Meenakshi "meeನ"

Abstract Classics

2  

Meenakshi "meeನ"

Abstract Classics

ಜೀವನ ಸಂಗಾತಿ...

ಜೀವನ ಸಂಗಾತಿ...

2 mins
124


ಗುರು ಹಿರಿಯರ ಆಶೀರ್ವಾದದಿಂದ ನಡೆದ ಒಂದು ಮದುವೆ,ತಂದೆ ತಾಯಿಯನ್ನು ಬಿಟ್ಟು ಬಂದ ಹೆಂಡತಿಗೆ ಕೂಡ ಹೊಸ ಜಾಗ , ಗಂಡನ ಸ್ವಭಾವದ ಅರಿವಿಲ್ಲ ..ಆತನಿಗೂ ಹಾಗೆ .ಆದರೂ ಕೂಡ ಬದುಕು ಜಟಕಾ ಬಂಡಿ ಎಂಬಂತೆ ಇಬ್ಬರೂ ಒಬ್ಬರನೊಬ್ಬರು ಅರಿಯುವ ಮುನ್ನವೇ ಗಂಡನ ಕೆಲಸ ಬರಹೇಳುತಿತ್ತು ಪಟ್ಟಣಕ್ಕೆ.


ಜೀವನ ನಾವಂದುಕೊಂಡತ್ತೆ ನಡೆದರೆ ಅದ್ಭುತವೆ ಸರಿ. ಅವಳು ಕೂಡು ಕುಟುಂಬದ ಹೆಣ್ಣು. ಮದುವೆ ಯಾದ ಮೇಲೆ ಇಬ್ಬರೆ. ಅದು ಗಂಡ ಕೆಲಸಕ್ಕೆ ಹೋದರೆ ಒಬ್ಬಳೆ, ಬದುಕು ನರಕವಾಯಿತೇನೋ ಅವಳಿಗೆ.


ಆಗ ಪರಿಚಯವಾಗಿದ್ದೆ ನಗರದ ಕ್ಲಬ್ ಗಳು. ಗಂಡನಿಗೋ ಅದು ಇಷ್ಟ ವಿರಲಿಲ್ಲ. ಅವಳ ಒತ್ತಾಯಕ್ಕೆ ಮಣಿದು, ನಗರದ ಪ್ರತಿಷ್ಠಿತ ಕ್ಲಬ್ ಒಂದರಲ್ಲಿ ಮೆಂಬರ್ ಆಗಿ ಜೋಯ್ನ್ ಮಾಡಿಸುತ್ತಾನೆ. ವಾರದಲ್ಲಿ 5 ದಿನ ಗಂಡ ಆಫೀಸ್ಗೆ , ಹೆಂಡತಿ ಕ್ಲಬ್ಗೆ. ಆಧುನಿಕ ಜೀವನ ಶೈಲಿ ಅವರಿಗೆ ಗೊತ್ತಿಲ್ಲದ ಹಾಗೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಹೊಸ ಜೋಡಿಯಾದರೂ ಕೂಡ ವಾರವಿಡೀ ಇಬ್ಬರಲ್ಲೂ ಕೆಲಸ ಕೆಲಸ . ಅರಿತುಕೊಳ್ಳಲು ಸಮಯವೇ ಇರಲಿಲ್ಲ ಅವರ ಬಳಿ. ಸಮಯ ಇದ್ದರೂ ಅವರನ್ನು ಹೊಸದೊಂದು ಲೋಕಕ್ಕೆ ಕರೆದೊಯದಿತ್ತು ಈ ಟೆಕ್ನಾಲಜಿಗಳು. ನಡುವೆ ಉಳಿದೆರಡು ದಿನ ಹೋದದ್ದೇ ತಿಳಿಯುತ್ತಿರಲಿಲ್ಲ. ಹೀಗೆ ತಟಸ್ಥವಾಗಿ ಜೀವನ ಸಾಗುತ್ತಿರಬೇಕಾದರೆ ಕೆಲ ದಿನಗಳ ನಂತರ ಹೆಂಡತಿಗೆ ಬಿರುಕಿನ ಅರಿವು ಮೂಡಿತು. ಕೂತು ಮಾತಾಡಿದರು ಬಗೆ ಹರಿಯದ ಜಟಿಲ ತೊಡಕಾಯಿತು ಅವರ ಸಮಸ್ಯೆ. ಗಂಡನಿಗೆ ಅವಳ ಕ್ಲಬ್ ಜೀವನ ಹಿಡಿಸಲಾಗದೆ ಅಸಡ್ಡೆ ತೋರತೊಡಗಿದ. ಇದನ್ನರಿತ ಹೆಂಡತಿ ಸಂಸಾರ ಉಳಿಸಿಕೊಳ್ಳಲು ಎಲ್ಲವನ್ನು ಬಿಟ್ಟು ಮನೆಯಲ್ಲೆ ಉಳಿದಳು. ಆದರೂ ಗಂಡನ ನಿಲ್ಲದ ನಿರ್ಲಕ್ಷೆ ಹೆಂಡತಿಗೆ ಉಸಿರು ಕಟ್ಟಿಸುವ ವಾತಾವರಣ ವಾಯಿತು. ಬದುಕು ಯಂತ್ರಿಕವಾಯಿತು. ಇದರಿಂದ ಬೇಸತ್ತ ಹೆಂಡತಿ ಬೇರೆ ಕೆಲಸದಲ್ಲಿ ಬ್ಯುಸಿ ಯಾಗಿರಲು ಏನಾದ್ರು ಕೆಲಸ ಹುಡಕಿ ಮಾಡುತ್ತಿದ್ದಳು.

