Natesh MG

Horror Fantasy Thriller

2  

Natesh MG

Horror Fantasy Thriller

ನಾಗಮಣಿ ರಹಸ್ಯ .

ನಾಗಮಣಿ ರಹಸ್ಯ .

16 mins
301


ಧಡ್ಡನೆ ಎದ್ದು ಕುಳಿತಿದ್ದ "ಅಗಸ್ತ್ಯ " ಮಧ್ಯರಾತ್ರಿಯಲ್ಲಿ .


ಇಡೀ "ಮೈ ಬೆವರಿ ಹೋಗಿದ್ದು "ಕೂಡ ಆತನ ಗಮನಕ್ಕೆ ಬಂದಿರಲಿಲ್ಲ. ಪ್ರತಿ ದಿನದ ಹಾಗೆ ಆವತ್ತು ಕೂಡ "ನಾಗರವೊಂದು "...ಅವನ ಕನಸಿನಲ್ಲಿ "ಹೆಡೆಬಿಚ್ಚಿ ನಿಂತು ಫೋತ್ಕಾರ "ಮಾಡುತಿತ್ತು .

"ಅದರ ತಲೆ ಮೇಲೊಂದು ಮಿಂಚುವ ಮಣಿ".

                              

ತುಮಕೂರಿನಲ್ಲಿ ಎಂಜಿನಿಯರಿಂಗ್ ಮುಗಿಸಿ , ಬೆಂಗಳೂರಿಗೆ ಬಂದು ಒಳ್ಳೆಯ ಕೆಲಸಕ್ಕೆ ಸೇರಿ ...

ಕೇವಲ ನಾಲ್ಕು ವರ್ಷವಾಗಿತ್ತು ಅಗಸ್ತ್ಯ . ಮನೆ ಮತ್ತು "ಅಪ್ಪ-ಅಮ್ಮ" ಇರುವುದು ಮಲೆನಾಡಿನ ಒಂದು ಕುಗ್ರಾಮವಾದರೂ ,ಪ್ರತಿ "ಹಬ್ಬಕ್ಕೆ "ತಪ್ಪಿಸದೆ ಮನೆಗೆ ಹೋಗುತ್ತಿದ್ದ .


ತಾನು ಬೆಳೆದು ಬಂದ ಮನೆ ,ಅಲ್ಲಿಯ ವಾತಾವರಣ ಅಪ್ಪ-ಅಮ್ಮ ಎಂದರೆ ಅಷ್ಟು ಅಚ್ಚು-ಮೆಚ್ಚು ಅವನಿಗೆ .

ಪ್ರತಿ ದಿನ ಕನಸಲ್ಲಿ ಕಾಣುವ "ನಾಗರಹಾವಿನದೇ" ಚಿಂತೆ ಶುರುವಾಗಿಬಿಟ್ಟಿತ್ತು ಅವನಿಗೆ . ಯಾಕೋ ರಾತ್ರಿ ಕಾಣಿಸುವ ನಾಗರ "ಹಗಲು" ಕೂಡ ಬೆಚ್ಚಿ ಬೀಳುವಂತೆ ಮಾಡುತಿತ್ತು .   ಸತತ "ನಾಲ್ಕು ತಿಂಗಳಿಂದ "ಅನಭವಿಸಿದ ಕಷ್ಟಕ್ಕೆ ,ಪರಿಹಾರ ಹುಡುಕಲೇ ಬೇಕಿತ್ತು ಅವ .  "ಆಗ ರಜೆ ಹಾಕಿ ಹೊರಟಿದ್ದ ಮನೆ ಕಡೆ ".


ಮನೆಗೆ ದಿಡೀರನೆ ಒಂದು "ಫೋನ್ " ಕೂಡ ಮಾಡದೆ ಬಂದ , ಅಗಸ್ತ್ಯನ ನೋಡಿ ಆಶ್ಚರ್ಯ ಆಗಿತ್ತು ತಂದೆ ತಾಯಿಗೆ .

