ಆದರೆ ಗಟ್ಟಿ ಟೈಲ್ಸ್ ಬರಿ ಗೈ ಇಂದ ಬರ್ತಾ ಇರಲಿಲ್ಲ. ಅಲ್ಲೇ ಅಡುಗೆ ಮನೆಯಲ್ಲಿ ಏನಾದ್ರು ಸಿಗುತ್ತ ಟೈಲ್ಸ್ ಒಡೆಯುವದಕ್ಕೆ ಅಂತ ಹುಡುಕುತ್ತಾಳೆ. ಅಲ್ಲೇ ಒಂದು ಮೂಲೆಯಲ್ಲಿ "ಕಬ್ಬಿಣದ ಸಲಾಕೆ" ಬಿದ್ದಿರುತ್ತದೆ. ಅದನ್ನು ಎತ್ತಿಕೊಂಡು, ಟೈಲ್ಸ್ ಒಡೆಯಬೇಕು ಅಂತ ಒಂದೆರೆಡು ಏಟು ಹಾಕಿರುತ್ತಾಳೆ.

                ಬಾಗಿಲಿನಿಂದ, "ಟೀಚರ್ ಅಮ್ಮ ಏನು ಮಾಡ್ತಾ ಇದಿರಾ", ಅಂತ ಯಾವುದೋ ಪರಿಚಿತ ಧ್ವನಿಗೆ ಬೆಚ್ಚಿ ಬಿದ್ದ ಹಂಸ ತಿರುಗಿ ನೋಡುತ್ತಾಳೆ. ಜಮೀನ್ದಾರು ಮನೆಯ ಖಾಸಾ ಆಳು ಬೀರ ನಿಂತಿರುತ್ತಾನೆ. ಹಂಸ ಆ ಹೆಂಗಸರು ಮಾತಾನಾಡಿದ್ದ ಯೋಚನೆಯಲ್ಲಿ ಒಳ ಬಂದಾಗ, ಬಾಗಿಲು ಹಾಕಿರಲ್ಲ, ಹಾಗೆ ಬಂದಿರುತ್ತಾಳೆ.

              ಬಾಗಿಲಲ್ಲೇ ನಿಂತ ಬೀರ ಅಡಿಗೆ ಮನೆ ಶಬ್ದಕ್ಕೆ, ಒಳಗಡೆ ಬಂದು ನೋಡುತ್ತಾನೆ. ಹಂಸ ಟೈಲ್ಸ್ ಒಡೆಯುವದನ್ನ ನೋಡಿ ಏನ ಮಾಡತಇದಿರಾ ಅಂತ ಕೇಳುತ್ತಾನೆ. ( ಬೀರನ ಒಡೆಯ ಬೀರನಿಗೆ ಹಂಸನ ಮೇಲೆ ನಿಗಾ ಇಡು ಅಂತ ಹೇಳಿರುತ್ತಾನೆ. ದಾರಿಯಲ್ಲಿ ಭೂತ ಬಂಗಲೆ ಅಂತ ಹೆಂಗಸರು ಮಾತಾನಾಡಿದ್ದು, ಅದನ್ನು ಹಂಸ ಕೇಳಿದ್ದು ಬೀರ ನೋಡಿರುತ್ತಾನೆ. ಏನಾಗುತ್ತೋ ಅಂತ ಹೆದರಿಕೊಂಡು ಮನೆಗೆ ಬಂದಿರುತ್ತಾನೆ.)

                   ಅರ್ಧಂಭರ್ಧ ಟೈಲ್ಸ್ ಒಡೆದ ಹಂಸ "ಬೀರ ಇಲ್ಲಿ ಏನೊ ಇದೆ. ಸಹಾಯ ಮಾಡು" ಅಂತ ಉಳಿದದ್ದು ಒಡೆಯುವದಕ್ಕೆ ಬೀರನಿಗೆ ಹೇಳುತ್ತಾಳೆ. ಬೀರನಿಗೂ ಭಯ, ಕುತೂಹಲ, "ಹೇಗೂ ಒಡೆದಾಗಿದೆ ಏನಿದೆ ಅಂತ ನೋಡೋಣ" ಅಂತ ಒಡೆಯುವದಕ್ಕೆ ಶುರು ಮಾಡುತ್ತಾನೆ. ಕೊನೆಗೆ ಅಲ್ಲೊಂದು ಎತ್ತುವ ಒಂದು ಕಟ್ಟಿಗೆಯ ಚಿಕ್ಕ ಬಾಗಿಲು ಸಿಗುತ್ತದೆ.



ಇದನ್ನು ನೋಡಿದ ಇಬ್ಬರಿಗೂ ಆಶ್ಚರ್ಯ, ಆ ಬಾಗಿಲನ್ನು ಎತ್ತಿ ನೋಡಿದಾಗ ಕೆಳಗೆ ಇಳಿಯಲು ಸುಸಜ್ಜಿತ ಮೆಟ್ಟಿಲುಗಳು ಇರುತ್ತವೆ. ಮುಖ ಮುಖ ನೋಡಿಕೊಂಡ ಇಬ್ಬರು, ಬೀರ ಮೊದಲು ಕೆಳಗಡೆ ಇಳಿದು ಹೋಗುತ್ತಾನೆ. ರೋಮ್ ಅಲ್ಲಿ ಇರುವ ಬ್ಯಾಟರಿ ತಗೊಂಡು ಹಂಸ ಕೂಡ ಬೀರ್ ನ ಹಿಂದೆ ಹೆಜ್ಜೆ ಹಾಕುತ್ತಾಳೆ.

          ಕೆಳಗಡೆ ಇಳಿದು ನೋಡಿದಾಗ ಆ ಕೋಣೆ ಪೂರ್ತಿ ಖಾಲಿ ಇಲ್ಲದಿದ್ದರು, ಹೆಚ್ಚಾಗಿ ಏನು ಇರುವುದಿಲ್ಲ. ಇಬ್ಬರು ಆ ಕೋಣೆಯನ್ನು ಪೂರ್ತಿ ತಡಕಾಡಿದರು ಏನು ಸಿಗುವುದಿಲ್ಲ. ಆದರೆ ಹಂಸಳಿಗೆ ಏನೋ ಸುಳಿವು ಸಿಗುತ್ತದೆ. ಆದರೆ ಬೀರನ ಮುಂದೆ ಏನು ಗೊತ್ತಿಲ್ಲದವಳಂತೆ ಇದ್ದು, ವಾಪಸ ಮೇಲೆ ಬಂದ ಬೀರ "ಇದರ ಬಗ್ಗೆ ಹೊರಗಡೆ ಗೊತ್ತಾದರೆ ಜಮೀನ್ದಾರು ನನ್ನ ಸುಮ್ಮನೆ ಬಿಡುವುದಿಲ್ಲ, ಅವರ ಮನೆ ಒಡೆದು ಏನೋ ಹುಡಕಾಡಿದಿವಿ ಅಂತ ಗೊತ್ತಾದ್ರೆ ನನ್ನ ಕೆಲಸದಿಂದ ತಗೆದು ಹಾಕೋದಲ್ಲದೆ, ಕೊಂದು ಬಿಡಬಹುದು" ಅಂತ ತನ್ನ ಭಯ ವ್ಯಕ್ತಪಡಿಸಿದಾಗ. ಹಂಸಳಿಗೂ ಬೀರ ಹೇಳುವುದರಲ್ಲಿ ಸರಿ ಅನ್ನಿಸಿ "ಹೆದರಿಕೊಳ್ಳಬೇಡ ಬೀರ ಯಾರಿಗೂ ಹೇಳುವುದಿಲ್ಲ" ಅಂತ ಭರವಸೆ ನೀಡಿದಾಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಾನೆ ಬೀರ. ನೆಲ ಮಾಳಿಗೆಯ ಬಾಗಿಲು ಹಾಕಿ , ಅದರ ಮೇಲೆ ಒಂದು ಹೊದಿಕೆ ಮುಚ್ಚಿ ಹಾಲ್ ಅಲ್ಲಿ ಬಂದು, ಇಷ್ಟೋತ್ತು ಅದೇ ಯೋಚನೆಯಲ್ಲಿದ್ದ ಹಂಸ, ಬೀರ ಬಂದ ಕಾರಣ ಏನು ಅಂತ ಕೇಳೋದನ್ನೇ ಮರೆತಿರುತ್ತಾಳೆ. ಕೊನೆಗೆ ಏನು ಕೆಲಸ ಇತ್ತು, ಯಾತಕ್ಕಾಗಿ ಬಂದೆ ಅಂತ ಬೀರನಿಗೆ ಕೇಳುತ್ತಾಳೆ.

                "ಹಾಗೇನು ಇಲ್ಲ ಟೀಚೆರಮ್ಮ ಈ ಕಡೆ ಕೆಲಸ ಇತ್ತು ಅಂತ ಹೋಗಿದ್ದೆ, ಬರ್ತಾ ನಿಮ್ಮನ್ನು ನೋಡಿಕೊಂಡು ಹೋಗೋಣ ಅಂತ ಬಂದೆ". ಅಂತ ಸತ್ಯ ಮರೆಮಾಚಿ ಹೇಳುತ್ತಾನೆ. "ನಾನಿನ್ನ ಬರ್ತೀನಿ ಟೀಚರಮ್ಮ" ಅಂತ ಹೇಳಿ ಮನೆ ದಾರಿ ಹಿಡಿಯುತ್ತಾನೆ. ಹಂಸ ಇದೆ ಯೋಚನೆಯಲ್ಲಿ ರೂಮ್ ಸೇರಿ ಕಣ್ಣು ಮುಚ್ಚಿ ಮಲಗುತ್ತಾಳೆ. ತಕ್ಷಣ ಏನೋ ನೆನಪು ಅದವರಂತೆ ಎದ್ದು, ಊಟದ ಡಬ್ಬಿಯ ಜೊತೆ ಬಂದ ಪತ್ರವನ್ನು ಓದುತ್ತಾಳೆ ಮತ್ತೊಮ್ಮೆ. ಈಗ ಅವಳಿಗೆ ಸ್ವಲ್ಪ ಆ ಪತ್ರ ಅರ್ಥವಾಗುತ್ತದೆ. ರಾತ್ರಿಯೆಲ್ಲ ಮಲಗದೆ ಯೋಚನೆ ಮಾಡುತ್ತಾ ಇರುತ್ತಾಳೆ. ಬೆಳಿಗ್ಗೆ ತಡವಾಗಿ ಎದ್ದು, ಬೇಗ ಬೇಗ ತಯಾರಾಗಿ ಶಾಲೆಗೆ ಹೋಗುತ್ತಾಳೆ.

           ಅದೇನೋ ಹೊಸತನ ಇವತ್ತು ಅವಳಿಗೆ. ಏನೋ ಸಿಕ್ಕಿದ ಭಾವ ಅವಳ ಮನಸಿಗೆ... ತುಂಬಾ ಖುಷಿಯಾಗಿ ಇರುತ್ತಾಳೆ. ಹೆಡ್ ಮಾಸ್ಟರ್ ಗೆ ಬೆಳಗಿನ ಶುಭೋದಯ ತಿಳಿಸಿ, ಸಹಿಮಾಡಿ ತನ್ನ ತರಗತಿಗೆ ತೆರಳುತ್ತಾಳೆ. ಅವತ್ತಿನ ದಿನವೆಲ್ಲ ಖುಷಿ ಯಾಗಿ ಕಳೆಯುತ್ತಾಳೆ.

