Natesh MG

Drama Fantasy Thriller

4.0  

Natesh MG

Drama Fantasy Thriller

ಶಬ್ದವೇಧಿ

ಶಬ್ದವೇಧಿ

18 mins
118


1946 ನೇ ಇಸವಿ .

ಡಿಸೆಂಬರ್ 18 ನೇ ತಾರೀಕು

ಸ್ಥಳ .     ಹೈದರಾಬಾದ್ ಮಹಾ ಸಂಸ್ಥಾನ .


ತನ್ನ ಖಾಸಗಿ "ಕೊಠಡಿಯಲ್ಲಿ "ಚಿಂತೆಯಿಂದ ಕುಳಿತುಕೊಂಡಿದ್ದ ....ಅವತ್ತಿನ ಹೈದರಾಬಾದ್ ಮಹಾಸಂಸ್ಥಾನದ ನಿಜಾಮ, " ಓಸ್ಮನ್ ಆಲಿ ಖಾನ್ " ತನ್ನ ಇಬ್ಬರ ಹದಿನೈದು , ಹದಿನಾರು ವರ್ಷದ ಮಕ್ಕಳ ಜೊತೆ .

          

ಭಾರತಕ್ಕೆ "ಸ್ವಾತಂತ್ರ್ಯ "ಬರುವುದು ಖಚಿತವಾಗಿತ್ತು ಆಗಲೇ. ಅದೇ ಆತನ ನಿದ್ದೆಗೆಡೆಸಿದ್ದು. ಸ್ವಾತಂತ್ರ್ಯ ಬಂದ ಮೇಲೆ , ತಾನು ಯಾವುದೇ ಕಾರಣಕ್ಕೆ ಅಖಂಡ "ಭಾರತದ "ಜೊತೆ ಸೇರುವುದಿಲ್ಲ ಎಂದು ....ಆಗಲೇ ಸ್ಪಷ್ಟ ಪಡಿಸಿ ಬಿಟ್ಟಿದ್ದ ಆತ .

ಆದರೂ ಆತನ ಮನಸಿನಲ್ಲಿ ಖಚಿತವಾಗಿತ್ತು , ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೆ ...ತಾವು ಕೂಡ ಶರಣಾಗಲೇ ಬೇಕು ಎಂದು.

ಯುದ್ದ ನೆಡೆಯುವುದು ಶತಸಿದ್ಧ ಎಂಬುದು ತಿಳಿದಿತ್ತು ಆತನಿಗೆ . ಆದರೆ ಅಷ್ಟರ ಒಳಗೆ ತನ್ನಲ್ಲಿ ಇದ್ದ ಎಲ್ಲಾ "ನಿಧಿಯನ್ನು "ಭಾರತ ಸರಕಾರಕ್ಕೆ ಸಿಗದಂತೆ .... ರಾತ್ರೋ ರಾತ್ರಿ ಅದನ್ನು ಬಚ್ಚಿ ಇಡಬೇಕಿತ್ತು ಅವ . ಅದನ್ನೇ ತನ್ನ ಇಬ್ಬರ "ಮಕ್ಕಳ "ಬಳಿ ಚರ್ಚೆ ಮಾಡಿದ್ದ ಆತ . ಹಾಗೆಯೇ ಈಗಿರುವ ನಿಧಿಯನ್ನು ಬಳಸಿಕೊಂಡು , ಮುಂದೊಂದು ದಿನ ....ಇಡೀ ಭಾರತವನ್ನು ಮತ್ತೆ ಮುಸ್ಲಿಂ ಆಳ್ವಿಕೆಗೆ ತೆಗೆದುಕೊಳ್ಳುತ್ತೇವೆ ಎಂಬ "ಶಪಥವನ್ನು "ಕೂಡ ಮಾಡಿಸಿದ್ದ .

 ಎಪ್ಪತ್ತೈದು ವರ್ಷಗಳ ಹಿಂದೆಯೇ , ಆತನ ತಲೆಯಲ್ಲಿ "ಭಯಂಕರವಾದ "ಯೋಜನೆಯೊಂದು ರೂಪುಗೊಂಡಿತ್ತು .

ಅದರ ಪರಿಣಾಮವಾಗಿ , ಒಂದಷ್ಟು ಸಣ್ಣ ನಿಧಿಯೊಂದಿಗೆ ...ಒಬ್ಬ ಮಗನನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದ .  ಅಷ್ಟರಲ್ಲೇ ಸಂಸ್ಥಾನದಲ್ಲಿ ಇರುವ ಎಲ್ಲಾ ನಿಧಿಯನ್ನು , ಆವತ್ತಿನ ಕಾಲದಲ್ಲಿ "ಅರವತ್ತು "ಆನೆಗಳ ಮೇಲೆ ತಿರುಪತಿ ಬೆಟ್ಟದ ಕಡೆ ....ಅದನ್ನು ಜೋಪಾನ ಮಾಡಿದ್ದ . ಸ್ಥಳ ಮತ್ತು ಅದರ ರಹಸ್ಯ , ಕೇವಲ ಅವನೊಬ್ಬನಿಗೆ ಗೊತ್ತಿತ್ತು. ಕೇವಲ "ನಿಧಿ "ಹೊತ್ತುಕೊಂಡು ಹೋದ ಆನೆಗಳು ಮಾತ್ರ ವಾಪಸ್ ಆಗಿದ್ದವು.  ಅದರ ಸಂಪೂರ್ಣ ನಕ್ಷೆಯನ್ನು , ತನ್ನಿಬ್ಬರ ಮಕ್ಕಳ ಕೈಗೆ ಅರ್ಧ-ಅರ್ಧದಂತೆ ಕೊಟ್ಟು.. ಅದರ ಮಹತ್ವ ಮತ್ತು ಉದ್ದೇಶವನ್ನು ಸಾರಿ ಸಾರಿ ಹೇಳಿದ್ದ. ನಿಮ್ಮ ಮುಂದಿನ ಪೀಳಿಗೆಯವರಿಗೆ ಕೂಡ , ಇದನ್ನು ಸ್ಪಷ್ಟಪಡಿಸಿ ಕೊಂಡು ಹೋಗುವಂತೆ ಹೇಳಿ ....ಕಿರಿಮಗನನ್ನು "ಪಾಕಿಸ್ತಾನಕ್ಕೆ "ಕಳುಹಿಸಿದ್ದ . ಅಲ್ಲಿಯೂ ಆತನ "ರಾಜ ನೀತಿ "ಸ್ಪಷ್ಟವಾಗಿತ್ತು . ಮುಂದೊಂದು ದಿನ ಸಹೋದರರು "ಒಟ್ಟಾಗಿ "ಕೆಲಸ ಮಾಡಬೇಕೆಂದು , ನಿಧಿಯ ಸಲುವಾಗಿ .


ಇಡೀ ಭಾರತ , ಪಾಕಿಸ್ತಾನವನ್ನು ತಮ್ಮ ತಕ್ಕೆಗೆ ತೆಗೆದುಕೊಳ್ಳುವ ತನ್ನ "ಕನಸನ್ನು "ಸಾಕಾರ ಮಾಡಲೆಂದು.

1948ನೇ ಇಸವಿ. ಸೆಪ್ಟಂಬರ್ 13ನೇ ತಾರೀಕು. ಆವತ್ತು ಶುರುವಾಗಿತ್ತು ಭಯಂಕರ ಯುದ್ದ , ಭಾರತದ ಸೇನೆಯೊಂದಿಗೆ . ಆದರೆ ಕೇವಲ ಐದು ದಿನದಲ್ಲಿ , ನಿಜಾಮ ಸೋತು ಶರಣಾಗಿದ್ದ . ಆವತ್ತು ಸೇರಿತು ಹೈದರಾಬಾದ್ ಸಂಸ್ಥಾನ , ಆಂದ್ರಪ್ರದೇಶ ಎಂಬ ರಾಜ್ಯಕ್ಕೆ.

2019 ನೇ‌ ಇಸವಿ.

ಜನವರಿ 14 ನೇ ತಾರೀಕು.


ಹೈದರಾಬಾದ್ ಪಟ್ಟಣದ ಹೊರವಲಯದ ಸಣ್ಣ ಕೋಟೆಯದು .  ನಿಜಾಮರ ಕೊನೆಯ ಪ್ರಯತ್ನವಾಗಿ , ಹಿಂದೆಯೇ ಉಳಿಸಿಕೊಂಡು ಬಂದಿದ್ದ ಕೋಟೆ . ಹೊರಗಡೆಯಿಂದ ಸ್ವಲ್ಪ "ಶಿಥಿಲ "ಆಗಿದ್ದರೂ ಕೂಡ , ಒಳಗೆ ಮಾತ್ರ ಹಳೆಯ ಘತ ವೈಭವವನ್ನು ಸಾರಿ ಹೇಳುತ್ತಿತ್ತು ಅದು . ನಿಜಾಮರ ವಂಶದ , ಈಗಿನ ಕೊನೆಯ ಕುಡಿ ಆದ "ಆಜಂ ಆಲಿ ಖಾನ್ "...ಕೂರಲು ಆಗದೆ , ನಿಲ್ಲಲು ಆಗದೆ ಶತಪಥ ತಿರುಗುತ್ತಿದ್ದ ಒಬ್ಬನೇ . ಬರಲಿರುವ ಇಬ್ಬರನ್ನು ಕಾಯುತ್ತಾ .

 ಆತನ ಕಣ್ಣುಗಳು , ಆಗಲೇ ರಕ್ತ ಬಸಿದು ಹೋಗುವಷ್ಟು ಕೆಂಪು ಆಗಿತ್ತು . ದೊಡ್ಡದಾದ ಮೊಗಸಾಲೆಯಲ್ಲಿ , ತೂಗುಹಾಕಿದ್ದ ಒಂದು "ಫೋಟೋದ "ಕಡೆ ಪದೇ ಪದೇ ಆತನ ದೃಷ್ಟಿ ಹೋಗುತ್ತಿತ್ತು . ಅದರಲ್ಲಿ ಇದ್ದ ಮೂವರ ಪೈಕಿ , ಇಬ್ಬರು ಆತನಿಗೆ ತಿಳಿದವರೇ ಆಗಿದ್ದರು . ಒಂದು ಆತನ ತಾತ , ಮತ್ತೊಂದು ಆತನ ತಂದೆ "ನವಾಬ್ ಹುಲ್ ಶಕೀಲ್".

ಮತ್ತೊಬ್ಬ ಮನುಷ್ಯ ಆತನ "ಚಿಕ್ಕಪ್ಪ "ಎಂದು ತಿಳಿದಿತ್ತು.


ಮೊಹಮದ್ ಆಲಿ ಜಿನ್ನಾ ಅವರ ಕರೆಗೆ ಓಗೊಟ್ಟು , ಆ ಕಾಲದಲ್ಲಿ ಒಂದಷ್ಟು "ನಿಧಿಯನ್ನು " ಪಾಕಿಸ್ತಾನಕ್ಕೆ ಸಾಗಿಸಿ .ಆತ ಅಲ್ಲೇ ತಳ ಊರಿದ್ದು ತಿಳಿದಿತ್ತು .  ಈಗಲೂ ಕೂಡ ಆತನಿಗೆ , ತನ್ನ ಚಿಕ್ಕಪ್ಪನ ಮಗನ ಮಗನಾದ.... "ವಸೀಮ್ ಆಲಿಖಾನ್" ಜೊತೆ ಸಂಪರ್ಕವಿತ್ತು. ಅವರು ತರುವ ವಿಷಯವೇ , ಆತನ ಮುಂದಿನ ಜೀವನ ಮತ್ತು ....ನಡೆಯಲಿರುವ ಕಾರ್ಯಾಚರಣೆಯ "ಮುಹೂರ್ತ "ನಿರ್ಧಾರ ಮಾಡಲಿತ್ತು. ತನ್ನ ಬೃಹದಾಕಾರದ ಮೊಗಸಾಲೆಯಲ್ಲಿ , ಪದೇ ಪದೇ ಗೋಡೆಗೆ ನೇತುಹಾಕಿದ್ದ ಗಡಿಯಾರದ ಕಡೆ ನೋಡುತ್ತಿದ್ದ. "ಆಜಮ್ ಆಲಿ ಖಾನ್ ”ಈ ಹೆಸರು ಕೇಳದವರು ಬಹಳ ವಿರಳ . ಸ್ವಾತಂತ್ರ್ಯ ನಂತರ , ಹೈದರಾಬಾದ್ ನಿಜಾಮ್ ಸಂಸ್ಥಾನದ ಈಗಿರುವ ಏಕೈಕ ಕುಡಿ ಆತ.

          

ರಾಜಕಾರಣದಲ್ಲಿ , ದಾನ ಧರ್ಮದಲ್ಲಿ , ಮತ್ತು ಹಲವಾರು ವ್ಯವಹಾರದಲ್ಲಿ ಕೂಡ ...ಆತ ಇವತ್ತಿಗೂ ರಾಜನೆಂದೇ ಕರೆಸಿಕೊಳ್ಳುತ್ತಿದ್ದ . ಸ್ವಾತಂತ್ರ್ಯ ನಂತರವೂ , ಆತನ ಯಾವುದೇ ಹಾವಭಾವ ಅಥವಾ ರಾಜಮನೆತನದ "ರೀತಿ  ರಿವಾಜ್ "ಅನ್ನು ಬಿಟ್ಟಿರಲಿಲ್ಲ ಅವರು. ಹಾಗೆ ರಕ್ತದಲ್ಲಿ ಬಳುವಳಿ ಆಗಿ ಬಂದ , ಕ್ರೂರತ್ವ ಕೂಡ ಸ್ವಲ್ಪವೂ ಕಡಿಮೆಯಾಗಲು ಬಿಟ್ಟಿರಲಿಲ್ಲ ಆತ. ತಮ್ಮ ಇಡೀ ರಾಜ್ಯವನ್ನು ಕಸಿದುಕೊಂಡ "ವಲ್ಲಭಾಯಿ ಪಟೇಲ್ "ಮೇಲೆ ಅತಿ ಕೋಪ ಅವರಿಗೆ .

