Read a tale of endurance, will & a daring fight against Covid. Click here for "The Stalwarts" by Soni Shalini.
Read a tale of endurance, will & a daring fight against Covid. Click here for "The Stalwarts" by Soni Shalini.

ಸುನಿತಾ ಅಂಗಡಿ ಕೊಡೆಕಲ್

Children Stories Tragedy Crime

4.5  

ಸುನಿತಾ ಅಂಗಡಿ ಕೊಡೆಕಲ್

Children Stories Tragedy Crime

ಅಸಹಾಯಕ ಅಬಲೆ

ಅಸಹಾಯಕ ಅಬಲೆ

2 mins
78             {ಈ ಕಥೆ ಸಂಪೂರ್ಣವಾಗಿ ಕಾಲ್ಪನಿಕವಾಗಿದೆ. ಆದರೆ ಪ್ರಚಲಿತ ಸಮಾಜದಲ್ಲಿ ನಡೆಯುವ ಘಟನೆ ಕೂಡಾ ಆಗಿರುವುದು ವಿಪರ್ಯಾಸವೆ ಸರಿ. ಕುಡಿತದ ಚಟಕ್ಕಾಗಿ ತಂದೆಯಾದವನು ಹೆಂಡತಿಗೆ ಕಿರುಕುಳ ಕೊಟ್ಟು ಮನೆಯಲ್ಲಿರೋದನ್ನೆಲ್ಲ ಮಾರಿ ಕೊನೆಗೆ ತಾಳಿಯನ್ನು ಅಡವಿಟ್ಟು ಅವಳ ಸಾವಿಗೆ ಕಾರಣವಾದರು ಕುಡಿತವನ್ನು ಬಿಡದೆ ಕೊನೆಗೆ ತನ್ನ ಮಗಳನ್ನು ಜಿತಕ್ಕಿಟ್ಟ ಧಾರುಣ ಸ್ಥಿತಿ ಇಲ್ಲಿದೆ}

            ಹೀಗೊಂದು ಚಿಕ್ಕ ಕುಟುಂಬ ಅಶೋಕ ಮತ್ತು ಆರತಿ ಎಂಬ ದಂಪತಿಗಳಿಗೆ ಗೀತಾ ಎಂಬ ಮಗಳಿದ್ದಳು. ಅಪ್ಪ ಕೆಲಸವಿಲ್ಲದೆ ಕುಡಿದುಕೊಂಡು ಬೆಜವಾಬ್ದಾರಿ ಜೀವನ ನಡೆಸುತ್ತಿರುವವನಾಗಿದ್ದ. ಗೀತಾ ಅವರಿವರ ಮನೆಯ ಕಸ ಮುಸುರೆ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.

              ಇತ್ತ ದಿನಗಳು ಉರುಳುತ್ತಿದಂತೆ ಗೀತಾಳಿಗೆ 6 ವರ್ಷ ತುಂಬಿದವು. ತಾಯಿ ಆರತಿ ಮಗಳನ್ನು ಶಾಲೆಗೆ ಸೇರಿಸುವ ಕುರಿತು ಪ್ರಸ್ತಾಪಿಸಿದಳು.ಆದರೆ ಕುಡುಕ ಗಂಡನಿಗೆ ಮಗಳನ್ನು ಶಾಲೆಗೆ ಸೇರಿಸುವುದು ಇಷ್ಟವಿರಲಿಲ್ಲ ರಂಪಾಠಮಾಡಿ ಹೆಂಡತಿಗೆ ಹೊಡೆಯುತ್ತಾನೆ. ಮೊದಲೇ ಹೆಣ್ಣಾಯಿತಲ್ಲ ಎಂದು ನಾನು ಕೊರಗುತ್ತಿದ್ದೇನೆ ಅಂತಹದರಲ್ಲಿ ಶಾಲೆ ಅಂತೆ ಶಾಲೆ ಇವಳು ಮನೆಗೆ ದರಿದ್ರ ,ಹೆಣ್ಣು ಅಂದರೆ ಹುಣ್ಣು ಎಂದು ಆರತಿಯನ್ನು ನಿಂದಿಸುತ್ತಾನೆ.