             ಸಾಯಂಕಾಲ ಅದೇ ದಾರಿಯಲ್ಲಿ ಬರುತ್ತಾ , ಒಂದು ಯೋಜನೆ ರೂಪಿಸುತ್ತಾಳೆ. ಆ ಯೋಜನೆಯ ಪ್ರಕಾರ ನಿನ್ನೆ ಮಾತನಾಡಿದ ಹೆಂಗಸರ ಬಳಿ ಬಂದು ಬಂಗಲೆಯ ಬಗ್ಗೆ ಕೇಳುತ್ತಾಳೆ.

                    ಅವರು ಹೇಳಬೇಕಾ ಬೇಡವಾ ಅನ್ನೋ ಗೊಂದಲದಲ್ಲೆ ಹೇಳುತ್ತಾರೆ. "ಆ ಬಂಗಲೆಯಲ್ಲಿ ದೆವ್ವ ಇದೆ" ಎಂದು. ಹಂಸ, ತನಗಾದ ಅನುಭವ ಎಲ್ಲ ಒಟ್ಟಿಗೆ ನೆನಪು ಮಾಡಿಕೊಳ್ಳುತ್ತಿರಲು, ಆ ಹೆಂಗಸು ಮತ್ತೆ ಮುಂದುವರೆಸಿ, "ಅಲ್ಲಿ ಜಮೀನ್ದಾರರ ಮೊದಲನೇ ಹೆಂಡತಿ ಆತ್ಮಹತ್ಯೆ ಮಾಡಿಕೊಂಡು ಸತ್ತರು. ಅವಾಗಿನಿಂದ, ಅಲ್ಲಿ ಯಾರು ಹೋಗಲ್ಲ. ಅಲ್ಲಿ ಅವರ ಆತ್ಮ ಯಾವಾಗಲೂ ತಿರುಗಾಡುತ್ತಿರುತ್ತದೆ ಅಂತ ಕೆಲವೊಬ್ಬರು ಹಗಲಲ್ಲೆ ನೋಡಿದ್ದಾರೆ ಅಂತೆ, ಆ ಬಂಗಲೆಯ ಕಡೆ ಹಾದು ಹೋದಾಗ. ಇನ್ನು ರಾತ್ರಿಯಂತೂ ಆ ಬಂಗಲೆಯ ಕಡೆ ತಲೆ ಹಾಕಿ ಕೂಡ ಮಲಗೋದಿಲ್ಲ.

             ಆ ಹೆಂಗಸು, ನೀವ್ಯಾರು ಇದೆಲ್ಲ ಯಾಕೆ ಕೇಳ್ತಾ ಇದಿರಾ ಅಂತ ಕೇಳಿದಳು. ಹಂಸ "ನಾನು ಹೊಸದಾಗಿ ಬಂದಿರುವ ಟೀಚರ್, ಆ ಬಂಗಲೆಯಲ್ಲಿ ಈಗ ವಾಸವಿರುವದು". ಅಂದಾಗ ಆ ಹೆಂಗಸರಿಗೆ ಹೇಳಿ ತಪ್ಪು ಮಾಡಿದೇವಾ ಅಂತ ಅನಿಸಿತು. ಆದರೂ ಸಾವರಿಸಿಕೊಂಡು, ಈಗ ನಿಮಗೆಲ್ಲ ಗೊತ್ತಾಗಿದೆ, ಅಲ್ಲಿ ಇರುವವರೆಗೂ ಹುಷಾರಾಗಿ ಇರಿ ಅಂತ ಹೇಳಿ ಹಂಸಳನ್ನು ಕಳುಹಿಸಿ ಕೊಟ್ಟರು.

                   ಈಗ ಹಂಸಳಿಗೆ ಮನೆಗೆ ಹೋಗಲು ಒಂತರ ಭಯ ಮಿಶ್ರಿತ ಕುತೂಹಲ. ಜಮೀನ್ದಾರರ ಮೊದಲ ಹೆಂಡತಿ ಬಗ್ಗೆ ಯೋಚನೆ ಮಾಡಿಕೊಂಡು ಬರುತ್ತಾ ಇರಬೇಕಾದ್ರೆ ಅವರ ಹೆಸರು ಕೇಳುವದಕ್ಕೆ ಮರೆತು ಹೋದೆ ಅಲ್ಲ ಅಂತ ಬೇಸರಿಸಬೇಕಾದ್ರೆ, ದಾರಿ ಮಧ್ಯೆ ಬೀರ ಸಿಗುತ್ತಾನೆ. ಅವನ ಜೊತೆ ಮಾತನಾಡುತ್ತ ತಲೆಗೇ ಏನೋ ಒಂದು ಹೊಳೆದು ಬೀರನಿಗೆ ಮನೆಗೆ ಕರೆದು ಕೊಂಡು ಹೋಗುತ್ತಾಳೆ.

        ಮನೆಗೆ ಹೋದಮೇಲೆ ಬೀರನಿಗೆ ನಡೆದ ವಿಷಯ ಏನು ಅಂತ ಕೇಳುತ್ತಾಳೆ. ಬೀರನಿಗೆ ಅರ್ಥವಾಗಿ ಹೋಗಿತ್ತು ಹಂಸ ಕೇಳುವ ವಿಷಯ. ಅವ ಸ್ವಲ್ಪ ಹಿಂಜರಿದದ್ದು ನೋಡಿ, ಹಂಸ "ಪರವಾಗಿಲ್ಲ ನನಗೆ ವಿಷಯ ಗೊತ್ತಾಗಿದೆ, ಆದರೆ ನಿಜ ಏನು ಹೇಳು ಅಂತಾಳೆ". ಅದಕ್ಕೆ ಬೀರ "ನೀವು ಏನು ಕೇಳಿದಿರೋ ಬಿಟ್ಟಿದಿರೋ ಅದು ನನಗೆ ಗೊತ್ತಿಲ್ಲ. ಆದರೆ ಈ ಮನೆಯಲ್ಲಿ ದೊಡ್ಡಮ್ಮೊರು ನೇಣು ಹಾಕಿಕೊಂಡು ಸತ್ತರು ಅಂತ ಅಳುವುದಕ್ಕೆ ಶುರು ಮಾಡುತ್ತಾನೆ. ಆ ತಾಯಿ ಇಡಿ ಊರಿಗೆ ತಾಯಿ ಯಾಗಿದ್ದರು. ನಮ್ಮನ್ನೆಲ್ಲ ಮಕ್ಕಳಂತೆ ಸಾಕುತ್ತಿದ್ದರು. ಅವರು ನೇಣು ಹಾಕಿಕೊಂಡು ಸತ್ತರು ಅಂದರೆ ನಂಬುವದಕ್ಕೆ ಸಾಧ್ಯವಿಲ್ಲ. ಅದಕ್ಕಿಂತ ನಂಬುವದಕ್ಕೆ ಅಸಾಧ್ಯವಾಗಿದ್ದು, ಈ ಊರಿನ ಜನ ಹರಡಿಸಿರುವುದು ಆ ತಾಯಿ ದೆವ್ವವಾಗಿದ್ದರೆ ಅಂತ".

      ಇದನ್ನೆಲ್ಲ ಕೇಳಿದ ಹಂಸಳಿಗೆ ಏನು ಮಾಡಬೇಕು ಅಂತಾನೆ ತಿಳಿಯುವುದಿಲ್ಲ. ಊರ ಜನರ ಮಾತು, ಬೀರನ ಮಾತು ಎಲ್ಲವೂ ಗೊಂದಲಕ್ಕೆ ಸಿಲುಕಿಸಿರುತ್ತದೆ. ಕಡೆಗೂ ಒಂದು ನಿರ್ಧಾರಕ್ಕೆ ಬರುತ್ತಾಳೆ. ಅದನ್ನು ಬೀರನಿಗೆ ಹೇಳುತ್ತಾಳೆ. ಅದನ್ನೆಲ್ಲ ಕೇಳಿದ ಬೀರನಿಗೆ ಹಂಸ ಹೇಳಿರೋದು ಸುಳ್ಳು ಅಂತ ಅನಿಸುತ್ತದೆ. ಆದರೆ ಒಮ್ಮೆ ನಂಬಿ ನೋಡುವ ಸತ್ಯ ತಿಳಿಯುತ್ತದೆ ಅಂತ ಅವನು ಹಂಸನಿಗೆ ಸಹಾಯ ಮಾಡಲು ಒಪ್ಪುತ್ತಾನೆ.

                    ಮೊದಲು ಹಂಸ ಆ ಪತ್ರ ತೋರಿಸುತ್ತಾಳೆ. ಅದರಲ್ಲಿ "ಹಂಸ ನಿನ್ನ ಜೀವಕ್ಕೆ ಅಪಾಯವಿದೆ ಆದಷ್ಟು ಬೇಗ ಈ ಬಂಗಲೆ ಬಿಟ್ಟು, ಬೇರೆ ಮನೆಗೆ ಹೋಗು" ಅಂತ ಬರೆದಿದ್ದನ್ನು ಓದಿದ ಬೀರನಿಗೂ ಗಾಬರಿ ಜೊತೆಗೆ ಆಶ್ಚರ್ಯ. ಅದನ್ನು ಯಾರು ಬರೆದಿದ್ದು ಅಂತ ಬೀರ ಊಹಿಸಬಲ್ಲ. ಆದರೆ ಇದು ಹೆಂಗೆ ಸಾಧ್ಯ ಅಂತ ತನ್ನ ಅನುಮಾನ ಕೂಡಾ ಹಂಸಳಿಗೆ ಹೇಳುತ್ತಾನೆ. ಆಗ ಹಂಸಳಿಗೆ ಎಲ್ಲ ಅರ್ಥ ಆಗುತ್ತದೆ. ಆದರೂ ಗೊತ್ತಿಲ್ಲದಂತೆ ಇರುತ್ತಾಳೆ.

             ತಕ್ಷಣ ಹಂಸ ಬೀರನಿಗೆ ನೆಲಮಾಳಿಗೆಗೆ ಕರೆದು ಕೊಂಡು ಹೋಗುತ್ತಾಳೆ. ಹಂಸ ತಾನು ಮೊದಲು ನೋಡಿದ್ದ ಜಾಗ ತೋರಿಸುತ್ತಾಳೆ. ಅದು ನೋಡಿದ ಬೀರನಿಗೆ ಮತ್ತೂ ಆಶ್ಚರ್ಯ. ಹಂಸನ ಮುಖ ನೋಡಿದ ಗಾಬರಿಯಿಂದ. ಹಂಸ "ಹೌದು ಬೀರ್ ಇದು ಡಿಜಿಟಲ್ ಡೋರ್ ಇದಕ್ಕೆ ಕೋಡ್ ಬೇಕು ಡೋರ್ ತೆರೆಯಲು". ಅಂತ ಹೇಳುತ್ತಾಳೆ.