ಆದರೂ ಕೂಡ ...ಆಗ ಸಿಕ್ಕ ಸ್ವಲ್ಪ ಸಮಯದಲ್ಲೇ ,ತಮ್ಮ ಏಳು ತಲೆಮಾರಿಗೆ ಆಗುವಷ್ಟು ....ಆಸ್ತಿಯನ್ನು ಉಳಿಸಿಕೊಂಡಿದ್ದರು .  ಬೇರೆಬೇರೆ ರೀತಿಯಲ್ಲಿ.   ಈಗಲೂ ಸಹ "ದೊಡ್ಡದಾದ "ಕುದುರೆ ಲಾಯ . ಅದರಲ್ಲಿ ನೂರಾರು ಕುದುರೆಗಳನ್ನು ಸಾಕಿದ್ದ ನವಾಬ . ಹಾಗೆಯೇ ಆಗ ಇರುವ ಸೈನಿಕರ ಬದಲು , ಈಗ ಕೋಟೆ ಕಾಯಲು ಮತ್ತು ....ಆತನ ರಕ್ಷಣೆಗೆ ನೂರಾರು ಮಂದಿಯನ್ನು ಸಾಕಿಕೊಂಡಿದ್ದ . ತನ್ನದೇ ಆದಂತಹ "ರಕ್ಕಸ ಸೇನೆಯನ್ನು "ತಯಾರು ಮಾಡಿಕೊಂಡಿದ್ದ. ಕಾಯುತ್ತಾ ಚಡಪಡಿಸುತ್ತಾ ಇದ್ದ ಆತನಿಗೆ ಕೇಳಿಸಿದ್ದು , ಆತನ ಬಂಟನ ಧ್ವನಿ. "ಖಾವಂದರೇ ,ಅವರಿಬ್ಬರೂ ಬಂದಿದ್ದಾರೆ "ಎಂದು ಹೇಳಿ ಹಿಂದೆ ಸರಿದಿದ್ದ . "ಕಳುಹಿಸು ಬೇಗ "ಎಂದು ನುಡಿದು, ತನ್ನ ಸಿಂಹಾಸನ ದಂತೆ ಇರುವ ಕುರ್ಚಿಯಲ್ಲಿ ಆಸೀನನಾಗಿದ್ದ .ಪ್ರತಿಯೊಬ್ಬರು ಆತನಿಗೆ "ಖಾವಂದರೇ "ಎಂದೆ ಕರೆಯಬೇಕಿತ್ತು .

ಅದು ತಾನು , ಇವತ್ತಿಗೂ ರಾಜ ಎಂಬುದನ್ನು ತೋರಿಸಲು ಸಲುವಾಗಿ. ಬಂದ ಇಬ್ಬರೂ ಕೂಡ ಆತನ ಮುಖ್ಯ ಅನುಚರರು .ಈ "ಅವಳಿ ಜವಳಿ "ಸಹೋದರರ ಮೇಲೆ ಅಪಾರ ನಂಬಿಕೆ ಆತನಿಗೆ . ಒಬ್ಬ ಸಲೀಂ , ಮತ್ತೊಬ್ಬ ನಹೀಂ .

ಇಬ್ಬರೂ ಆತನಿಗೆ ರಿವಾಜು ಸಲ್ಲಿಸಿ ನಿಂತಿದ್ದರು . ಕುಳಿತುಕೊಳ್ಳಿ ಎಂದಷ್ಟೆ ನುಡಿದು , ತನ್ನ ಜೇಬಿನಲ್ಲಿದ್ದ ಸಿಗಾರ್ ಹಚ್ಚಿ ...ಬಂದವರತ್ತ ಮುಖ ಮಾಡಿದ . " ಹೋದ ವಿಷಯ ಏನಾಯ್ತು "ಎಂದು.  " ಖಾವಂದರೇ , ಒಟ್ಟು ಮೂರು ವಿಷಯ ಸ್ಪಷ್ಟವಾಗಿ ತಿಳಿದು ಬಂದಿದೆ " . ಎನ್ನುತ್ತಾ ತನ್ನ ಅಣ್ಣ ನಹೀಂ ಕಡೆ ನೋಡಿದ ಆತ .ಈ "ಅವಳಿ "ಜೋಡಿಗಳು ಹಾಗೆ ಇತ್ತು , ತಮ್ಮ ಸಲೀಂ ಮಾತುಗಾರನಾದರೇ , ಅವನ ಅಣ್ಣ ನಹೀಂ ಮಾತ್ರ ಮೌನಿ . ಆದರೆ ಪ್ರತಿ ಕೋನದಿಂದ , ವಿಷಯವನ್ನು ಖಚಿತಪಡಿಸಿ ಕೊಳ್ಳುತ್ತಿದ್ದ ಆತ . ತಮ್ಮ ದೊರೆಯ "ಅಸಹನೆ "ಗಮನಿಸಿ ಮಾತಿಗೆ ಇಳಿದಿದ್ದ ಸಲೀಂ . ಈ ಮಾತುಗಳೇ , ಮುಂದಿನ ಎಲ್ಲಾ "ಯುದ್ದಕಾಂಡಕ್ಕೆ " ಸಾಕ್ಷಿ ಆಗುತಿತ್ತು . "ಮೊದಲ ವಿಷಯ , ನಿಮ್ಮ ಚಿಕ್ಕಪ್ಪನ ಮಗ ವಾಸಿಮ್ ಕೂಡ ಉತ್ಸುಕನಾಗಿದ್ದೇನೆ ..."ನಿಧಿಯ "ವಿಷಯದಲ್ಲಿ . ಆದರೆ ಆತನಿಗೆ , "ಭಾರತಕ್ಕೆ "ಬರಲು ಇರುವ ಅಡೆತಡೆ ಅಂದರೆ ....ಭಾರತ ಗುಪ್ತಚರ ಇಲಾಖೆ . ಈಗಾಗಲೇ ಆತ ಅಲ್ಲಿನ ಸಣ್ಣ "ಉಗ್ರಗಾಮಿ" ಮುಖ್ಯಸ್ಥ . ತಾವು ಇದಕ್ಕೆ ಏನಾದರೂ ಉಪಾಯ ಕಂಡುಹಿಡಿದರೆ, ಆತ "ಇನ್ನರ್ಧ ನಕ್ಷೆಯ "ಜೊತೆ ಭಾರತಕ್ಕೆ ಬರಲು ಸಿದ್ಧ " ಎಂದಿದ್ದ ಸಲೀಂ .

            

ಬಹಳ ಸಂತೋಷ ಆಗಿತ್ತು , ನವಾಬನಿಗೆ . ತನ್ನ ತಮ್ಮ ಇಲ್ಲಿಗೆ ಬರಲು ಒಪ್ಪಿದಕ್ಕೆ ."ಹೂ , ಅದರ ಬಗ್ಗೆ ಮುಂದೆ ಯೋಚಿಸುವ ....ಮುಂದಿನ ವಿಷಯ ಹೇಳು "ಎನ್ನುತ್ತಾ , ಮತ್ತೊಂದು ಸಿಗಾರ್ ಹಚ್ಚಿದ್ದ. ಇನ್ನು "ಪೇಶ್ವೇ ಭಾಜಿರಾಯನ ಕುಟುಂಬದ ವಿಷಯ , ಮಾತ್ರ ಸಣ್ಣ ಗೋಜಲು ಉಂಟಾಗಿದೆ "...ಸಣ್ಣ ದ್ವನಿಯಲ್ಲಿ ನುಡಿದಿದ್ದ ಸಲೀಂ . ನವಾಬನ ಕೋಪದ ಪರಿಚಯ ಇತ್ತು ಆತನಿಗೆ . ಒಪ್ಪಿಸಿದ ಕೆಲಸ ಸಮರ್ಪಕವಾಗಿ ಮಾಡದೆ ಇದ್ದರೆ , ತಾನು ಸೇರುವುದು "ಖಬರಿಸ್ಥಾನಕ್ಕೆ "ಎನ್ನುವುದು ಕೂಡ ಗೊತ್ತಿತ್ತು. ಪೇಶ್ವೆ ಹೆಸರು ಬರುತ್ತಿದ್ದಂತೆ , ಒಮ್ಮೆಲೇ ಸಿಟ್ಟಾಗಿದ್ದ ನವಾಬ .

ಆತನ ತಂದೆ ಹೇಳಿದಂತೆ , ಅವರ ಸಾಕಷ್ಟು ನಿಧಿಯನ್ನು ಪೇಶ್ವೆ ಕುಟುಂಬ ಲೂಟಿ ಮಾಡಿಕೊಂಡು ಹೋಗಿತ್ತು .

         

ಸ್ವಾಂತಂತ್ರ್ಯ ಬರುವ "ನೂರ ಐವತ್ತು "ವರ್ಷಗಳ ಮುನ್ನವೇ. ಆದರೆ ಆಗ ಲೂಟಿ ಮಾಡಿದ ಮಾಲು ಮಾತ್ರ , ಆವತ್ತಿನ ಕಾಲದಲ್ಲೇ ನೂರಾರು ಅನೆಯ ಮೇಲೆ ...ಸತತವಾಗಿ ಒಂದು ತಿಂಗಳು ಸಾಗಿಸಲಾಗಿತ್ತು. ಇದನ್ನು ಕೂಡ ಆತನ ತಂದೆ ಸಾಯುವ ಮುನ್ನ , ತನ್ನ ಮಗನಿಗೆ " ಗುಟ್ಟಾಗಿ "ಹೇಳಿ ಹೋಗಿದ್ದ . ನಮ್ಮ ನಿಧಿ ಮುಂದೆ ಭಾರತ ಮತ್ತು ಪಾಕಿಸ್ತಾನವನ್ನು ,ನಿಮ್ಮ ಕೆಳಗೆ ತರಲು ಸಾದ್ಯ ಆಗದೇ ಇರಬಹುದು . ಆದರೆ ನಮ್ಮ ಹಾಗೆ , ಸ್ವಾತಂತ್ರ್ಯ ಬರುವ ಸಾಕಷ್ಟು ಮುಂಚೆಯೇ , ಪೇಶ್ವೆ ಕುಟುಂಬ ಕೂಡ ತನ್ನ ನಿಧಿಯನ್ನು .....ನೂರಾರು ಆನೆಗಳ ಮೇಲೆ ತೆಗೆದುಕೊಂಡು ಹೋಗಿ ಬಚ್ಚಿ ಇಟ್ಟಿದೆ. ಅದರ ಸುಳಿವು ಸಿಕ್ಕಿ , ಅದು ನಿನಗೆ ದೊರೆತರೆ ಮಾತ್ರ ....ನಿನ್ನಷ್ಟು ಶ್ರೀಮಂತ , ಜಗತ್ತಿನಲ್ಲಿ ಯಾರು ಕೂಡ ಇರಲಿಕ್ಕೆ ಇಲ್ಲವೆಂದು ನುಡಿದು ಸತ್ತಿದ್ದ . ಅದಕ್ಕೆ ಅಷ್ಟೊಂದು ಆಸಕ್ತಿ ನವಾಬನಿಗೆ. ಪೇಶ್ವೇ ಬಗ್ಗೆ . ಹಾಗೆ "ದ್ವೇಷ "ಕೂಡ.

               

"ಅವರ ಕುಟುಂಬ ಈಗ ಎಲ್ಲಿಯೂ ಮಹಾರಾಷ್ಟ್ರದಲ್ಲಿ ಇಲ್ಲ ದೊರೆ . ಈ ಇನ್ನೂರು ವರ್ಷದಲ್ಲಿ ಅವರ ಕುಟುಂಬದ ಕುಡಿ ಎಲ್ಲಿ ಹೋಯಿತು ಎಂಬುದು ಕೂಡ ಇವತ್ತಿಗೂ ಸೋಜಿಗ ". "ಇದು ಖಚಿತ ಮಾಹಿತಿ " ಎನ್ನುತ್ತಾ ಒಂದಷ್ಟು ದಾಖಲೆಯನ್ನು , ಮುಂದೆ ಇಟ್ಟಿದ್ದ ಸಲೀಂ. ಜೊತೆಗೆ "ಆದರೆ "......ಶಬ್ದ ಕೂಡ ಬಂದಿತ್ತು ಆತನ ಬಾಯಿಯಿಂದ .

ನವಾಬನ ಹುಬ್ಬು ಗಂಟಿಕ್ಕಿದ್ದು ಕಂಡು , ತಕ್ಷಣವೇ ಉಸಿರಿದ್ದ . "ಅವರ ಒಂದೇ ಒಂದು ಹದಿನೆಂಟು ವರ್ಷದ ಕುಡಿ , ಈಗ ಹಿಮಾಚಲ ಪ್ರದೇಶದ.... ಯಾವುದೋ ಆಶ್ರಮದಲ್ಲಿ ತರಬೇತಿ ಪಡೆಯುತ್ತಾ ಇದ್ದಾನಂತೆ ". "ಆದರೆ ಆತನಿಗೆ , ಅವರ ನಿಧಿಯ ಬಗ್ಗೆ ತಿಳಿದಿರುವ ಸಾಧ್ಯತೆ ಕಡಿಮೆ ಎಂದು ನನ್ನ ಭಾವನೆ ".  ಆಗ "ಗಹಗಹಿಸಿ "ಒಮ್ಮೆಲೇ ನಕ್ಕಿದ್ದ ನವಾಬ .

