Meenakshi "meeನ"

Abstract Tragedy

2  

Meenakshi "meeನ"

Abstract Tragedy

ಬಂದ ಹಾಗೆ ಸ್ವೀಕರಿಸಿದ ಬದುಕು...!

ಬಂದ ಹಾಗೆ ಸ್ವೀಕರಿಸಿದ ಬದುಕು...!

7 mins
158


ನಾನು ಹೇಗೆ ನನ್ನ ಬದುಕನ್ನು ಸ್ವೀಕರಿಸಿದೆ ಅಂತ, ನಾನೇ ಹೇಳುತ್ತೇನೆ... ಅಂದಹಾಗೆ ನನ್ನ ಹೆಸರು.....!        ಹೆಸರಿನ ಅವಶ್ಯಕತೆ ಇಲ್ಲ ಅಂದುಕೊಳ್ಳುತಿನಿ.. ಹಾಗೂ ಹೆಸರು ಇಡಲೇ ಬೇಕು ಅಂದ್ರೆ... ಯಾವುದೋ ಒಂದು ನಿಮ್ಮಿಷ್ಟದ ಹೆಸರು ಇಟ್ಟು ಬಿಡಿ.. ಹಾ.. ! ಅಂದಹಾಗೆ.. ನನಗೆ ಗಾಳಿಯಲ್ಲಿ ತೇಲಿದ ಅನುಭವ.. ಅಷ್ಟು ಹಗುರವಾಗಿ ಇದಿನಾ ಅಂತ ಅನಿಸ್ತು... ಯಾಕೆ ಅಂತ ಕಡೆಗೆ ಯೋಚನೆ ಮಾಡೋಣ.

             ನಮ್ಮದು ಪುಟ್ಟ.. ಕುಟುಂಬ. ಅಪ್ಪ, ಅಮ್ಮ ಮತ್ತೆ ನಾನು.. ಹಾಗೂ ನನಗೆ ಒಬ್ಬಳು ತಂಗಿ. ಅಪ್ಪ ಸಣ್ಣ ವ್ಯಾಪಾರ ಮಾಡುತ್ತಿದ್ದರು. ಅಮ್ಮ ಮನೆ ನೋಡಿಕೊಂಡು ಹೋಗುವ ಜವಾಬ್ದಾರಿ. ಇನ್ನೂ , ತಂಗಿ ಯಾವಾಗಲೂ ಚರುಕು ಓದುವುದರಲ್ಲಿ. ನಾನು ಮಧ್ಯಮ... ಲಾಸ್ಟ್ ಕೂಡ ಬರ್ತಾ ಇರಲಿಲ್ಲ.. ಹಾಗೆ ಫಸ್ಟ್ ಕೂಡ ಇಲ್ಲ...

           ಅಪ್ಪ ಅಮ್ಮನಿಗೆ ತಂಗಿ ಅಂದ್ರೆ ಪ್ರಾಣ.. ನನಗೂ ನನ್ನ ತಂಗಿ ಅಂದ್ರೆ.. ಅಷ್ಟೇ ಪ್ರೀತಿ. ಯಾವತ್ತೂ ಅವಳನ್ನ ಬಿಟ್ಟು ಇರ್ತಾ ಇರಲಿಲ್ಲ...

       ಅವಳು ಓದಿನಲ್ಲಿ ಜಾಣೆ, ಬುದ್ಧಿವಂತಿಕೆಯಲ್ಲಿ ಚುರುಕು.. ನಾನು ಅವಳ ತದ್ವಿರುದ್ಧ... ನನ್ನ ತಂಗಿ ಎಲ್ಲವನ್ನು ತೂಗಿ ಅಳೆದು ಮಾತು ಆಡ್ತಾ ಇದ್ದಳು. ನನಗೆ ಹಾಗೆ ಯಾವತ್ತೂ ಬರಲೇ ಇಲ್ಲ. ಅದು ಅವಳಿಗೆ ಹುಟ್ಟತಾ ಬಂದ ವರ... ನನಗೆ ಶಾಪ... ಆದರೂ ನನಗೆ ಅವಳ ಮೇಲೆ ಯಾವ ಪೈಪೋಟಿ.., ಈರ್ಷೆ ಇರಲಿಲ್ಲ.

       ಆದರೆ ಬಯಸಿದ್ದೆ ಅಪ್ಪ..ಅಮ್ಮ.. ನನ್ನನ್ನೂ , ನನ್ನ ತಂಗಿನ ಹೇಗೆ ಪ್ರೀತಿಸುತ್ತಾರೋ ಹಾಗೆ ಪ್ರೀತಿಸಲಿ ಅಂತ.. ಆದರೆ ಅದು ಆಗಲೇ ಇಲ್ಲ... ಅವರಿಗೆ ಸಣ್ಣ ಮಗಳ ಮೇಲೆ ಯಾವತ್ತೂ ಜಾಸ್ತಿ ಪ್ರೀತಿ. ನನಗೂ ಖುಷಿ... ಆದರೆ ಮನದ ಮೂಲೆಯಲ್ಲಿ ಎಲ್ಲೋ ಒಂಟಿಯಾಗಿದ್ದೆ.

    ಅದನ್ನೆಲ್ಲ ತೋರುಗೊಡದೆ ನನ್ನ ಪಾಡಿಗೆ ನಾನು ಇದ್ದೆ... ಆಗ ನನಗೆ ಪರಿಚಯ ಆದವನೆ... ಅಮಯ್... ಕಾಲೇಜ್ ಗೆಳೆಯ..