                  ಬೀರನಿಗೆ ಎಲ್ಲ ಈಗ ಅರ್ಥವಾಗುತ್ತದೆ. ಆ ಕೋಡ್ ಏನಿರಬಹುದು ಅಂತ ಅನುಮಾನ ದಿಂದ ಆ ಕೋಡ್ ಹೇಳುತ್ತಾನೆ ಹಂಸಳಿಗೆ. ಹಂಸ ಆ ಕೋಡ್ ಹಾಕಿದಾಗ ಬಾಗಿಲು ತೆರೆದು ಕೊಳ್ಳುತ್ತದೆ. ಇಬ್ಬರು ಏನೋ ಸಾಧಿಸಿದಂತೆ, ಒಳಗೆ ಹೋಗಿ ನೋಡುತ್ತಾರೆ. ಪೂರ್ತಿ ತುಂಬಿರುವ ಕೋಣೆ ಅದು. ಅಲ್ಲಿರುವ ವಸ್ತುಗಳನ್ನು ನೋಡಿ ಇಬ್ಬರಿಗೂ ಗಾಬರಿ ಆಗುತ್ತದೆ.

       ಇದರ ರುವಾರಿಯ ಬಗ್ಗೆ ಸುಳಿವು ಸಿಗುತ್ತಾ ಅಂತ ಎಲ್ಲ ಹುಡುಕುತ್ತಾರೆ. ಏನು ಸಿಗದೆ ಡೋರ್ ಲಾಕ್ ಮಾಡಿ , ಮೇಲೆ ಬಂದು ಚಿಲಕ ಹಾಕಿ ಹಾಲ್ ಅಲ್ಲಿ ಕುಳಿತು ಯೋಚಿಸುತ್ತಾರೆ, ಮುಂದೆ ಎನು ಅಂತ.

            ಯೋಚನೆಯಿಂದ ಹೊರಬಂದ ಹಂಸ, ಅಡಿಗೆ ಮಾಡಲು ಅಡಿಗೆ ಮನೆಗೆ ಹೋಗುತ್ತಾಳೆ. ಆದರೆ ಬೀರ ಇನ್ನು ಅದೇ ಯೋಚನೆಯಲ್ಲಿ ಇರುತ್ತಾನೆ. ತಾನು ದೇವರು ಅಂತ ನಂಬಿರುವ ಜಮೀನ್ದಾರರ ಮನೆಯಲ್ಲಿ ಈ ರೀತಿ.

                    ಇದೆಲ್ಲ ಹೇಗೆ ಸಾಧ್ಯ ಆ ವ್ಯಕ್ತಿಯ ಜೊತೆ ಬೇರೆ ಯಾರೋ ಕೈ ಜೋಡಿಸಿದ್ದಾರೆ. ಇಲ್ಲ ಅಂದ್ರೆ ಇಷ್ಟೆಲ್ಲ ಮಾಡಲು ಸಾಧ್ಯವಿಲ್ಲ. ಅದು ಯಾರು ಇರಬಹುದು ಅಂತ ಯೋಚಿಸುತ್ತಿರುತ್ತಾನೆ. ಹೇಗೆ ಯೋಚಿಸಿದರೂ, ಕಾಣುವ ಮುಖದಹಿಂದೆ ಕಾಣದ ಕೈ ಯಾವುದು ಅಂತ ಗೊತ್ತಾಗುವದಿಲ್ಲ.

       ಅಷ್ಟರಲ್ಲಿ ಅಡಿಗೆ ಮಾಡಿದ ಹಂಸ, ಬೀರನಿಗೆ " ಇಲ್ಲೇ ಊಟ ಮಾಡಿ, ಇಲ್ಲೇ ಮಲಗು ಬೆಳಿಗ್ಗೆ ಹೋಗು ತುಂಬಾ ಹೊತ್ತಾಗಿದೆ" ಅಂತ ಹೇಳುತ್ತಾಳೆ. ಬೀರನಿಗೂ ಇವತ್ತು ಇಲ್ಲೇ ಇದ್ದು ರಹಸ್ಯ ತಿಳಿದುಕೊಳ್ಳಬೇಕೆಂದು ತನ್ನ ಒಪ್ಪಿಗೆ ಸೂಚಿಸಿ ಇಬ್ಬರು ಊಟ ಮಾಡಿ ಹಾಲ್ ಅಲ್ಲಿ ಕುಳಿತಿರುತ್ತಾರೆ. ಅಷ್ಟರಲ್ಲಿ ಹಿತ್ತಲಿನಲ್ಲಿ ಯಾರೋ ಓಡಾಡಿದಂತೆ ಶಬ್ದ ಬರುತ್ತದೆ. ನಿಧಾನಕ್ಕೆ ಎದ್ದು ಹೋಗಿ ನೋಡುತ್ತಾರೆ. ಅಲ್ಲಿರುವ ವ್ಯಕ್ತಿಯನ್ನು ನೋಡಿ ಇಬ್ಬರು ದಿಗ್ಭ್ರಾಂತರಾಗಿ ನಿಲ್ಲುತ್ತಾರೆ.....

        

ಮರುದಿನ ಬೆಳಿಗ್ಗೆ

   ಬೆಳಿಗ್ಗೆ ಬೇಗ ಎದ್ದ ಇಬ್ಬರು, ರೆಡಿ ಆಗಿ ತಿಂಡಿ ತಿಂದು, ಹಂಸ "ಬೀರ ನಿನ್ನ ಕೆಲಸಕ್ಕೆ ನೀನು ಹೋಗು, ನನ್ನ ಕೆಲಸಕ್ಕೆ ನಾನು ಹೋಗುತ್ತೇನೆ" ಅಂತ ಹೇಳಿ ಮನೆಗೆ ಬೀಗ ಹಾಕಿ ಹೊರಡುತ್ತಾರೆ.

        ಬೀರ ತನ್ನ ಒಡೆಯನ ಮನೆಗೆ ಕೆಲಸ ಮಾಡಲು ಹೋಗುತ್ತಾನೆ. ಅವನ ಹಿಂದೆ ಹಿಂದೆ ಹಂಸ ಕೂಡಾ ಜಮೀನ್ದಾರನ ಮನೆಗೆ ಬರುತ್ತಾಳೆ. ಜಮೀನ್ದಾರನಿಗೆ ಹಂಸ ಈ ಟೈಂ ಅಲ್ಲಿ ಅದು ಬೀರನ ಜೊತೆ, ಶಾಲೆಯಲ್ಲಿ ಇರಬೇಕಾದವಳು ಇಲ್ಲಿ ಬಂದಿದ್ದು ನೋಡಿ ಆಶ್ಚರ್ಯವಾಯಿತು. ಅತ್ತ ಶಾಲೆಯ ಹೆಡ್ ಮಾಸ್ಟರ್ ಹಂಸಳಿಗಾಗಿ ಏನೋ ಮಾತನಾಡಲು ಕಾಯುತ್ತಿರುತ್ತಾರೆ.

         ಇಲ್ಲಿ ಜಮೀನ್ದಾರು ಹಂಸ ಬಂದ ಕಾರಣ ಕೇಳುತ್ತಾರೆ. ಹಂಸ "ನಿಮ್ಮ ಮೊದಲ ಹೆಂಡತಿಯ ಸಾವಿನ ಬಗ್ಗೆ ಮಾತಾಡಲು" ಅಂತ ಹೇಳುತ್ತಾಳೆ. ಕೋಪಗೊಂಡ ಜಮೀನ್ದಾರ, "ನೀನ್ಯಾರು ಅದೆಲ್ಲ ಕೇಳಲು, ಇರಲು ಮನೆ ಕೊಟ್ಟಿದ್ದೇನೆ ಹೊರತು ಮನೆಯ ವಿಷಯಕ್ಕೆ ತಲೆ ಹಾಕಬೇಡ ನಿನ್ನ ಕೆಲಸ ಎಷ್ಟಿದೆಯೋ ಅಷ್ಟು ಮಾಡು" ಅಂತಾರೆ. ಸಮಾಧಾನವಾಗೆ ಉತ್ತರಿಸಿದ ಹಂಸ "ಏನೋ ಒಂದು ಗುಟ್ಟು ಹೇಳುತ್ತಾಳೆ". ಅದನ್ನು ಕೇಳಿದ ಜಮೀನ್ದಾರನ ಕಾಲು ಕೆಳಗಿನ ನೆಲ ಅದುರಿದ ಅನುಭವ.

         ಜಮೀನ್ದಾರನ ಪರಿಸ್ಥಿತಿ ಅರಿತ ಹಂಸ ಮುಂದುವರೆದು "ನಿಮಗೆ ಯಾರ ಮೇಲಾದ್ರೂ ಅನುಮಾನ ಇದೆಯಾ" ಅಂತ ಕೇಳುತ್ತಾಳೆ. ಅದಕ್ಕೆ ಜಮೀನ್ದಾರ ಸಣ್ಣಗೆ ಬೆವರಿ, ಭಯ ಆದರೂ ತೋರಿಸಿಕೊಳ್ಳದೆ. "ಇಲ್ಲ....ಅನುಮಾನ ಇಲ್ಲ, ಅವಳು ನನ್ನ ಮೊದಲೇನೆಯ ಹೆಂಡತಿ, ನೀಲವೇಣಿ. ವೇಣಿ ಅಂತ ಕರಿಯುತ್ತಿದ್ದೆ ನಾನು ಅವಳನ್ನು. ಈಗ ನೀವಿರೋ ಬಂಗಲೆಯಲ್ಲಿ ನೇಣು ಹಾಕಿಕೊಂಡು ಸತ್ತಳು. ಹಂಸ "ಕಾರಣ ಏನು" ಅಂತ ಕೇಳುತ್ತಾಳೆ.

          ಜಮೀನ್ದಾರ "ಎಲ್ಲ ಹೇಳುತ್ತೇನೆ ಕೆಲವೊಂದು ತೀರ ವೈಯಕ್ತಿಕ ವಿಚಾರ ಇವೆ, ಇಲ್ಲಿ ಬೇಡ ಅಥಿಗಳ ಕೋಣೆಗೆ ಹೋಗಿ ಮಾತನಾಡೋಣ" ಅಂತಾನೆ. ಆಯಿತು ಅಂತ ಇಬ್ಬರು ಗೆಸ್ಟ್ ರೂಮ್ ಗೆ ಹೋಗಿ, ಅಲ್ಲಿ ಜಮೀನ್ದಾರ ಎಲ್ಲ ಹೇಳಲು ಶುರು ಮಾಡಿದ. ಅಷ್ಟರಲ್ಲಿ ಹಂಸ ತನ್ನ ಬ್ಯಾಗ್ ಇಂದ ಏನೋ ತಗೆದು ಹೊರಗಿಟ್ಟಳು.