ಖುಷಿಯಿಂದ ತನ್ನ ಕೊರಳಲ್ಲಿ ಇದ್ದ "ಬಂಗಾರದ "ಒಂದು ಚೈನ್ ಅನ್ನು ಕಿತ್ತು , ಅವನತ್ತ ಎಸೆದಿದ್ದ ಬಹುಮಾನದಂತೆ.

       

ಸಲೀಂಗೆ ಆಶ್ಚರ್ಯ ಆಗಿತ್ತು , ಅಂತಹ ಪ್ರಮುಖ ಮಾಹಿತಿ ಇದರಲ್ಲಿ ಯಾವುದೆಂದು . ಆದರೂ ಬಿಸಾಕಿದ ಚೈನ್ ಅನ್ನು ಹಿಡಿದು , ಒಮ್ಮೆ ತನ್ನ ರಿವಾಜನ್ನು ಸಲ್ಲಿಸಿ ...ಮತ್ತೆ ಕುಳಿತಿದ್ದ ತನ್ನ ಜಾಗದಲ್ಲಿ .  ತನ್ನ ದೊರೆಯಿಂದ ಬರುವ ಮುಂದಿನ ಮಾತು ಕೇಳಲು. "ನಿಜಕ್ಕೂ ಒಳ್ಳೆಯ ಮಾಹಿತಿ ಸಲೀಂ , ಪೇಶ್ವೆಯ ಕುಡಿ ಕುರಿತು" ಎಂದು ಮತ್ತೊಮ್ಮೆ ನಕ್ಕಿದ್ದ .

ಆ ನಗುವಿನಲ್ಲಿ ಕ್ರೂರತೆ ಎದ್ದು ಕಾಣಿಸುತ್ತಿತ್ತು. ಹಿಮಾಚಲ ಪ್ರದೇಶದಲ್ಲಿ ಹಿಂದಿನಿಂದಲೂ ಅವರದೇ ಗುರುಕುಲ ಇದೆ . ಇವತ್ತಿಗೂ ಅಲ್ಲಿ ಕಲಿಸುವುದು "ಇನ್ನೂರು ವರ್ಷದ " ಹಿಂದಿನ ಶಸ್ತ್ರಾಭ್ಯಾಸವನ್ನು . ಕ್ಷಣ ಮಾತ್ರದಲ್ಲಿ ಹಾರುವ ಗುಂಡಿನ ಈ ಕಾಲದಲ್ಲಿ ಅವರ ಕುಡಿಗೆ , ಬಿಲ್ಲು ಬಾಣದ ತರಬೇತಿ .....ಆತನಿಗೆ "ನಗು" ಉಕ್ಕಿ ಬರುತ್ತಿತ್ತು . ಸನ್ನೆ ಮಾಡಿದ್ದ , ಇನ್ನು ಅವರಿಬ್ಬರೂ ಹೋಗಬಹುದು ಎಂದು . ಅವಳಿ ಜವಳಿ ಅಣ್ಣ ತಮ್ಮಂದಿರು , ಮತ್ತೊಮ್ಮೆ ನಮಸ್ಕರಿಸಿ ಹೊರಗೆ ಹೋಗಿದ್ದರು .  ತಮ್ಮ ಜೀವ ಉಳಿದ ತೃಪ್ತಿ ಇತ್ತು ಅವರಿಗೆ .ಆದರೆ ಆಶ್ಚರ್ಯ ಆಗಿದ್ದು , ಪೇಶ್ವೆಯವರ ಮಾಹಿತಿ ಅಪೂರ್ಣವಾಗಿದ್ದರೂ ....ತಮ್ಮ ದೊರೆ ಇಷ್ಟು ಸಂತಸ ಪಟ್ಟಿದ್ದು ಯಾಕೆ? ಎಂಬುದು , ಯಕ್ಷ ಪ್ರಶ್ನೆಯಾಗಿಯೇ ಉಳಿದಿತ್ತು .

       

ಇನ್ನೂರು ವರ್ಷದ ಹಿಂದೆಯೇ , ಇದ್ದಕಿದ್ದ ಹಾಗೆ ಕಣ್ಮರೆ ಆದ ...ಭಾರತವನ್ನು ಆಳಿದ ಏಕೈಕ ಬ್ರಾಹ್ಮಣ ದೊರೆ "ಪೇಶ್ವೆಯ "ಬಗ್ಗೆ ....ಸಣ್ಣ ಸುಳಿವು ಸಿಕ್ಕಿ ಹೋಗಿತ್ತು ನವಾಬನಿಗೆ.  ಹಿಂದೆ ಅವರ ಕಾಲದಲ್ಲಿ , ಉತ್ತರದ ಹಲವು ರಾಜ್ಯದಲ್ಲಿ ....ಗುರುಕುಲ ಸ್ಥಾಪಿಸಿದ್ದ ಮಾಹಿತಿ ಎಲ್ಲವೂ ತಿಳಿದಿತ್ತು ಅವನಿಗೆ .ಆದರೆ ಈಗಲೂ ಅಲ್ಲಿ , ಅವರ ವಂಶದ ಕುಡಿಯೊಂದು ತರಬೇತಿ ಪಡೆಯುತ್ತಾ ಇದೆ ಎಂಬುದೇ ...ಆತನ ಸಂತಸಕ್ಕೆ ಕಾರಣ ಆಗಿದ್ದು .  ಅವರು ಬಚ್ಚಿಟ್ಟ ನಿಧಿ , ಮತ್ತು ತಮ್ಮ ವಂಶದ ನಿಧಿ ಎಷ್ಟು ಇರಬಹುದೆಂದು ...ಆಲೋಚಿಸುತ್ತಾ ತನ್ನಷ್ಟಕ್ಕೆ ನಗುತ್ತಿದ್ದ ನವಾಬ.  ನವ ದೆಹಲಿ . ಸಿಬಿಐ ಮುಖ್ಯ ಕಛೇರಿ.  ಸಿಬಿಐ ಮುಖ್ಯಸ್ಥ "ಚಕ್ರವರ್ತಿ" ತಮ್ಮ ಮುಂದಿದ್ದ ಫೈಲ್ ಕಡೆ ಗಮನವಿಟ್ಟು ನೋಡುತಿದ್ದರು ,ಪದೆ ಪದೇ ಜಾರುತ್ತಿದ್ದ ತಮ್ಮ ಕನ್ನಡಕವನ್ನು ಸರಿ ಪಡಿಸಿ ಕೊಳ್ಳುತ್ತಾ . ಅವರ ಎದುರಿಗೆ ಕುಳಿತಿದ್ದ , ಹಿಮಾಂಶು . " ದಕ್ಷಿಣದಿಂದ ಪಾಕಿಸ್ತಾನಕ್ಕೆ ,ಕಳೆದ ಹತ್ತು ದಿನದಲ್ಲಿ ಅರವತ್ತು ಕರೆಗಳು ", ಎಂದು ಸಣ್ಣಗೆ ಗೊಣಗಿದರು ಚಕ್ರವರ್ತಿ .


"ಏನೋ ನಡೆಯುತ್ತಾ ಇದೆ ಹಿಮಾಂಶು ಇಲ್ಲಿ , ನಮ್ಮ ಅನುಮಾನ ನಿಜ ಆಗುತ್ತಾ ಇದೆ ಅಲ್ವೇ "ಎಂದು ತಲೆ ಎತ್ತದೆ ಹಿಮಾಂಶು ಕಡೆ ಪ್ರಶ್ನೆ ತೂರಿದ್ದರು. "ಹೌದು ಸರ್ , ನವಾಬ್ ನ ಇಬ್ಬರು ಸಹಚರರು ಕಳೆದ ಆರು ತಿಂಗಳಿನಿಂದ ...ಪಾಕಿಸ್ತಾನ , ನೇಪಾಳ ..ಹಾಗೆ ಹಿಮಾಚಲ ಪ್ರದೇಶಕ್ಕೆ ಹೋಗಿ ಬಂದಿದ್ದಾರೆ . ಜೊತೆಗೆ ಇಲ್ಲೊಂದು ಆಶ್ಚರ್ಯ ಇದೆ , ಅವರು ಎಲ್ಲಾ ಹಳೆಯ ಲೈಬ್ರರಿ ಮತ್ತು , ಹಲವಾರು ಇತಿಹಾಸಕಾರರನ್ನು ಭೇಟಿ ಮಾಡಿದ್ದಾರೆ .  ಪ್ರತಿ ವಿಷಯದಲ್ಲಿ ಫೈಲಿನಲ್ಲಿ ಇದೆ " ಎಂದು ಸಣ್ಣಗೆ ನುಡಿದಿದ್ದ , ಹಿಮಾಂಶು. ಅದಕ್ಕೆ "ಹಿಮಾಂಶು "ಅಂದರೆ ಚಕ್ರವರ್ತಿಗಳಿಗೆ ಇಷ್ಟ.

ನೇರವಾಗಿ ಐಪಿಎಸ್ ಮುಗಿಸಿ , ಸೀದಾ ಸಿಬಿಐ ಡಿಪಾರ್ಟ್ಮೆಂಟ್ ಒಳಗೆ ನೇರವಾಗಿ ಕಾಲಿಟ್ಟಿದ್ದ ಆತ .

               

ಪ್ರತಿ ವಿಷಯವನ್ನು , ಆತ ಆಲೋಚಿಸುವ ದಾಟಿಯೇ ಬೇರೆ ಇತ್ತು. ಯಾವುದೇ ಕೇಸ್ ವಹಿಸದೆ ಇದ್ದರೂ ಕೂಡ , ಆತನ ಕಣ್ಣಿಂದ ಒಂದೇ ಒಂದು "ಘಟನೆ "ತಪ್ಪಿಸಿಕೊಳ್ಳಲು ಬಿಡುತ್ತಾ ಇರಲಿಲ್ಲ .ಹಾಗೆ ಈ ಘಟನೆ ಕೂಡ . "ಈಗೇನು ಮಾಡಬೇಕೆಂದು ಇರುವೆ "ಎಂದಿದ್ದರು , ಚಕ್ರವರ್ತಿ ಅವನ ಕಣ್ಣಿನಲ್ಲಿ ಕಣ್ಣು ಇಟ್ಟು . "ತಮ್ಮ ಅನುಮತಿ ಇಲ್ಲದೇ , ನವಾಬ್ ನನ್ನು ಬೇಟಿ ಮಾಡಿದ ಇಬ್ಬರನ್ನು ....ನಮ್ಮ ಕಸ್ಟಡಿಗೆ ತೆಗೆದುಕೊಂಡು ಆಗಿದೆ ....ಕೇವಲ ಅವರ ಬಾಯಿ ಬಿಡಿಸುವ ಕೆಲಸ ಮಾತ್ರ ಉಳಿದಿದೆ " ಎಂದು ಹೇಳಿದ್ದು ಕೇಳಿ , ಚಕ್ರವರ್ತಿ ಒಮ್ಮೆಲೇ ಹೌಹಾರಿ ಹೋಗಿದ್ದರು .


"ನಾ ರಿಟೈರ್ ಆಗುವ ಮುಂಚೆಯೇ ಕೆಲಸ ಹೋಗುವ ಹಾಗೆ ಮಾಡುತ್ತಿ ನೀನು ", ಎಂದು ನಗುತ್ತಾ ನುಡಿದಿದ್ದರು .

ಅವರ ನಗುವೇ ಹೇಳಿತ್ತು , "ನೀ ಮುಂದೆ ತನಿಖೆ ಮಾಡುವುದಕ್ಕೆ ಅನುಮತಿ ಇದೆ "ಎಂದು. "ಆದರೆ ಪ್ರತಿ ವಿಷಯ ನನಗೆ ಗೊತ್ತಾಗಬೇಕು ನೋಡು " ಎಂದು ಎಚ್ಚರಿಸಿದ್ದರು ಅವರು. ಆರು ತಿಂಗಳ ಹಿಂದೆ , ಉಗ್ರಗಾಮಿಗಳಿಗೆ "ಮಾಹಿತಿಯನ್ನು "ಒದಗಿಸುತ್ತಿದ್ದ , ಮೂವರನ್ನು ಗುಂಡಿಕ್ಕಿ ಬಂದಿದ್ದು ನೆನಪಾಗಿ ನುಡಿದಿದ್ದರು ಅವರು.  ಪ್ರತಿಯಾಗಿ ಹಿಮಾಂಶು ತಿರುಗಿ ಮುಗುಳ್ನಕ್ಕು ಹೋಗಿದ್ದ , ಹಿಡಿದುಕೊಂಡು ಬಂದ ನವಾಬನ ಇಬ್ಬರ ಅನುಚರರ ಬಾಯಿ ಬಿಡಿಸಲು.


ಆಗಲೇ ಅರ್ಥವಾಗಿತ್ತು ಸಿಬಿಐ ಮುಖ್ಯಸ್ಥ ಚಕ್ರವರ್ತಿಗೆ , ಈ ಕೇಸ್ ಬೇರೆಯ "ಹಂತಕ್ಕೆ "ತಲುಪುತ್ತದೆ ಎಂದು.