         ಇತ್ತ ಅಮಾಯಕ ಮಗಳು ಗೀತಾ ದಿನನಿತ್ಯ ಮನೆಯಲ್ಲಿ ಅಪ್ಪ ಅಮ್ಮರ ಜಗಳ ನೋಡಿತ್ತು ಬೆಳೆದು ದೊಡ್ಡವಳಾಗುತ್ತಾಳೆ.ಒಂದು ದಿನ ಅಶೋಕ ತನ್ನ ಕುಡಿತದ ಚಟಕ್ಕಾಗಿ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಮಾರಿ ತನ್ನ ಕುಡಿತದ ಚಟವನ್ನು ತೀರಿಸಿಕೊಂಡನು. ಇದರಿಂದ ಕುಪಿತಗೊಂಡ ಆರತಿ ಕೂಗಾಟ ಪ್ರಾರಂಭಿಸುತ್ತಾಳೆ.ಇಬ್ಬರ ನಡುವೆ ವಾಗ್ವಾದ ಹೆಚ್ಚಾಗಿ ವಿಕೋಪಕ್ಕೆ ಹೋಯಿತು.ಅಶೋಕ ಆರತಿಯನ್ನು ತಳ್ಳಿಬಿಟ್ಟ ಅವಳು ಹೋಗಿ ಮೊಣಚುಗಲ್ಲಿನಮೇಲೆ ಬಿದ್ದಳು ತುಂಬಾ ರಕ್ತಸ್ರಾವದಿಂದಾಗಿ ಆರತಿ ಅಲ್ಲೇ ಪ್ರಾಣಬಿಟ್ಟಳು.

             ಇಷ್ಟಾದರೂ ಬುದ್ದಿ ಕಲಿಯದ ಅಶೋಕ ತನ್ನ ಕುಡಿತದ ಚಟಕ್ಕಾಗಿ ಮಗಳನ್ನು ಕೆಲಸಕ್ಕೆ ಇಡಲು ನಿರ್ಧರಿಸಿದ.ಆದರೆ ಹಳ್ಳಿಯಲ್ಲಿ ಕೆಲಸಕ್ಕಿಟ್ಟರೆ ಸಂಬಳ ಕಡಿಮೆ ಸಿಗುವುದೆಂದು ಅವಳನ್ನು ಪಟ್ಟಣದ ಶ್ರೀಮಂತರ ಮನೆಯಲ್ಲಿ ಜಿತಕ್ಕಿಟ್ಟನು. ಇತ್ತ ವಲ್ಲದ ಮನಸ್ಸಿನಿಂದ ಮಗಳು ಗೀತಾ ಶ್ರೀಮಂತರ ಮನೆಯಲ್ಲಿ ಕಸ ಮುಸುರೆ ತೊಳೆದುಕೊಂಡು ಕೈಗಳಿಗ್ಗೆಲ್ಲ ಬೊಬ್ಬೆ ಬಂದಿದ್ದವು. ಎಲ್ಲ ಮಕ್ಕಳಂತೆ ಆಡಿ ಶಾಲೆಗೆ ಹೋಗಬೇಕಾದ ಇಳಿ ವಯಸ್ಸಿನ ಗೀತಾ "ಪಾಪಿ ಕುಡುಕ ಅಪ್ಪ" ನ ದುಷ್ಟಚಟಗಳಿಗಾಗಿ ತನ್ನ ಬಾಲ್ಯವನ್ನು ಬಲಿ ಕೊಡುತ್ತಾಳೆ.