               ಜಮೀನ್ದಾರ "ನಾನು ಈ ಊರು ಅಷ್ಟೇ ಅಲ್ಲ ಸುತ್ತ ಮುತ್ತ ಹತ್ತು ಹಳ್ಳಿಗೂ ಜಮೀನ್ದಾರ. ನಮ್ಮೂರಿಗೆ ಇನ್ನು ಪೊಲೀಸ್ ಸ್ಟೇಷನ್ ಇಲ್ಲ. ಇಲ್ಲಿ ನಾನೇ ಎಲ್ಲ ನ್ಯಾಯ ಪಂಚಾಯತಿ ಮಾಡುವುದು. ಹೀಗೆ ಒಂದು ದಿನ ಪಂಚಾಯತಿ ಮುಗಿಸಿಕೊಂಡು ಬರಬೇಕಾದರೆ, ನಾನು ಬರುತ್ತಿದ್ದ ಕಾರ್ ಬ್ರೇಕ್ ಫೇಲ್ ಆಗಿ ಅಪಘಾತ ವಾಯಿತು. ತುಂಬಾ ಗಾಯಗಳಾಗಿದ್ದವು. ಡ್ರೈವರ್ ನನ್ನ ಪ್ರಾಣ ಕಾಪಾಡಲು ತನ್ನ ಪ್ರಾಣ ಕಳೆದುಕೊಂಡ.

           ಆದ ಅಪಘಾತ ಮಾತ್ರ ನೆನಪಿತ್ತು ನನಗೆ , ಎಚ್ಚರ ಆದೊಡನೆ ನಾನು ಎಲ್ಲಿದ್ದೀನಿ ಎಂಬ ಕಲ್ಪನೆ ಕೂಡ ಇರಲಿಲ್ಲ .ನಿಧಾನವಾಗಿ ಕಣ್ಣು ಬಿಟ್ಟ ಮೇಲೆ ತಿಳಿದಿತ್ತು...ನಾನು ಆಸ್ಪತ್ರೆಯಲ್ಲಿ ಎಂದು .

ನಿಜ , ಆವತ್ತು ನಾನು ಎಚ್ಚರ ತಪ್ಪುವ ಮುನ್ನ ಕಂಡಿದ್ದು ಪರಿಚಿತ ನಮ್ಮೂರಿನ ಜನರ ಮುಖ .  

ಅದೆಷ್ಟು ದಿನವಾಯ್ತು ಎಂದು ಗೊತ್ತಾಗುತ್ತಿರಲಿಲ್ಲ , ಮೈ ತುಂಬಾ ನೋವು . ಆಗ ಬಂದಿದ್ದ ಡಾಕ್ಟರ್ ....ಆತನ ಕಣ್ಣಲ್ಲಿ ಯಾವುದೋ ನನಗೆ ತಿಳಿಯದ ಭಾವನೆ .

        ಒಂದಷ್ಟು ಚೆಕ್ ಅಪ್ ಮಾಡಿ ಇನ್ನೊಂದು ತಿಂಗಳು ಆಸ್ಪತ್ರೆಯಲ್ಲೇ ಇರಬೇಕೆಂದು ಕಡ್ಡಾಯವಾಗಿ ಇರಬೇಕೆಂದು ಹೇಳಿ ಹೋಗಿದ್ದ ಆತ .

    ಒಟ್ಟು ಒಂದೂವರೆ ತಿಂಗಳಲ್ಲಿ ನಾನು ಮುಂಚಿನ ತರಹವೇ ಆಗಿದ್ದೆ , ಸ್ವಲ್ಪ ಕಾಲಿನ ನೋವು ಬಿಟ್ಟರೆ .

ನಾನು ಡಿಸ್ಚಾರ್ಜ್ ಆಗುವ ದಿನ ಕರೆ ಬಂದಿತ್ತು ನನಗೆ ಡಾಕ್ಟರ್ ನಿಂದ .

ಖುಷಿಯಿಂದ ಒಳಗೆ ಹೋಗಿದ್ದೆ ನಾನು , ಆದರೆ ನನ್ನ ಸಂತೋಷಕ್ಕೆ ಅಡ್ಡಿ ಬಂದಿದ್ದು ಡಾಕ್ಟರ್ ಮುಖ .

ನನ್ನನ್ನು ಎದಿರು ಕೂರಲು ಹೇಳಿ , ಒಮ್ಮೆ ನನ್ನತ್ತ ನೋಡಿದ ಆತ . ಅರ್ಥವೇ ಆಗಲಿಲ್ಲ ನನಗೆ ಅವರ ರೀತಿಯಿಂದ .

  

         Sorry ಅಂದ ಮೊದಲಿಗೆ , ಆತನ sorry ಯಾಕೆಂದು ಕೂಡ ತಲೆಗೆ ಹೋಗಲಿಲ್ಲ ನನಗೆ . ಸುಮ್ಮನೆ ಕುಳಿತಿದ್ದೆ ಡಾಕ್ಟರ್ ಮುಖ ನೋಡುತ್ತಾ .

      Sorry , accident ನಲ್ಲಿ ನಿಮ್ಮ ಪುರುಷತ್ವ ಹೋಗಿದೆ , ಹಲವಾರು ವೈದ್ಯರು ಪ್ರಯತ್ನ ಪಟ್ಟರೂ ಕೂಡ .

             ಆತನ ತಣ್ಣಗಿನ ದ್ವನಿ , ನನ್ನ ತಲೆ ಮೇಲೆ ಬಂಡೆ ಬಿದ್ದ ಹಾಗಿತ್ತು . ಒಮ್ಮೆಲೇ ನನಗೆ ಗೊತ್ತಾಗದ ತರಹ ಬೆವರಲ್ಲಿ ತೊಯ್ದು ಹೋಗುತ್ತಿದ್ದೆ ನಾನು .

ಪ್ರಪಂಚವೇ ಶೂನ್ಯ ಏನಿಸತೊಡಗಿತು , ಕಣ್ಣು ಮಂಜಾಗಿ ಹೋಗಿತ್ತು . ಮದ್ಯೆ ಡಾಕ್ಟರ್ ನನಗೆ ಕೊಟ್ಟ ನೀರು ಕೂಡ ನನಗೆ ಬೇಡವಾಗಿತ್ತು .    

                  ಮನೆಗೆ ಒಬ್ಬನೇ ಮಗ, ಇನ್ನು ಮದುವೆ ಆಗಿಲ್ಲ, ವಯಸ್ಸಾದ ತಂದೆ ತಾಯಿ, ಹೇಗೆ ಹೇಳಬೇಕು ಅವರಿಗೆ ಇದೆಲ್ಲ ಅಂತ ಅರ್ಥವಾಗದೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ, ಯೋಚನೆಗಳ ಜೈಲಿನ ಜೊತೆ ಮನೆಗೆ ಬಂದೆ. ಅಮ್ಮನಿಗೆ ಮಗ ಯುದ್ಧ ಗೆದ್ದು ಬಂದಷ್ಟು ಖುಷಿ.

                ನನಗಂತೂ ಅದೇ ಯೋಚನೆಯಾಗಿತ್ತು, ಅಪ್ಪ ಅಮ್ಮನಿಗೆ ಹೇಳೋದು ಹೇಗೆ ಅಂತ. ಇದೆ ಕೊರಗಲ್ಲಿ ತಿಂಗಳುಗಳೆ ಉರುಳಿದವು. ಅಪ್ಪ ಅಮ್ಮನಿಗೆ ಚಿಂತೆ ಶುರುವಾಯಿತು. ಮಗ ಏನನ್ನೋ ಮನಸಿಗೆ ಹಚ್ಚಿಕೊಂಡು ಕೊರಗುತ್ತಿದ್ದಾನೆ ಅಂತ. ಅವರು ಎಲ್ಲ ರೀತಿಯಿಂದ ಕೇಳಿದ್ರು ನನಗೆ ಹೇಳೋದಿಕ್ಕೆ ಆಗಲಿಲ್ಲ.

                  ದಿನಗಳು ಉರುಳಿದವು ನಾನು ಸತ್ಯವನ್ನು ಒಪ್ಪಿಕೊಂಡಿದ್ದೆ. ಮನೆಯಲ್ಲಿ ಮದುವೆ ಮಾಡಲು ನಿರ್ಧರಿಸಿದರು. ಅಪ್ಪ ಪಕ್ಕದ ಊರಿನ ಸಾಹುಕಾರನಿಗೆ ಮಾತು ಕೊಟ್ಟಿದ್ದರಂತೆ. ಅವರ ಮಗಳನ್ನು ನಮ್ಮ ಮನೆ ಸೊಸೆಯಾಗಿ ತಂದುಕೊಳ್ಳುವೆ ಅಂತ. ಅವರು ಆ ರೀತಿ ಹೇಳಿದ ಮೇಲೆ ನನಗೆ ಇಕ್ಕಟ್ಟಿನ ಪರಿಸ್ಥಿತಿ. ಅವರಿಗೂ ಹೇಳುವದಕ್ಕೆ ಆಗದೆ, ಬರುವ ಹೆಣ್ಣಿನ ಬಾಳು ಹಾಳು ಮಾಡುವುದಕ್ಕೆ ಇಷ್ಟಾನು ಇಲ್ಲದೆ, ಇನ್ನೊಂದು ಯೋಚನೆಗೆ ಬಿದ್ದೆ. ಬಾಂಡ್ಲಿ ಇಂದ ಬೆಂಕಿಗೆ ಅನ್ನೋ ತರ ಆಯಿತು ನನ್ನ ಸ್ಥಿತಿ. ನೋಡು ನೋಡುತ್ತಲೇ ನನ್ನ ಒಪ್ಪಿಗೆ ಇಲ್ಲದೆ ಮದುವೆನು ಆಗಿಯೆ ಹೊಯತು.

                   

          ವೇಣಿಯನ್ನು ಮನೆ ತುಂಬಿಸಿಕೊಳ್ಳಲು ಓಡಾಡಿದ ಅವಳ ಅತ್ತೆ, ಅಂದರೆ ಅಮ್ಮನ ನೋಡಲು ಖುಷಿ, ಅವರ ಸಂತೋಷ ಹಾಳು ಮಾಡಲು ಮನ ಒಪ್ಪಲಿಲ್ಲ. ಅದಕ್ಕಾಗಿ ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದೆ. ಆದರೆ ನೂರಾರು ಕನಸು ಕಟ್ಟಿಕೊಂಡು ಬಂದಿರುವ ನನ್ನ ಹೆಂಡತಿ, ಅವಳು ಏನು ಪಾಪ ಮಾಡಿದ್ದಳು ಅಂತ ಇನ್ನೊಂದು ಕಡೆ ನನ್ನ ಮನ ನನ್ನಷ್ಟೇ ನೊಂದು ಹೋಗಿತ್ತು. ಹೇಗಾದರೂ ಮಾಡಿ ಕೈ ಹಿಡಿದ ಹೆಂಡತಿಗಾದರು ಹೇಳಬೇಕು ಅಂತ ನಿರ್ಧರಿಸಿ, ಮದುವೆಯ ಎಲ್ಲ ಕಾರ್ಯಗಳು ಮುಗಿದಾದ ಮೇಲೆ ಮೊದಲ ರಾತ್ರಿಯಲ್ಲಿ ನೀಲವೇಣಿಯನ್ನು ಕಾಯುತ್ತ ಇದ್ದೆ.