ದೆಹಲಿ ಹೊರವಲಯದಲ್ಲಿದ್ದ , ಯಾವುದೋ ಪಾಳುಬಿದ್ದ ಕಟ್ಟಡದ ಒಳಗೆ ನಡೆದಿದ್ದ ಹಿಮಾಂಶು. ಹೊರಗೆ ನೋಡುವುದಕ್ಕೆ "ಪಾಳುಬಿದ್ದ "ಕಟ್ಟಡದಂತೆ ಕಾಣುತ್ತಿದ್ದರೂ , ಒಳಗೆ ಮಾತ್ರ ಅಂಡಮಾನ್ ಜೈಲಿನ ತರಹ ಇತ್ತು.

ಸಲೀಂ ಮತ್ತು ನಹೀಂ ಇಬ್ಬರನ್ನು , ಬೇರೆಬೇರೆ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಹಿಮಂಶು ಬಂದಿದ್ದು ನೋಡಿ , ಅಲ್ಲಿದ್ದ ಅಧಿಕಾರಿಗಳು...ಆತನ ಕೈಗೆ ಅವರನ್ನು , ಕೂಡಿಹಾಕಿದ "ಬೀಗದ ಕೀ " ಕೊಟ್ಟು ಹಿಂದೆ ಸರಿದಿದ್ದರು.


ಒಳಗೆ ಹೋದ ಅರ್ಧ ಗಂಟೆಯಲ್ಲೇ ಗೊತ್ತಾಗಿತ್ತು ಹಿಮಾಂಶುಗೆ , ಅವರಿಬ್ಬರೂ ಅವಳಿಗಳೆಂದು . ಅದರಲ್ಲೂ ತಕ್ಷಣಕ್ಕೆ ಅನುಭವಕ್ಕೆ ಬಂದಿತ್ತು , ಜಾಸ್ತಿ ಮಾತನಾಡದ "ನಹೀಂನ "ಬಾಯಿ ಬಿಡಿಸುವುದು ಕಷ್ಟವೆಂದು.  ಆಗ ಸೀದಾ ನಹೀಂನ ತಮ್ಮನ ಎಳೆದುಕೊಂಡು ಬಂದು , ಇಬ್ಬರನ್ನು ಒಂದೇ ಕೊಠಡಿಯಲ್ಲಿ ಕೂಡಿ ಹಾಕಿದ್ದ . ಅಕ್ಕ ಪಕ್ಕ ಅವರನ್ನು "ಕುರ್ಚಿಯಲ್ಲಿ "ಕೂರಿಸಿ ಬಿಗಿದು ಕಟ್ಟಿದ್ದರು , ಹಿಮಾಂಶು ಆದೇಶದಂತೆ . ಸಲೀಂ ಮಾತ್ರ , ಈ ಬೆಳವಣಿಗೆಯಿಂದ ಮೊದಲೇ ಹೆದರಿ ಹೋಗಿದ್ದ . ಹೈದರಾಬಾದ್ ನವಾಬನ ಬಳಿ ಬಹುಮಾನ ಪಡೆದು ಹೊರಗೆ ಬಂದವರನ್ನು , ಸೀದಾ ನಾಲ್ಕು ಮಂದಿ ಹೊತ್ತು ತಂದಿದ್ದರು ದೆಹಲಿಗೆ . ಅರ್ಥವೇ ಆಗಿರಲಿಲ್ಲ ಅವರಿಗೆ , ತಮ್ಮನ್ನು ಹೊತ್ತು ತಂದವರು ಯಾರು ಎಂದು. ಹಿಮಾಂಶು ಅವರೆದುರಿಗೆ ಕುಳಿತು , ತನ್ನ ಸೊಂಟದಲ್ಲಿದ್ದ "ರಿವಾಲ್ವರ್ "ತೆಗೆದು ಸ್ವಚ್ಛಗೊಳಿಸ ತೊಡಗಿದ . ಅದನ್ನು ಕಂಡು ಸಲೀಂ ಮಾತ್ರ ಬೆದರಿ ಹೋದ.   "ಹೇಳಿ , ಸಂಪೂರ್ಣ ವಿಷಯ ಬೇಕು ನನಗೆ " ಎಂದು ನುಡಿದು ....ಸಾಲಾಗಿ ಗುಂಡನ್ನು ತುಂಬ ತೊಡಗಿದ ."ಏನು ಹೇಳಬೇಡ" , ಎಂದು ಕಣ್ಣು ಸನ್ನೆ ಮಾಡಿದ್ದ ಅವನ ಅಣ್ಣ ನಹೀಂ.

ಅಷ್ಟರಲ್ಲೇ ಹಾರಿತ್ತು ಒಂದು ಗುಂಡು , ಹಿಮಾಂಶು ರಿವಾಲ್ವರ್ ಇಂದ ....ಸೀದಾ ನಹೀಂನ ತೊಡೆಯಲ್ಲಿ ನುಗ್ಗಿ ಗೋಡೆಗೆ ಹೊಕ್ಕಿ ನಿಂತಿತ್ತು ಅದು .  ಆಗ ಆತ ಮಾಡಿದ ನೋವಿನ ಚೀತ್ಕಾರ ಕೇಳಿ , ಪಾಳು ಬಂಗಲೆಯಲ್ಲಿ ಗೂಡು ಕಟ್ಟಿಕೊಂಡಿದ್ದ ಪಾರಿವಾಳಗಳು ....ದಿಕ್ಕು ತೋಚದೇ ಒಮ್ಮೆಲೇ ಹಾರತೊಡಗಿತ್ತು .

           

ತನ್ನ ಅಣ್ಣನ ಕಡೆ ನೋಡಿ , ಭಯದಿಂದ ಮುಖ ತಿರುಗಿಸಿ ಬಿಟ್ಟ ಸಲೀಂ . ಮತ್ತೊಂದು ಗುಂಡು ಹಾರಿತ್ತು ಆಗ , ಅವನ ಅಣ್ಣನ ಮತ್ತೊಂದು ತೊಡೆಗೆ .  ಆಗ ಒಟ್ಟಾಗಿ ಕೇಳಿಸಿದ್ದು , ನೋವಿನ ಆಕ್ರಂದನ ಮತ್ತು ಸಲೀಂನ ಅಳು . ಆಗ ಹೊರಬಂದಿತ್ತು ಸಂಪೂರ್ಣ ಮಾಹಿತಿ , ಅವನ ಬಾಯಿಯಿಂದ . ಅಳುತ್ತಲೇ ಹೇಳುತಿದ್ದ ಆತ . ಕೇಳುತ್ತಿದ್ದ ಹಿಮಾಂಶು ಕೂಡ , ಒಮ್ಮೆ ಬೆಚ್ಚಿ ಹೋದ . ಅವರು ಹೇಳುತಿದ್ದ ವಿಷಯ ಕೇಳಿ . "ಮುಂದೆ ಆಗಬಹುದಾದ ಅನಾಹುತ ನೆನೆದು" .

       

ತಕ್ಷಣವೇ ಎದ್ದು ಓಡಿದ್ದ , ಮುಖ್ಯ "ಕಚೇರಿ "ಕಡೆ. ಹೀಗೆ ಹೈದರಾಬಾದ್ ನವಾಬನಿಗೆ ಕೂಡ ಗೊತ್ತಾಗದ ರೀತಿಯಲ್ಲಿ , ಮತ್ತೊಂದು ರೀತಿಯಲ್ಲಿ ಹಿಮಾಂಶು ಎಂಬ ಯುವಕನಿಂದಾಗಿ .....ಆಕಸ್ಮಿಕ ರೀತಿಯಲ್ಲಿ ಸರ್ಕಾರದ ಸಂಘಟನೆ ಕೂಡ ರಂಗಕ್ಕೆ ಇಳಿದಿತ್ತು. "ಅನಧಿಕೃತವಾಗಿ". ನವಾಬ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದ , ತನ್ನ ತಮ್ಮನ ಕರೆಸಲು .

ಪ್ರತಿ ಹೆಜ್ಜೆಯನ್ನೂ ಕೂಡ ,ಜಾಗೃತವಾಗಿ ಇಡುತ್ತಿದ್ದ ಆತ . ಅವನನ್ನು ಸಮುದ್ರದ ಮೂಲಕ ಕರೆಸಿ ಕೊಳ್ಳಲು .

      

ಹಾಗೆಯೇ ತನ್ನ ಸೈನ್ಯಕ್ಕೆ , ಸಣ್ಣದೊಂದು ಯುದ್ಧಕ್ಕೆ ತಯಾರಾಗುವಂತೆ ಸೂಚಿಸಿದ್ದ. ಆದರೆ ಆತನ ಹೆಜ್ಜೆ ಗುರುತು ಪತ್ತೆ ಮಾಡಲು , ಪಣ ತೊಟ್ಟಂತೆ ನಿಂತಿದ್ದ ಹಿಮಾಂಶು. ಅದೇ ಸಮಯಕ್ಕೆ ಹಿಮಾಚಲ ಪ್ರದೇಶದ ತುತ್ತ ತುದಿಯಲ್ಲಿದ್ದ ಆಶ್ರಮವೊಂದರಲ್ಲಿ , ತಣ್ಣಗೆ ಹರಿಯುತ್ತಿದ್ದ "ಗಂಗೆಯ "ಕಡೆ ನೋಡುತ್ತಾ ಕುಳಿತಿದ್ದ ಯುವಕನೊಬ್ಬ .  ಆತನ ಪಕ್ಕದಲ್ಲಿ ವಯಸ್ಕರೊಬ್ಬರು  ಕುಳಿತಿದ್ದರು . "ಹೇಳಿ "ಎಂದು ನುಡಿದು , ಅವರತ್ತ ಪದ್ಮಾಸನ ಹಾಕಿ ಕುಳಿತಿದ್ದ ಅದೇ ಯುವಕ .... "ಶಂಕರ ಗಣಪತಿ ಭಾಜಿ ರಾವ್ ".  ಆತನ ಪ್ರಶಾಂತವಾದ ಕಣ್ಣುಗಳೇ ಒಂದು ಆಕರ್ಷಣೆ . ಆತನ ಮುಖ , ಆತನ ದೇಹ .....ಕಾಮನ ನಾಚಿಸುವಂತೆ ಇತ್ತು . ದೇಹದ ಪ್ರತಿ ಅಂಗಾಂಗ , ಕಬ್ಬಿಣದ ತರಹ ಕಾಣಿಸುತಿತ್ತು .....ಎದುರಿಗೆ ಕುಳಿತ ಅವನ ಗುರುವಿಗೆ . ಬ್ರಹ್ಮ ಪುರುಸೊತ್ತು ಮಾಡಿಕೊಂಡು ಕಡೆದ ವಿಗ್ರಹದಂತೆ ಕಾಣುತ್ತಾ ಇದ್ದ ಆತ. ಸತತವಾಗಿ ಹಿಮಾಲಯದ ಕೆಳಗೆ , ಹದಿಮೂರು ವರ್ಷ ಕಠಿಣ ತರಬೇತಿ ಪಡೆದಿದ್ದ ಆತ . ಕೊರೆಯುವ ಚಳಿ ಕೂಡ ಆತನನ್ನು , ಏನು ಮಾಡದೆ ಹೆದರಿ ಹೋಗಿತ್ತು . ಆದರೆ ಆತನ ಕಣ್ಣುಗಳು , ಮತ್ತು ಆತನ ಬಿಲ್ಲು ಹಿಡಿಯುವ "ಕೌಶಲ್ಯ "ಕಂಡು ಬೆರಗಾಗಿ ಹೋಗಿದ್ದರು , ಅವನದೇ ಗುರು ಪರಶುರಾಮರು . ಈ ವಂಶದ ಪ್ರತಿ "ಕುಡಿ "ಕೂಡ ಹಾಗೆ ಅಲ್ಲವೇ, ಎಂದು ಕೊಂಡರು ಅವರು ಮನಸಿನಲ್ಲಿಯೇ. ಆದರೆ ಶಂಕರ ಮಾತ್ರ ತನ್ನೆದರು ಕುಳಿತ , ತನ್ನ ಗುರು "ಪರುಶುರಾಮರ " ಕುರಿತು ಆಲೋಚನೆ ಮಾಡುತಿದ್ದ .ಅದೆಷ್ಟು ವರ್ಷ ಆಗಿರಬಹುದು ಇವರಿಗೆ , ಯುವಕರನ್ನು ನಾಚಿಸುವಂತೆ ಇರುವ ಅವರ ದೇಹ ....ಅವರ ಯುದ್ದ ಕೌಶಲ್ಯ , ಎಲ್ಲವೂ ಆತನಿಗೆ ಇವತ್ತಿಗೂ ಸೋಜಿಗ. "ಮೊನ್ನೆ ನವಾಬನ ಕಡೆಯವರು ಶಿಮ್ಲಾಕ್ಕೆ ಬಂದು , ನಿನ್ನ ಬಗ್ಗೆ ವಿಚಾರಿಸಿ ಹೋಗಿದ್ದಾರೆ ಎಂಬುದು ಗೊತ್ತಾಗಿದೆ ಶಂಕರ . ಮತ್ತೊಂದು ಯುದ್ದ ಭೂಮಿಗೆ ಸಾಕ್ಷಿ ಆಗುತ್ತೆ ಈ ನೆಲ ಮತ್ತೊಮ್ಮೆ " , ಎಂದಿದ್ದರು ಅವರು . ಮುಂದೆ ಆಗಬಹುದಾದ ಎಲ್ಲವನ್ನೂ ಅರಿತವರಂತೆ .