ಯಜಮಾನರ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಡುವಾಗ ಅಲ್ಲಿರುವ ಶಾಲಾ ಮಕ್ಕಳನ್ನು ನೋಡಿ ಮುಖವಿಸ್ಮಯಳಾಗಿ ನೋಡುತ್ತಾಳೆ. ದುಃಖಿಸುತ್ತ ಹೇಳಿಕೊಳ್ಳುತ್ತಾಳೆ ಅವರಿಗಿರುವ ಓದು,ಬರಹ,ಆಟ, ಪಾಠ ನನಗ್ಯಾಕಿಲ್ಲ. ಬಡವಳಾಗಿ ಹುಟ್ಟಿರೋದು ನನ್ನ ತಪ್ಪಾ? ಎಲ್ಲರು ಹೇಳುತ್ತಾರೆ ""ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ ,""

ಎಂದು ಆದರೆ ಅದು ಬರಿ ಬಾಯಿಮಾತಿಗೆ ಅಷ್ಟೇ ಸರಿ. ನನ್ನ ಹಣೆಬರಹಕ್ಕೆ ಹೊಣೆ ಯಾರು ? ಇದಕ್ಕೆ ನಿಮ್ಮಲ್ಲಿ ಉತ್ತರವಿದಿಯೇ? .... ಎಂದು ಪ್ರಶ್ನಿಸುತ್ತಾಳೆ.

              ನನ್ನಂತೆ ಹಳ್ಳಿಗಾಡುಗಳಲ್ಲಿ ಸಾವಿರಾರು ಮಕ್ಕಳು ವಿದ್ಯೆಯಿಂದ ವಂಚಿತರಾಗಿದ್ದಾರೆ. ನಮಗೆಲ್ಲ ಆಸರೆ ಯಾರು ? ಬಡವರಾಗಿ ಹುಟ್ಟಿದ್ದು ನಮ್ಮ ತಪ್ಪೇ? ನಾವು ಪ್ರತಿನಿತ್ಯ ಕಣ್ಣೀರಿನಲ್ಲಿ ಕೈತೊಳೆಯುವ ಸ್ಥಿತಿ ಉಂಟಾಗಿದೆ.

                             ನನಗೂ ಒಂದು ಆಸೆ ಇದೆ,ಕನಸಿದೆ,ಮನಸಿದೆ, ಎಂಬುವುದನ್ನು ಎಲ್ಲರೂ ಮರೆತಿದ್ದೀರಾ ,ಹೆಣ್ಣೆಂದರೆ ಬರಿ ಬೊಗದವಸ್ತುವಾಗಿ ಕಾಣುತ್ತಿದ್ದೀರ. ಈ ಸಮಾಜದಲ್ಲಿ ಬದುಕುವುದು ಕಷ್ಟ , ನಮ್ಮಂತಹ ಹೆಣ್ಣು ಮಕ್ಕಳ ಸ್ಥಿತಿಯೇ ಇಷ್ಟು ಇದೆ ನಮ್ಮ ದೌರ್ಬಗ್ಯ .

        ದಯಮಾಡಿ ನಮ್ಮನ್ನು ಬದುಕಿಸಿ,ಬದುಕಲು ಬಿಡಿ,ನಮಗೂ ಆಸೆ ಆಕಾಂಕ್ಷೆಗಳಿರುತ್ತವೆ.ನಮ್ಮ ಮನಸ್ಸನ್ನು ಅರ್ಥೈಸಿಕೊಳ್ಳಿ ನಿಮ್ಮ ಒಂದು ಕುಡಿತದ ಚಟಕ್ಕಾಗಿ ಇಡೀ ಕುತುಂಬವೇ ನಾಶವಾಗುತ್ತದೆ ದಯಮಾಡಿ ಕುಡಿತಕ್ಕೆ ಅಂತ್ಯ ಹಾಡಿ. ಇಂತಿ ನಿಮ್ಮ ನೊಂದ ಜೀವ .

 


     


Rate this content
Log in

More kannada story from ಸುನಿತಾ ಅಂಗಡಿ ಕೊಡೆಕಲ್