         

ಕಾಲೇಜ್ ನಲ್ಲಿ ಡ್ರಾಯಿಂಗ್,ಪೇಂಟಿಂಗ್ ನಲ್ಲಿ ಫಸ್ಟ್ ಬರುತ್ತಿದ್ದ ಅವಳು,ಮದುವೆಯಾದ ಮೇಲೆ ಈ ಹವ್ಯಾಸವನ್ನು ಮರೆತು ಬಿಟ್ಟಿದ್ದಳು. ಈಗ ಅವು ಸಹಾಯಕ್ಕೆ ಬಂದವು. ದಿನವಿಡಿ ಗಂಡ ಆಫೀಸ್ ಗೆ ಹೋದಮೇಲೆ ಇದರಲ್ಲೆ ಬ್ಯುಸಿಯಾಗ ತೊಡಗಿದಳು. 

                                

ಕ್ರಮೇಣ ಗಂಡನಿಗೆ ಹೆಂಡತಿಯ ಉಪಸ್ಥಿಯಲ್ಲಿ ಕೂಡ ಆತನಿಗೆ ಅನುಪಸ್ಥಿತಿ ಕಾಡ ತೊಡಗಿತು. ಇದರ ಬಗ್ಗೆ ಮಾತನಾಡಲು ಅವನ ಬಿಗುಮಾನ, ಅಹಂಕಾರ ಅಡ್ಡ ಬರುತ್ತಿದ್ದ ಕಾರಣ ಮಾತನಾಡಲು ಹಿಂಜರಿಯುತ್ತಿದ್ದನು. ಸೂಕ್ಷ್ಮ ಅರಿತ ಹೆಂಡತಿ ಮಾತನಾಡಲು ಮುಂದಾದಳು. ಮದುವೆಯಾಗಿ ವರುಷಗಳೆ ಉರುಳಿದ್ದವು. ದಿನಗಳ ಜೊತೆ ಅಂತರವು ಹೆಚ್ಚಾಗಿತ್ತು. ಸರಿಪಡಿಸಬೇಕೆಂಬ ಹೆಂಡತಿಯ ನಿರ್ಧಾರ, ಅವಳ ಕಾಳಜಿಗೆ ಗಂಡನ ಅಹಂ,ಬಿಗುಮಾನ ಕಳಚಿ ಬಿತ್ತು. ಹೆಣ್ಣಿನ ಕಾಳಜಿಯ ಮಾತಿನಲ್ಲಿ ಜಗತ್ತನ್ನೆ ಗೆಲ್ಲುವ ಶಕ್ತಿ ಇದೆ. ಆ ಜಗತ್ತು ಗಂಡನಾದಗ ಶಕ್ತಿಯ ಜೊತೆ ಪ್ರೀತಿಯು ಸೇರಿಕೊಳ್ಳುತ್ತದೆ. ತೊಂದರೆ ಅಲ್ಲದ ತೊಂದರೆಯಿಂದ ಮಾತನಾಡಿ ಬಗೆಹರಿಸಿಕೊಂಡು ನೆಮ್ಮದಿ ಇಂದ ಜೀವನ ಸಾಗಿಸುತ್ತಿದ್ದಾರೆ. ಸಂಗ ತೊರೆಯದೆ ಜೀವನ ಸಂಗಾತಿಗಳಾಗಿ ಹೊಂದಾಣಿಕೆ, ಸಹಬಾಳ್ವೆ ಎಂದರೆನೆಂದು ಅರಿತು ಅದನ್ನು ಜೀವನದ ಅಂಗವಾಗಿ ಅಳವಡಿಸಿಕೊಂಡಿದ್ದಾರೆ. "ಜೀವನ ಸಂಗಾತಿ" ಈ ಪದಕ್ಕೆ ಚೌಕಟ್ಟು ಇದೆಯಾ?...


Rate this content
Log in

Similar kannada story from Abstract