           

"ನಾಳೆಯಿಂದ , ನಡೆಯಲಿರುವ ಯುದ್ಧಕ್ಕೆ ತಯಾರಾಗಲಿ ಅಲ್ಲವೇ, ಗುರುವರ್ಯ "ಎಂದಿದ್ದ ಶಂಕರ. ಆತನ ಮಾತೇ ಹಾಗೆ , ಎದುರಿಸಿ ಬಿಡಬೇಕು ಎಲ್ಲಾ ಅನಾಹುತವನ್ನು ಎಂಬಂತೆ. " ಮುಂದೆ ಹೊರಗಡೆ ನಡೆಯಬಹುದಾದ , ತನ್ನ ಬಗ್ಗೆ ಆಕ್ರಮಣ ಇಲ್ಲೇ ನಡೆದು ಹೋಗಲಿ "ಎಂದು ತೀರ್ಮಾನಿಸಿದಂತೆ ಇತ್ತು ಅವ. ಆಗ ತಾನು ಯಾರ ಹಂಗೂ ಇಲ್ಲದೇ , ತನ್ನ ಪಾಡಿಗೆ ....ತಾನು ಭೂಗತವಾಗಿ ಎಲ್ಲರ ಜೊತೆ , ಸಾಮಾನ್ಯ ಮನುಷ್ಯನಂತೆ ಇರಬಹುದೆಂದು ಆತನ ಲೆಕ್ಕಚಾರ ಆಗಿತ್ತು.

ಪೂರ್ತಿ ಸಮಾಜದಲ್ಲೇ ಸೇರಿ ಹೋದ , ಇತಿಹಾಸಕಾರರ ಕಣ್ಣಿಗೂ ಕಾಣಿಸದ ....ಅವರ ವಂಶದ ಕೊನೆ ಕುಡಿಯ ಕಡೆ ನೋಡಿ , ಮೇಲೆ ಎದ್ದಿದ್ದರು ಗುರು ಪರಶುರಾಮರು.  ಅಲ್ಲಿನ ಪ್ರತಿ ಆಶ್ರಮ , ಹಾಗೂ ಆಶ್ರಮದ ಪಕ್ಕದಲ್ಲಿ ಇರುವ ಜಾಗವನ್ನು .....ಹಿಂದೆಯೇ ಪೇಶ್ವೆ ಬಾಜಿರಾಯ ತಾನೇ ಸ್ವಂತ ನಿಂತು ಸ್ಥಾಪನೆ ಮಾಡಿದ್ದ.


ಅಲ್ಲಿರುವ "ಗುಡ್ಡಗಾಡು ಜನಾಂಗದ "ಜೊತೆ ಆತನ ಒಡನಾಟ ಜಾಸ್ತಿ ಇತ್ತು. ಆಶ್ರಮಕ್ಕೆ ಸಾವಿರ ವರ್ಷ ಕಳೆದರೂ , ತೊಂದರೆಯಾಗದಂತೆ ಸಾಕಷ್ಟು ಭೂಮಿ , ಕಣಜವನ್ನು ಕಟ್ಟಿಸಿಕೊಟ್ಟಿದ್ದ ಆತ. ಅಷ್ಟು ಮಾಡಿ ಒಂದೇ ಒಂದು ಪ್ರಾರ್ಥನೆಯನ್ನು ಮಾಡಿಕೊಂಡಿದ್ದ ಆತ . ಗುಡ್ಡಗಾಡು ಜನಾಂಗದ ನಾಯಕನಲ್ಲಿ , ಮತ್ತು ಆಶ್ರಮದ ಗುರುಗಳಲ್ಲಿ. ಅದೆಷ್ಟೇ ವರ್ಷ ಮುಂದೆ ಕಳೆದರು ಕೂಡ , ತಮ್ಮ ವಂಶದ ಕುಡಿಯನ್ನು ಹದಿನೆಂಟು ವರ್ಷದ ತನಕ ಕಾಪಾಡಬೇಕೆಂದು .......ಮತ್ತು ಆತನಿಗೆ ಪುರಾತನ ವಿದ್ಯೆ ,ಸಂಸ್ಕೃತಿ , ವೇದ ಎಲ್ಲವೂ ಆಗಿರಬೇಕೆಂದು. ಅದೇ ಆಶ್ರಮಗಳು , ಅದೇ ಗುಡ್ಡಗಾಡು ಜನಾಂಗ ....ಇವತ್ತಿಗೂ ಆತನ ಮಾತನ್ನು ತಪ್ಪದೇ "ಪಾಲಿಸುತ್ತಾ "ಇದ್ದಿದ್ದು ವಿಶೇಷ ಆಗಿತ್ತು .  ಕೇವಲ ಹಲವು ಗುರುಗಳು ಬದಲಾಗಿದ್ದರು ಆಶ್ರಮದಲ್ಲಿ , ಹಾಗೆಯೇ ಗುಡ್ಡಗಾಡು ನಾಯಕರು ಕೂಡ .

 

ಆದರೆ ಆವತ್ತು ಅವರು ಬಾಜಿ ರಾಯನಿಗೆ ಇಟ್ಟ ವಚನ ಮಾತ್ರ , ಅಷ್ಟೇ "ಪರಿಶುದ್ಧವಾಗಿ "ಇತ್ತು . ದೂರದಲ್ಲಿ ಕಾಣುತ್ತಿರುವ ಗಂಗೆಯ ಹಾಗೆ . ಗುಡ್ಡಗಾಡು ಜನಾಂಗ ಆವತ್ತೇ ನಿರ್ಧರಿಸಿ ಬಿಟ್ಟಿತ್ತು , ಯಾವ ಪೇಶ್ವೆ ಇದ್ದರೂ ಕೂಡ ...ಆತನ ಜೊತೆಗೆ ತಮ್ಮವರು ಕೂಡ ಸಮರಾಭ್ಯಾಸ ಕಲಿಯಲಿ ಎಂದು.  ಅದೇ ಮುಂದುವರೆದು ಬಂದಿತ್ತು ಕೂಡ .

 ಗಂಗೆಯ ಮಡಿಲಲ್ಲಿ ಇದ್ದ , ಮೂರು ಆಶ್ರಮವನ್ನು ಸುತ್ತುಬಳಸಿ ಗಂಗೆ ಹಾದುಹೋಗುತ್ತಿತ್ತು. ಕೊನೆಯಲ್ಲಿ ಗುಡ್ಡಗಾಡು ಜನಾಂಗದ , ಬಿಡಾರಗಳನ್ನು ಬಳಸಿ ಕೆಳಗೆ ಜಾರುತ್ತಿತ್ತು. ಅದೊಂದು ವ್ಯವಸ್ಥೆ , "ಯುದ್ಧದ "ಸಂಪೂರ್ಣ ಸ್ವರೂಪವನ್ನೇ ಬದಲಾಯಿಸಿ ಬಿಡುತ್ತೆ ಎಂಬುದು , ಅಲ್ಲಿದ್ದ ಜನರ ಬಿಟ್ಟರೇ ...ಬೇರೆಯವರಿಗೆ ಗೊತ್ತಾಗುವ ಪ್ರಶ್ನೆಯೇ ಇರಲಿಲ್ಲ. ಶಂಕರ ಪೇಶ್ವೆ ತಲೆಯೆತ್ತಿ ನೋಡಿದ , ಮೇಲಿನ ಗುಡ್ಡದ ಮೇಲಿರುವ ಬಿಡಾರದಿಂದ ಏಳುತ್ತಿದ್ದ ಹೊಗೆಯನ್ನು . ಆತನಿಗೆ ಎಲ್ಲವೂ ತಿಳಿದಿತ್ತು ....ಯಾಕೆ ಗುಡ್ಡಗಾಡು ಜನಾಂಗ ತಮ್ಮ ಜೊತೆ ಇದೆಯೆಂದು . ಅಲ್ಲಿನ "ಪಕ್ಕದ ಬೆಟ್ಟವನ್ನು "ಸತತವಾಗಿ , ಯಾಕೆ ಅವರು ಕಾಯುತ್ತಾರೆ ಎಂಬುದು ಕೂಡ ತಿಳಿದಿತ್ತು.


ಭಾರತ ದೇಶ ಯಾವತ್ತು , ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಹಂತಕ್ಕೆ ಬರುತ್ತದೋ , ಆಗ ಅಲ್ಲಿರುವ "ನಿಧಿಯನ್ನು "ಉಪಯೋಗಿಸಬೇಕೆಂದು ....ಸ್ಪಷ್ಟವಾಗಿ ಹೇಳಿ ಹೋಗಿದ್ದರು ಹಿರಿಯರು . ಮತ್ತೊಮ್ಮೆ ಅಖಂಡ ಭಾರತ ಕಟ್ಟುವ ಸಲುವಾಗಿ.  ಒಬ್ಬ ಇಡೀ ಭಾರತವನ್ನು , ನಿಧಿ ದೊರೆತರೆ ...ತನ್ನ ಮುಷ್ಟಿಯಲ್ಲಿ ಹಿಡಿಯ ಬಯಸಿದರೆ .... ಮತ್ತೊಬ್ಬ , ಅದು ಮುಂದೊಂದು ದಿನ ದೇಶ ಕಟ್ಟಲು ಬೇಕಾಗುತ್ತದೆ ...ಎಂದು ಬೆಟ್ಟದ ಕಡೆ ನೋಡಿ "ಮಂದಹಾಸ "ಬೀರಿದ್ದ. ಹಿಮಾಂಶು ಹೇಳಿದ ಪ್ರತಿ ವಿಷಯವನ್ನು ಗಮನವಿಟ್ಟು ಕೇಳಿದ್ದರು , ಸಿಬಿಐ ಚೀಫ್ . ಆಶ್ಚರ್ಯದ ಮೇಲೆ ಆಶ್ಚರ್ಯ ಆಗಿತ್ತು ಅವರಿಗೆ .

ಹುತ್ತದ ಒಳಗೆ ಸಣ್ಣ ಹಾವು ಇರಬಹುದೆಂದು ಕೊಂಡವರಿಗೆ , ಅಲ್ಲಿ ಇರುವುದು ಕಾಳಿಂಗ ಸರ್ಪ ಮತ್ತು ಅದರ ಮರಿ ಎಂಬುದು ಅರ್ಥವಾಗಿತ್ತು.  ಜೊತೆಗೆ ಅವರನ್ನು , ಒಮ್ಮೆ ತಮ್ಮ ಕುರ್ಚಿಯಿಂದ ನಿಲ್ಲಿಸಿದ್ದು , "ಪೇಶ್ವೆ ಹೆಸರು".

       

" ಹಿಮಾಂಶು , ಅವರ ದ್ವನಿಯಲ್ಲಿ ಅಪ್ಪಣೆ ಇತ್ತು.ಈಗ ನೀ ಹೇಳಿದ ಯಾವ ಮಾತು ಕೂಡ ಇಲ್ಲಿ ರೆಕಾರ್ಡ್ ಆಗಬಾರದು . ಹಾಗೆಯೇ ಸದ್ಯದಲ್ಲೇ ಪಾಕಿಸ್ತಾನದಿಂದ ಬಂದು ಇಳಿಯಲಿ ನವಾಬನ ತಮ್ಮ "ಎಂದಿದ್ದರು. ಅರ್ಥ ಆಗಿತ್ತು ಹಿಮಾಂಶುಗೆ , ಅವರ ಮಾತಿನ "ಗೂಢಾರ್ಥದ "ಬಗ್ಗೆ . " ಹಿಮಾಚಲ ನಿನ್ನ ಕೇಂದ್ರ ಬಿಂದು ಆಗಿರಲಿ , ಬಂದ ಪಾಕಿಸ್ತಾನದ ಅಥಿತಿ ಮತ್ತು , ನಮ್ಮದೇ ದೇಶದ ದ್ರೋಹಿಗಳ ಕೊನೆ ಹೆಜ್ಜೆ ಹಿಮದ ಮೇಲೆ ಆಗಬೇಕು . ಎಲ್ಲವೂ ಕೂಡ ಆಫ್ ದೀ ರೆಕಾರ್ಡ್" ಎಂದು , ಹಿಮಾಂಶು ಕಡೆ ನೋಡಿದರು ಅವರು . ಆತನಿಗೆ ಇದು ಖುಷಿ ತರುವ ವಿಷಯವೆಂದು ಗೊತ್ತಿತ್ತು ಅವರಿಗೆ . ಜೊತೆಗೆ "ಹಿಮಾಂಶು "ಕೂಡ ಅಲ್ಲಿ ಮರಣ ಹೊಂದಿದರೆ , ಎಂಬ ಭಯ ಕೂಡ . ನಿನ್ನದೇ ನಾಲ್ಕು ಜನರ ತಂಡ ಸಿದ್ದ ಆಗಿರಲಿ , ಯುದ್ದ ಅವರಿಬ್ಬರ ನಡುವೆ ನಡೆದು ಹೋಗಲಿ . ಅಧರ್ಮಕ್ಕೆ ಜಯ ಆದರೆ ,ನಿನಗೆ ಕೆಲಸ ಅಲ್ಲಿ ....ಇಲ್ಲದೇ ಇದ್ದರೆ .......

