ಆಷಾಢದಲ್ಲೊಂದು ದಿನ......
ಆಷಾಢದಲ್ಲೊಂದು ದಿನ......
ಆಷಾಢದಲ್ಲೊಂದು ದಿನ ಇದ್ದಕ್ಕಿದ್ದಂತೆ ನೀನು ಬಂದೆ
ಇಳಿ ಸಂಜೆ ಮಳೆಯಂತೆತುಂಬಿ ಹರಿವ ಹೊಳೆಬಳಿ ಸಾರಿ ಬಂದಂತೆ
ತೆವಳುತ್ತಾ ತೆವಳುತ್ತಾಬೇರು ,ಜೀವ ಜಲ ಹುಡುಕುತ್ತಾ....ತೊರೆ ದೂರವಿದ್ದರೂ
ತಂಪು ಹೊತ್ತುಬರುವ ತಂಗಾಳಿಯಂತೆ
ಮುಂಜಾನೆಯ ಎಳೆ ಬಿಸಿಲಿಗೆ ಮೊಗ್ಗರಳಿ ಲಾಸ್ಯದಲ್ಲಿ ಅರಳಿದಹೂಗಳ
ಪರಿಮಳದ ಭಾರಕ್ಕೆಬೀಸುವ ಗಾಳಿಯಲ್ಲಿಸುಗಂಧ ಪಲ್ಲವಿಸಿದಂತೆ
ಹಾಗೇ ತೆರೆದಿಟ್ಟಕಿಟಿಕಿ,ಬಾಗಿಲುಹೇಳಲಿಲ್ಲ, ಕೇಳಲಿಲ್ಲ
ಒಳಗೆ ಇಟ್ಟಾಗಿದೆ ಹೆಜ್ಜೆಇನ್ನೂ ಸ್ವಲ್ಪ ಹೊತ್ತುಇರಬಾರದೇ ಹೀಗೆ....?!

