Natesh MG

Abstract Classics

3.5  

Natesh MG

Abstract Classics

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.

9 mins
310


ಅವತ್ತು ಸಂಭ್ರಮವೋ "ಸಂಭ್ರಮ "ಭಾರದ್ವಾಜನಿಗೆ .

     

ತನ್ನ ಮುದ್ದಿನ "ತಮ್ಮ "ವಶಿಷ್ಠ , ಬಹಳ ವರ್ಷದ ನಂತರ ಊರಿಗೆ ಬರುತ್ತಿದ್ದಾನೆಂದು .  ಕೆಲಸಗಾರ ಕರಿಯನ ಜೊತೆ , ತೋಟದ ಮನೆಯನ್ನು "ಸ್ವಚ್ಛ "ಮಾಡಿಸುತ್ತಿದ್ದ . " ಇದ್ದಕಿದ್ದ ಹಾಗೆ "ಹೊರಟ" ತಮ್ಮನ ಬಗ್ಗೆ , ಯಾವುದೋ ಅನುಮಾನ ಆತನಿಗೆ ".

         

ಅವನಿಗೂ ಅವನ ತಮ್ಮನಿಗೂ , ಎಂಟು ವರ್ಷಗಳ ವ್ಯತ್ಯಾಸ . ಆತ ತಮ್ಮನೆಂದು "ಯಾವತ್ತೂ " ಬಾಸವಾಗಿರಲಿಲ್ಲ.

ಭುಜದ ಮೇಲೆ "ಹೊತ್ತು" ಓಡಾಡಿದ್ದ . ಸೈಕಲ್ ಹೊಡೆಯುವಾಗ , ಹಿಂದೆ "ತಮ್ಮ "ಇರಲೇ ಬೇಕು ಅವನಿಗೆ .

"ಅಪ್ಪು "ಎಂದೇ , ಹೆಸರು ಇಟ್ಟು ಬಿಟ್ಟಿದ್ದ ತಮ್ಮನಿಗೆ . ಆತನಿಗೆ "ಮೀಸೆ "ಬಿಡಿಸಿ , ರಾಜನ ವೇಷ ಕಟ್ಟಿ ....ಎಷ್ಟೋ ಬಾರಿ "ಮನೆಯಲ್ಲಿ "ಹೊಡೆತ ಕೂಡ ತಿಂದಿದ್ದ . ಆದರೂ ಯಾವತ್ತಿಗೂ ಆತ ಅಕ್ಕರೆಯ ತಮ್ಮ . ಆತ ಒಂದೊಂದು ಹಂತವನ್ನು ದಾಟಿ , ಎಂಜಿನಿಯರಿಂಗ್ ಪದವಿ ಪಡೆದಾಗ , ಇಡೀ "ಊರಿಗೆ " ಸಿಹಿ ಹಂಚಿ ಬಂದಿದ್ದ . ಎಲ್ಲದಕ್ಕೂ ಆತನದೇ "ವಯಸ್ಸಿನ "ಆಳು ಕರಿಯ , ಅವನ "ಹೆಂಡತಿ "ಅವನ ಭುಜಗಳ ಹಾಗೆ . ಅಪ್ಪ ಗಣಪತಿ ಭಟ್ಟರು ಮಾತ್ರ , "ನೋಡು ನಿನ್ನ ತಮ್ಮನ ಸಾಧನೆ " ಎಂದು ಹೇಳಿದಾಗ ....ಇನ್ನಷ್ಟು ಖುಷಿ ಪಟ್ಟಿದ್ದ . ತಾನು ಕೇವಲ "ಡಿಗ್ರಿ "ಎಂದು ಯಾವತ್ತೂ ಅನಿಸಿರಲಿಲ್ಲ ಅವನಿಗೆ . ತನಗೆ ಮದುವೆಗೆ , "ಹೆಣ್ಣು "ಕೊಡದ ಬಗ್ಗೆ ಕೂಡ ಬೇಸರ ಇರಲಿಲ್ಲ ಅವನಿಗೆ .

      

ಪ್ರತಿ ಸಂತೋಷವನ್ನು , ಅಪ್ಪ ಅಮ್ಮನಲ್ಲಿ ... ಪಾಳು ಬಿದ್ದ ಜಾಗದಲ್ಲಿ ....ತಾನು "ಮಾಡಿದ್ದ "ತೋಟದ "ಫಸಲನ್ನು "ನೋಡಿ ಖುಷಿ ಪಡುತಿದ್ದ . ತಮ್ಮನ "ಮದುವೆಯಲ್ಲಿಯೂ "ಕೂಡ ಸಂಭ್ರಮ . ಆತ ಮದುವೆ ಆದ ಮೇಲೆ ಗೊತ್ತಾಗಿದ್ದು , "ತಮ್ಮ ದೊಡ್ಡವನು ಆಗಿದ್ದಾನೆ ಎಂದು ". ಇಡೀ ಮನೆಗೆ ಆವತ್ತು ಕಳೆ ಬಂದಿತ್ತು . ಮೂರು , ನಾಲ್ಕು ವರ್ಷದ ನಂತರ "ಬರುತ್ತಿರುವ " ವಸಿಷ್ಠನ ಆಗಮನಕ್ಕೆ . "ಎಲ್ಲೋ ಇದ್ದೀಯ ಅಪ್ಪು "ಎಂದು ಫೋನ್ ಮಾಡಿದವನಿಗೆ , "ಐದೇ ನಿಮಿಷ ಮನೇ ಕ್ರಾಸ್ ಬಳಿ ಇದ್ದೀನಿ " ಎಂಬ ಉತ್ತರ ಕೇಳಿ ..... "ಅಪ್ಪಯ್ಯ ಅಪ್ಪು ಬಂದ " ಎಂದು ಕೂಗಿ , ಹೊರಗೆ ನಡೆದಿದ್ದ .

                     

ಎಲ್ಲರೂ " ವಶಿಷ್ಠನ "ಆಗಮನಕ್ಕೆ , ಸಂತಸದಿಂದ ಮನೆ ಬಾಗಿಲಿಗೆ ಬಂದು ನಿಂತಿದ್ದರು . ದೊಡ್ಡ ಕಾರ್ ಬಂದು ನಿಂತಿದ್ದು ನೋಡಿ , ತಂದೆ ಗಣಪತಿ ಭಟ್ಟರು ...ಒಮ್ಮೆ ತಮ್ಮ "ಮೀಸೆ "ತಿರುವಿದರು . ಅದರಿಂದ ಮೊದಲು "ಕೆಳಗೆ "ಇಳಿದಿದ್ದು ಸೊಸೆ ಕಡೆಗೆ ವಶಿಷ್ಠ . ತಮ್ಮನ "ಲಗೇಜ್" ತೆಗೆದುಕೊಳ್ಳಲು ಬಂದ ಭಾರದ್ವಾಜ ಮಾತ್ರ , ಒಮ್ಮೆಲೇ "ಕಂಗಾಲಾಗಿ" ಹೋಗಿದ್ದ .