ಅವರು ಅಲ್ಲಿಗೆ ಮಾತು ನಿಲ್ಲಿಸಿದ್ದು ನೋಡಿ ಅರ್ಥವಾಗಿತ್ತು . ತಾನು ಅಲ್ಲಿ ಪ್ರೇಕ್ಷಕ ಆಗಿ ಇರಬೇಕೆಂದು . ಒಂದು ವೇಳೆ ನವಾಬ ಗೆದ್ದರೆ , ತಾನು ಆಗ ರಂಗಕ್ಕೆ ಇಳಿಯಬೇಕೆಂದು .   ವಾಸಿಮ್ ಆಲಿ ಖಾನ್ , ಒಂದು ದಿನ ಮುಂಜಾನೆ ಬಂದು ಇಳಿದಿದ್ದ ತನ್ನ ಮೂಲ ನಿವಾಸಕ್ಕೆ . ಸಮುದ್ರ ಮಾರ್ಗವಾಗಿ ಮುಂಬೈ , ಅಲ್ಲಿಂದ ಹೈದರಾಬಾದ್ ಗೆ .ಯಾರಿಗೂ ಅನುಮಾನ ಬಾರದಂತೆ . ಅಜಂ ಆಲಿ ಖಾನ್ ಗೆ ಖುಷಿಯಾಗಿ ಹೋಗಿತ್ತು , ಬಂದು ಇಳಿದ ತಮ್ಮನನ್ನು ನೋಡಿ .

ಬಿಗಿದಪ್ಪಿ ಆತನನ್ನು ಸ್ವಾಗತಿಸಿದ ಆತ . ತನ್ನ ಸಾಮ್ರಾಜ್ಯದ ಪರಿಚಯ ಮಾಡಿಕೊಟ್ಟ ನಂತರದಲ್ಲಿ .   ಒಂಟಿಯಾಗಿ ಬಂದು ಇಳಿದಿದ್ದ ಆತ , ಆತನಿಗೂ ತಿಳಿದಿತ್ತು ....ತನ್ನ ಬಳಿಯ ನಕ್ಷೆ , ತನ್ನ ಬಳಿ ಸುರಕ್ಷಿತವಾಗಿ ಇದ್ದರೆ ....ತಾನು ಕೂಡ ಸುರಕ್ಷಿತವೆಂದು .


 ತನ್ನ "ಅಣ್ಣ "ಎಂಬುವವನ ಮೇಲೆ ಸ್ವಲ್ಪವೂ ನಂಬಿಕೆ ಇರಲಿಲ್ಲ ಅವನಿಗೆ. ಅದೇ ಸಮಯಕ್ಕೆ , ಹಿಮಾಂಶು ತನ್ನ ಕೊಠಡಿಯಲ್ಲಿ ಹೇಳಿಕೊಂಡ ತನ್ನ ಪಾಡಿಗೆ . "ಅಥಿತಿ ಆಗಮನ ಆಗಿದೆ "ಎಂದು.  ರಾತ್ರಿ ತನ್ನ ಖಾಸಗಿ ಕೊಠಡಿಯಲ್ಲಿ , ಪೇಶ್ವೆ ಮನೆತನ ಮತ್ತು ಅವರಲ್ಲಿ ಇರುವ ನಿಧಿಯ ಬಗ್ಗೆ ಪ್ರಸ್ತಾಪ ಮಾಡಿದ್ದ . ಆಗ ವಾಸಿಮ್ ನ ಕ್ರೂರ ಕಣ್ಣು ,ಮಂದ ದೀಪದಲ್ಲಿ ಸ್ಪಷ್ಟವಾಗಿ ಹೊಳೆದಿತ್ತು ....ಮತ್ತೊಂದು ಬೃಹತ್ ನಿಧಿಯ ವಿಷಯ ಕೇಳಿ. ಮೊದಲು ದೊಡ್ಡ ನಿಧಿಯನ್ನು ಪಡೆದು , ಕಡೆಗೆ ತಮ್ಮ ನಿಧಿಯನ್ನು "ಸಮನಾಗಿ" ಹಂಚಿಕೊಳ್ಳಬೇಕು ಎಂದು ತೀರ್ಮಾನ ಆಗಿತ್ತು.  ಒಂದೇ ರಾಜ ಮನೆತನದ , ಎರಡು ಕುಡಿಯಲ್ಲಿ ಕೂಡ ಯಾರೊಬ್ಬರ ಬಗ್ಗೆಯೂ ನಂಬಿಕೆ ಇರಲಿಲ್ಲ. ಆಗ ಗಮನಕ್ಕೆ ಬಂದಿತ್ತು ಆಜಂ ಆಲಿ ಖಾನ್ ಗಮನಕ್ಕೆ ಬಂದಿತ್ತು , ತನ್ನ ತಮ್ಮನ "ಮುಂಗೈ "ಮೇಲೆ ಇದ್ದ ಬ್ಯಾಂಡೇಜ್ ಬಗ್ಗೆ . ನಿಮ್ಮ ಭಾರತದ ಸೇನೆಯ ಒಂದು ಮುಳ್ಳು ಹೊಕ್ಕಿತು ಅಲ್ಲಿ , ವಾರದ ಹಿಂದೆ ...ಎಂದು ಮಾತನ್ನು ಅಲ್ಲೇ ತುಂಡರಿಸದ್ದ ವಾಸಿಮ್ .


ಎಲ್ಲಿಯೂ ಅವನ ಬಳಿ ಇದ್ದ "ನಕ್ಷೆಯ "ಅರ್ಧ ಭಾಗವನ್ನು ಕೇಳಲಿಲ್ಲ ನವಾಬ . ಆದರೆ ರಾತ್ರಿ , ತನ್ನ ತಮ್ಮನಿಗೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ....ಆತನ ಇಡೀ ಮೈ ಹುಡುಕಾಡಿದ್ದ .ಆತನ ಚೀಲ ಕೂಡ ಪರಿಶೀಲಿಸಿ ಕೈ ಚೆಲ್ಲಿದ್ದ .

  ಹೈದರಾಬಾದ್ ನಲ್ಲಿ , ಆಜಂ ಆಲಿ ಖಾನ್ ಕೋಟೆಯಲ್ಲಿ "ಹಿಮಾಚಲಕ್ಕೆ  "ಹೊರಡುವುದಕ್ಕೆ ಸಕಲ ಸಿದ್ಧತೆ ಶುರು ಆಗಿತ್ತು . ಅದೇ ಸಮಯಕ್ಕೆ "ಕಡಲ ಹಕ್ಕಿಯೊಂದು ", ದೊಡ್ಡದಾಗಿ ಕಿರುಚುತ್ತಾ ಹೋಗಿದ್ದು , ಇಬ್ಬರ ಗಮನಕ್ಕೂ ಬರಲಿಲ್ಲ. ತನ್ನ "ನಲವತ್ತು "ಜನ ಅನುಚರರ ಜೊತೆ ಹೊರಟಿದ್ದ ನವಾಬ , ತನ್ನ ತಮ್ಮನ ಕರೆದುಕೊಂಡು.

            

ಅಲ್ಲಿ ಕೂಡ ಯಾರಿಗಾದರೂ ಅನುಮಾನ ಬಂದೀತು ಎಂದು , ಎಲ್ಲಾ ತನ್ನ ಅನುಚರರಿಗೆ ಶೀಮ್ಲಾ ಕೆ ಬಂದು ಸೇರುವಂತೆ ಸೂಚಿಸಿ.....ನಾಲ್ವರು ಅಂಗರಕ್ಷರ ಜೊತೆ , ತಾನು ಬೇರೆಯಾಗಿ ಪಯಣ ಬೆಳೆಸಿದ್ದ . ತಲೆಯಲ್ಲಿ ಮಾತ್ರ ಪಾಕಿಸ್ತಾನದಿಂದ ಬಂದು ಇಳಿದ ತಮ್ಮ ವಾಸಿಮ್ , ನಕ್ಷೆ ಎಲ್ಲಿ "ಇಟ್ಟಿರಬಹುದು" ಎಂಬ ಚಿಂತೆ ಕಾಡುತಿತ್ತು .ಆರು ದಿನದಲ್ಲಿ ಭಾರತದ ವಿವಿಧ ಕಡೆಯಿಂದ ಬಂದು ಸೇರಿದ , ನವಾಬನ ಅನುಚರರಿಂದ ಶೀಮ್ಲಾ ಪಟ್ಟಣ ತುಂಬಿ ಹೋಗಿತ್ತು .ಅಷ್ಟರಲ್ಲಿ ನವಾಬ ಕೂಡ , ತನ್ನ ತಮ್ಮನೊಂದಿಗೆ ಅಲ್ಲಿಗೆ ಬಂದು ಸೇರಿದ್ದ. ಆವತ್ತು ಸಂಜೆಯೇ ತೀರ್ಮಾನ ಆಗಿತ್ತು , ಅಲ್ಲಿಂದ ದೂರದಲ್ಲಿ ಇರುವ, " ಉರುವೆ " ಗ್ರಾಮಕ್ಕೆ ಮುತ್ತಿಗೆ ಹಾಕುವುದು ಹೇಗೆ ಎಂದು .ಆಗ ನೆನಪು ಆಗಿತ್ತು ನವಾಬನಿಗೆ , ತನ್ನ ಮುಖ್ಯ

ಅನುಚರರಾದ ಸಲೀಂ ಮತ್ತು ನಹೀಂ  ಬಗ್ಗೆ.  ಇದ್ದಕಿದ್ದ ಹಾಗೆ ಅವರ ಕಣ್ಮರೆ ಮಾತ್ರ , ಅವನಿಗೆ ಸಣ್ಣ "ಅನುಮಾನ "ಶುರು ಮಾಡಿತ್ತು.ಆದರೆ ಮುಂದಿನ ಗಮ್ಯದ ಕಡೆ ಜಾಸ್ತಿ ಆಸಕ್ತಿ ಇದ್ದಿದ್ದರಿಂದ , ಈ ವಿಷಯವನ್ನು ತಲೆಯಿಂದ ತೆಗೆದು ಹಾಕಿದ್ದ ಆತ.  ತನ್ನ ನಲವತ್ತು ಅನುಚರರನ್ನು , ಎಂಟು ಗುಂಪುಗಳಾಗಿ ಮಾಡಿ ತಾನು ಹೊರಟಿದ್ದ.

       

ಅದೇ ಸಮಯಕ್ಕೆ , ಅವರು ಶಿಮ್ಲಾ ಬಿಟ್ಟ ಒಂದು ಗಂಟೆಯ ನಂತರ .....ಹಿಮಾಂಶು ತನ್ನ ನಾಲ್ಕು ಜನ ಯುವ ಅಧಿಕಾರಿಗಳ ಜೊತೆ ಅವರನ್ನು ಹಿಂಬಾಲಿಸಿ ಸಾಗಿದ್ದ.  ಚಕ್ರವರ್ತಿ ಸಾಹೇಬರಿಗೆ ವಿಷಯ ತಿಳಿಸಿ. ಮುಂದೆ ಅಲ್ಲಿ ನಡೆಯುವ ಯುದ್ಧದ ಕಲ್ಪನೆ ಮಾಡಿಕೊಂಡು , ಮನಸು ತಡೆಯದೆ ಒಂದಷ್ಟು ತಮ್ಮ ಅಧಿಕಾರಿಗಳ ಜೊತೆ ಹೊರಟಿದ್ದರು ಅವರು .

ಅವರನ್ನು ಕಾಡುತ್ತಾ ಇದ್ದಿದ್ದು , ಪೇಶ್ವೆ ಮತ್ತು ಹಿಮಾಂಶು . ಹೊರಡುವಾಗ "ಕಣ್ಣು ಮುಚ್ಚಿ "ಒಂದು ಕ್ಷಣ ನಿಂತು ಬೇಡಿದ್ದರು ದೇವರನ್ನು , ಅವರಿಬ್ಬರೂ ಸುರಕ್ಷಿತವಾಗಿರಲಿ ಎಂದು. ಮುಂಜಾನೆ ಹೊತ್ತಿನಲ್ಲಿ , ತನ್ನ ಅನುಚರರ ಜೊತೆ ಒಮ್ಮೆಲೆ ಮುತ್ತಿಗೆ ಹಾಕಿದ ನವಾಬ.  ಕೂಗಿ ಹೇಳಿದ್ದ , ಎಲ್ಲರೂ ಹೊರಬಂದು ಸಾಲಾಗಿ ನಿಲ್ಲಬೇಕೆಂದು . ಆತನ ಮಾತು ನಿಲ್ಲುವ ಮುನ್ನವೇ , ಆತನ ಮುಂದಿದ್ದ ನಾಲ್ವರನ್ನು "ಬಲಿ "ತೆಗೆದುಕೊಂಡಿತ್ತು ...ಆಶ್ರಮದ ಕಿಟಕಿಯಿಂದ ಬಂದ ಬಾಣಗಳು . ಕೇವಲ "ಬೆಳಕಿನ ರೇಖೆ "ಒಂದು ಹಾದುಹೋದ ಅನುಭವವಾಗಿತ್ತು ನವಾಬನಿಗೆ. ಯುದ್ದ ಆರಂಭ ಆಗಿತ್ತು ಶಾಸ್ತ್ರೋಕ್ತವಾಗಿ .ಮೊದಲ ನಾಲ್ಕು "ಬಲಿಯನ್ನು "ತೆಗೆದುಕೊಂಡು . ವಿಸ್ಮಯ ಮತ್ತು ಗಾಬರಿಯಿಂದ ನೋಡುತ್ತಿದ್ದ ನವಾಬ ಬಾಣಗಳನ್ನು , ಅದರ ಚೂಪಿನ ತುದಿಯಿಂದ ಸುರಿಯುತ್ತಿರುವ ತನ್ನವರ ರಕ್ತವನ್ನು. ಶಂಕರ ಪೇಶ್ವೆ ಮಾತ್ರ , ತನ್ನ ಬಳಿ ಇದ್ದ ಅಂಗೈ ಅಗಲದ ಸಣ್ಣ "ಬಾಕುವನ್ನು "ನೋಡುತಿದ್ದ . ಆತನ ಕೈಯಲ್ಲಿ ಅದು "ತಣ್ಣಗೆ "ಕುಳಿತು ಕೊಂಡಿತ್ತು ಅದು. ಮತ್ತೊಂದು ಬಾಕುವನ್ನೂ ಕೂಡ , ಮತ್ತೊಂದು ಕೈಯಲ್ಲಿ ಹಿಡಿದು ಕಾಯುತ್ತಿದ್ದ ಆತ . ತನ್ನ ಪ್ರಶಾಂತವಾದ ಕಣ್ಣಿನಿಂದ .ಅದೇ ಸಮಯಕ್ಕೆ ಆಶ್ರಮದ ಹಿಂಬಾಗಿಲಿನಿಂದ , ಗಂಗೆಯಲ್ಲಿ "ತೇಲಿ ಹೋಗಿತ್ತು "ಒಣಗಿದ ಮರದ

ದಿಮ್ಮಿಯೊಂದು....ಯಾರ ಕಣ್ಣಿಗೂ ಕಾಣಿಸದಂತೆ . ಮುಂದೆ ಇರುವ ಆಶ್ರಮಕ್ಕೆ ಮತ್ತು , ಗುಡ್ಡಗಾಡು ಜನಾಂಗಕ್ಕೆ ಸೂಚನೆ ಕೊಡುವ ಸಲುವಾಗಿ.  ಆಶ್ರಮದ ಮೇಲೆ ಆಕ್ರಮಣವಾಗಿದೆ ಎಂದು.