      ಅವನೂ ಅತಿ ಶ್ರೀಮತಿಕೆಯ ಹುಡುಗ.. ಆದರೂ ಸ್ವಲ್ಪ ಕೂಡ ಜಂಭ ಇರಲಿಲ್ಲ... ಅವನಿಗೆ ಅದು ಹೇಗೆ ನನ್ನ ಸ್ನೇಹ ಬಯಸಬೇಕು ಅಂತ ಅನಿಸಿತೋ.. ಗೊತ್ತಿಲ್ಲ... ಸ್ನೇಹ ಬಯಸಿದ.. , ಅವ ಮಾತ್ರ ಬಯಸಲಿಲ್ಲ.. ನಾನು ಕೂಡ ಅವನ ಸ್ನೇಹ ಬಯಸಿದ್ದೆ.

       ಇಬ್ಬರದು ಒಂದೇ ಕ್ಲಾಸ್... ಅಕ್ಕ ಪಕ್ಕದ ಬೆಂಚ್. ಅವನ ಕೆಲ ನಿಯಮಗಳಿದ್ದವು ಯಾರಿಗೂ ಅತಿಯಾಗಿ ಸಲುಗೆ ಕೊಡುತ್ತಿರಲಿಲ್ಲ. ಅಳೆದು ತೂಗಿದ ಮಾತು ಆತನದು. ಮಾತು ಕೂಡ ಕಡಿಮೆ.. ನನ್ನೊಟ್ಟಿಗೆ , ಹಾಗೆ ಅವನ ಒಂದೆರೆಡು ಸ್ನೇಹಿತರ ಜೊತೆ ಮಾತು ಮಾತ್ರ ಜಾಸ್ತಿ... ಈವನೇನಾ ಅಮಯ್ ಅಂತ ಅನಿಸಬೇಕು ಎಲ್ಲರಿಗೂ..! ಮಾತು ಶುರುವಿಟ್ಟ ಅಂದ್ರೆ... ! ಮುಗಿತು... ನಾವುಗಳು ಯಾರು ಮಾತನಾಡುವ ಹಾಗೆ ಇರಲಿಲ್ಲ... ಅವನ ಮಾತು ಕೇಳ್ತಾ ನಮ್ಮ ಬಾಯಿ ಮುಚ್ಚಿ ಬಿಡುತ್ತಿದ್ದ ಅಮಯ್...

     ಅವನ ಹಲವು ಪ್ರಶ್ನೆಗಳಿಗೆ ಉತ್ತರನೆ ಇರುತ್ತಿರಲಿಲ್ಲ , ಅವನ ಹೊರತು... ಹಾಗೆ ಅವನ ತರ್ಕಗಳು ಕೂಡ .

         ಹರಟೆ.. ಮಾತು ಈ ಎಲ್ಲದರ ಮಧ್ಯೆ ಕಾಲೇಜ್ ಮುಗಿಯುತ್ತಾ ಬಂದಿದ್ದು ಗೊತ್ತಾಗಲಿಲ್ಲ.

     ಓದಿನಲ್ಲಿ ಮಾತ್ರ ಕಟ್ಟು ನಿಟ್ಟು . ಎಲ್ಲರೂ ಓದಲೇ ಬೇಕು. ಇಲ್ಲ ಅಂದ್ರೆ ಅವನಾಡೋ ಮಾತಿಗೆ ಕಿವಿ ತೂತು ಬಿದ್ದು ರಕ್ತ ಬರೊ ವರೆಗೂ ಕೋರಿಯೋದು ಬಿಡ್ತಾ ಇರಲಿಲ್ಲ . ಅದಕ್ಕಿಂತ ಓದೋದೆ ವಾಸಿ ಅನ್ನಿಸೋದು ನಮ್ಮ ಗುಂಪಿಗೆ.

           ಓದು.. ! ಓದು..! ಅಂತ ನನ್ನ ಮೇಲೆ ಜಾಸ್ತಿ ಒತ್ತಡ ಹಾಕುತ್ತಾ ಇದ್ದ . ಅವನಿಗೆ ಖುಷಿ.. ಅವನ ಗೆಳತಿ ಕೂಡ ಮೊದಲ ಪಟ್ಟಿಯಲ್ಲಿ ಬರಲಿ ಅಂತ.

       ಅವನಿಗೂ ಗೊತ್ತು.. ಅದು ಅಸಾಧ್ಯದ ಮಾತು ಅಂತ.. ಆದರೂ ಪ್ರಯತ್ನ ಮಾತ್ರ ಬಿಡ್ತಾ ಇರಲಿಲ್ಲ. ಓದು.. ಕಾಲೇಜ್ ಎಲ್ಲ ಮುಗಿದು.. ನಾನು ಓದು ಸಾಕು ಅಂತ ನಿಲ್ಲಿಸಿ ಬಿಟ್ಟೆ. ಅಮಯ್ ತನ್ನ ಓದು ಮುಂದುವರೆಸಲು ಪೇಟೆ ಸೇರಿದ. ಅಲ್ಲಿಂದ ಹೊರದೇಶ ಅಂತ ದೂರವಾಗಿಬಿಟ್ಟ.

           ಮೊದಮೊದಲು ನನ್ನ ಹತ್ರ ಮೊಬೈಲ್ ಇರಲಿಲ್ಲ.. ಅಂತ ಪತ್ರದ ಮೂಲಕ ಇಬ್ಬರು ಮಾತನಾಡುತ್ತಾ ಇದ್ದೆವು. ಕಡೆಗೆ ಮನೆಗೊಂದು ಮೊಬೈಲ್ ಬಂದಾಗ ನನ್ನ ಮೊಬೈಲ್ ನಂಬರ್ ಕೊಟ್ಟು , ಇಬ್ಬರು ಆಗಾಗ ಮಾತು ಆಡುತ್ತಾ ಇದ್ದೆವು.

