STORYMIRROR

ಹೃದಯ ಸ್ಪರ್ಶಿ

Romance

2  

ಹೃದಯ ಸ್ಪರ್ಶಿ

Romance

ಬಾನಂಚಲಿ

ಬಾನಂಚಲಿ

1 min
214

ಬೆಳ್ಳಿ ಬಾನಂಚಲಿ 

ಚೆಲ್ಲುವ ಹೂ ಮಳೆಯಲಿ 

ಅವಳ ಹೆಜ್ಜೆಯನು ಹುಡುಕಾಡಿದೆ...


ನಿಧಾನವಾಗಿ ಜಾರುವ ಸಂಜೆಯೇಕೋ.. 

ಹಳೆಯ ನೆನಪುಗಳ ಕೆದಕುತ್ತಿದೆ..

ಎಷ್ಟು ದೂರದ ದಾರಿ ನೆಮ್ಮದಿಯ ಬದುಕಿಗೆ.,

ಭಾವನೆಗಳಿಗೆ ಬೇಲಿ ಹಾಕಿ ಎಷ್ಟು ದಿನ ಬದುಕಲಿ..?


ನಗುಮುಖದ ಈ ಮನಸ್ಸು ನೋವನ್ನು ಬಚ್ಚಿಟ್ಟು..,

ಸಿಗಲಾರದ ಪ್ರೀತಿಯನ್ನು ಹುಡುಕುತ್ತಿದೆ..

ಕಣ್ಣು ಮುಚ್ಚಿ ಕುಳಿತಿರುವೆ,

ನೀ ಬರಬಹುದು ಎಂದೂ..

ಒಲವಿನೂರ ಅಂಗಳದಿ ಏಕಾಂಗಿಯಾಗಿ..

ಇದಕ್ಕೆಲ್ಲಾ ಸಾಕ್ಷ್ಯ ನುಡಿಯುತಿದೆ

ಬೆಳ್ಳಿ ಬಾನಂಚು ಮೂಖವಾಗಿ..



Rate this content
Log in

Similar kannada poem from Romance