ತಮ್ಮನ ಮತ್ತು , ಆತನ ಮಡದಿಯ "ಮುಖ " ನೋಡಿ . "ಅಪ್ಪು ಸೀದಾ ತೋಟದ ಮನೆಗೆ ಹೋಗಿ ಬಿಡು , ನಾ ಕಾಲು ಹಾದಿಯಲ್ಲಿ ಬರುತ್ತೇನೆ "ಎಂದು ನುಡಿದವನೇ... ಚಪ್ಪಲಿ ಮೆಟ್ಟಿ "ತೋಟದ" ದಾರಿ ಹಿಡಿದಿದ್ದ ಭಾರದ್ವಾಜ.

  

ಅಣ್ಣ ಹೇಳಿದ ಮಾತಿಗೆ , ವಶಿಷ್ಠನ ಮುಖದ ಮೇಲೆ "ಸಿಟ್ಟು  "ಮೂಡಿತ್ತು ಒಮ್ಮೆಲೇ . ಅಪ್ಪ ಅಮ್ಮನ ಕಡೆ ಒಮ್ಮೆ ನೋಡಿ , ಸೀದಾ ಕಾರ್ ಹತ್ತಿ "ತೋಟದ" ಮನೆ ಕಡೆ ನಡೆದಾಗ ...ಆಶ್ಚರ್ಯವಾಗಿತ್ತು ಗಣಪತಿ ಭಟ್ಟರಿಗೆ , ಅವರ ಮಡದಿಗೆ . ಜೊತೆಗೆ , ಇದ್ದಕಿದ್ದ ಹಾಗೆ ಆದ "ಬೆಳವಣಿಗೆ "ನೋಡಿ ಆಘಾತ ಕೂಡ . ಎಲ್ಲವನ್ನೂ ನೋಡುತ್ತಿದ್ದ , ಗಣಪತಿ ಭಟ್ಟರ "ವಿಧವೆ " ತಂಗಿ .....ತಕ್ಶಣವೇ "ಮುಖಕ್ಕೆ " ಹೊಡೆದಂತೆ ಹೇಳಿದ್ದಳು . "ಎಲ್ಲಾ ಜವಾಬ್ದಾರಿ ಕೊಟ್ಟರೆ ಹೀಗೆ ಆಗುವುದು ,

ಸ್ವತಃ ತಮ್ಮನನ್ನು ... ಛೇ " ಎಂದು ಹೇಳಿ ...ಒಳಗೆ ನಡೆದಿದ್ದಳು ಆಕೆ . ಸೀದಾ ನಡೆದು ಹೋಗಿದ್ದ ಭಾರದ್ವಾಜ .

ಮೊದಲೇ ಒಂದು ಅನುಮಾನ ಇತ್ತು ಅವನಿಗೆ ....ಯಾವ ಹಬ್ಬಕ್ಕೆ , ಕಾರ್ಯಕ್ರಮಕ್ಕೆ ಬಾರದ ತಮ್ಮ .....ಇದ್ದಕಿದ್ದ ಹಾಗೆ ತಾನೇ "ಹೊರಟು" ಬಂದ ಬಗ್ಗೆ .

          

ಅದಕ್ಕೆ "ತೋಟದ "ಮನೆಯನ್ನು ಸ್ವಚ್ಛಗೊಳಿಸಿ , ಒಂದು "ತಿಂಗಳಿಗಾಗುವಷ್ಟು "ದಿನಸಿ ಎಲ್ಲವನ್ನು ಇಟ್ಟಿದ್ದ . ಅದೇ ಸಮಯಕ್ಕೆ ಬಂದು ನಿಂತಿತ್ತು ಕಾರ್ . " ಅಪ್ಪು ನಿಮ್ಮಿಬ್ಬರಿಗೂ ಜ್ವರ ಬಂದ ಹಾಗಿದೆ , ಸದ್ಯಕ್ಕೆ ಇಲ್ಲೇ ಇರಿ" . "ತಕ್ಷಣವೇ ಡಾಕ್ಟರ್ ವ್ಯವಸ್ಥೆ ನೋಡುತ್ತೇನೆ ನಾನು "ಎಂದು ಹೇಳಿ ....ತನ್ನ ಹಳೆಯ "ವೈದ್ಯ "ಮಿತ್ರನ ಫೋನ್ ನಂಬರ್ ಹುಡುಕಿ ಮಾತನಾಡಿದ್ದ ."ಭಾರದ್ವಾಜ ಅವರಿಗೆ ಜ್ವರ ಎಷ್ಟು ದಿನದಿಂದ ಇದೆ ಎಂದು ಕೇಳು , ಜ್ವರಕ್ಕೆ "ಪ್ಯಾರಸಿಟಮಾಲ್ " ತೆಗೆದುಕೊಳ್ಳಲಿ. ಹಾಗೆ ಹೋಗಬಹುದು ಜ್ವರ . ದಿನಕ್ಕೆ ನಾಲ್ಕು ಬಾರಿ , ಯಾವುದಾದರೂ ಜೂಸ್ ಕುಡಿಯಲು ಹೇಳು .

ಹಾಗೆ "ವಿಟಮಿನ್ ಸಿ "ಮಾತ್ರೆ , ಕೂಡ ತರಿಸಿ ಕೊಡು " ಎಂದಿದ್ದ .  ಜೊತೆಗೆ "ರೋಗ ಜಾಸ್ತಿ ಆದರೆ , ಬೆಡ್ ವ್ಯವಸ್ಥೆಯ ಜವಾಬ್ದಾರಿ ಕೂಡ ತನ್ನದು "ಎಂದು ಹೇಳಿದ್ದ .ನಿಶ್ಚಿಂತೆಯಿಂದ ಉಸಿರು ಬಿಟ್ಟಿದ್ದ , ಭಾರದ್ವಾಜ ಆಗ "ಮಿತ್ರನ" ಮಾತು ಕೇಳಿ. ತಕ್ಷಣವೇ ಮನೆಗೆ ಹೋಗಿ , ಮಿತ್ರ ಹೇಳಿದ ಎಲ್ಲಾ ಮಾತ್ರೆಗಳನ್ನು "ಪರಿಚಯದ "ಅಂಗಡಿಯಿಂದ ತಂದು ತಮ್ಮನಿಗೆ ಕೊಟ್ಟಿದ್ದ . ಜೊತೆಗೆ ತನ್ನ ಜೊತೆ ಬಂದ ಕರಿಯನಿಗೂ , "ಸ್ನಾನ ಮಾಡಿ ಊಟಕ್ಕೆ ಬಾ " ಎಂದಕೂಡಲೇ , ಎಲ್ಲವೂ ಅರ್ಥವಾಗಿತ್ತು ಕರಿಯನಿಗೆ . ಮುದ್ದಿನ ತಮ್ಮನ ಬಳಿ ಕುಳಿತು ಹೇಳಿದ್ದ... "ವಯಸ್ಸಾದ ಅಪ್ಪ ಅಮ್ಮನ ಚಿಂತೆ ಕಣೋ .

