ಪಯಣ
ಪಯಣ
ಹೇಳದೆ ನಿಂತಿತಾ
ಈ... ಬಾಳಿನ ಪಯಣ
ಹೋದರೂ ತೀರದು
ಈ ಮಣ್ಣಿನಾ ಋಣ
ಕರಿಮೋಡದ ಕರಿಚಾಯೆಯಲಿ
ಕಾಣದಾಯಿತೆ ಚಿತ್ರ
ಇನ್ನೊಂದೂ ಬರಲಾಗದು
ಎನ್ನುವುದೇ ವಿಚಿತ್ರ
ಕಲ್ಲುಕೂಡ ಕರಗುವಂತೆ
ಅತ್ತರೇನು ಪ್ರಯೋಜನ
ಅದಿನ್ನು ಜೀವವಿರುವ ಜೀವನ
ಕಾಣದ ಲೋಕದೆಡೆಗೆ
ಹೇಳದೆ ಹೊರಟುಹೋಯಿತು
ಬೊಬ್ಬಿಟ್ಟರೂ ಬಾರದು
ಕೈಯ ಬೆರಳಿಗೂ
ಕಟ್ಟಿರುವ ಕಾಲ ಹೆಬ್ಬೆರಳಿಗೂ
ವ್ಯತ್ಯಾಸ ಶೂನ್ಯ
ಆ ಮನಸಿನ್ನು ನೆನಪಿನಲಿ ಗಮ್ಯ
ಇಂದೋ ನಾಳೆಯೋ
ಒಲ್ಲದ ಮನಸಾದರೂ
ಸಲ್ಲದ ಹೆಜ್ಜೆಯ
ಕಾಣದೂರಿಗೆ ಇಡಲೇ ಬೇಕು
ಬಡಬಡಿಸುವ ಮನವೂ
ಮಾತ ಆಡದೇ ಇರುವ ಮನವೂ
ಯಾವುದಾದರೇನಂತೆ
ಎಚ್ಚರವಾಗದ ನಿದಿರೆಗೆ ಜಾರಲೇ ಬೇಕು
ಮೂರು ದಿನದ ಬದುಕು
ನಗುತ ನಗಿಸುತ ಕಳೆದುಬಿಡು ಸಾಕು
ಹೇಳದೇ ನಿಂತುಬಿಡುವುದು
ಬದುಕ ಪಯಣ...!