ಆದರೂ ಕೂಡ ಅದನ್ನು ಮುಖದಲ್ಲಿ ತೋರ್ಪಡಿಸದೆ .."ಸ್ನಾನ ಮಾಡಿ ತಿಂಡಿ ತಿಂದು ಬಾ . ಕಡೆಗೆ ಮಾತನಾಡೋಣ " ಎಂದು ಹೊರಗೆ ನಡೆದಿದ್ದರು . ತಂದೆ ರಂಗನಾಥ ಶರ್ಮ. "  ಸಣ್ಣಗೆ ಆಗಿ ಹೋಗಿದ್ದಿಯಲ್ಲೋ "  ತಂದೆಯ ಗದರು ಮಾತು ಕೇಳುತ್ತಲೇ ,ಅವರ ಮುಂದೆ ಕುಳಿತಿದ್ದ ಅಗಸ್ತ್ಯ. "ಅಪ್ಪ ನಮ್ಮನೆ ದೇವರು "ತಿರುಪತಿ ವೆಂಕಟರಮಣ " ಅಲ್ವಾ " ,

ಇದ್ದಕ್ಕಿದ್ದ ಹಾಗೆ ಮಗ "ಮನೆದೇವರ "ಬಗ್ಗೆ ವಿಚಾರಿಸಲು ತೊಡಗಿದ್ದಾಗ ,ಒಂದು ಕ್ಷಣ ಗಾಬರಿ ಆಗಿಹೋದರು ರಂಗನಾಥಶರ್ಮರು.


ಆಗ ಸಂಪೂರ್ಣವಾಗಿ ಬಿಚ್ಚಿಟ್ಟಿದ್ದ ತನ್ನ ಕನಸಿನಲ್ಲಿ , "ಪದೇಪದೇ ಕಾಣುವ ನಾಗರದ ಕಥೆಯನ್ನು".

ಮಗ "ಅಗಸ್ತ್ಯ "ಹೇಳುತ್ತಾ ಇದ್ದಿದ್ದನ್ನು ಕೇಳಿ ,ಒಂದು ಕ್ಷಣ ಗಾಬರಿ ಆಗಿ ಹೋದರು ಶರ್ಮಾ ಅವರು .

ಪದೇ ಪದೇ ಮಗನ ಕನಸಲ್ಲಿ ಕಾಣುವ ನಾಗರ ಒಂದುಕಡೆಯಾದರೆ , "ಮನೆಯ ಸುತ್ತ ಮುತ್ತ ಇತ್ತೀಚಿಗೆ ನಾಗರಹಾವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು ". ಆಗ ಒಳಗಿದ್ದ ಹೆಂಡತಿಯನ್ನು ಕರೆದು ಕೇಳಿದರು," ಏನೇ "ಸುಬ್ರಹ್ಮಣ್ಯ ದೇವರ ಹರಕೆ "ಯಾವುದಾದರೂ ಬಾಕಿ ಇದೆಯಾ "ಅಂತ.  " ಅದು ಯಾವುದೂ ಇಲ್ಲ "ಎಂಬ ಒಳಗಿನಿಂದ ಬಂದ ದ್ವನಿ ಕೇಳಿ .

                   

ಇದಕ್ಕೆ ಪರಿಹಾರ "ಶಾಂತಾರಾಮ ಜೋಯಿಸರ "ಬಳಿ ಕೇಳುವುದು ಉಚಿತವೆಂದು ...ಮಗ ಅಗಸ್ತ್ಯನನ್ನು ಕರೆದುಕೊಂಡು , ಅವರ ಮನೆ ಕಡೆ ಹೆಜ್ಜೆ ಹಾಕಿದ್ದರು . ಮನದಲ್ಲಿ ಮಾತ್ರ "ಯಾಕೋ ಇದು ಸರಿ ಬರುತ್ತಿಲ್ಲ "ಎಂಬ ಶಕುನ , ಪದೇಪದೇ ಕಾಡುತ್ತಿತ್ತು ಅವರಿಗೆ .