        ಈ ಮಧ್ಯೆ ನನ್ನ ಮನೆಯಲ್ಲಿ ನನ್ನ ಮದುವೆ ನಿಶ್ಚಯ ಮಾಡಿದರು.. ದೂರದ ಸಂಬಂದಿಗಳ ನೆಂಟರು ಬಂದು ನೋಡಿ ಹೋದರು . ಅವರಿಗೂ ನಾನು ಇಷ್ಟವಾದೆ. ಮದುವೆ ತಯಾರಿ ಕೂಡ ನಡೆಯಿತು.

           ಖುಷಿಯಿಂದ ಎಲ್ಲವನ್ನು ಅಮಯ್ ಗೆ ಹೇಳ್ತಾ ಇದ್ದೆ. ಅಮಯ್ ಕೂಡ ನನ್ನ ಮದುವೆ ವಿಷಯ ಕೇಳಿ ಖುಷಿ ಪಟ್ಟ. ಅವನ ಪರೀಕ್ಷೆ ಅಂತ ಬರಲು ಆಗೋಲ್ಲ ಅಂತ , ಮೊಬೈಲ್ ಅಲ್ಲೇ ಶುಭಾಶಯ ತಿಳಿಸಿದ.

            ಮದುವೆ ,ಗಂಡ ,ಮಕ್ಕಳು.. ಅಂತ ಈ ಜಂಜಾಟದಲ್ಲಿ ಅಮಯ್ ಜೊತೆಗಿನ ಮಾತು ಕಡಿಮೆ ಆಯಿತು. ಅವ ಕೂಡ ನನ್ನ ಸಂಸಾರಕ್ಕೆ ಯಾವ ಹಾನಿ ಆಗಬಾರದು.. ಒಂದು ಸಣ್ಣ ಅನುಮಾನ ಸಾಕು ಸಂಸಾರ ಒಡೆಯಲು ಅಂತ , ಮಾತು ಪೂರ್ತಿಯಾಗಿ ನಿಲ್ಲಿಸಿದ .

      ಆದರೆ ನನ್ನ ಮನದಲ್ಲಿ ಇದ್ದ ಗೆಳೆಯನ ಮೊದಲ ಸ್ಥಾನ ಮಾತ್ರ ಹಾಗೆ ಉಳಿದುಬಿಟ್ಟಿತು.

       ಹಲವು ವರ್ಷಗಳ ನಂತರ ಒಂದು ಕಾಲ್ ಬಂತು.. ಅದು ನನ್ನ ಸ್ನೇಹಿತ ಅಮಯ್ ನದು.

          ಹಲೋ.. ಕೂಡ ಹೇಳದೆ.., " ಇಷ್ಟೆಲ್ಲ ಕಷ್ಟ ಆಯಿತು , ಈ ಗೆಳೆಯ ನೆನಪು ಆಗಲೇ ಇಲ್ಲವ ಅಂತ ಕೇಳಿದ. "

    ನನಗೆ ಅವನ ಧ್ವನಿ ಕೇಳಿ ಮಾತೇ ಮೂಕವಾದವು. ಕಣ್ಣೀರು ಧಾರಾಕಾರವಾಗಿ ಸುರಿಯುತ್ತಾ ಹೋಯಿತು.

           ಅಮಯ್ " ನಾಳೆ ನಾನು ನೀನಿರುವ ಆಶ್ರಮಕ್ಕೆ ಬರ್ತಾ ಇದಿನಿ.. ಮಾತು ಆಡಬೇಕು " ಅಂತ ಹೇಳಿ ಫೋನ್ ಇಟ್ಟ .

          ನನಗೆ , ಒಳಗೊಳಗೇ ಭಯ , ಗಾಬರಿ.. ಹೇಳತೀರದ ಖುಷಿ . ಆ ಒಂದು ದಿನ ಒಂದೊಂದು ಕ್ಷಣ ಕೂಡ ಒಂದೊಂದು ಯುಗಗಳಂತೆ ಕಳೆದು ಬಿಟ್ಟೆ. ರಾತ್ರಿ ಕೂಡ ನಿದ್ದೆ ಇಲ್ಲದೆ ಕಳೆದು ಬಿಟ್ಟೆ. ಅವ ಕೇಳುವ ಪ್ರಶ್ನೆಗೆ ಉತ್ತರ ವಿಲ್ಲದೆ. ಆದರೂ.. ನಾನಿಲ್ಲಿ ಇರುವ ವಿಷಯ ಹೇಗೆ ತಿಳಿಯಿತು ಅವನಿಗೆ ಅನ್ನೋದು ಕೇಳೋದು ಮರೆತು ಹೋದೆ. 

           ಅಂತೂ.., ಮರುದಿನ ಸೂರ್ಯ ತನ್ನ ಕಿರಣವನ್ನು ಭೂಮಿಗೆ ಬಿಟ್ಟು ಬೆಳಕು ಹರಿಸಿದ. ಬೇಗ ಬೇಗ ನಿತ್ಯ ಕರ್ಮಗಳನ್ನು ಮುಗಿಸಿ.., ತಿಂಡಿ ಅವನ ಜೊತೆ ತಿನ್ನಲೆಂದು ಕಾದು ಕುಳಿತಿದ್ದೆ . ಸಮಯ ಸರಿದಂತೆ ನನ್ನ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಒಂಬತ್ತು ಗಂಟೆ ಯಾಯಿತು.. ಬಾಗಿಗಲ್ಲೇ ಕಣ್ಣು ನೆಟ್ಟು ಒಂದೆಡೆ ಕುಳಿತು ಬಿಟ್ಟಿದ್ದೆ .