  

ಮೊದಲು ಎಚ್ಚೆತ್ತವನು ನವಾಬನ ತಮ್ಮ ವಸೀಮ್. ಆಫ್ಘಾನಿಸ್ತಾನದಿಂದ ಹಿಡಿದು ,ಬಲೂಚಿಸ್ತಾನದವರೆಗೆ , ಗೆರಿಲ್ಲಾ ಯುದ್ಧ ಮಾಡಿದ ಅನುಭವ ಹೊಂದಿದವನು ಅವ. ತಕ್ಷಣವೇ ಕೂಗಿ ಹೇಳಿದ್ದ , ಎಲ್ಲರೂ ಒಮ್ಮೆಯೇ ಆಕ್ರಮಣ ಮಾಡಿ ಎಂದು.   ಒಮ್ಮೆಲೇ ನುಗ್ಗಿ ಬಂದಿದ್ದರು , ನವಾಬನ ಅನುಚರರು ಆಶ್ರಮದ ಕಡೆಗೆ. ಜೊತೆಗೆ ತನ್ನ ಜೊತೆ ಒಂದಿಷ್ಟು ಜನರನ್ನು ಇಟ್ಟುಕೊಂಡು , ಆಶ್ರಮದ ಮತ್ತೊಂದು ದಿಕ್ಕಿನಿಂದ ಮುತ್ತಿಗೆ ಹಾಕಿದ್ದ ನವಾಬ . ಆಗ ಹೊರಬಂದಿದ್ದ ಶಂಕರ

ಮುತ್ತಿಗೆ ಹಾಕಲು, ಕೈಯಲ್ಲಿ ದೊಡ್ಡ ದೊಡ್ಡ "ತಲವಾರು " ಹಿಡಿದು ಬರುವ ಮಂದಿಯನ್ನು ನೋಡುತ್ತಾ .    ಆತನ ಹತ್ತಿರ ಬಂದವರು ಕ್ಷಣ ಮಾತ್ರದಲ್ಲಿ ನೆಲಕ್ಕೆ ಬೀಳುತ್ತಿದ್ದರು , ಕುತ್ತಿಗೆ ಸೀಳಿ ಹೋಗುತ್ತಿತ್ತು ಅವರದು .  ಉಳಿದವರಿಗೆ ಕಾಣಿಸುತ್ತಾ ಇದ್ದಿದ್ದು ಕೇವಲ , ಆತನ ಕೈ ಚಲನೆ ಮಾತ್ರ . ಅಂಗೈ ಒಳಗೆ ಭದ್ರವಾಗಿಯೇ ಕುಳಿತಿದ್ದ ಬಾಕು , ಎದುರಿಗೆ ಬಂದವರನ್ನು .....ಯಾವುದೇ ಕರುಣೆ ಇಲ್ಲದೆ ಸೀಳಿ ಹಾಕುತ್ತಿತ್ತು ಅವರ ಕುತ್ತಿಗೆಯನ್ನು. ಸಂಪೂರ್ಣ ರಕ್ತದಿಂದ ತೊಯ್ದು ಹೋಗಿದ್ದ ,ಶಂಕರ ಪೇಶ್ವೆ ಭಯಾನಕವಾಗಿ ಕಾಣಿಸುತ್ತಿದ್ದ. ಆತನ ಬಳಿ ಹೋದವರು , ಕ್ಷಣ ಮಾತ್ರದಲ್ಲಿ ಹೆಣವಾಗಿ ಹೋಗುತಿದ್ದರು ... ಒಂದು ಚೀತ್ಕಾರ ಮಾಡದೆ.  ಬೇರೆಯವರಿಗೆ ಕಾಣಿಸುತ್ತಾ ಇದ್ದಿದ್ದು , ತಮ್ಮ ಮುಂದೆ ಹೋದವನ ಕುತ್ತಿಗೆಯಿಂದ ಚಿಮ್ಮುತ್ತಾ ಇದ್ದ ರಕ್ತ ಮಾತ್ರ ಮತ್ತೊಂದು ಕಡೆ ಗುರು ಪರಶುರಾಮರು , ಮತ್ತವರ ನಾಲ್ಕು ಶಿಷ್ಯರು ....ಒಂದೇ ಸಮನೇ ಬಾಣದ ಮಳೆ ಹರಿಸುತ್ತಿದ್ದರು. ಅದೇ ಸಮಯಕ್ಕೆ , ಶಂಕರನ ಎದುರಿಗೆ ಬಂದು ನಿಂತಿದ್ದ ವಾಸಿಮ್ .

ಆತನ ಕೈಯಲ್ಲಿ "ರಿವಾಲ್ವರ್ ". ಶಂಕರನ ಹಣೆಗೆ ಗುರಿ ಇಟ್ಟು ನಿಂತಿದ್ದ . "ಅವನೇ ಅವನೇ ಪೇಶ್ವೆ , ಸಾಯಿಸಿ ಬಿಡಬೇಡ "ಎಂದು ದೂರದಿಂದ ಕೂಗಿ ಹೇಳಿದ್ದ ನವಾಬ .  ಒಂದು ಕ್ಷಣ ಮಾತ್ರ , ವಾಸಿಮ್ ಕಣ್ಣು ತಿರುಗಿತ್ತು ಅಷ್ಟೆ .ಅಷ್ಟರಲ್ಲಿಯೇ ಶಂಕರನ ಕೈಯಲ್ಲಿ ಇರುವ ಬಾಕು , ಆತನ ಕೈಯನ್ನು ಕತ್ತರಿಸಿ ಹಾಕಿತ್ತು .  ಕೈಯಲ್ಲಿ ಇರುವ ರಿವಾಲ್ವರ್ ಕೆಳಗೆ ಬಿದ್ದ ಮೇಲೆಯೇ ಗೊತ್ತಾಗಿದ್ದು ವಾಸಿಮ್ ಗೆ , ತನ್ನ ಮುಂಗೈ ಕತ್ತರಿಸಿ ಹೋಗಿದೆ ಎಂದು . ಆಗ ಶುರುವಾಗಿತ್ತು ನೋವು , ಅಷ್ಟರಲ್ಲಿಯೇ ಮತ್ತೊಂದು ಕೈ ಮತ್ತು ಕಾಲನ್ನು ....ಅಂಗೈ ಅಗಲ ಸೀಳಿ ಹಾಕಿದ್ದ ಶಂಕರ .  ಸಣ್ಣ ವಯಸ್ಸಿನ ಯುವಕನ ಕಾಲುಗಳ ಚಲನೆ ಕೂಡ , ಜಿಂಕೆ ಮರಿಯನ್ನು ಮೀರಿಸುವಂತೆ ಇತ್ತು .  ಆಗ ವಾಸಿಮ್ ಕೈಯಲ್ಲಿ ಇದ್ದ ಬ್ಯಾಂಡೇಜ್ ಬಿಚ್ಚಿ , "ನಕ್ಷೆಯೊಂದು "ಕೆಳಗೆ ಬಿದ್ದಿತ್ತು .  ನೋಡುತ್ತಾ ಇದ್ದ ನವಾಬ , ಕೆಳಗೆ ಬಿದ್ದ ತನ್ನ ನಿಧಿಯ ನಕ್ಷೆಯನ್ನು . ಒಮ್ಮೆಲೇ ಹುಚ್ಚು ದೈರ್ಯದಿಂದ ಒಳಗೆ ನುಗ್ಗಿ ಹೋಗಿ , ಗುರು "ಪರಶುರಾಮರ "ತಲೆಗೆ ಬಂದೂಕು ಇಟ್ಟಿದ್ದ . ಹೆಣಗಳ ರಾಶಿಗಳ ಮದ್ಯೆ , ಏಕಾಂಗಿಯಾಗಿ ನಿಂತಿದ್ದ ಶಂಕರ ತನ್ನ ಗುರುಗಳತ್ತ ನೋಡುತ್ತಾ.  ನವಾಬನಿಗೂ ಅರ್ಥವಾಗಿತ್ತು , ಇನ್ನೈದು

ನಿಮಿಷವಾಗಿದ್ದರೆ ತಾವು ಯಾರು ಉಳಿಯುತ್ತಿರಲಿಲ್ಲ ಎಂದು.  ತನ್ನ ಬಳಿ ಇದ್ದ ನಾಲ್ಕು ಅಂಗರಕ್ಷರನ್ನು ಹೊರತು ಪಡಿಸಿ , ಅವನ ಎಲ್ಲಾ ಅನುಚರರ ಉಸಿರು ನಿಂತುಹೋಗಿತ್ತು. ಅವರ ಕುತ್ತಿಗೆಯಿಂದ ಮತ್ತು ಎದೆಯೊಳಗೆ ತೂರಿದ ಬಾಣಗಳಿಂದ , ಬೆಳ್ಳಗಿನ ಮಂಜಿನ ನೆಲದ ಹಾಸು ಮೆಲ್ಲನೆ "ಕೆಂಪು ವರ್ಣಕ್ಕೆ "ತಿರುಗುತ್ತಿತ್ತು. ನವಾಬನ ತಮ್ಮ "ವಾಸಿಮ್ "ಮಾತ್ರ ನರಳುತ್ತಾ ಜೀವಂತವಾಗಿ ಇದ್ದ . ಪರಶುರಾಮರ ತಲೆಗೆ ಬಂದೂಕು ಹಿಡಿದು , ಶಂಕರನಗೆ ಕೂಗಿ ಹೇಳಿದ್ದ ನವಾಬ ."ಕೈಯನ್ನು ತಲೆ ಹಿಂದೆ ಹಾಕಿಕೊಂಡು ಕುಳಿತುಕೊಳ್ಳುವಂತೆ ".   ಶಂಕರನ ದೃಷ್ಟಿ ಗುರುಗಳ ಕಡೆಗೆ ತಿರುಗಿ , ಮೇಲಿನ ಬೆಟ್ಟಗಳ ಕಡೆ ಹೋಗಿತ್ತು . ಆಗ ನಿಧಾನವಾಗಿ ಕುಳಿತಿದ್ದ , ಕೈಯನ್ನು ಹಿಂದೆ ಮಾಡಿ. ಯುದ್ಧ ಗೆದ್ದಂತೆ ಸಂಭ್ರಮಿಸಿದ್ದ ನವಾಬ. ಪಕ್ಕದಲ್ಲಿದ್ದ ತನ್ನ ಇಬ್ಬರು ಅಂಗರಕ್ಷಕರಿಗೆ ವಾಸಿಮ್ ನನ್ನ ಮತ್ತು , ಅವನ ಬುಡದಲ್ಲಿದ್ದ "ನಕ್ಷೆಯನ್ನು "ತರುವಂತೆ ಸೂಚಿಸಿ .... ಇನ್ನೆರಡು ಅಂಗರಕ್ಷಕರಿಗೆ ಗುರು ಪರಶುರಾಮರನ್ನು , ಮತ್ತು ಅವರ ನಾಲ್ಕು ಮಂದಿ ಶಿಷ್ಯರನ್ನು ....ಅಲ್ಲಿರುವ ಕಂಬಗಳಿಗೆ ಕಟ್ಟಿ ಹಾಕುವಂತೆ ಸೂಚಿಸಿದ್ದ . ಆಗ ಹಾಕಿದ್ದ ರಣ ಕೇಕೆ ನವಾಬ .