ನನ್ನದು ಬಿಡು ....ನಾಲ್ಕು ದಿನ ಹೇಗೊ ಇಲ್ಲಿ ಸುಧಾರಿಸಿಕೊ ...ಅಷ್ಟರಲ್ಲಿ ಕಡಿಮೆ ಆಗದೇ ಇದ್ದರೆ ಬೇರೆ ವ್ಯವಸ್ಥೆ ಮಾಡಿದ್ದೀನಿ " ಎಂದು , ಸಮಾಧಾನ ಮಾಡಿ ಮನೆಗೆ ಬಂದಾಗ ಮಾತ್ರ "ಆಘಾತ" ಕಾದಿತ್ತು .

                  

ಬಾಗಿಲಲ್ಲಿ ನಿಂತ "ಅಪ್ಪನ" ದೃಷ್ಠಿ ಇವನ ಕಡೆಗೆ . "ಒಂದು ಮಾತು ಕೂಡ "ಆಡದ "ಹಾಗೆ ಮಾಡಿದೆಯಲ್ಲೋ ,

ಅವನ ತೋಟದ ಮನೆಗೆ ಕಳುಹಿಸಿ " .. ಎಂದು ಹೇಳುತ್ತಿರುವಾಗಲೇ , ಮಾತನಾಡದೆ "ಸೀದಾ" ಸ್ನಾನಕ್ಕೆ ಹೋಗಿದ್ದು ಅವರನ್ನು ಕೆರಳಿಸಿ ಬಿಟ್ಟಿತ್ತು . ಸ್ನಾನ ಮುಗಿದ ಕೂಡಲೇ ಹೇಳಿದ್ದ ." ಅವರಿಬ್ಬರಿಗೂ ಸಣ್ಣ ಜ್ವರ ಅಪ್ಪಯ್ಯ , ಗುಣವಾದ ಮೇಲೆ ಇಲ್ಲೇ ಇರ್ತಾರೆ ".  " ಈ ರೋಗದ ಹೆದರಿಕೆ , ಅದಕ್ಕೆ ಅಲ್ಲಿಗೆ ಹೋಗುವಂತೆ ಹೇಳಿದೆ " ಎಂದು ಹೇಳಿದ್ದು ಕೇಳಿ ಮತ್ತಷ್ಟು ಉರಿದು ಹೋಗಿತ್ತು ಗಣಪತಿ ಭಟ್ಟರಿಗೆ. "ನಿನ್ನ ತಮ್ಮನಿಗೆ , ಅಷ್ಟು ದೊಡ್ಡ ಬೆಂಗಳೂರಿನ "ವೈದ್ಯರಿಗೂ "ಗೊತ್ತಾಗದ ವಿಷಯ ನಿನ್ನ ತಲೆಗೆ ಹೊಳೆದಿದ್ದು , ಛೇ .....ಕರ್ಮ "ಎಂದಿದ್ದರು .  ಸಿಟ್ಟಿನಲ್ಲಿ. "ತಮ್ಮನಿಗಿಂತ ದೊಡ್ಡ ಜ್ಞಾನಿ ನೀನು " , ಹಿಂಬಾಲಿಸಿ ಬಂದಿತ್ತು ಮಾತು.  ಮೊದಲಿನಿಂದಲೂ "ಗಣಪತಿ ಭಟ್ಟರು" ಎಂದರೆ , ಒಂದು ದೊಡ್ಡ ಘನತೆ . ಸುತ್ತಮುತ್ತಲಿನ ಊರಿನಲ್ಲಿ , ಇವರದೇ ಅಂತಿಮ ಮಾತು. "ರಾಜಕೀಯದಲ್ಲಿ "ಕೂಡ ಇವರದು ದೊಡ್ಡ ಪಾತ್ರ .

ಕೀರ್ತಿ ಎಂಬುದು , ಇವರ "ಬೆನ್ನಿಗೆ "ಹತ್ತಿ ಬಂದಿತ್ತು . ಕಿರಿ ಮಗನ ಸಂಬಳ , ಆತ ಬೆಂಗಳೂರಿನಲ್ಲಿ ತೆಗೆದುಕೊಂಡ .ಕೋಟಿ ರೂಪಾಯಿಗಳ "ಅಪಾರ್ಟ್ಮೆಂಟ್ "ಬಗ್ಗೆ , ಎಲ್ಲಾ ಕಡೆಯೂ ಹೇಳಿಕೊಂಡು ಓಡಾಡಿದ್ದರು.

        

ಆದರೆ ಅಪರೂಪಕ್ಕೆ ಬಂದ ಮಗನ , ದೊಡ್ಡ ಮಗ ಸೀದಾ ತೋಟದ "ಮನೆಗೆ "ಕಳುಹಿಸಿದ್ದು ...ಸರಿ ಬಂದಿರಲಿಲ್ಲ ಅವರಿಗೆ ಸ್ನಾನ ಮಾಡಿ "ಪಂಕ್ತಿಯಲ್ಲಿ "ಊಟಕ್ಕೆ ಕುಳಿತಾಗ , ಮೊದಲು ಕೇಳಿಸಿದ್ದು "ಅತ್ತೆಯ "ಗೊಣಗಾಟ . "ಇವನದೇ ಆಯ್ತು ಪೂರ್ತಿ ಉಸ್ತುವಾರಿ ....ನನ್ನ ಕೂಡ ಯಾವಾಗ ಹೊರ ಹಾಕುತ್ತಾನೋ ", ಸಣ್ಣಗೆ ಬಂದಿತ್ತು ದ್ವನಿ . ಬಾಳೆಯ ಮೇಲೆ "ಅನ್ನ "ಬಡಿಸಿ , ಯಾವತ್ತೂ ಏನು ಹೇಳದ ತಾಯಿ ಒಮ್ಮೆಲೇ ಕೇಳಿದ್ದಳು . "ಯಾಕೋ ಅತಿ ಆಯ್ತು ನಿಂದು , ಅವ ಕೂಡ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗ ಕಾಣೋ" ....ಆಕೆಯ ಕಣ್ಣು ತುಂಬಿ ಬಂದಿತ್ತು , ಈ ಮಾತು ಹೇಳುವಾಗ .  "ಹೊಟ್ಟೆ ಕಿಚ್ಚಿಗೂ ಕೂಡ ಮಿತಿ ಇರಬೇಕು" , ತಕ್ಷಣವೇ ಬಂದಿತ್ತು ಮಾತು ...ಅಮ್ಮನ ಕಡೆಯಿಂದ. ಯಾವತ್ತೂ ಅವರ ಮನೆಯಲ್ಲಿ , ಊರಿನ ದೇವಸ್ಥಾನದ "ಅರ್ಚಕರಿಗೆ" ಮತ್ತು , ಅವರದೇ ಜಾತಿಯ "ಪೋಸ್ಟ್ ಮಾಸ್ಟರ್ ಗೆ "ಕೂಡ..... ನಿತ್ಯದ ಆಹ್ವಾನ ಊಟಕ್ಕೆ .