                ಕಾದು.. ಕಾದು ಹತ್ತು ಗಂಟೆಯಾಗಿ ಹೋಯಿತು. ಅಮಯ್ ಸುಳಿವೆ ಇಲ್ಲ. ಯಾಕೋ ಮನಸು ಕಸಿವಿಸಿ ಯಾಗುತ್ತಿತ್ತು. ಸಂಕಟ , ಒಂತರ ಗಾಬರಿ ಯಾಗುತ್ತಿತ್ತು .

         ಮುಂದಿನ ಐದು ನಿಮಿಷದಲ್ಲಿ ಕಾರೊಂದು ಬಂದು ನಿಂತಿತು.. ಆಶ್ರಮದ ಗೇಟ್ ಮುಂದೆ. ಸದ್ಯ ಬಂದ ಅಂತ ನೆಮ್ಮದಿ ಯಾಯಿತು.

                 ಆದರೆ ಕಾರಿಂದ ಇಳಿದವ ಅಮಯ್ ಆಗಿರಲಿಲ್ಲ. ಇವರು ಬೇರೆ ಯಾರೋ ಆಶ್ರಮಕ್ಕೆ ಏನೋ ಕೊಡಲು ಬಂದವರು ಇರಬೇಕು ಅಂತ ಭಾವಿಸಿ , ಅಮಯ್ ಬರುವಿಕೆಗಾಗಿ ಕಾಯುತ್ತ ಕುಳಿತಿದ್ದೆ.

      ಕಾರಿಂದ ಇಳಿದ ವ್ಯಕ್ತಿ ನೇರವಾಗಿ ನನ್ನತ್ತ ಬಂದು ನಿಂತರು. ನಾನು ಅವರಿಗೆ ಅಲ್ಲಿನ ಮ್ಯಾನೇಜರ್ ಕೊಠಡಿ ತೋರಿಸಿ , ಅಲ್ಲಿ ಮ್ಯಾನೇಜರ್ ಇರ್ತಾರೆ ಹೋಗಿ ಅಂದೆ.

         ಆದರೆ , ಆ ವ್ಯಕ್ತಿ.. , ನೀವು ಅಮಯ್ ಸ್ನೇಹಿತೆ ಅಲ್ವಾ.. ಅಂತ ಕೇಳಿದರು.. ಅಮಯ್ ಹೆಸರು ಕಿವಿಗೆ ಬಡಿಯುತ್ತಿದ್ದಂತೆ , ಅದೇನೋ ಖುಷಿ.. , ಕಣ್ಣಂಚಲ್ಲಿ ನೀರು ಇಣುಕಿತು .

      ನಾನು.. ಹು ಎನ್ನಲು ಆಗದೆ.. ಗೋಣು ಅಲ್ಲಾಡಿಸಿ ಹೇಳಿದೆ.

         " ತಗೊಳ್ಳಿ ಈ ಫೈಲ್ ಅಂತ , ಯಾವುದೋ ಒಂದು ಫೈಲ್ ಕೊಟ್ಟು , ತಗೆದು ನೋಡಿ ಅಂತ ಹೇಳಿದರು. ಏನೊಂದು ಅರ್ಥವಾಗಲಿಲ್ಲ... ಗೊಂದಲದಲ್ಲೇ ಅವರ ಮುಖವನ್ನು ನೋಡುತ್ತಾ ನಿಂತಿದ್ದೆ. ಮತ್ತೆ ಅವರೇ ಎಚ್ಚರಿಸಿ " ಫೈಲ್ ನೋಡಿ " ಅಂದರು.

            ನಾನು ಫೈಲ್ ತೆಗೆದು ನೋಡಿದೆ.. ಮೊದಲ ಪೇಪರ್ ನ ಮೊದಲ ಸಾಲಿನಲ್ಲಿ... ಬರೆದಿತ್ತು... ನನ್ನ ಹೆಸರು.. ಜೊತೆಗೆ ಇಡೀ ಆಶ್ರಮ ನನ್ನ ಹೆಸರಿಗೆ ... ಓದಿ ಒಂದು ಕ್ಷಣ ಬೆರಗಾಗಿ ಹೋದೆ...

     ಈ ಆಶ್ರಮ ಅಮಯ್ ದು... ಅಂತ ಅವತ್ತೇ ಗೊತ್ತಾಗಿದ್ದು.

     ನನ್ನ ಯೋಚನೆಗೆ ಕಡಿವಾಣ ಹಾಕಿದಂತೆ.., ನೋಡಿ, ಈಗ ನೀವು ನನ್ನ ಜೊತೆ ಬನ್ನಿ.. ಅಮಯ್ ನಿಮ್ಮನ್ನ ನೋಡಬೇಕು ಅಂತ ಕೇಳ್ತಾ ಇದ್ದ. ಬನ್ನಿ ಹೋಗೋಣ ಅಂತ ಕರೆದರು..

         ನಾನು.., " ಅಲ್ಲ..., ಇಲ್ಲಿಗೆ ಅವನೇ ಬರ್ತಾ ಇದಿನಿ ಅಂತ ಹೇಳಿದ್ದ . ಯಾಕೆ ಬರಲಿಲ್ಲ ಅವ.. " ಕೇಳ್ತಾ ಇದ್ದೆ...

       ಅವರು ನನ್ನ ತಡೆದು.., ಮ್ಯಾಮ.. ನಾನು ಅವರ ಮ್ಯಾನೇಜರ್ ನಾಥ್ ಅಂತ... ಅವರು ನಿಮ್ಮನ್ನ ಕರೆತರಲು ಹೇಳಿದ್ದಾರೆ. ಅಂತ ಮತ್ತೆ ಚುಟುಕಾಗಿ ಹೇಳಿದರು.