ಆತನ ನಗು ಅಕ್ಕಪಕ್ಕದ ಬೆಟ್ಟಗಳಿಗೆ ಬಡಿದು , ಪ್ರತಿಧ್ವನಿಸುತ್ತಿತ್ತು.  ಚಳಿ ಗಾಳಿಯಲ್ಲಿ , ಒಬ್ಬನೇ ನಿಂತು ನೋಡುತಿದ್ದ ಶಂಕರ . ನವಾಬನ ನಗುವನ್ನು . "ಪೇಶ್ವೆ ಅಲ್ಲವೇ ನೀನು ", ಎನ್ನುತ್ತಾ ನಕ್ಕಿದ್ದ ಮತ್ತೊಮ್ಮೆ ಆತ ."ಇವತ್ತಿನ ಆಯುಧದ ಎದುರು , ನಿನ್ನ ಬಿಲ್ಲು ಬಾಣಗಳು ...ಇಲ್ಲಿನ ಆಶ್ರಮ ಎಲ್ಲವೂ ಧೂಳಿನ ಸಮ. ಆದರೂ ನಿನಗೊಂದು ಮರ್ಯಾದಿ ಕೊಡುತ್ತೇನೆ ನಾನು ...ಅದು ಕೂಡ ಶರತ್ತು ಬದ್ಧವಾಗಿ".  ನವಾಬನ ಕ್ರೂರ ಮನಸು , ಈಗ ಸೆರೆ ಸಿಕ್ಕ ಶಂಕರನ ಜೊತೆ ಸ್ವಲ್ಪ ಚೆಲ್ಲಾಟವಾಡ ಬೇಕೆಂದು ಅನಿಸಿತು.   ಮೊದಲಿನಿಂದಲೂ ಕ್ರೂರಿಯಾದ ಅವ , ಪ್ರತಿ ಹತ್ಯೆಯನ್ನು ಸಂತಸ ಪಡುತ್ತಿದ್ದ.

ಸುರಿಯುತ್ತಾ ಇದ್ದ "ರಕ್ತ "ಅವನ ಸಂತಸವನ್ನು ಇಮ್ಮಡಿಗೊಳಿಸುತಿತ್ತು. ಆಟ ಆಡಿಸಿ , ಕೆರಳಿಸಿ ಕೊಲ್ಲುವುದು ಅಂದರೆ ಅದೇನೋ ತೃಪ್ತಿ ಆತನಿಗೆ. ನರಳುತ್ತಿದ್ದ ವಾಸಿಮ್ ನನ್ನು , ಅಲ್ಲಿದ್ದ ಮತ್ತೊಂದು ಕಂಬಕ್ಕೆ ಕಟ್ಟಲು ಸೂಚಿಸಿ ....ಶಂಕರನ "ಕಣ್ಣನ್ನು "ಬಟ್ಟೆಯಲ್ಲಿ ಸರಿಯಾಗಿ ಬಿಗಿದು ಕಟ್ಟಲು ಸೂಚಿಸಿದ . ಹೆದರುತ್ತಲೇ ಬಂದಿದ್ದ ಒಬ್ಬ , ಶಂಕರನ ಕಣ್ಣು ಬಿಗಿಯಲು . ತನ್ನ ಬಳಿ ಇದ್ದ ಕಪ್ಪು ಬಟ್ಟೆಯಿಂದ . ಶಾಂತವಾಗಿ ಕುಳಿತಿದ್ದ ,ಶಂಕರನ ಕಣ್ಣು ಬಿಗಿದು ಕಟ್ಟಿದ್ದ ಆತ.

ಆತ ಕಟ್ಟುವ ಮೊದಲೇ "ಕಣ್ಣು "ಮುಚ್ಚಿ ಬಿಟ್ಟಿದ್ದ ಪೇಶ್ವೆ , ಕಣ್ಣ ಪಟದಲ್ಲಿ ಪ್ರತಿ ದೃಶ್ಯವೂ ಅಡಕವಾಗಿತ್ತು . ಯಾವ ಮಾತು ಕೇಳಿಸುತ್ತಾ ಇರಲಿಲ್ಲ ಆತನಿಗೆ , ಕೇವಲ ಗಂಗೆ ಹರಿಯುವ ಜುಳು ಜುಳು ಶಬ್ದವ ಬಿಟ್ಟು. ಚಿಕ್ಕದೊಂದು ಆಟ ಆಡಲು ಹೋಗಿದ್ದ ನವಾಬ ಮಾತ್ರ , ತಾನು ಆಡುತ್ತಾ ಇರುವುದು ಹುಲಿಯ ಮರಿಯ ಜೊತೆ ಎಂಬುದು ಮರೆತ ಹಾಗಿತ್ತು.

          

ವಾಸಿಮ್ ಗೆ "ನಿಕ್ಕಿ "ಆಗಿ ಹೋಗಿತ್ತು , ತಾನು ಭಾರತಕ್ಕೆ ಇವನನ್ನು ನಂಬಿಕೊಂಡು ಬಂದು ಸಾಯುತ್ತೇನೆ ಎಂದು.

" ಪೇಶ್ವೆ ಈಗ ನಿನಗೆ ಬಿಲ್ಲು ಮತ್ತು ಒಂದು ಬಾಣವನ್ನು ಕೊಡುತ್ತೇನೆ . ದೊಡ್ಡ ಕಂಬಕ್ಕೆ ಕಟ್ಟಿರುವ ಮನುಷ್ಯನ ಗಂಟಲಲ್ಲಿ ತೂರಿ ಹೋಗಬೇಕು ನಿನ್ನ ಬಾಣ ". ಎಂದು ತನ್ನ ತಮ್ಮ "ವಾಸಿಮ್ "ಕಡೆ ತೋರಿಸಿದ್ದ. " ಅಲ್ಲಿ ಸೋತರೆ ನೀನು , ನಿಮ್ಮ ನಿಧಿಯ ರಹಸ್ಯ ಹೇಳಬೇಕು .....ನೀನು ಗೆದ್ದರೂ ಹೇಳಬೇಕು , ಯಾಕೆಂದರೆ ನಿನ್ನ ಗುರುಗಳು ನಿನಗೆ ದೊರೆಯುತ್ತಾರೆ ಜೀವಂತವಾಗಿ ....ನಿಧಿಯ ಬದಲು" ಎಂದು ಕೂಗಿ ಹೇಳಿದ್ದ.

        

ಗುರು ಪರಶುರಾಮರ ಮುಖದ ಮೇಲೆ ಸಣ್ಣದಾದ ಮಂದಹಾಸ. ನವಾಬನ ಮಾತು ಕೇಳಿ."ಪೇಶ್ವೆ ನಾವು ಆಳಿದ್ದು ನಿಮ್ಮ ನಾಲ್ಕು ಪಟ್ಟು , ಕೇವಲ ಎಂಬತ್ತು ವರ್ಷ ಆಳಿದ ನಿಮಗೆ ಇಂತಹ ಆಶ್ರಮ ....ಇಲ್ಲಿ ನಿಮ್ಮದು ಸಮರ ಕಲೆಯ ಅಭ್ಯಾಸ .

ಇವತ್ತು ಗೊತ್ತಾಗಲಿ ನಾವು ಬಲಿಷ್ಠವೋ ನೀನು ಬಲಿಷ್ಠನೋ "ಎಂದು ಹೇಳಿ , ಮತ್ತೊಮ್ಮೆ ನಕ್ಕಿದ್ದ ಆತ .

ಅಷ್ಟರಲ್ಲಿಯೇ ನವಾಬನ ಅಂಗರಕ್ಷಕ , ಶಂಕರನ ಕೈಯಲ್ಲಿ ಬಿಲ್ಲು ಮತ್ತು ಬಾಣವೊಂದನ್ನು ಇಟ್ಟು ಹಿಂದೆ ಸರಿದಿದ್ದ.

                     

ಶಂಕರನ "ನಾಲ್ಕಾರು "ಬಾರಿ ಸುತ್ತು ತಿರುಗಿಸಿ. ಭಾರತ ಸ್ವಾತಂತ್ರ್ಯ ಪಡೆದ ಎಷ್ಟೋ ವರ್ಷದ ನಂತರ , ಎರಡು "ರಾಜವಂಶಗಳ" ನಡುವಿನ ಯುದ್ಧ ಅಂತಿಮ ಘಟ್ಟಕ್ಕೆ ತಲುಪಿತ್ತು.  ಹೆಣಗಳ ರಾಶಿ ಮದ್ಯೆ ನಿಂತಿದ್ದ ಶಂಕರ ಮಾತ್ರ , ಭೀಕರವಾಗಿ ಕಾಣಿಸುತ್ತಿದ್ದ. ಕೈಯಲ್ಲಿ ದೊಡ್ಡದಾದ "ಬಿಲ್ಲು "ಇತ್ತು. ಬಾಣವನ್ನು ಹೂಡಿ , ಬೆಟ್ಟದ ದಿಕ್ಕಿಗೆ ತಿರುಗಿ ನಿಂತಿದ್ದ.ಆತನನ್ನು ತಿರುಗಿಸಿದ ಪರಿಣಾಮ ಅದು .  ಸ್ವಲ್ಪ ಸಮಯ , ಶಂಕರನ ಬಿಲ್ಲಿನಿಂದ ಬಾಣ ಹೊರಬರದ ಕಾರಣ ....ನವಾಬ ಕೂಗಿ ಹೇಳಿದ್ದ." ಹೊಡಿ ಬಾಣವನ್ನು "ಎಂದು ನಗುತ್ತಾ. ಅದನ್ನೇ ಕಾಯುತ್ತಿದ್ದವನ ಹಾಗೆ , ಶಂಕರನ ಬಿಲ್ಲಿನಿಂದ ಬಾಣ ಒಮ್ಮೆಲೇ ನುಗ್ಗಿ ಹೋಗಿತ್ತು.  ನವಾಬನ ಕುತ್ತಿಗೆಯಲ್ಲಿ ತೂರಿ. ಆಗ ತನ್ನ ಕೊನೆ ಕ್ಷಣದಲ್ಲಿ ಗೊತ್ತಾಗಿತ್ತು , ನವಾಬನಿಗೆ ತಾನೆಲ್ಲಿ ತಪ್ಪು ಮಾಡಿದೆ ಎಂದು.  ಸಾಯುವ ಕೊನೆ ಕ್ಷಣದಲ್ಲಿ , ಅವನಿಗೆ ನೆನಪಾಗಿದ್ದು ಶಬ್ದವೇಧಿ

ಅಷ್ಟರಲ್ಲೇ ಭೀತರಾಗಿ ನವಾಬನ ಕಡೆಯೇ ನೋಡುತ್ತಿದ್ದ ಅವನ ಅಂಗರಕ್ಷಕರು , ಒಮ್ಮೆಲೆ ಮಕಾಡೆ ಆಗಿ ಕೆಳಗೆ ಬಿದ್ದಿದ್ದರು .

ಹಿಂದಿನಿಂದ ಗುಡ್ಡಗಾಡು ಜನಾಂಗದ ನಾಯಕ , ಮತ್ತವನ ಜನರು ಬಿಟ್ಟ ಬಾಣಗಳು ....ಅವರ ಬೆನ್ನಿನಿಂದ ಹೊಕ್ಕು "ಹೃದಯ ಸೀಳಿ "ಹಾಕಿತ್ತು. ಶಂಕರ "ಕಣ್ಣಿನ ಪಟ್ಟಿ "ತೆಗೆದು , ಗುರುಗಳತ್ತ ಹೆಜ್ಜೆ ಹಾಕಿದ್ದ . ಬಂದಿದ್ದ ಗುಡ್ಡಗಾಡು ಜನ , ಬಿದ್ದಿದ್ದ ಹೆಣಗಳನ್ನು "ಗಂಗೆಯಲ್ಲಿ "ತೇಲಿ ಬಿಡುತ್ತಿದ್ದರು. ಒಬ್ಬ ವಾಸಿಮ್ ಮಾತ್ರ ಉಳಿದಿದ್ದ , ಅಲ್ಲಿದ್ದ ರಕ್ತದ ಕಲೆಗಳನ್ನು ನೋಡುತ್ತಾ. ಅಷ್ಟರಲ್ಲಿಯೇ ಹಿಮಾಂಶು ಬಂದು ಇಳಿದಿದ್ದ . ಆತನ ಕಣ್ಣಿಗೆ ಕಾಣಿಸಿದ್ದು , ಹಾಸಿ ಹೋಗಿದ್ದ ರಕ್ತದ ಕಲೆಗಳು ಮಾತ್ರ . ಒಳಗೆ ಬಂದವನಿಗೆ , ಆಕಾರದಲ್ಲಿಯೇ ಪೇಶ್ವೆ ಯಾರೆಂದು ತಿಳಿದಿತ್ತು . ತನ್ನ ಗುರುಗಳ ಕಾಲ ಬುಡದಲ್ಲಿ ಕುಳಿತಿದ್ದ ಅವ. ಆಗ ಕಾಣಿಸಿದ್ದ "ವಾಸಿಮ್ "ಅವನ ಕಣ್ಣಿಗೆ . ಎಷ್ಟೋ ವರ್ಷಗಳಿಂದ , ಉಗ್ರಗಾಮಿಗಳನ್ನು

ಗಡಿದಾಟಿಸುತ್ತಾ ಇದ್ದ "ವಾಸಿಮ್ "ತಲೆಗೆ ...ಗುಂಡಿಟ್ಟು ಹೊಡೆದಿದ್ದ ಹಿಮಾಂಶು ....ಭವಿಷ್ಯದ ಉಜ್ವಲ ಭಾರತಕ್ಕೆ , ತನ್ನ ಕೊಡುಗೆ ಕೂಡ ಇರಲೆಂದು . 

     


Rate this content
Log in

Similar kannada story from Drama