                              

ಶಾಂತಾರಾಮ ಜೋಯಿಸರು ಕೂಡ ,ಎಲ್ಲವನ್ನು "ತಾಳ್ಮೆಯಿಂದ "ಕೇಳಿದ್ದರು ಅಗಸ್ತ್ಯನ ಮಾತನ್ನು .

"ಆಶ್ಚರ್ಯ ಏನಿಸತೊಡಗಿತು ಅವರಿಗೆ ". ಅಗಸ್ತ್ಯ ಅವರನ್ನೇ ದಿಟ್ಟಿಸುತ್ತಾ ಕುಳಿತಿದ್ದ .  "ನಿನ್ನ ಜಾತಕದಲ್ಲಿ ಸರ್ಪ ದೋಷ ಇಲ್ಲವೇ ಇಲ್ಲ ", ಎಂದು ಹೇಳಿ ...ನಿಧಾನವಾಗಿ ತಮ್ಮ ಹಣೆಯನ್ನು ತಿಕ್ಕಿ ಕೊಂಡರು ಜೋಯಿಸರು . "ಕವಡೆ ಹಾಕಿ ನೋಡೋದು ಮಾತ್ರ ಇದೆ , ಅದರಲ್ಲಿ ಖಂಡಿತ "ಉತ್ತರ "ಸಿಗಬಹುದು "ಎನ್ನುತ್ತಾ ,ತಮ್ಮ ಮನೆ ಒಳಗೆ ನಡೆದಿದ್ದರು ಕವಡೆಯನ್ನು ತರುವುದಕ್ಕೆ . ಅದೇ ಸಮಯಕ್ಕೆ "ದೊಡ್ಡ ಬಿಳಿ ನಾಗರ ಒಂದು ,ಜೋಯಿಸರ ಮನೆ ಅಂಗಳದ ಬೇಲಿಯ ಮೇಲೆ ಮಲಗಿ ಬಿಸಿಲು ಕಾಯಿಸುತಿತ್ತು " ಯಾರಿಗೂ ಕಾಣಿಸದ ಹಾಗೆ .  ಅದರ "ಗಮನ "ಮಾತ್ರ ಜೋಯಿಸರ ಮನೆ ಕಡೆಗೆ ಇದ್ದಂತೆ ತೋರುತ್ತಿತ್ತು . "ಪದೆ ಪದೇ ನಾಲಿಗೆ ಹೊರಗೆ ಹಾಕಿ ", ಪ್ರತಿ "ಮಾತು "ಕೂಡ ಕೇಳಿದಂತೆ ಇತ್ತು ಅದು.

  

  

"ಶ್ರೀ ಚಕ್ರ ಪೂಜೆ ಮಾಡುವ "ಕೆಲವೇ ಜನರಲ್ಲಿ ,ಶಾಂತಾರಾಮ ಜೋಯಿಸರು ಒಬ್ಬರು .

ಪ್ರತಿದಿನ ತಮ್ಮ ಬಳಿ ಬರುತ್ತಿದ್ದ , ನೂರಾರು ಜನಕ್ಕೆ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ , ತಾವು ವ್ಯಾಸ್ಯಂಗ ಮಾಡಿದ ಜ್ಯೋತಿಷ್ಯದ ಬಗ್ಗೆ , ಜಾತಕ ಬರೆದು ಕೊಡುವುದರಲ್ಲಿ .....ಅವರು ಸಾರ್ಥಕ ಜೀವನ ಕಂಡುಕೊಂಡಿದ್ದರು .

ಆದರೆ ಈಗ "ಅಗಸ್ತ್ಯ "ಹೇಳುತ್ತಿರುವ ಕನಸಿನ ಮಾತು ,ಅವರ "ಮನಸಿಗೆ ಸಣ್ಣದಾಗಿ ಕಸಿ ವಿಸಿ "ಉಂಟು ಮಾಡಿತ್ತು .