       ನಾನು.., " ಸರಿ.. ಅವನ ನೋಡಿದ ಮೇಲೆ ನಾನೇ ಕೇಳಿದರೆ ಆಯಿತು ಅಂತ. ಅವರ ಜೊತೆ ಹೊರಡಲು ನಿಂತೆ.

       ಹೊರಟಿತು ಕಾರು ಅತಿ ವೇಗದಿಂದ.. ಕಾರಿಗೆ ಸಮಯ ಇಲ್ಲವೇನೋ ಎಂಬಂತೆ... ನನ್ನ ಮನ ಕೂಡ ಅದಕ್ಕಿಂತ ವೇಗದಲ್ಲಿ ಹೊರಟು , ಅಮಯ್ ನ ಭೇಟಿ ಮಾಡಿ ಆಗಿತ್ತು... ಕಾರಿಗೂ.. ನನ್ನ ಮನಸ್ಸಿಗೂ ಒಂದೇ ಸಲಕ್ಕೆ ಕಡಿವಾಣ ಬಿದ್ದಂತೆ ಆಯಿತು.. ಕಾರ್ ಒಂದು ದೊಡ್ಡ ಆಸ್ಪತ್ರೆ ಮುಂದೆ ಬಂದು ನಿಂತಿತು...

            ನಾನು ಆಸ್ಪತ್ರೆ ಯಾಕೆ ಎನ್ನುವ ತರ ನಾಥ ಅವರ ಕಡೆ ನೋಡಿದೆ.. ಅವರು ಬನ್ನಿ ಅಂತ ಅಷ್ಟೇ ಹೇಳಿದರು...

          ನನಗೆ.. " ಅಮಯ್ ಓದಿದ್ದು.. ಡಾಕ್ಟರ್..! ಅವ ಯಾವಾಗ ಡಾಕ್ಟರ್ ಆದ...? ಈ ಡಾಕ್ಟರ್ ಗಳಿಗೆ ಯಾವಾಗಿನಿಂದ ಮ್ಯಾನೇಜರ್ ಶುರು ಆದರೂ.. ಅಂತ, ಯಾವ ಯೋಚನೆಗಳಿಗೂ ಸಂಭಂದ ಇಲ್ಲದ ಹಾಗೆ ಯೋಚಿಸುತ್ತಿದ್ದೆ...

           ಅಷ್ಟರಲ್ಲಿ ನಾಥ್ , ಆಸ್ಪತ್ರೆ ಯೊಳಗೆ.. ಯಾವುದೋ ಕ್ಯಾಬಿನ್ ಮುಂದೆ ತಂದು ನಿಲ್ಲಿಸಿದರು. ಇಲ್ಲೇ ಇರಿ.. ನಾನು ಒಳ ಹೋಗಿ ನೋಡಿಕೊಂಡು ಬರುತ್ತೇನೆ ಅಂದರು. ನಾನು ಸರಿ ಅಂತ ಹೇಳಿ ನಿಂತೆ...

         ಒಂದೈದು ನಿಮಿಷ ನಾಥ್ ಬರಲೇ ಇಲ್ಲ... ಕಾದು ಅಲ್ಲೇ ಕುರ್ಚಿಯ ಮೇಲೆ ಕುಳಿತೆ...

         ಐದು ನಿಮಿಷ ಬಿಟ್ಟು.. ನಾಥ್ ಹೊರಬಂದರು.. ಅವರ ಹಿಂದೆ ಬಿಳಿ ಕೋಟ್, ಕೈಯಲ್ಲೊಂದು ಸೆಥೆಸ್ಕೊಪ್.., ಹಿಡಿದುಕೊಂಡು ಒಬ್ಬರು ನಡೆದು ಬಂದರು.. ಕುಳಿತಿದ್ದೆ ಅಂತ.. ಅವರ ಮುಖ ಕಾಣಲಿಲ್ಲ... ಇವನೇ ಅಮಯ್ ಅಂತ.. ಎದ್ದು ನಿಂತೆ ನಗುತ್ತಾ...

        ಆದರೆ... ಅಮಯ್ ಅಲ್ಲಿರಲೇ ಇಲ್ಲ... ಆ ವೈದ್ಯರು.. ನನ್ನ ನೋಡಿ, " ಬನ್ನಿ ಅಮಯ್ ಹತ್ರಕ್ಕೆ ಹೋಗೋಣ " ಅಂದಾಗ.. ಕೈ ಕಾಲು ತಣ್ಣಗಾಗಿ ನಡುಗುತ್ತಿದ್ದವು.. ಏನಾಯಿತು ಅಮಯ್ ಗೆ ಅಂತ...

          ಆಗ ನೆನಪಿಗೆ ಬಂದಿದ್ದು.. ಅಮಯ್ ಫೋನ್ ನಲ್ಲಿ ಮಾತನಾಡುವಾಗ , ತಾನು ತಂದೆಯ ವ್ಯವಹಾರ ಮುಂದುವರೆಸಲು ಇಂಜಿನಿಯರಿಂಗ್ ಓದುತ್ತಾ ಇದಿನಿ ಅಂತ ಹೇಳಿದ್ದು ...

          ಅರಿಯದೆ ಕಣ್ಣೀರು ಸುರಿದು ಬರುತ್ತಿತ್ತು... ಅವನಿಗೆ ಏನಾಗಿದೆ ಅಂತ ಗೊತ್ತಾಗದೆ... ಇವರಿಬ್ಬರು ಏನೊಂದು ಹೇಳಲು ತಯಾರಿಲ್ಲ...

   ಡಾಕ್ಟರ್ ಕ್ಯಾಬಿನ್ ನಿಂದ , ಅಮಯ್ ಇರುವ icu ವರೆಗೂ ಹೋಗಲು ಸಾವಿರಾರು ಯೋಚನೆಗಳು ಬಂದು ಹೋದವು...

     Icu ಮುಂದೆ , ಅಮಯ್ ತಂದೆ ಎಲ್ಲವನ್ನು ಕಳೆದುಕೊಂಡಂತೆ ನಿಂತಿದ್ದರು.. ಅವರ ಮುಖ ನೋಡುತ್ತಲೇ , ನನಗೆ ಮತ್ತಷ್ಟು ಗಾಬರಿಯಾಗಿ.. ಅಲ್ಲೇ ನಿಂತು ಬಿಟ್ಟೆ.. ಕಾಲು ಕೀಳದಾದೆ..

     ಅವರೇ ನನ್ನ ನೋಡಿ.., ಹೋಗಮ್ಮ.. ಅಮಯ್ ನಿನಗಾಗೆ , ತನ್ನ ಜೀವ ಕೈಲಿ ಹಿಡಿದುಕೊಂಡು ಕಾದು ಕುಳಿತಿದ್ದಾನೆ, ಎಂದಾಗ.. ನನ್ನ ಹೃದಯವೇ ಬಾಯಿಗೆ ಬಂದಂತೆ ಆಯಿತು.

    ಕಷ್ಟ ಪಟ್ಟು ಹೆಜ್ಜೆ ಮುಂದಿಟ್ಟು.. ಡಾಕ್ಟ್ ಜೊತೆ ಒಳ ಹೋದೆ.. ಅಲ್ಲಿ ಅಮಯ್ ತಲೆ ಪೂರ್ತಿ ಬ್ಯಾಂಡೇಜ್ ಕಟ್ಟಿಕೊಂಡು ಮಲಗಿದ್ದ... ಕೃತಕ ಉಸಿರಾಟದ ಮೇಲೆ...

      ಅವನ ಆ ಪರಿಸ್ಥಿತಿ ನೋಡಿ ಕರುಳು ಕಿತ್ತಿದ ಹಾಗೆ ಆಯಿತು.. ಅವ ಯಾವತ್ತೂ ಹೇಳುತ್ತಿದ್ದ...

         " ಸಾವು ಬಂದರೆ.. ಒಂದೇ ಸಲಕ್ಕೆ ಬಂದು ಬಿಡಬೇಕು.. ಈ ನರಳಿ ನರಳಿ ಸಾಯೋದು ಇದೆ ನೋಡು.. ಅದು ದೊಡ್ಡ ಹಿಂಸೆ ಕಣೆ... ಹಿಂಸೆ ನಮಗೆ ಮಾತ್ರ ಅಲ್ಲ.. ನಮ್ಮನ್ನ ಇಷ್ಟ ಪಡೋ ಎಲ್ಲರಿಗೂ ದೊಡ್ಡ ಹಿಂಸೆ ಅದು.. ಯಾಕ್ ಗೊತ್ತಾ.. ನನ್ನ ಅಮ್ಮ ಹಾಗೆ.., ನರಳಾಡಿ ಹೋಗಿದ್ದು... ಅವಳಿಗೆ ಕ್ಯಾನ್ಸರ್ ಆಗಿತ್ತು.. ಕ್ಯಾನ್ಸರ್ ಗೊತ್ತಾಗುವ ಮೊದಲೇ.. ಅದು ಮೂರನೇ ಸ್ಟೇಜ್ ಬಂದು ನಿಂತಿತ್ತು...

              ಡಾಕ್ಟರ್ ಹೇಳಿದರು.. ಬದುಕುವುದಿಲ್ಲ ಇನ್ನೂ ಇವರು ಅಂತ. ಹೇಳಿದ ಮರುಗಳಿಗೆಯಲ್ಲೇ,  ಇದೆ ಆಸ್ಪತ್ರೆಯಲ್ಲಿ ಅಮ್ಮ ಪ್ರಾಣ ಬಿಟ್ಟಳು. ಅವಳ ನರಳಾಟ ನೋಡಿದ್ದೀನಿ ಕಣೆ ... ಅದಕ್ಕೆ.. ಅನಿಸೋದು.. ಸಾವು ಬಂದರೆ ಒಂದೇ ಸಲಕ್ಕೆ ಬಂದು ಕರೆದುಕೊಂಡು ಹೋಗಬೇಕು ಅಂತ. "

         ಅಮಯ್ ಕಣ್ಣು ಮುಚ್ಚಿ ಮಲಗಿದ್ದ.. , ಅವನ ಸ್ಥಿತಿ ನೋಡಿ.. ನಮ್ಮವರ ಹಿಂಸೆ ಏನೆಂದು ತಿಳಿಯಿತು.. ಅವತ್ತು ನನಗೆ. ನನ್ನ ಇಡೀ ಸಂಸಾರ ಕಳೆದುಕೊಂಡಿದ್ದೆ... ಒಂದೇ ಸಲಕ್ಕೆ, ಆದರೆ ಹೀಗೆ ಹಿಂಸೆ ನೋಡಿರಲಿಲ್ಲ.

          ಯಾವ ಮಾತು ಇಲ್ಲದೆ, ಅವನನ್ನೇ ನೋಡುತ್ತಾ ನಿಂತಿದ್ದ ನಾನು.., ಡಾಕ್ಟರ್ ಅಮಯ್ ನನ್ನ ಎಚ್ಚರಿಸಿದರು... ನೋಡು ನಿನ್ನ ಗೆಳತಿ ಅಂತ.

                   ನಿಧಾನಕ್ಕೆ ಕಣ್ಣು ಬಿಟ್ಟಿದ್ದ ಅವ ಇತ್ತಕಡೆ ಕಣ್ಣು ಹೊರಳಿಸಿ ನೋಡಿದ... ಅವನ ನೋಟ ದಲ್ಲಿ ಅದೆಷ್ಟು ಪ್ರಶ್ನೆಗಳಿದ್ದವು... ನಾನು ನಿಜಕ್ಕೂ ನಿನ್ನ ಸ್ನೇಹಿತ ಅಂತ ಭವಿಸಿದ್ದೆಯಾ ಯಾವತ್ತಾದರೂ ಅಂತ..ಕೇಳಿದ ಹಾಗೆ ಆಯಿತು..

             ಕೃತಕ ಉಸಿರಾಟ ತಗೆದು ( ನಾನು.. ಅದು ತಗೆಯಬೇಡ ಅಂತ ಹೇಳಿದ್ದು ಕೇಳದೆ...) ನಿಧಾನವಾಗಿ ಮಾತನಾಡಲು ಶುರುಮಾಡಿದ.

           ವೆಂಟಿಲೇಟರ್ ತಗೆದ ಮೇಲೆ ಉಸಿರಾಡಲು ಕಷ್ಟ ವಾಯಿತು.. ಡಾಕ್ಟರ್ ಮತ್ತೆ ಹಾಕಿದರು.. ಮತನಾಡಬೇಡಿ ಅಂತ ಹೇಳಿದರು..

   ನನಗೆ ಅವನ ಪರಿಸ್ಥಿತಿ ನೋಡಿ ಏನಾಗುತ್ತಿದೆ ಅಂತ ಹೇಳಲು ಆಗ್ತಾ ಇರಲಿಲ್ಲ...

        ಕಣ್ಣೀರು ವರೆಸಿಕೊಂಡು.. ಮಾತು ಅಡಿದೆ. " ನಿಜಕ್ಕೂ ನನ್ನ ಕ್ಷಮಿಸಬೇಡ ಕಣೋ .., ನಾನು ಮದುವೆ ಆದ ಆರು ವರ್ಷದ ಮೇಲೆ.. ಇಡೀ ಕುಟುಂಬ ಕಳೆದುಕೊಂಡೇ ಕಣೋ , ಒಂದು ಅಪಘಾತದಲ್ಲಿ.. ನನ್ನ ಇಬ್ಬರು ಮಕ್ಕಳು.. ಗಂಡ, ಅತ್ತೆ ಮಾವ ಎಲ್ಲರನ್ನು ಕಳೆದುಕೊಂಡೇ...

   ಮರಳಿ ಅಪ್ಪ ಅಮ್ಮನಲ್ಲಿಗೆ ಹೋಗಲು ಮನಸು ಬಾರಲಿಲ್ಲ.. ಅದಕ್ಕೆ ಆಶ್ರಮ ಸೇರಿಕೊಂಡೆ. ಸೇರಿ ಎರಡು ವರ್ಷ ವಾದರು ಅದು ನಿನ್ನದೇ ಅಂತ ಗೊತ್ತಾಗಿರಲಿಲ್ಲ ನನಗೆ.. ಇವತ್ತೇ ನೀ ಕೊಟ್ಟ ಫೈಲ್ ನೋಡಿ ಗೊತ್ತಾಗಿದ್ದು...

         ನೋಡು ಅಮಯ್.., ಈ ಆಶ್ರಮ ಎಲ್ಲ ಏನು ಬೇಡ ನನಗೆ..., ಅದೆಲ್ಲ ನಿನ್ನ ಹತ್ರಕ್ಕೆ ಇರ್ಲಿ.. ನಾನು ಅದನ್ನ ನೋಡಿಕೊಳ್ಳತಿನಿ.. ಆದರೆ ನನ್ನ ಜೊತೆ ಯಾವತ್ತೂ ನೀ ಇರಬೇಕು ಕಣೋ.. ಬೇಗ ಹುಷಾರಾಗಿ ಎದ್ದು ಬಾರೋ ಅಂದಾಗ...

         ಡಾಕ್ಟರ್..., " ಇಲ್ಲಮ್ಮ... , ಅವನಿಗೆ ಯಾವ ಕಾಯಿಲೆ ಇಲ್ಲ.. ಬೆಳಿಗ್ಗೆ ಅವನ ಆಶ್ರಮಕ್ಕೆ ಹೊರಡುವಾಗ ದಾರಿ ಮಧ್ಯೆ ಅಪಘಾತವಾಗಿ , ಈಗ ಅಮಯ್ ಪ್ರಾಣ ಹೋಗುವ ಸ್ಥಿತಿ ಬಂದಿದ್ದೆ... "

         ಅವರ ಮಾತು ಕೇಳಿ.. ಕಾಲ ಕೆಳಗಿನ ಭೂಮಿ ಬಾಯಿ ಬಿಟ್ಟಂತೆ ಆಯಿತು.. " ಅಯ್ಯೋ..! ನನ್ನ ನೋಡಲು ಬರಬೇಕಾದರೆ ಈ ಸ್ಥಿತಿ ಆಗಬೇಕಾ ಇವನಿಗೆ... ಯಾಕಾದರೂ ಬಂದಿಯೋ ಅಮಯ್ ಅಂತ ಗೋಳು ಇಟ್ಟೆ...

        ಮಧ್ಯೆ.. ಡಾಕ್ಟರ್, ನೋಡಿ ಹೀಗೆ ಅತ್ತು ಪೆಷಂಟ್ ನಾ ತೊಂದ್ರೆ ಮಾಡಬೇಡಿ.. ಅಂದಾಗ ಎಚ್ಚೆತ್ತು ಸಾವರಿಸಿಕೊಂಡು ಸುಮ್ಮನಾದೆ..

      ಮತ್ತೆ ಅಮಯ್ ಕಷ್ಟ ಪಟ್ಟು ವೆಂಟಿಲೇಟರ್ ಕಿತ್ತುತ್ತಿದ್ದ... ಬೇಡ.. ತೆಗೆಯಬೇಡ ಅಂತ ಹೇಳಿದರು ಕೇಳಲಿಲ್ಲ... ಅವನಿಗೆ ನನ್ನ ಜೊತೆ ಮಾತನಾಡುವುದಿತ್ತು... ಪರವಾಗಿಲ್ಲ ಅಮಯ್, ಹಾಗೆ ಮಾತನಾಡು ಅರ್ಥ ಆಗುತ್ತೆ ನನಗೆ ಅಂತ ಹೇಳಿದಾಗ... ನಕ್ಕು ವೆಂಟಿಲೇಟರ್ ಪಕ್ಕಕ್ಕೆ ಇಟ್ಟ.

            ಕಷ್ಟ ಪಟ್ಟು... ಒಂದೊಂದೇ ಪದ ಹೇಳುತ್ತಿದ್ದ... ಅಲ್ಲ ಸೋನು..! (ಅವ ನನ್ನ ಹಾಗೆ ಕರೆಯುತ್ತಿದ್ದ... ) ಎರೆಡು ವರ್ಷದಿಂದ ಒಬ್ಬಳೇ , ಯಾರು ಇಲ್ಲದೆ ನರಕ ಅನುಭವಿಸಿದೆ.. ಅಪ್ಪ ಅಮ್ಮ ಬೇಡ ವಾಗಿದ್ರೆ ಸರಿ , ನಾನು ಕೂಡ ಬೇಡವಾಗಿ ಹೊದ್ನ... ನಿನ್ನ ಜೊತೆ ಜಗಳ ಮಾಡೋಕೆ ಅಂತ ನೆ ಬರ್ತಾ ಇದೆ ಕಣೆ.. ಅಷ್ಟರಲ್ಲಿ ಹೀಗೆ ಆಯಿತು..

        ನಾನು ಅಮ್ಮನ ಹತ್ರ ಕ್ಕೆ ಹೋಗ್ತಾ ಇದಿನಿ ಅಂತ ಅನಿಸ್ತಾ ಇದೆ ಸೋನು... ಜೀವನ ಪೂರ್ತಿ ಈ ಸ್ನೇಹಿತ ನಿನ್ನ ಜೊತೆ ಇರ್ತಾನೆ ಅಂತ ಹೇಳೋಣ ಅಂತ ಬರ್ತಾ ಇದ್ದೆ ಕಣೆ.., ಆದರೆ ನೋಡು.. ನನ್ನ ಜೀವನದ ದಾರಿ ಮುಗಿಸಿಕೊಂಡು ನಾನು ಹೋಗ್ತಾ ಇದಿನಿ.. ಮತ್ತೆ ನಿನ್ನ ಒಂಟಿ ಮಾಡಿ.. ಕ್ಷಮಿಸಿ ಬಿಡು ಸೋನು... ಅಂತ ಹೇಳಿ.. ಕೈ ಹಿಡಿದು ಕೊಳ್ಳುವಷ್ಟರಲ್ಲಿ , ಮೇಲೆ ಎತ್ತಿದ ಅವನ ಕೈ ತನಾಗೆ ಕೆಳಗೆ ಬಿತ್ತು...

        ಕೆಳಗೆ ಬಿದ್ದ ಅವನ ಕೈ ಮತ್ತೆ ಮೇಲೆ ಏಳಲೇ ಇಲ್ಲ... ನಾನು ಅವನ ಕೈ ಹಿಡಿದು ಎಬ್ಬಿಸುತ್ತಾ ಇದ್ದೆ.. ಡಾಕ್ಟರ್ ಬಂದು.. ಇನ್ನು ಪ್ರಯೋಜನ ಇಲ್ಲ ಅಂದಾಗ.. ನಾನು ಅವನ ಎದೆ ಮೇಲೆ ಒರಗಿದೆ... ಬಹುಶಃ.. ನಾನು ಮೇಲೆ ಏಳಲೇ ಇಲ್ಲ ಅನಿಸುತ್ತೆ... ಯಾವುದೋ ಬೆಳಕು ಆ ದೇಹದಿಂದ ಮೇಲೆ ಎದ್ದಿದ್ದು ಮಾತ್ರ ನೆನಪು...

     ನನ್ನ ಗೆಳೆಯನ ಜೊತೆ.. ಹೊರಟು ಹೋದೆ ನಾನು... ಅವನ ಆತ್ಮದ ಜೊತೆಯಾಗಲು. ಈ ಬದುಕು.. ಬಂದಹಾಗೆ ಸ್ವೀಕರಿಸಿದ್ದೆ... ಯಾವುದಕ್ಕೂ ಪ್ರಶ್ನೆ ಮಾಡಲೇ ಇಲ್ಲ... ಎಲ್ಲವನ್ನು ಕಳೆದುಕೊಂಡಾಗಲೂ... ಆದರೆ.. ನನ್ನ ಗೆಳೆಯನ ಪ್ರಾಣ ಹೋಗಲು ನಾನೇ ಕಾರಣಳಾದೆ ಎಂಬ ಸತ್ಯ , ಅರಗಿಸಿಕೊಳ್ಳಲು ಆಗಲಿಲ್ಲ...

    

ಮುಕ್ತಾಯ.

              

      


Rate this content
Log in

Similar kannada story from Abstract