             

ಒಮ್ಮೆಲೇ ಅನ್ನದ ಜೊತೆ , ಮನೆಯ ಸದಸ್ಯರ ಮಾತು ಸಾಲಾಗಿ ಬರತೊಡಗಿದ್ದು ಕೇಳಿ ಆಶ್ಚರ್ಯವಾಗಿತ್ತು. ಅತ್ತೆ ಬಂದು ಅನ್ನಕ್ಕೆ "ಸಾರು "ಬಡಸಿದಾಗ , ಗಣಪತಿ ಭಟ್ಟರ ಮಾತು ತೂರಿ ಬಂದಿತ್ತು . "ಮೊದಲಿನಿಂದಲೂ ನಿನಗೆ ಅವ ಆಗಿ ಬರೋಲ್ಲ , ಅವ "ಬುದ್ದಿವಂತ "ಎನ್ನುವ ಹೊಟ್ಟೆಕಿಚ್ಚು ಬೇರೆ ನಿನಗೆ . ಮನೆ ಯಜಮಾನ ನಾನು ಇನ್ನೂ ಗಟ್ಟಿಯಾಗಿ ಇದ್ದೀನಿ ಇಲ್ಲಿ "....ಬಾಯಿಗೆ ಹಾಕಬೇಕು ಎನ್ನುವ "ತುತ್ತು" ನಿಂತು ಹೋಗಿತ್ತು ....ಅಪ್ಪನ ಮಾತು ಕೇಳಿ . ಮನೆ ಊಟದ ಕೊಠಡಿಯ ಆಚೆಗೆ , ಊಟಕ್ಕೆ ಕುಳಿತಿದ್ದ "ಕರಿಯ "ದಂಪತಿಗಳಿಗೆ ಕೂಡ . " ಎಲ್ಲವೂ ವಹಿಸಿಕೊಟ್ಟು ತಪ್ಪು ಮಾಡಿದೆ ನಿನಗೆ , ನಿನ್ನ ತಮ್ಮನ" ಪಾಲು" ಇದೆ ಅದರಲ್ಲಿ ಎನ್ನುವುದು ನೆನಪಿರಲಿ ".  ಗಣಪತಿ ಭಟ್ಟರ ಮಾತು , ಊಟಕ್ಕೆ ಕುಳಿತಿದ್ದ ಊರಿನ ಅರ್ಚಕರು ಮತ್ತು ಪೋಸ್ಟ್ ಮಾಸ್ಟರ್ ಗೆ ಕೂಡ ಅಚ್ಚರಿಯಾಗಿತ್ತು ....ವಿಷಯ ಏನೆಂದು ಗೊತ್ತಾಗದೆ .

          

"ಅಣ್ಣಾ ಮೊದಲು ಅವನ ಬಳಿ "ಲೆಕ್ಕ "ಕೇಳು , ಈಗಲೇ ಅದೆಷ್ಟು "ಸಾಲ "ಮಾಡಿ ಬಿಟ್ಟಿದ್ದಾನೋ..ನಿನ್ನ ಹೆಸರಿನಲ್ಲಿ "ಎಂದು , ಅತ್ತೆಯ ದ್ವನಿ ತೂರಿ ಬಂದಿತ್ತು ಒಳಗಿನಿಂದ .  ಸುಮ್ಮನೆ ಕುಳಿತು ಬಿಟ್ಟ ಭಾರದ್ವಾಜ. ಕಣ್ಣಿನಲ್ಲಿ ಆಗಲೇ "ನೀರಿನ "ಸಣ್ಣ ಪೊರೆ . "ಊಟ ಮಾಡು , ನಂತರ ಅದೇನು ಕಡಿದು ಕಟ್ಟೆ ಹಾಕಿದ್ದಿಯೋ ತೋರಿಸು "ಎಂದು... ಗಣಪತಿ ಬಟ್ಟರು ಊಟ ಮಾಡತೊಡಗಿದರು . ಗಂಟಲಲ್ಲಿ ದುಃಖ ಕಟ್ಟಿ ಬರುತಿತ್ತು ಭಾರದ್ವಾಜ ನಿಗೆ . ಅಪ್ಪ ಅಮ್ಮ " ಬೈದಿದ್ದು "ಅವಮಾನ ಎನಿಸಿರಲಿಲ್ಲ. ಆದರೆ ತನ್ನ "ದುಡಿಮೆಯನ್ನು "ಶಂಕಿಸಿದ್ದು ಕೇಳಿ , ಎದ್ದು ಹೊರಗೆ ನಡೆದಿದ್ದ ತುಂಬಿದ ಕಣ್ಣಿನಲ್ಲಿ .