ಕವಡೆ ಹಾಕುವ ಮುಂಚೆಯೇ ,ಅವರ ಮುಖದ ಮೇಲೆ "ಸಣ್ಣದಾಗಿ ಭಯ "ಕಾಣಿಸುತ್ತಿತ್ತು. ಯಾವುದೋ" ಅಗೋಚರ ಶಕ್ತಿಯ "ಕೆಲಸವಿದು ಎಂಬ ನಂಬಿಕೆಗೆ ,ಅವರು ಆಗಲೇ ಬಂದು ಬಿಟ್ಟಿದ್ದರು . ಆಗ ಹೊರಗೆ ತಂದಿದ್ದರು, " ತಮ್ಮ ಕವಡೆಗಳನ್ನು " ಪೆಟ್ಟಿಗೆಯಿಂದ .


    "ಬಹಳ ವರ್ಷದ ನಂತರ ".


ತನ್ನ ಎದುರಿಗೆ "ದೊಡ್ಡ ನೀಲಿ "ಪಟದ ಮೇಲೆ ...ನೂರಾರು "ಕವಡೆಯನ್ನು" ಹಾಕಿ ಕುಳಿತಿದ್ದ ಜೋಯಿಸರ , ಕಡೆ ಆಶ್ಚರ್ಯದಿಂದ ನೋಡುತ್ತಿದ್ದ ಅಗಸ್ತ್ಯ .  ಆತನ ಕಣ್ಣಲ್ಲಿ ಜೋಯಿಸರು "ಏನು ಹೇಳುತ್ತಾರೆ " ಎನ್ನುವ ಕಾತುರ .

             

ತಮ್ಮ ಇಷ್ಟ "ದೇವತೆಯನ್ನು "ನೆನೆದು ಕವಡೆಯನ್ನು ಹಾಕಿದರು ಜೋಯಿಸರು .  ಅದರಲ್ಲಿ ಕೆಲವೊಂದನ್ನು , ಯಾವುದೋ ಲೆಕ್ಕಾಚಾರದಂತೆ ತೆಗೆದು ಬದಿಗೆ ಇಡುತ್ತಾ ಇದ್ದವರಿಗೆ ...."ಸಣ್ಣದಾಗಿ ಮೂಡತೊಡಗಿತು ಬೆವರ ಹನಿ ಹಣೆಯ ಮೇಲೆ ". "ನಾಗ ಮಣಿ " ಎಂದು ಸಣ್ಣಗೆ ಹೇಳುವಾಗ ಅವರ ದ್ವನಿ ನಡುಗುತ್ತಿತ್ತು . ಕೇಳುತ್ತಾ ಕುಳಿತಿದ್ದ "ತಂದೆ ಮಗನಿಗೆ "ಕೂಡ ಅವರ ಮಾತಿನಿಂದ ಆಶ್ಚರ್ಯ ಆಗಿತ್ತು . ಅಷ್ಟಕ್ಕೇ "ತೃಪ್ತಿ "ಆದ ಹಾಗೆ ಕಾಣಿಸಲಿಲ್ಲ ಜೋಯಿಸರು , ಮತ್ತೊಮ್ಮೆ ..ಇನ್ನೊಮ್ಮೆ ಕವಡೆ ಹಾಕಿ ...ಒಂದು ದೃಢ ನಿರ್ಧಾರಕ್ಕೆ ಬಂದವರಂತೆ ,ಪಕ್ಕದಲ್ಲಿ ಇದ್ದ "ಗೋಡೆಗೆ ಒರಗಿ "ಕುಳಿತರು . "ಕೆಲ ಅಚ್ಚರಿ , ಭಯ ಹುಟ್ಟಿಸುವ ಶಕುನಗಳು ಕಾಣಿಸಿತ್ತು ಅವರಿಗೆ ".