              ಬಂದವಳೆ ಬಾಗಿಲು ಮುಚ್ಚಿ ಅಳಲು ಶುರು ಮಾಡಿದಳು. ನನಗೆ ಒಂದು ಅರ್ಥ ಆಗಲಿಲ್ಲ. ಅವಳಿಗೆ ಸಮಾಧಾನ ಮಾಡಲು ಆಗುತ್ತಿಲ್ಲ. ಮಾತಾಡುವದಕ್ಕೂ ಆಗುತ್ತಿಲ್ಲ. ಅತ್ತು ಅತ್ತು ಕೊನೆಗೆ ಅವಳೇ ಸಮಾಧನ ಮಾಡಿಕೊಂಡಳು. ನನಗೆ ಏನು ಕೇಳಬೇಕು ಅಂತ ಗೊತ್ತಾಗಲಿಲ್ಲ. ಅವಳಿಗೆ ಕುಡಿಯುವದಿಕ್ಕೆ ನೀರು ಕೊಟ್ಟೆ. ಕುಡಿದು ಸುಧಾರಿಸಿಕೊಂಡ ನಂತರ ಅವಳೆ ಮಾತನಾಡಲು ಶುರು ಮಾಡಿದಳು. ಅವಳು ತನ್ನ "ಅಪ್ಪನ ಬಲವಂತಕ್ಕೆ ಮದುವೆ ಆದೆ, ನಾನು ಮುಂಬೈಯಲ್ಲಿ ಓದಿದ್ದು ಅಲ್ಲಿ ಕಾಲೇಜನಲ್ಲಿ ಅಮನ್ ಅನ್ನೋ ನನ್ನ ಜೊತೆ ಓದುತ್ತಿದ್ದ ಹುಡುಗನನ್ನು ಇಷ್ಟ ಪಡ್ತಾ ಇದಿನಿ. ಅವನನ್ನೇ ಮದುವೆ ಆಗಬೇಕು ಅಂತ ಓದು ಮುಗಿದ ಮೇಲೆ ಓಡಿಬಂದೆ ಅಪ್ಪನ ಬಳಿ ಹೇಳಲು. ಆದರೆ ಇಲ್ಲಿ ನಾನು ಹೇಳುವ ಮೊದಲೇ ಅಪ್ಪ ಎಲ್ಲ ತಯಾರಿ ಮಾಡಿದ್ದರು. ನಿಮ್ಮ ಜೊತೆ ಮದುವೆ ಮಾಡಲು". "ಮಗಳೆ ಇದು ನನ್ನ ಮಾನ ಮರ್ಯಾದೆಯ ಪ್ರಶ್ನೆ, ನೀನು ಒಪ್ಪುತ್ತಿಯ ಎಂಬ ಭರವಸೆಯ ಮೇಲೆ ಎಲ್ಲ ತಯಾರಿ ಮಾಡಿದಿನಿ. ಹುಡುಗ, ಹುಡುಗನ ಮನೆಯವರು ಎಲ್ಲ ತುಂಬಾ ಒಳ್ಳೆಯವರು" ಅಂತ ನೀನು ಮದುವೆ ಆಗಲೆಬೇಕು ಅಂತ ಹಠ ಹಿಡಿದರು. ಅಪ್ಪನ ಮಾತು ಮೀರದ ನಾನು ನೀವು ಕಟ್ಟೋ ತಾಳಿಗೆ ಕುತ್ತಿಗೆ ಒಡ್ಡಿದೆ.

               ಇಷ್ಟೆಲ್ಲ ಕೇಳಿದ ನನಗೆ ಇನ್ನು ಆಘಾತ ವಾಯಿತು. ನಾನು ನನ್ನ ಬಗ್ಗೆ ಹೇಳಬೇಕೆಂದಿದ್ದು ಮರೆತು ಹೊಯತು. ಅವಳ, ಅವಳ ಅಮನ್ ಬಗ್ಗೆ ಆಲಿಸುತ್ತಲೆ ತಲೆಯಲ್ಲಿ ಅದೆ ತುಂಬಿ ಹೊಯತು. ಒಂದೇ ಮಾತು ಕೇಳಿದೆ, ಈಗ ಆ ಹುಡುಗನ ಜೊತೆ ಹೋಗುತ್ತಿಯ ಅಂತ. ಅದಕ್ಕವಳ ಉತ್ತರ ಏನು ಬರಲಿಲ್ಲ. ಸುಮ್ಮನೆ ತಲೆ ಬಗ್ಗಿಸಿ ನಿಂತಿದ್ದಳು. "ಮೌನಂ ಸಮ್ಮತಿ ಲಕ್ಷಣಂ" ಅಂತ ನಾನೇ ಅರ್ಥಮಾಡಿಕೊಂಡು ಸುಮ್ಮನಾದೆ.

               ಅದೇ ಕೊನೆಯ ಮಾತು ಅವಳ ಜೊತೆ ಆಮೇಲೆ ಇಬ್ಬರಲ್ಲೂ ಮಾತು ಇಲ್ಲ. ಆದರೆ ಮನೆಯವರ ಜೊತೆ, ಊರಿನವರ ಜೊತೆ ಚೆನ್ನಾಗಿ ಹೊಂದಿಕೊಂಡಿದ್ದಳು. ಮದುವೆಯಾಗಿ ದಿನಗಳು ಕಳೆಯುತ್ತಾ ಬಂತು, ಒಂದು ದಿನ ನಾನಾಗಿ ಮಾತನಾಡಿಸಿದೆ. ಅವ ಯಾರು ಏನು ಅಂತ. ಅವನ ಹೆಸರು ಅಮನ್, ಮುಂಬೈ ಅವನ ಊರು. ಅವ ಇರುವುದು ಅಲ್ಲೇ ಅಂದಳು. ಅವಳಾದರು ಚೆನ್ನಾಗಿರಲಿ, ಹೇಗಾದರೂ ಮಾಡಿ ಅವರನ್ನು ಒಂದು ಮಾಡಬೇಕು ಅಂತ ನಿರ್ಧಾರ ತಿಳಿಸಿದೆ. ಅದಕ್ಕವಳು ಸ್ವಲ್ಪ ಗಾಬರಿಯಾದಳು. ಹೆದರುವ ಅಗತ್ಯವಿಲ್ಲ, ನಾನು ಮುಂಬೈಗೆ ಹೋಗುತ್ತೇನೆ ಅಲ್ಲಿ ಅವನನ್ನು ಹುಡುಗಿ ನಿನ್ನನ್ನು ಅವನಿಗೆ ಒಪ್ಪಿಸುತ್ತೇನೆ ಅಂದಾಗ ಅವಳಿಗೆ ಒಂಥರ ಭಯ ಮಿಶ್ರಿತ ಸಂತೋಷ ನೋಡಿದೆ. ಆ ಭಯ ಯಾಕೆ ಅಂತ ಅರ್ಥ ಆಗಲಿಲ್ಲ. ಆದಾಗ್ಯೂ ಅವನ ವಿಳಾಸ ಕೊಟ್ಟಳು. ಅದೇ ರಾತ್ರಿ ಕೆಲಸದ ನೆಪ ಹೇಳಿ ಮುಂಬೈಗೆ ಬಂದೆ. ಅವಳು ಕೊಟ್ಟ ವಿಳಾಸ ಹುಡುಕಿಕೊಂಡು. ಆದರೆ ಅಲ್ಲಿ ಯಾರು ಇರಲಿಲ್ಲ. ಮನೆಗೆ ಬೀಗ ಹಾಕಿದ್ದರು. ಪಕ್ಕದ ಮನೆಯವರಿಗೆ ಕೇಳಿದೆ. ಅವರು ಮರಾಠಿಯಲ್ಲಿ ಅದೇನೋ ಹೇಳಿದರು. ಆದರೆ ನನಗೆ ಖಾಲಿ ಅನ್ನೋ ಪದ ಮಾತ್ರ ಅರ್ಥವಾಯಿತು. ನನಗೆ ಅಲ್ಲಿ ಯಾರ ಪರಿಚಯವೂ ಇಲ್ಲದ ಕಾರಣ, ತಕ್ಷಣ ಹೊರಟು ಬಂದೆ.

               ರಾತ್ರಿ ಬಂದ ಮನೆಯಲ್ಲಿ ಒಂತರ ಸ್ಮಶಾನ ಮೌನ. ಯಾಕಿ ಮೌನ ಅಂತ ಅರ್ಥವಾಗದೆ ಎಲ್ಲರನ್ನು ಕೇಳಿದೆ. ಅಮ್ಮ ಅಪ್ಪ ಅಂತೂ ಆಕಾಶ ತಲೆ ಮೇಲೆ ಬಿದ್ದಿರೋ ತರ ಕೂತಿದ್ದರು. ಅವರ ಪಕ್ಕ ಮಾವ ಅಂದ್ರೆ ವೇಣಿಯ ಅಪ್ಪ ಎಲ್ಲರ ಕಣ್ಣಲ್ಲೂ ಅತ್ಯಮೌಲ್ಯ ವಸ್ತು ಕಳೆದುಕೊಂಡಿರುವ ಭಾವ. ಏನಾಯಿತು ಅಂತ ಕೇಳಿದೆ. ಆಗ ಇದೆ ಬೀರ ಬಂದು ಹೇಳಿದ ಅಮ್ಮ ನೇಣು ಹಾಕಿಕೊಂಡು ನಮ್ಮನ್ನೆಲ್ಲ ಬಿಟ್ಟು ಹೋದರು ಅಂತ. ಕೇಳಿದ ನನಗೆ ಕಣ್ಣಿಗೆ ಕತ್ತಲೆ ಕವಿಯಿತು. ಕೊನೆಯ ಬಾರಿ ಅವಳ ಮುಖ ಕೂಡ ನೋಡಲು ಆಗಲಿಲ್ಲ". ಕಣ್ಣೀರು ಹಾಕಿ ದುಃಖಿಸಿದರು. ಕೊನೆಗೆ ವೇಣಿಯ ಅಪ್ಪನು ಅವಳ ಕೊರಗಲ್ಲೆ ತೀರಿ ಕೊಂಡರು. ಆಮೇಲೆ ನಾನು ಒಬ್ಬ ವಿಧವೆಯನ್ನು ಮದುವೆ ಆದೆ ಅವಳೇ ವಾಣಿ. ಅವಳಿಗೂ ಒಬ್ಬ ಮಗಳು, ಅಪ್ಪ ಅಮ್ಮನಿಗೆ ಎಲ್ಲ ವಿಷಯ ಹೇಳಿದೆ. ಊರಿನವರಿಗೆ ನಾನು ಮೊದಲೇ ಮದುವೆ ಆಗಿದ್ದೆ ಅಂತ ನಂಬಿಸಿದರು.

               ನಂತರ ಹಂಸ ಏನು ಕೇಳದೆ ಎದ್ದು ನಡೆದಳು. ಇಡಿ ದಿನ ಎಲ್ಲಿ ಇದ್ದಳು ಅಂತ ಯಾರಿಗೂ ಗೊತ್ತಾಗಲಿಲ್ಲ. ಕತ್ತಲಾಗುವ ಮುನ್ನ ಬಂದು ಸೇರಿದ್ದಳು ಬಂಗಲೆಯಲ್ಲಿ. ಯಾರದೋ ದಾರಿ ಕಾಯುತ್ತ. ನೋಡ ನೋಡುತ್ತಿದ್ದಂತೆ ಎರಡು ಮೂರು ಪೊಲೀಸ ವ್ಯಾನ್ ಬಂದು ನಿಂತವು. ಅದರಲ್ಲಿಂದ ಕಮಿಷನರ್ ನಾಯಕ್ ಕೆಳಗಿಳಿದು ಹಂಸಳ ಕಡೆ ಗೆಲುವಿನ ನಗೆ ಬಿರುತ್ತಾರೆ. ಕೊನೆಗೂ ಹಂಸಳ ಕಾಯುವಿಕೆಗೆ ಕೊನೆಯಾಯಿತು.

            ತನ್ನ ತಂದೆ ಸಿ ಐ ಡಿ ಮಾಧವ ಕುಲಕರ್ಣಿ ರವರ ಕೊಲೆಯ ರಹಸ್ಯ ಬಯಲು ಮಾಡಲು ಬಂದಿರುವ, ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಂಸ. ಕಮಿಷನರ್ ಕೈಗೆ ತನ್ನ ತಂದೆಯನ್ನು ಕೊಂದ ನೀಲವೇಣಿಯನ್ನು ಒಪ್ಪಿಸುತ್ತಾಳೆ. ಅವಳನ್ನು ನೋಡಿದ ನಾಯಕ್ ಆಶ್ಚರ್ಯದಿಂದ ನಿಂತುಬಿಡುತ್ತಾರೆ. ತುಂಬಾ ದಿನದಿಂದ ನಾಯಕ್, ಮುಂಬೈಯಲ್ಲಿ ಆದ ಅಟ್ಯಾಕ್ ರುವಾರಿಯಾದ ನೀಲವೇಣಿಯನ್ನು ಹುಡುಕುತ್ತಿದ್ದರು. ತನ್ನ ಆತ್ಮೀಯ ಸ್ನೇಹಿತ ಮಾಧು ಅಂದರೆ ಮಾಧವ ಸತ್ತಿದ್ದು. ಇವಳಿಂದಾನಾ...ಅಂತ ನಾಯಕ್ ನ ರಕ್ತ ಕುದಿಯತೊಡಗಿತು.

            ಮುಂಬೈ ಅಟ್ಯಾಕ್, ಸ್ನೇಹಿತನ ಸಾವು , ನೀಲವೇಣಿಯನ್ನು ನೋಡಿದ ನಾಯಕರಿಗೆ ರಾಕ್ಷಸನನ್ನಾಗಿ ಮಾಡಿಸಿತು. ಅಲ್ಲೇ ಸಿಕ್ಕ ಕೋಲಿನಿಂದ ಮನ ತಣಿವಷ್ಟು ಬಾರಿಸಿದರು ಅವಳಲ್ಲಿ ಯಾವ ಪ್ರತಿಕ್ರಿಯೆ ಇಲ್ಲ.

            ಕೊನೆಗೆ ಹಂಸ ನೀಲವೇಣಿ ಗಂಡ ಅಮನ್ ಹಾಗೂ ಮಗ ಅಹಿಲ್ ನನ್ನು ತಮ್ಮ ವಶಕ್ಕೆ ತೆಗೆದುಕೊಂಡು ನೀಲವೇಣಿಯನ್ನು ಹೆದರಿಸಿದಾಗ, ಆಗ ಅವಳಲ್ಲೂ ಹೆದರಿಕೆ ಪದದ ಅರ್ಥ ತಿಳಿಯಿತು. ಅವರಿಬ್ಬರ ಮುಖದಲ್ಲೂ ನೀಲವೇಣಿಗೆ ಇಷ್ಟು ದಿನ ತನ್ನಿಂದ ಸತ್ತವರ ಮುಖಗಳು ಕಾಣಿಸುತ್ತಿದ್ದವು. ಪಶ್ಚಾತಾಪದ ಒಂದು ಸಣ್ಣ ಗೆರೆ ಹಾದುಹೋಯಿತು ಅವಳ ಮುಖದಲ್ಲಿ.

            ಆಗ ಎಲ್ಲವನ್ನು ಹೇಳಲು ಬಾಯಿ ತೆಗೆದಳು. "ನಾನು ನೀಲವೇಣಿ ಅಲ್ಲ, ನನ್ನ ಹೆಸರು ನಾಜ್ ಅಂತ. ನನ್ನ ಊರು ಕಾಶ್ಮೀರದ ಕಣಿವೆಯ ಒಂದು ಪುಟ್ಟ ಹಳ್ಳಿ. ಮನೆಯಲ್ಲಿ ಮದುವೆ ತಯಾರಿ ನಡೆಸಿದ್ದ ತಂದೆ ತಾಯಿ, ಚೆನ್ನಾಗಿ ಓದಬೇಕು, ಇಷ್ಟು ಬೇಗ ಮದುವೆ ಇಷ್ಟವಿಲ್ಲದೆ ಮುಂಬೈಗೆ ಓಡಿಬಂದೆ. ಗೊತ್ತು ಗುರಿಯಿಲ್ಲದ ಊರು, ಯಾರೊಬ್ಬರ ಪರಿಚಯನು ಇಲ್ಲ.

            ಮುಂಬೈಯ ನಗರಿಯ ರೇಲ್ವೆ ಸ್ಟೇಷನ್ ನಲ್ಲಿ ದಿಕ್ಕು ತೋಚದೆ ಕೂತಿದ್ದ ನನ್ನ ಹತ್ತಿರ ಬಂದವನೇ ಅಮನ್. ತನ್ನ ಪರಿಚಯ ಮಾಡಿಕೊಂಡ, ನನ್ನ ಪರಿಚಯ ಕೇಳಿದ, ಭಯದಿಂದ ನಾನು ನನ್ನ ಪರಿಚಯ ಮಾಡಿಕೊಂಡೆ, ಯಾಕೆ ಮನೆ ಬಿಟ್ಟು ಬಂದೆ ಅಂತ ನು ಹೇಳಿದೆ. ನಂತರ ಅವ ತನ್ನ ಮನೆಗೆ ಕರೆದು ಕೊಂಡು ಹೊದ, ನಾನು ನಿನಗೆ ಕಾಲೇಜ್ ಸೇರಿಸುತ್ತೇನೆ ಅಂತ. ನನಗೂ ಇರಲು ಒಂದು ಜಾಗ ಬೇಕಿತ್ತು ಹೊರಟೆ ಅವನ ಹಿಂದೆ.

            ಅವನ ಮನೆಯಲ್ಲಿ ಅಪ್ಪ ,ಅಮ್ಮ ಮತ್ತೆ ಅಮನ್ ಅಷ್ಟೇ ಇರುವುದು ಅಂತ ಗೋತ್ತಾಯಿತು ಮುಂದೆ ಅವನ ಕಾಳಜಿ, ನಮ್ಮ ಸ್ನೇಹ ಪ್ರೀತಿಯಾಗಿ ಬದಲಾಯಿತು, ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು. ಧರ್ಮ ಒಂದೇ ಇದ್ದುದ್ದರಿಂದ ಮನೆಯವರು ಒಪ್ಪಿಕೊಂಡರು. ಮೊದಲು ಓದು ಮುಗಲಿ ಆಮೇಲೆ ಮದುವೆ ಅಂತ ನಿರ್ಧರಿಸಿ, ನನ್ನನು ಕಾಲೇಜ್ ಅಡ್ಮಿಷನ್ ಮಾಡಿಸಿದ. ಅಲ್ಲಿ ಪರಿಚಯ ವಾದವಳೆ ನೀಲವೇಣಿ. ಅವಳು ತನ್ನ ಬಗ್ಗೆ ಎಲ್ಲ ಹೇಳಿಕೊಂಡಿದ್ದಳು. ಅವಳದು ಕರ್ನಾಟಕದ ಒಂದು ಪುಟ್ಟ ಹಳ್ಳಿ, ಅಲ್ಲಿ ಅವಳ ಅಪ್ಪ ಸಾಹುಕಾರ, ಅವಳು ಓದು ಮುಗಿದ ಕೂಡಲೆ ಪಕ್ಕದ ಊರಿನ ಜಮೀನ್ದಾರನಿಗೆ ಕೊಟ್ಟು ಮದುವೆ ಮಾಡುವರು ಎಂದು.

            ಅಷ್ಟರಲ್ಲಿ ನನಗೆ ಅಮನ್ ಕೆಲಸ ಬಗ್ಗೆ ಎಲ್ಲ ಗೊತ್ತಾಗಿತ್ತು. ನಾನು ಕೂಡಾ ಸಪೋರ್ಟ್ ಮಾಡುತ್ತಾ ಬಂದೆ.

            ಒಂದು ದಿನ ಅಮನ್ ಗೆ ಒಂದು msg ಬಂತು. ಮುಂಬೈ ಅಟ್ಯಾಕ್ ಮಾಡಲು ಇದ್ದ ಮಾಹಿತಿ ಇತ್ತು ಅದರಲ್ಲಿ. ನಾನು ಕೂಡಾ ಅದರಲ್ಲಿ ಭಾಗಿಯಾದೆ. ಎಸ್ಟೆಂದರೆ, ಸ್ವಲ್ಪ ದಿನದಲ್ಲಿ ಆ ಅಟ್ಯಾಕ್ ರೂವಾರಿ ನಾನಾದೆ. ಅದೆಲ್ಲ ಮುಗಿದ ಮೇಲೆ ಸಾಮಾನ್ಯರಂತೆ ಬದುಕು ಸಾಗಿಸುತ್ತ ಇದ್ದೆವು.

            ಸ್ವಲ್ಪ ದಿನಗಳಲ್ಲೇ, ಇನ್ನೊಂದು ಸಂದೇಶ ಬಂತು, ಕರ್ನಾಕಟದ ಐತಿಹಾಸಿಕ ಸ್ಥಳಗಳ್ಳಲಿ, ಜನ ಹೆಚ್ಚು ಓಡಾಟ ಮಾಡುವ ಸಿಟಿ ಯಲ್ಲಿ ಬಾಂಬ ಇಡಬೇಕು ಅಂತ.

            ನಮಗೊಂದು ರಹಸ್ಯ ಸ್ಥಳ ಬೇಕಿತ್ತು, ನಮ್ಮ ಮದ್ದು ಗುಂಡುಗಳು ನಾವೇ ತಾಯಾರು ಮಾಡಿ ಕಾರ್ಯ ನಿರ್ವಹಿಸುತ್ತಿದ್ದೆವು. ಅಲ್ಲಿ ಯಾವುದೇ ಕಾನೂನಿನ ಕೈ ತಲುಪಬಾರದು. ಆಗ ನೆನಪಾಗಿದ್ದೆ ನೀಲವೇಣಿ. ಅವಳನ್ನು ಅಪಹರಿಸಿ ಅವಳ ಜಾಗದಲ್ಲಿ ನಾನು ನೀಲವೇಣಿ ಆಗುವುದು. ಹಾಗೆ ಅವಳ ತಂದೆಗೆ ಹೆದರಿಸಿ ನನ್ನ ಜೊತೆ ಸೂರ್ಯ ನಾರಾಯಣನ ಮದುವೆ ಮಾಡುವುದು ಅಂತ.

            ಎಲ್ಲವೂ ನಾವು ಅಂದುಕೊಂಡ ಹಾಗೆ ನಡೀತಾ ಇತ್ತು. ಮದುವೆ ಆದಮೇಲೆ ನಾನು ಒಂದು ಕತೆ ಕಟ್ಟಿದೆ ಅದನ್ನೇ ನಂಬಿದ ಸೂರ್ಯ ನಾರಾಯಣ. ಅವ ಮುಂಬೈಗೆ ಹೋಗೋ ಹಾಗೆ ಮಾಡಿ, ಈ ಕಡೆ ನಾನು ಅವರ ಕಾಡಲ್ಲಿರೋ ಬಂಗಲೆಯಲ್ಲಿ ನೇಣು ಹಾಕಿಕೊಂಡು ಸತ್ತು ಹೋದೆ ಅಂತ ಬೇರೆ ಹೆಣಕ್ಕೆ ಅಂದರೆ ನಿಜವಾದ ನೀಲವೇಣಿಯನ್ನು ಕೊಂದು ನನ್ನ ಮುಖ ಚಹರೆ ಹೋಲುವಂತೆ ಮಾಡಿ ಅವಳನ್ನೇ ನಾಜ್, ಅಂದ್ರೆ ನೀಲವೇಣಿ ಅಂತ ನಂಬಿಸಿದೆವು.

         ಅಲ್ಲಿಗೆ ನಮ್ಮ ಒಂದು ಯೋಜನೆ ಸಫಲವಾಯಿತು. ಸತ್ತವಳು ತನ್ನ ಮಗಳೇ ಅಂತ ಗೊತ್ತಾದ ಸಾಹುಕಾರ ಬೆದರಿಕೆ ಹಾಕಿದ. ಇವನಿಂದ ತೊಂದರೆ ತಪ್ಪಿದ್ದಲ್ಲ ಅಂತ ಅವನನ್ನು ಮುಗಿಸಿಬಿಟ್ಟೆವು.   

  

             ಉಳಿದಂತೆ ಅಲ್ಲಿ ದೆವ್ವದ ಕತೆ ಕಟ್ಟಿದರೆ ಹಳ್ಳಿಯ ಜನ ಬಹು ಬೇಗ ನಂಬುತ್ತಾರೆ ಅದು ಅಷ್ಟು ಕಷ್ಟ ಆಗಲಿಲ್ಲ, ಎಲ್ಲರೂ ನಂಬಿದ್ದರು ನಾನು ದೆವ್ವ ಆಗಿದಿನಿ ಅಂತ.

            ಅವತ್ತಿನಿಂದ ಇಲ್ಲಿಯವರೆಗೆ ಯಾವುದೇ ತೊಂದರೆ ಇಲ್ಲದೆ ನಾವು ನಮ್ಮ ಕೆಲಸ ಮಾಡುತ್ತಾ ಬಂದಿದ್ದೆವು. ಮುಂಬೈ ಅಟ್ಯಾಕ್ ಆದಮೇಲೆ ನಮ್ಮ ಪ್ಲ್ಯಾನ್ ಪ್ರಕಾರ ಕರ್ನಾಟಕದ ಎಲ್ಲ ಸಿಟಿ ಹಾಗೂ ಐತಿಹಾಸಿಕ ಸ್ಥಳಗಳಿಗೆ ಬಾಂಬ್ ಹಾಕುವ ಯೋಜನೆ ಇತ್ತು.

            ಆದರೆ ಆ ಕುಲಕರ್ಣಿ ನಮ್ಮ ಪ್ಲ್ಯಾನ್ ಎಲ್ಲ ತಲೆ ಕೆಳಗೆ ಆಗೋ ಹಾಗೆ ಮಾಡಿದ್ದು ನಮಗೆ ನುಂಗಲಾರದ ತುತ್ತಾಯಿತು. ನಾವು ಎಲ್ಲೆಲ್ಲಿ ಏನು ಪ್ಲ್ಯಾನ್ ಮಾಡಿದ್ದೆವು ಅಂತ ಅವನಿಗೆ ಗೊತ್ತಾಗಿಬಿಟ್ಟಿತ್ತು. ಅದು ಹೇಗೆ ಅವನಿಗೆ ನಮ್ಮ ಎಲ್ಲ ಮಾಹಿತಿ ಹೋಗುತ್ತಿತ್ತೋ ಗೊತ್ತೇ ಆಗುತ್ತಿರಲಿಲ್ಲ. ಆದರೆ ನಮ್ಮಲ್ಲೇ ಯಾರೋ ಒಬ್ಬ ದ್ರೋಹಿ ಇದಾನೆ ಅಂತ ಮಾತ್ರ ಗೊತ್ತಾಗಿದ್ದು. ಅದನ್ನೇ ನಾವು ಪ್ಲ್ಯಾನ್ ಮಾಡಿ ಕುಲಕರ್ಣಿ ಒಬ್ಬನನ್ನೇ ಈ ಊರಿಗೆ ಬರುವಹಾಗೆ ಮಾಡಿ, ದಾರಿ ಮಧ್ಯೆ ಅವನ ಕಾರ್ ಆಕ್ಸಿಡೆಂಟ್ ಮಾಡಿ ಅಲ್ಲೇ ಅವನನ್ನು ಕೊಂದು ಬಿಟ್ಟೆವು. ಯಾರಿಗೂ ತಿಳಿಯಲೆ ಇಲ್ಲ ಇದೊಂದು ಕೊಲೆ ಅಂತ. ಅಷ್ಟು ಚಾಣಾಕ್ಷತೆಯಿಂದ ಯೋಜನೆ ಮಾಡಿದ್ದೆವು".

             ಹಂಸಳಿಗೆ ತನ್ನ ತಂದೆಯ ಸಾವು ಹೇಗಾಯಿತು ಅಂತ ನಾಜ್ ಮಾತುಗಳಿಂದ, ಕಣ್ಣು ಮುಂದೆಯೇ ಆಯಿತೇನೋ, ತಂದೆ ಅದೆಷ್ಟು ನೋವು ಅನುಭವಿಸಿ ಸತ್ತರು ಇವಳಿಂದ ಅಂತ ರೋಷದಿಂದ ಹಂಸ ನಾಜಳನ್ನು ಸಾಯುವ ಹಾಗೆ ಹೊಡೆದಳು. ಕಮಿಷನರ್ ಬಂದು ತಡೆಯದೆ ಹೋಗಿದ್ದರೆ ನಾಜ್ ಹೆಣ ವಾಗಿ ಹೋಗುತ್ತಿದ್ದಳು.

            ಮುಂದುವರೆಸಿದ ನಾಜ್, "ಇನ್ನು ನಮಗೆ ತಡೆಯಲು ಯಾರು ಇಲ್ಲ. ರಾಜಾರೋಷವಾಗಿ ನಮ್ಮ ಕೆಲಸ ಮಾಡಬೇಕು ಅಂತ ಅಂದುಕೊಂಡೆವು. ಆದರೆ ಈ ಹಂಸ ಬಂದು ಎರಡನೇ ಬಾರಿ ನಮ್ಮ ಪ್ಲ್ಯಾನ್ ಎಲ್ಲ ಹಾಳು ಮಾಡಿದಳು.

            ಆದಾಗ್ಯೂ ಅವಳಿಗೆ ಊಟದ ಡಬ್ಬಿಯಲ್ಲಿ ಭಯಪಡಿಸುವ ಹಾಗೆ ಬರೆದು ಕಳುಹಿಸಿದ್ದೆ.ಆ ಮನೆ ಮೂಲೆ ಮೂಲೆ ಗೊತ್ತಿದ್ದ ನನಗೆ ಪತ್ರ ಇಡಲು ಕಷ್ಟ ಆಗಲಿಲ್ಲ. ರಾತ್ರಿ ದೆವ್ವದ ವೇಷ ಹಾಕಿ ಬಂದೆ, ಆದರೆ ಯಾವುದೇ ಪ್ರಯೋಜನ ಆಗಲಿಲ್ಲ.

    ಇಷ್ಟೆಲ್ಲದಕ್ಕೂ ಹೆದರದ ಹಂಸಳಿಗೆ ಇಲ್ಲಿಯ ಚಟುವಟಿಕೆ ತಿಳಿದರೆ ನಾವು ಸಿಕ್ಕಿ ಬಿಳುತ್ತೇವೆ ಅಂತ, ಸ್ವಲ್ಪ ದಿನ ಎಲ್ಲವನ್ನು ನಿಲ್ಲಿಸಿದ್ದೆವು. ಆದರೆ ನೆಲಮನೆಯಲ್ಲಿದ್ದ ಮದ್ದು ಗುಂಡುಗಳನ್ನು ಹೇಗಾದರೂ ಮಾಡಿ ಸಾಗಿಸಬೇಕು ಇಲ್ಲದಿದ್ದರೆ ಅಪಾಯ ಖಂಡಿತ ಅಂತ, ಒಳ್ಳೆ ಸಮಯಕ್ಕೆ ಕಾದಿದ್ದೆವು. ಅಲ್ಲಿಯೂ ಹಂಸ ತನ್ನ ಚಾಣಾಕ್ಷ ಬುದ್ದಿ ತೋರಿಸಿ ಎಲ್ಲವನ್ನೂ ತಿಳಿದುಕೊಂಡಳು.

             ಆ ಬಾಗಿಲುಗಳು ಡಿಜಿಟಲ್ ಆಗಿರುವುದರಿಂದ ಕೋಡ್ ನನ್ನ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ ಅನ್ನೋ ಧೈರ್ಯದ ಮೇಲೆ ನಾನು ಜಾಗುರುಕತೆ ತಪ್ಪಿದೆ. ಎಲ್ಲ ಈ ಬೀರ ನಿಂದ, ಮದುವೆ ಆದ ಸ್ವಲ್ಪ ದಿನದಲ್ಲೆ ಬೀರ ನನಗೆ ಆತ್ಮೀಯನಾದ. ಅವನಿಗೆ ಮುಂಬೈ ಕತೆಯೆಲ್ಲ ಹೇಳಿದ್ದೆ ಆದರೆ ಅಮನ್ ನನ್ನ ಗೆಳೆಯ ಅಂತ ಒಂದು ಸುಳ್ಳು, ಆ ಮಾತಿನಲ್ಲಿ ನಾನು ಅಮನ್ ನ ಭೇಟಿಯಾದ ಮೊದಲ ದಿನದ ತಾರೀಕು ಕೂಡಾ ಹೇಳಿದ್ದೆ. ಅದೇ ನಂಬರ್ ನಾನು ಇಲ್ಲಿ ಕೋಡ್ ವರ್ಡ್ ಆಗಿ ಬಳಸಿದ್ದೆ. ಅಲ್ಲೋ ನಾನು ಎಡವಿದೆ ಇಲ್ಲಿಯವರೆಗೆ ಬೀರ ಬರಲಾರನೆಂದು.

             ಆದರೂ ಪಟ್ಟು ಬಿಡದೆ ಮದ್ದು ಗುಂಡುಗಳನ್ನು ಸಾಗಿಸುವ ಹುಚ್ಚು ಸಾಹಸದಲ್ಲಿ, ನಿನ್ನೆ ರಾತ್ರಿ ನಾನು ಮತ್ತೆ ಅಮನ್ ಹಿತ್ತಲ ಬಾವಿಯ ಹತ್ತಿರ ಇನ್ನೊಂದು ಬಾಗಿಲು ಇದೆ. ನೆಲಮನೆಗೆ ಹೋಗಲು ಆದು ಯಾರಿಗೂ ತಿಳಿದಿಲ್ಲ. ನಾವಿಬ್ಬರು ಅದರಿಂದ ಹೋಗುತ್ತಾ ಇರಬೇಕಾದರೆ ರಾತ್ರಿ ಸಿಕ್ಕಿ ಹಾಕಿಕೊಂಡೆವು".

             ಹಂಸ "ಹೌದು ನಾಯಕ್ ಅಂಕಲ್, ರಾತ್ರಿ ನಾನು ಮತ್ತೆ ಬೀರ, ಇದೆಲ್ಲ ಕಂಡುಹಿಡಿಯಲು ಒಂದು ಪ್ಲ್ಯಾನ್ ಹಾಕಿದ್ದೆವು. ಅದರ ಬಗ್ಗೆ ಮಾತನಾಡುತ್ತ ಕುಳಿತಾಗ, ಮನೆ ಹಿತ್ತಲಲ್ಲಿ ಸಪ್ಪಳ ಆದಾಗ, ಎದ್ದು ಹೋಗಿ ನೋಡಿದೆವು. ಇವರಿಬ್ಬರು ಮದ್ದು ಗುಂಡುಗಳನ್ನು ಸಾಗಿಸುತ್ತಿದ್ದರು. ಆದರೆ ಆಶ್ಚರ್ಯ ಏನು ಅಂದ್ರೆ ಇವರು ಇಬ್ಬರೆ ಇದ್ದರು ಇವರ ಜೊತೆಗಾರರು ಯಾರು ಇರಲಿಲ್ಲ. ಎಲ್ಲೋ ಬೇರೆ ಕಡೆ ದೂರ ಇರಬಹುದು ಅಂತ ಅಂದುಕೊಂಡು ಸ್ವಲ್ಪ ಹೊತ್ತು ಅವರು ಏನು ಮಾಡ್ತಾರೆ ಅಂತ ನೋಡುತ್ತಾ ನಿಂತಿದ್ದೆವು. ಆಗ ಗೊತ್ತಾದ ವಿಷಯ, ಎಲ್ಲರೂ ಬಂದರೆ ಸಣ್ಣ ಊರು ಎಲ್ಲರಿಗೂ ಸುದ್ದಿ ಬೇಗ ಹೋಗುತ್ತೆ ಅಂತ ಇಬ್ಬರೆ ಬಂದಿದ್ದರು.

              ನಾನು ಬೀರನಿಗೆ ಹೇಳಿದೆ, ನಾನು ಇವರನ್ನು ಡೈವರ್ಟ್ ಮಾಡುತ್ತೆನೆ, ನೀನು ಅವರ ಎಲ್ಲ ಮದ್ದು ಗುಂಡು ಬಾವಿಯಲ್ಲಿ ಹಾಕಿಬಿಡು ಅಂತ, ಆಯಿತು ಅಂತ ಒಪ್ಪಿಕೊಂಡ ಬೀರ.

               ಬೀರ ಕತ್ತಲಲ್ಲಿ ಮರೆಯಾದ, ನಾನು ಯಾರು ನೀವು ಅಂತ ಅವರ ಹತ್ತಿರ ಹೋದೆ. ಅವರಿಗದು ಅನಿರೀಕ್ಷಿತ. ಒಂದು ಕ್ಷಣ ಏನು ಮಾಡಬೇಕು ಅಂತ ತಿಳಿಯದೆ ಸುಮ್ಮನಿದ್ದರು. ಮತ್ತೆ ಎಚ್ಚೆತ್ತುಕೊಂಡು ಇಬ್ಬರು ಒಟ್ಟಿಗೆ ನನ್ನ ಮೇಲೆ ಮುಗಿಬಿದ್ದರು. ನನಗು ಅದೇ ಬೇಕಿತ್ತು. ಅದೇ ಸಮಯದಲ್ಲಿ ಬೀರ ಅವರ ಎಲ್ಲ ಮದ್ದು ಗುಂಡುಗಳನ್ನು ನೀರಿನಲ್ಲಿ ಎಸೆದ. ಆ ಸಪ್ಪಳಕ್ಕೆ ಇಬ್ಬರು ತಿರುಗಿದಾಗ ಅವರ ಎಲ್ಲ ಅಸ್ತ್ರವು ನೀರಿನಲ್ಲಿ. ಅದನ್ನು ಕಂಡು ಕೋಪಗೊಂಡ ಅಮನ್ ಬೀರ ನನ್ನು ಕೊಲ್ಲಲು ನೋಡಿದ. ಇನ್ನು ಸುಮ್ಮನಿದ್ದರೆ ಸರಿ ಇರಲ್ಲ ಅಂತ ನಾನು ನನ್ನ ರಿವಾಲ್ವರ್ ತಗೆದು ಇಬ್ಬರ ಕಾಲಿಗೂ ಗುಂಡು ಹಾರಿಸಿದೆ. ಸುತ್ತ ಮುತ್ತ ಕಾಡು ಇರುವುದರಿಂದ, ಬಂದೂಕಿನ ಸಪ್ಪಳ, ಅವರ ಕಿರುಚಾಟ ಕಾಡಿನ ಗಿಡಗಳ ನಡುವೆ ಸೇರಿ ಹೋಯಿತು.

              ಬೆಳಗಿನ ವರೆಗೂ ಅವರಿಬ್ಬರನ್ನು ಕೂಡಿಹಾಕಿ, ಬೆಳಗಾದಾಗ ಏನು ಆಗಿಲ್ಲ ಅನ್ನೋತರ ನಮ್ಮ ಪಾಡಿಗೆ ನಾವು ಹೊರಗೆ ಹೋದೆವು. ಜಮೀನ್ದಾರನ ಮನೆಯಿಂದ ನಾಜ್ ಮತ್ತೆ ಅಮನ್ ನ ಮಗನನ್ನು ಹುಡುಕಿಕೊಂಡು ಬಂದೆ, ಅವನನ್ನು ಒಂದು ಗುಪ್ತ ಜಾಗದಲ್ಲಿ ಯಾರಿಗೂ ಅನುಮಾನ ಬಾರದ ಹಾಗೆ ಇಟ್ಟಿದ್ದರು". ಇದೆಲ್ಲ ಅಮನ್ ಕಡೆಯಿಂದ ಮಾಹಿತಿ ಪಡೆದಿರುತ್ತಾಳೆ ಹಂಸ.

              

              ಆದರೂ ಇದೆಲ್ಲ ಯಾರಿಗಾಗಿ ಅಂತ ಯಾರೊಬ್ಬರಿಗೂ ಗೊತ್ತಿಲ್ಲ. ಅಮನ್ ಹಾಗೂ ನಾಜಳಿಗೂ ಕೂಡಾ. ಇದನ್ನು ಕೇಳಿ ತಲೆ ಬಿಸಿ ಮಾಡಿಕೊಂಡ ನಾಯಕ್, "ಅಂದರೆ ಇವರು ಸ್ಲೀಪರ್ ಸೇಲ್ಸ್? " ಅಂತ ಕೇಳಿದ ಹಂಸಳಿಗೆ. ಹಂಸ "ಹೌದು ಅಂಕಲ್ ಇವರಿಗೂ ಗೊತ್ತಿಲ್ಲ ಇವರಿಗೆ ಯಾವಾಗ ಮತ್ತು ಯಾರು ಆರ್ಡರ್ ಮಾಡತಾರೆ ಅಂತ. ಅಲ್ಲಿ ವರೆಗೂ ಇವರು ಸಾಮಾನ್ಯರಲ್ಲಿ ಸಾಮನ್ಯರಂತೆ ಬದುಕುವ ಸ್ಲೀಪರ್ ಸೇಲ್ಸ್. ಮತ್ತೆ ಎರಡು ಗುಂಡಿನ ಶಬ್ದ ಈ ಸಲ ನಾಯಕರ ಬಂದುಕಿನಿಂದ, ಸೀದಾ ಇಬ್ಬರ ಹಣೆಗೆ. ಅಲ್ಲಿಗೆ ಪೂರ್ತಿಯಾಗಿ ಶಾಂತವಾಯಿತು ವಾತಾವರಣ.

              

             ಗಾಬರಿಯಲ್ಲಿದ್ದ ಬೀರ ನಿಗೆ ಏನೊಂದು ಅರ್ಥ ವಾಗಲಿಲ್ಲ. ತಾನಾಯಿತು ತನ್ನ ಕೆಲಸ ಆಯಿತು ಅಂತ ಇದ್ದು ಬಿಡುತ್ತಿದ್ದ ಬೀರ ನಿಗೆ ಇವರ ಭಾಷೆ ಅರ್ಥ ವಾದರು ಅರಿಯದೆ ಹೋಯಿತು. ಸೂಕ್ಷ್ಮವೆಲ್ಲ ಅರಿತ ಸೂರ್ಯ ನಾರಾಯಣ. ನಾಯಕರಿಗೆ, ಇವತ್ತಿನಿಂದ ಆ ಮಗು ನಂದು, ಅವನನ್ನು ನಾನು ಸಾಕುತ್ತೇನೆ ಅಂತ ಹೇಳಿ ಮಗುವಿನ ಕಡೆ ಹೆಜ್ಜೆ ಹಾಕಿದ. ಹಂಸಳ ಕಣ್ಣಲ್ಲಿ ಹೆಮ್ಮೆಯ ಭಾವ, ತನ್ನ ತಂದೆಯ ಕೊಲೆಯ ಸೇಡು ತೀರಿಸಿಕೊಂಡಿದ್ದು ಹಾಗೂ ಆ ಮಗುವನ್ನು ನೋಡಿಕೊಳ್ಳುತ್ತೇನೆ ಎಂದ ಜಮೀನ್ದಾರ್ ಸೂರ್ಯ ನಾರಾಯಣ ಬಗ್ಗೆ.


ಮುಕ್ತಾಯ

              

           

          

                   

     

               

                   

                      

           


Rate this content
Log in

Similar kannada story from Crime