              

"ಇದೊಂದು ಬೆದರಿಸುವ ನಾಟಕ ಬೇರೆ ಇವನದು " , ಎಂದು ಮತ್ತೊಮ್ಮೆ "ಅನ್ನ "ಹಾಕಿಸಿ ಕೊಂಡಿದ್ದರು.  ಕೇಳುತ್ತಿದ್ದ ಕರಿಯ ದಂಪತಿಗಳಿಗೂ , ಒಂದು ತುತ್ತು ಇಳಿದಿರಲ್ಲ ಗಂಟಲಲ್ಲಿ . ಇಬ್ಬರೂ ಒಮ್ಮೆಲೇ ಎದ್ದು ಬಾಳೆ ಮಡಚಿ , ಅಲ್ಲಿ ಸಾರಿಸಿ .....ಹೊರಗೆ "ಅಂಗಳಕ್ಕೆ "ನಡೆದು ಹೋಗಿದ್ದರು . ಊಟದ ನಂತರ "ತೇಗುತ್ತಾ "ಬಂದ ಗಣಪತಿ ಭಟ್ಟರಿಗೆ ಕಾಣಿಸಿದ್ದು , ಅವರ ಬ್ಯಾಂಕ್ ಖಾತೆಯ ಪುಸ್ತಕಗಳು . ಒಂದಷ್ಟು "ಫಿಕ್ಸೆಡ್ "ಬಾಂಡ್ ಕೂಡ . ಜೊತೆಗೆ ತನ್ನ "ಬ್ಯಾಂಕ್" ಖಾತೆಯ ಪುಸ್ತಕ ಕೂಡ ಇಟ್ಟಿದ್ದ ಅವರ ಮುಂದೆ ಭಾರದ್ವಾಜ. " ತಪ್ಪಾಯ್ತು ನನ್ನದು , ಆದರೆ ಕ್ಷಮಿಸಿ ಬಿಡು ಅಪ್ಪಯ್ಯ " ಎಂದಷ್ಟೆ ಹೇಳಲು ಸಾಧ್ಯವಾಗಿದ್ದು ಅವನಿಗೆ . ತಕ್ಷಣವೇ ಒಳಗಿನಿಂದ ಹೊರಗೆ ಬಂದಿದ್ದರು , ಮನೆಯ ಹೆಂಗಸರು . ಎಲ್ಲರಿಗೂ ಕೈ ಮುಗಿದು , "ತಪ್ಪಾಗಿದೆ ಅಮ್ಮ ನನ್ನಿಂದ .....ಮೊದಲು ಏನು ಕಲಿಯದೆ ಹೋದೆ ನಾನು . ಕಡೆಗೆ ತಮ್ಮನ ಕೂಡ ಹೊರಗೆ ಹಾಕಿದೆ . ಆದರೆ ಎಲ್ಲಿಯೂ ಈ "ಕುಟುಂಬಕ್ಕೆ "ಮೋಸ ಮಾಡಿಲ್ಲ ನಾನು ....ಎನ್ನುವಾಗ ಆತನ ದ್ವನಿ ಕಟ್ಟಿ ಬರುತಿತ್ತು.

        

ತಿರುಗಿ ನೋಡದೆ , ಬರೀ "ಕಾಲಿನಲ್ಲಿ "ಹೊರಟು ರಸ್ತೆ ಇಳಿದಿದ್ದ ಭಾರದ್ವಾಜ . ಆತನಿಗೆ ಅಪ್ಪನ ಗದರುವಿಕೆ , ಅವರ ಸಿಟ್ಟು ಮಾಮೂಲು ...ಆದರೆ ಯಾವತ್ತೂ "ಹೀಯಾಳಿಸಿದ" ಅಮ್ಮ , ಆವತ್ತು ಕೇಳಿದ್ದು ಮಾತ್ರ ....ಹಿಂಸೆಗೆ ಈಡು ಮಾಡಿತ್ತು ಒಮ್ಮೆ "ಅಪನಂಬಿಕೆ "ಎನ್ನುವುದು ಬಂದರೆ , ಅದು ಯಾವತ್ತೂ ಕೂಡ ಪರಿಹಾರ ಆಗದ ವಿಷಯವೆಂದು ಅರಿತಿದ್ದ ಅವ .

ಇಷ್ಟು ದಿನ ಹೊಟ್ಟೆಗೆ , ಬಟ್ಟೆಗೆ ಒದಗಿಸಿದ ಮನೇ ಕಡೆ ಒಮ್ಮೆ ನೋಡಿ ... ಉಟ್ಟ ಬಟ್ಟೆಯಲ್ಲಿ ಹೊರಟು ನಡೆದು ಹೋಗುತ್ತಿದ್ದ ಆತ . ಏನೋ ಆಗುತ್ತಿದೆ ಎಂಬುದು ಮಾತ್ರ ಗೊತ್ತಾಗಿತ್ತು , ಅವನ "ಅಮ್ಮ "ಭಾಗೀರಥಿಗೆ . ಆದರೆ ಮಗ ಹೊರಟಿದ್ದು ನೋಡಿ , ಒಮ್ಮೆಲೇ ಗಾಭರಿ ಆಗಿತ್ತು ಆಕೆಗೆ . "ಭಾರದ್ವಾಜ , ನಿಲ್ಲೋ "ಎನ್ನುವಷ್ಟರಲ್ಲಿ , ಭಟ್ಟರ ದ್ವನಿ ತಡೆ ಹಿಡಿದಿತ್ತು . "ಎಲ್ಲಿಗೆ ಹೋಗುತ್ತಾನೆ ಬಿಡು , ಸಂಜೆಯೊಳಗೆ ಊಟಕ್ಕೆ ಇರುತ್ತಾನೆ ನೋಡು "ಎಂದು ಬಿಟ್ಟಿದ್ದರು.


ದೂರದಲ್ಲಿ ಕುಳಿತ ಪೋಸ್ಟ್ ಮಾಸ್ಟರ್ ಕರೆದು , "ಮೊದಲು ಒಂದೋ ಎರಡೋ ಲಕ್ಷ ಇತ್ತು ಇರಬೇಕು ...ನಾಲ್ಕು ವರ್ಷದ ಹಿಂದೆ " ."ಅದೆಷ್ಟು ತೆಗೆದಿದ್ದಾನೆ ಅವ ನೋಡಿ" ಎಂದು , ಅವರ ಕಡೆ ನೋಡಿದ್ದರು ಭಟ್ಟರು . ಊಟ ಬಿಟ್ಟು , ಹೆಂಡತಿ ಭಾಗೀರಥಿ ಕೂಡ ಜಗುಲಿಯ ಕಂಭಕ್ಕೆ ಒರಗಿ ಕುಳಿತಿದ್ದು ಜೊತೆಗೆ ಅವರ ವಿಧವೆ ತಂಗಿ ....ಇದೆಲ್ಲವನ್ನೂ ನೋಡುತ್ತಾ ನಿಂತಿದ್ದು , ಭಟ್ಟರಿಗೆ ಎಲ್ಲವನ್ನೂ ಒಮ್ಮೆಲೇ "ಇತ್ಯರ್ಥ" ಮಾಡಬೇಕು ಎಂದನಿಸಿದ್ದು ಸುಳ್ಳಲ್ಲ . ಪೋಸ್ಟ್ ಮಾಸ್ಟರ್ ಒಂದೊಂದೇ , ಪುಸ್ತಕ ತೆಗೆದು ನೋಡುತ್ತಿದ್ದರು .

    

ಕರಿಯ ಮಾತ್ರ "ಅಂಗಳದ "ಮೂಲೆಯಲ್ಲಿ ಒರಗಿ ಕುಳಿತಿದ್ದ . ತನ್ನ ಯಜಮಾನ "ಹೊರಟು "ಹೋದ ಚಿಂತೆ ಒಂದುಕಡೆ ಆದರೆ .....ಅವರ ಮೇಲೆ ಏನೇನು" ಆರೋಪ " ಬರಬಹುದು ಎಂಬ ಆತಂಕ ಬೇರೆ . "ಭಟ್ಟರೇ , ನಿನ್ನ ಉಳಿತಾಯ ಖಾತೆಯಲ್ಲಿ ಅರವತ್ತು ಸಾವಿರ ಇದೆ ಅಷ್ಟೆ " ಎಂದಿದ್ದರು ಪೋಸ್ಟ್ ಮಾಸ್ಟರ್ . "ಗೊತ್ತಿತ್ತು , ಅವ ಜಾತ್ರೆ ಪೇಟೆ

ತಿರುಗುವಾಗಲೇ " .....ಪಟ್ಟನೆ ಬಂದಿತ್ತು ಭಟ್ಟರ ಮಾತು. ಆದರೆ ನಿಮ್ಮ ಹೆಸರಿನಲ್ಲಿ "ಐದು "ಲಕ್ಷದ ಡಿಪಾಸಿಟ್ ಇದೆ , ಭಾಗೀರಥಿ "ಅಮ್ಮನವರ "ಹೆಸರಿನಲ್ಲಿ ಕೂಡ ಅಷ್ಟೆ ಮೊತ್ತದ ಠೇವಣಿ ಎಂದು..... ಫಿಕ್ಸೆಡ್ "ಡಿಪಾಸಿಟ್ " ಬಾಂಡ್ ಅವರ ಮುಂದೆ ಇಟ್ಟಿದ್ದರು .

           

ವಸಿಷ್ಠನ ಹೆಸರಿನಲ್ಲಿ ಕೂಡ , ಐದು ಲಕ್ಷದ ಬಾಂಡ್ ಇದೆ ಭಟ್ಟರೆ ಎಂದು ...ಅದನ್ನು ಪಕ್ಕಕ್ಕೆ ಇಟ್ಟು ಉಳಿದ ಕಾಗದದ ಮೇಲೆ ಗಮನ ಕೊಟ್ಟಿದ್ದರು . ಅರ್ಥವೇ "ಆಗಿರಲಿಲ್ಲ "ಭಟ್ಟರಿಗೆ ಮೊದಲಿಗೆ .ನಿಮ್ಮ ತಂಗಿಯ ಹೆಸರಿನಲ್ಲಿ , ನಮ್ಮಲ್ಲೇ ಒಂದು ಡಿಪಾಸಿಟ್ ಇಟ್ಟಿದ್ದಾನೆ ಭಾರದ್ವಾಜ . ಎಂದು ಅವರದೇ "ಶಾಖೆಯ" ಪುಸ್ತಕ ತೆಗೆದು ಇಟ್ಟಿದ್ದರು . ಒಮ್ಮೆ ಅದರ "ಅಂಕಿಯ "ಕಡೆಗೆ ಕಣ್ಣಾಡಿಸಿದಾಗ , ಅಪನಂಬಿಕೆ ಇತ್ತು "ಭಟ್ಟರ "ಮುಖದ ಮೇಲೆ .


ತಲಾ ಒಂದು "ಲಕ್ಷದ "ಎರಡು ಡಿಪಾಸಿಟ್ ಗಳನ್ನು ಕೂಡ , ಅವರ ತಂಗಿಯ ಹೆಸರಲ್ಲಿ ಮಾಡಿದ್ದ ಭಾರದ್ವಾಜ. ಆವತ್ತು ನೆನಪಿಗೆ ಬಂದಿತ್ತು , ವರ್ಷಕೊಮ್ಮೆ ತಮ್ಮ ಸಹಿ ತೆಗೆದುಕೊಂಡು .....ಯಾವ ಯಾವುದೋ ಫಾರ್ಮ್ ಗೆ "ಸಹಿ" ಹಾಕಿಸಿಕೊಂಡು ಹೋಗುತಿದ್ದ ಮಗನ ಬಗ್ಗೆ . ಕೊನೆಯಲ್ಲಿ "ಭಾರದ್ವಾಜನ" ಬ್ಯಾಂಕ್ ಪುಸ್ತಕ ಒಂದು ಉಳಿದಿತ್ತು .

ಅದನ್ನು ತೆಗೆದ ಪೋಸ್ಟ್ ಮಾಸ್ಟರ್ , ಒಂದು ಮಾತನಾಡದೆ ದೂರ ಹೋಗಿ ಕುಳಿತು ಬಿಟ್ಟಿದ್ದರು .  ಭಟ್ಟರಿಗೆ ಕಾಣಿಸಿದ್ದು ಅದರಲ್ಲಿನ , 1300 ರೂಪಾಯಿಗಳು .

        

" ಆದರೂ ಅವನ ಹೆಸರಲ್ಲೇ , ಮೂರು ವರ್ಷದ ಅಡಿಕೆ ಇರುತ್ತೆ ಮಂಡಿಯಲ್ಲಿ ಬಿಡಿ "ಎಂದಿದ್ದರು . ಆದರೆ ಅವರನ್ನೇ "ಅಣಕಿಸುತ್ತ "ಕೊನೆಯಲ್ಲಿ ಉಳಿದಿತ್ತು , ಮಂಡಿಯ ವ್ಯವಹಾರದ ಚೀಟಿ . ಎಲ್ಲವೂ ಗಣಪತಿ ಭಟ್ಟರ ಹೆಸರಿನಲ್ಲಿಯೇ ಇತ್ತು ಅದು . ಆಗ ಕರಿಯ ಎದ್ದು ನಿಂತಿದ್ದ . ಆತನ ಕಣ್ಣು ಕೆಂಪಗೆ ಆಗಿತ್ತು , ತನ್ನ ಒಡೆಯನ ಬಗ್ಗೆ ಇಲ್ಲಸಲ್ಲದ "ಅಪವಾದ "ಕೇಳಿ . ಒಡೆಯರೇ , ಎಲ್ಲಿತ್ತು ಇಷ್ಟು "ಪಸಲು "ನಿಮಗೆ ಆಗ . ಪೂರ್ತಿ ಹಾಳಾಗಿತ್ತು ಜಮೀನು . ಗದ್ದೆ ಮಾಡದೇ "ಅದೆಷ್ಟು "ವರ್ಷ ಆಗಿತ್ತು . ಹೇಳುವಾಗ "ಅಳು "ಬಂದು ಹೋಗಿತ್ತು ಆತನಿಗೆ.  ರಾತ್ರಿ ಹಗಲು ಎನ್ನದೆ ಇವತ್ತು , ಯಾವಾಗಲೂ ಖಾಲಿ ಇರುತಿದ್ದ "ಕಣಜ "ಭತ್ತದಿಂದ ತುಂಬಿದೆ .  ಅಡಿಕೆ ಮರ ಹೆಸರಿಗೆ ಇತ್ತು , ಅಲ್ಲೊಂದು ಇಲ್ಲೊಂದು . ಈಗ ನೋಡಿ , ಅದರಲ್ಲಿ "ತೂಗಾಡುವ "ಫಸಲನ್ನು . ನಾನು ನಿಮ್ಮ ಮನೇ "ಆಳು "ದಿಟ . ಆದರೂ ಅಳಿನ ಕೆಲಸ ಕೂಡ , ಒಂದೇ ಸಮನೆ ಮಾಡಿಬಿಟ್ಟರು ಸಣ್ಣ ಭಟ್ಟರು . ಆತನ ಅಳು ಈಗ "ಕೋಪಕ್ಕೆ "ತಿರುಗಿತ್ತು . ನಿಮ್ಮ ಬ್ರಾಹ್ಮಣ ಜಾತಿಯಲ್ಲಿ , ಅದೆಷ್ಟು ಮಂದಿ ಹೊರಗಡೆಯ ಹುಡುಗಿಯನ್ನು ಮದುವೆಯಾಗಿಲ್ಲ .

          

ಆದರೆ ನಿಮ್ಮ ಮಡಿ ಮೈಲಿಗೆಗೆ , ಆಗಿ ಬರೋಲ್ಲ ಎಂದು ಸುಮ್ಮನಾದರು . ನಿಮ್ಮ ಕಿರಿ ಮಗನಿಗೆ , ತಿಂಗಳ ತಿಂಗಳ ಅಕ್ಕಿ ..ಕಾಯಿ ಎಲ್ಲವೂ ಇದೆ ಕೈ ಇಂದ ಕಳುಹಿಸಿ ಬರುತ್ತಿದ್ದೆ ನಾನೇ "..."ಸಣ್ಣ ಭಟ್ಟರು ಹೇಳಿದ ಹಾಗೆ ". "ಆದರೆ ಯಾವಾಗಲೂ ಅವರನ್ನು "ಗೇಲಿ "ಮಾಡುತ್ತಾ ಬಂದಿರಿ ನೀವು "....ಕುಸಿದು ಕುಳಿತಿದ್ದ ಕರಿಯ ...ನೆಲದ ಮೇಲೆ . ಪ್ರತಿಯೊಂದು ಕೆಲಸಕ್ಕೆ , ಒಡೆಯನ ಜೊತೆ ಹೆಗಲು ಕೊಟ್ಟು , ಅದರ "ಪ್ರತಿ "ವಿಷಯ ಗೊತ್ತಿತ್ತು ಆತನಿಗೆ .

         

ಮೊದಲ ಬಾರಿಗೆ ಇಡೀ ಮನೇ , ಗರಬಡಿದು ಹೋಗಿತ್ತು .  ಸುತ್ತಮುತ್ತಲಿನ ಹಳ್ಳಿಯಲ್ಲಿ , ನೂರಾರು "ಪಂಚಾಯಿತಿ "ಮಾಡಿದ ಗಣಪತಿ ಭಟ್ಟರು ...ಒಮ್ಮೆಲೇ ನಡೆದು ಹೋದ ಆವತ್ತಿನ ಘಟನೆ ಬಗ್ಗೆ ಆಶ್ಚರ್ಯ . ಜೊತೆಗೆ "ಕರಿಯನ "ಮಾತು , ಅವರನ್ನು ಇರಿದು ಹಾಕುತ್ತಿತ್ತು . "ನಿಮ್ಮ ಹಾರ್ಟ್ ಆಪರೇಷನ್ , ನಿಮ್ಮ ಪದೆ ಪದೇ ಏರುವ ಬಿಪಿ ಎಲ್ಲದಕ್ಕೂ , ತಕ್ಷಣವೇ ಭಾರದ್ವಾಜ ಭಟ್ಟರು ಬೇಕು .  ಪ್ರತಿ ಹಬ್ಬಕ್ಕೂ , ನಿಮ್ಮ ಓಡಾಟದ ಖರ್ಚಿಗೆ ಅವರನ್ನು ಎತ್ತಿನ ಹಾಗೆ ಮಾಡಿ ಬಿಟ್ಟಿರಿ ನೀವು "... ಆಗ ಅಳು ಉಕ್ಕಿ ಬಂದಿತ್ತು , ಕುಳಿತಿದ್ದ ಭಾಗೀರಥಿ ತಾಯಿಗೆ .  "ಕರಿಯ ಸುಮ್ಮನೆ ಇರೋ , ಯಾಕೆ ಹಾಗೆ ನೀನು ಕೂಡ ನೋವು ಕೊಡ್ಡುತ್ತಿಯೋ "ಎಂದಿದ್ದರು .  ಮತ್ತೊಮ್ಮೆ ಕೆರಳಿ ಹೋಗಿದ್ದ ಕರಿಯ . ಆತನ ಹೆಂಡತಿ ಮಾತ್ರ , ಸೀರೆ ಬಾಯಿಗೆ ಅಡ್ಡವಿಟ್ಟು ಅಳುತ್ತಿದ್ದಳು . "ಆವತ್ತು ಮಣಿಪಾಲ್ ಆಸ್ಪತ್ರೆಯಲ್ಲಿ , ನಾನು ಭಾರದ್ವಾಜ ಭಟ್ಟರೇ ಇದ್ದಿದ್ದು .