                 

ಅಗಸ್ತ್ಯ ನಾನು ಹೇಳುವುದನ್ನು ಸಮಾಧಾನದಿಂದ ಕೇಳು . ಕಡೆಗೆ ನಿನಗೆ ಅರ್ಥವಾಗದೆ ಇರುವುದು ಕೇಳು ", ಎಂದು ದೊಡ್ಡದಾಗಿ ನಿಟ್ಟುಸಿರು ಬಿಟ್ಟು ಹೇಳತೊಡಗಿದರು ಅವರು .. "ನಿಮ್ಮ ಮನೆಯಲ್ಲಿ ಬಹಳ ಹಿಂದೆ "ನಾಗಮಣಿ " ಒಂದು ಇತ್ತು ನನ್ನ ಪ್ರಕಾರ . ಆದರೆ "ಬಹಳ ಹಿಂದೆಯೇ "ಅದು ಕಳವು ಆಗಿರೋದು ಕೂಡ ಸತ್ಯ . ಅದೇ "ನಾಗಮಣಿಗೆ "ಮತ್ತೆ ನಿಮ್ಮ ಮನೆ ಸೇರುವ ಹಂಬಲ ಶುರುವಾಗಿದೆ ". ದ್ವನಿ "ನಡುಗುತ್ತಿತ್ತು "ಅವರದು , ಇದನ್ನು ಹೇಳುವಾಗ.        

       

 ಅದಕ್ಕೆ ನಿನ್ನ ಕನಸಲ್ಲಿ ಕಾಣಿಸುವ "ವಾಸುಕಿ ", ಪದೆ ಪದೆ ನಿನ್ನನ್ನು ಇದರೊಳಗೆ ಎಳೆದು ತರುತ್ತಾ ಇದ್ದಾಳೆ . ಇಷ್ಟೇ ನನಗೆ ಗೊತ್ತಾಗಿದ್ದು ಎಂದು , ಆಶ್ಚರ್ಯದಿಂದ ನೋಡುತ್ತಾ ಕುಳಿತಿದ್ದ ,"ಅಗಸ್ತ್ಯನ "ಕಡೆ ನೋಡಿದರು ಅವರು .

           

ಆಗ ಈ ಎಲ್ಲಾ "ಮಾತನ್ನು" ಕೇಳಿಸಿಕೊಂಡಂತೆ , ಬೇಲಿಯ ಮೇಲೆ "ಮಿರಿ ಮಿರು ಮಿಂಚುತ್ತಾ" ಇದ್ದ ನಾಗರ ತನ್ನ ಪಾಡಿಗೆ ಇಳಿದು ಹೋಗಿತ್ತು . ಅರ್ಥವೇ ಆಗಲಿಲ್ಲ ತಂದೆ ಮಗನಿಗೆ . ಆಗ ಕೇಳಿದ ಅಗಸ್ತ್ಯ, "ನಾಗಮಣಿ ಎಂದರೆ ಗೊತ್ತಿಲ್ಲದ ನನಗೆ , ಅದರ ಬಗ್ಗೆ ಹಾವು ಕಾಡಿಸುವುದು ಯಾಕೆ ಅಂತ " . "ಅದು ಕೂಡ ಎಲ್ಲಿ , ಯಾರ ಬಳಿ ಇದಿಯೊ ಗೊತ್ತಿಲ್ಲ " ಎನ್ನುತ್ತಾ ತನ್ನ "ಸಣ್ಣಗಿನ ದ್ವನಿಯಲ್ಲಿ "ನುಡಿದಿದ್ದು ಕೇಳಿಸಿತು ಜೋಯಿಸರಿಗೆ . ಆಗ ತದೇಕಚಿತ್ತದಿಂದ ಅಗಸ್ತ್ಯನ ಕಡೆ ನೋಡಿದರು ಅವರು . ಆರು ಅಡಿಯ" ಬಲಿಷ್ಠ "ದೇಹದ ಅಗಸ್ತ್ಯ .ಕಣ್ಣುಗಳಲ್ಲಿ ಮಾತ್ರ , "ಏನು ಬೇಕಾದರೂ ಸಾಧಿಸುವ

ಛಲ " .. ಅವನ ಮಾತು ಕೇಳದೆ ಆಗಾಗ , ಅವನ ಹಣೆಗೆ ಮುತ್ತುಕ್ಕುವ ತೆಳ್ಳಗಿನ ರೇಷ್ಮೆಯ ತಲೆ ಕೂದಲು ."ಇಂತಹವರೇ, ಇಂತಹದೊಂದು "ಕೆಲಸಕ್ಕೆ ಹುಟ್ಟಿರುತ್ತಾರೆ , ಎಂಬ ನಂಬಿಕೆ ಜೋಯಿಸರದು . "ದೇವರ ಇಚ್ಚೆಯೇ ಹಾಗೆ ಅನಿಸುತ್ತೆ . ತನ್ನ ಪ್ರಿಯರಾದ ಮನೆ ಸೇರಿ ..ಅವರಿಂದ "ಪೂಜೆ ಪಡೆಯಬೇಕೆಂಬ ಹಂಬಲ ನಾಗಮಣಿಯದು" . ಹಾಗೆ ಆಗಿದೆ ಇಲ್ಲಿ ಕೂಡ " ಎನ್ನುತ್ತಾ ಅಗಸ್ತ್ಯನ ಕಡೆ ನೋಡಿದರು ಅವರು . ಅಗಸ್ತ್ಯ ನಿಗೆ ಕೂಡ ಏನು ತೋಚದ ಸ್ಥಿತಿ ...ಒಂದು ಕ್ಷಣ ಆಲೋಚಿಸುತ್ತಾ ಕುಳಿತುಬಿಟ್ಟ ಅವ ..ಆಗ ಕೇಳಿದ ಜೋಯಿಸರಲ್ಲಿ "ಈಗ ಮಣಿ ಎಲ್ಲಿದೆ "ಎಂದು . ಜೋಯಿಸರು ಮತ್ತೊಮ್ಮೆ ಕವಡೆ ಎಸೆದು , ಗುಣಾಕಾರ , ಭಾಗಾಕಾರ ಮಾಡಿ "ಅಚ್ಚರಿಯ" ಕಣ್ಣು ಬಿಟ್ಟು ಕುಳಿತು ಬಿಟ್ಟರು . ಅವರ "ಜೀವಮಾನದಲ್ಲಿ "ಇಂತಹದೊಂದು ಉತ್ತರ ನೀರೀಕ್ಷೆ ಮಾಡಿರಲಿಲ್ಲ ಅವರು ." ಯಾಕೋ ಕೆಲ ಸೂಚನೆಗಳು ಅರ್ಥವೇ ಆಗುತ್ತಿಲ್ಲ " ಎಂದು ಸಣ್ಣಗೆ ಮನಸಿನಲ್ಲಿ ನುಡಿದಿದ್ದು ಹೊರಗೆ ಕೇಳಿಸಿತ್ತು . " ಅಗಸ್ತ್ಯ ಒಂದು ಮಾತ್ರ ಸ್ಪಷ್ಟ , ನೀನು ಸೀದಾ ಸುಬ್ರಮಣ್ಯಕ್ಕೆ ಹೋಗು .ಅಲ್ಲಿ ನಿನಗೆ ಖಂಡಿತಾ ಮುಂದಿನ ಸೂಚನೆ ಸಿಗುತ್ತೆ ", ಎಂದು ತಮ್ಮ ಕವಡೆಯ ಪಟವನ್ನು ಮುಚ್ಚಿದ್ದರು ಅವರು .


" ಜೋಯಿಸರೆ ನಾನು ಇದನ್ನು ಮಾಡಲೇಬೇಕ , ಮಾಡದೆ ಇದ್ದರೆ ?"ಎನ್ನುತ್ತಾ , ತನ್ನ ಮಾತನ್ನು "ನಿಲ್ಲಿಸಿ ಜೋಯಿಸರ ಕಡೆ ನೋಡಿದ "ಅಗಸ್ತ್ಯ . "ದೇವರ ಸಂಕಲ್ಪವೇ ಹಾಗೆ ಇದೆ ಅಗಸ್ತ್ಯ . ನಿನ್ನ ಕನಸಿನಲ್ಲಿ ಕಾಣುವ "ನಾಗರ "ಮುಂದೆ ನಿನಗೆ ಮತ್ತಷ್ಟು ಗೋಳು ಕೊಡಬಹುದು . ಅದಕ್ಕೆ ಒಂದಷ್ಟು ದಿನ ರಜೆ ಹಾಕಿ , ಇದರಲ್ಲಿ ತೊಡಗಿ ಕೊಳ್ಳುವುದು ಉತ್ತಮ ....ಫಲ ಅಪೇಕ್ಷೆ ದೇವರಿಗೆ ಬಿಟ್ಟದ್ದು " ,ಎಂದು ನಿಡುದಾಗಿ ಉಸಿರು ಬಿಟ್ಟು , ಅಗಸ್ತ್ಯನ ಕಣ್ಣ ಕಡೆ ನೋಡಿದರು ಅವರು .

          

"ಆದರೂ ಈ "ನಾಗಮಣಿ "ಎನ್ನುವುದು ಸುಲಭದಲ್ಲಿ ಸಿಗುವ ವಸ್ತು ಅಲ್ಲವೇ ಅಲ್ಲ . ಕೋಟಿ ಕೊಟ್ಟರೂ ಕೂಡ ಅದನ್ನು ತೋರಿಸುವವರು ಇಲ್ಲ ....ಆದರೂ ದೇವರ ಇಚ್ಛೆ ಹಾಗೆ ಇದೆ ...ಮುಂದಿನ ದಾರಿ ನಿನಗೆ ,ದೇವರೇ ತೋರಿಸಬೇಕು "ಎನ್ನುತ್ತಾ ......ಜೋಯಿಸರು ದೇವರ ಮೇಲೆ ಭಾರ ಹಾಕಿದ್ದು ನೋಡಿ ,ತಂದೆ ಮಗನಿಗೆ ನಾಗಮಣಿ ಯ ಬಗ್ಗೆ , ಅದರ "ವಿಶೇಷತೆ" ಬಗ್ಗೆ ಸಣ್ಣದಾಗಿ ಅರಿವಾಗ ತೊಡಗಿತು.   ಮನೆಯಲ್ಲಿ ಕೂಡ ಯಾರಲ್ಲೂ ಮಾತಿಲ್ಲ . ಎಲ್ಲರ ತಲೆಯಲ್ಲಿ ಜೋಯಿಸರ ಮಾತೆ "ಪ್ರತಿದ್ವನಿ "ಆಗಿ ಕೇಳಿಸುತ್ತಿತ್ತು . "ಆಗ ನುಡಿದಿದ್ದರು ಶರ್ಮಾ ".

           

"ಹಿಂದೆ ನಮ್ಮ ಮನೆಯಲ್ಲಿ ಅದು ಇದ್ದ ಮಾಹಿತಿ ಕೂಡ ಇಲ್ಲ ನನಗೆ , ಆದರೂ ಎಲ್ಲೋ "ಸಣ್ಣ "ನೆನಪು ನನಗೆ .

   ಪ್ರತಿ ಹುಣ್ಣಿಮೆಯ ರಾತ್ರಿ ನನ್ನ ಅಜ್ಜ , "ಹಾಲು "ಹಿಡಿದು ಹೊರಗೆ ಹೋಗುತ್ತಾ ಇದ್ದಿದ್ದು , ಯಾವುದೂ ಕೂಡ ಸ್ಪಷ್ಟ ಇಲ್ಲ "ಎಂದು , ತಲೆ ಗೊಡವಿ ಕಣ್ಣು ಮುಚ್ಚಿ ಕುಳಿತುