STORYMIRROR

Ramamurthy Somanahalli

Romance Classics Inspirational

2  

Ramamurthy Somanahalli

Romance Classics Inspirational

ಕಾವ್ಯ ಕನ್ನಿಕೆ

ಕಾವ್ಯ ಕನ್ನಿಕೆ

1 min
135

ಬಳುಕುವ ಲತೆಯಂತೆ

ನಸು ನಗುವ ಹೂವಂತೆ

ಬಳಿ ಸಾರಿ ನಿಂದೊಡನೆ

ನಿನ್ನ ರೂಪ ರಾಶಿಯ

ಸೂಸುವ ಕಣ್ಣಂಚಿನಲಿ

ಹೊಂಬೆಳಕು ಮೂಡಿ

ಮನ ಸೂರೆಗೊಂಡನುಕ್ಷಣ

ಮೂಡುವುದು ರಸ ಕಾವ್ಯ 


ಬಾನ ಸಿಂಗರಿಸುವ 

ಬೆಳದಿಂಗಳಂತೆ

ಭೂರಮೆಯ ಸಿಂಗರಿಸುವ

ಹಸಿರು ಕಾನನದಂತೆ

ನಗೆಸೂಸಿ ನಿಂತ ಅರಳಿದ 

ಹೂವಿನಂತೆ

ಓಡುವ ನದಿ ನಲಿದು

ಕಡಲ ಸೇರುವಂದದಿ

ಮನಕದ್ದು ನನ್ನಲಿ ನಿಂತೆ 

ನೀ ಎನ್ನ ಕಾವ್ಯ ಕನ್ನಿಕೆ,

ಬರೆದೆ ನೀ ಎನ್ನ

ಬಾಳ ಹೊಂಗಿರಣ ಕವಿತೆ



Rate this content
Log in

Similar kannada poem from Romance