ಒಮ್ಮೆ ಮಾತ್ರ "ವಶಿಷ್ಠ ಭಟ್ಟರು" ವಿಚಾರಿಸಿದ್ದು ,ಫೋನ್ ಮಾಡಿ . ಆದರೂ ಆವತ್ತು , ನಿಮ್ಮ ಹೇಲು ಉಚ್ಚೆ ತೆಗೆದಿದ್ದಕ್ಕೆ , ಲೆಕ್ಕ ಕೇಳಿ ಬಿಟ್ಟಿರಿ ಅವರನ್ನು . " ಆಸ್ಪತ್ರೆಯಲ್ಲಿ ಅಪ್ಪನ ಸೇವೆ ಮಾಡುತ್ತಾ , ಅಪ್ಪ "ಹುಷಾರಾಗಿ "ಬರಲಿ ಎಂದು ....ಪದೆ ಪದೇ ಕೇಳಿಕೊಳ್ಳುತ್ತಾ ಇದ್ದ ತನ್ನ ಒಡೆಯನ ನೆನಪು ಆತನಿಗೆ ".  "ಇವತ್ತು "ರೋಗ "ಅಂಟಿಸಿ ಕೊಂಡು ಬಂದಿದ್ದಾರೆ , ವಶಿಷ್ಠ ಭಟ್ಟರು . ಅವರಿಗೂ" ಕಾಯಿಲೆಗೆ "ವ್ಯವಸ್ಥೆ ಮಾಡಿ , ಅದು ನಿಮಗೆ ಅಂಟಿದರೆ ಅಪಾಯ ಎಂದು ತೋಟದ ಮನೆಗೆ ಕಳುಹಿಸಿದ್ದು ಅವರನ್ನು .


ಮೂರು ಹೊತ್ತು ಟಿವಿ ವಾರ್ತೆ ನೋಡುವ ನಿಮಗೆ , ಅವರು ಹೇಳಿದರೂ ಅರ್ಥ ಆಗಲಿಲ್ಲ .  ಸರಿಯಾಗಿ ಹೇಳೋಕೆ ಕೂಡ , ನಿಮಗೆ ಎಲ್ಲಿ ಗಾಬರಿ ಆಗುತ್ತೋ ಎನ್ನುವ ಚಿಂತೆ ಇತ್ತು ಅವರಿಗೆ " ....ಜೋರಾಗಿ ಆಳುತ್ತಿದ್ದ ಕರಿಯ . ಊಟಕ್ಕೆ ಕುಳಿತು , ಒಂದೇ ಒಂದು "ಅಗುಳು "ತಿನ್ನದೇ ಹೋದ ತನ್ನ ಒಡೆಯನ ನೆನಪಾಗಿ . ಅಲ್ಲಿಯೂ ತನ್ನ ಒಡೆಯನಿಗೆ "ಲೆಕ್ಕ "ಕೇಳಿದ ಎಲ್ಲರ ಮೇಲಿನ ಸಿಟ್ಟು , ಕಣ್ಣೀರು ಧಾರೆಯಾಗಿ ಬರುತ್ತಿತ್ತು.

             

ಆಗ ಒಮ್ಮೆಲೇ "ಗರ "ಬಡಿದು ಹೋಗಿದ್ದರು. ಒಮ್ಮೆಯೂ , "ಇತ್ತೀಚೆಗೆ ಮನೆಗೆ ಬಾರದ ಕಿರಿ ಮಗ .....ಒಮ್ಮೆಲೇ ಮನೇ ಕಡೆ ಯಾಕೆ ಬಂದನೆಂದು ತಿಳಿದು ".  ಕೋಟಿ ರೂಪಾಯಿ ಆತನ ಮನೆ , ಆತನ ಸಂಬಳ ಎಲ್ಲವೂ .....ಭಾರದ್ವಾಜ ಮಾಡಿದ ....ತೋಟ , ಗದ್ದೆಯ ಮುಂದೆ ಏನು ಅಲ್ಲವೆಂದು ಅನಿಸಿದ ಕ್ಷಣ ಅದು . ಆಗ ದೂರದಲ್ಲಿ ಕುಳಿತಿದ್ದ ಅರ್ಚಕರಿಗೆ ಹೊಳೆದಿದ್ದು , "ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ "ಎಂಬ ಗಾದೆ . ಕರಿಯನ ರೋಷ ನಿಂತಿರಲಿಲ್ಲ , ಹಾಗೆ ಉಕ್ಕಿ ಬರುತಿದ್ದ ಆತನ ಅಳು ಕೂಡ . "ಸಾವಿರ ಕಡೆ ಕೆಲಸಕ್ಕೆ ನನ್ನನ್ನು "ಬರ "ಹೇಳುತ್ತಾರೆ ಒಡೆಯ , ಆದರೆ ಎಲ್ಲಿಯೂ ನನ್ನ "ಮನುಷ್ಯರ "ತರಹ ನೋಡಿಲ್ಲ .

              

ಆದರೆ ಭಾರದ್ವಾಜ ಭಟ್ಟರಿಗೆ ಯಾವತ್ತೂ ನಾ ಋಣಿ ಅಯ್ಯಾ . ಲೆಕ್ಕ ಬಾರದ ನನಗೆ , ಅವರೇ ಪ್ರತಿ "ಸಂಬಳ "ಲೆಕ್ಕ ಹಾಕಿ ....ಮನೆಗೆ ಬಂದು ಕೊಡುತ್ತಿದ್ದರು . ನಾ ಮಾಡಿಕೊಂಡ "ಮನೆಯೂ "ಅವರದೇ ಬಿಕ್ಷೆ ".... "ಅವರಿಲ್ಲದ "ಮನೆಯಲ್ಲಿ "ನಾ ಕೂಡ ಇರೋಲ್ಲ ಆಯ್ಯಾ" ಎಂದು , ತನ್ನ "ಮಡದಿಯ" ಜೊತೆ ನಡೆದು ಹೋಗಿದ್ದ ಕರಿಯ . ದಾರಿಯಲ್ಲಿ ಕೂಡ , ಆತನ ಕಣ್ಣೀರು ಕಡಿಮೆ ಆಗಿರಲಿಲ್ಲ . ಆತನ ಮಡದಿಯ "ಬಿಕ್ಕುವಿಕೆ "ನಿಂತಿರಲಿಲ್ಲ. ಒಮ್ಮೆಗೆ "ನಿಶ್ಯಬ್ದ "ವಾತಾವರಣ ಕವಿದು ಹೋಗಿತ್ತು . ಎಲ್ಲರಿಗೂ ಅರಿವಾಗಿತ್ತು , ಭಾರದ್ವಾಜ ಇನ್ನು ಹಿಂದೆ ತಿರುಗಿ ಬರೋಲ್ಲ ಎಂದು .

      

ಕಾಲಿಗೆ "ಚಪ್ಪಲಿ "ಕೂಡ ಹಾಕದೆ , ಕಣ್ಣೀರು ತುಂಬಿಕೊಂಡು "ನಡೆದು "ಹೋದ ಅವನ ಚಿತ್ರವೇ ....ಪದೆ ಪದೇ ಕಣ್ಣ ಮುಂದೆ ಬರುತಿತ್ತು .                .

                 

ಮುಕ್ತಾಯ  

       


Rate this content
Log in

Similar kannada story from Abstract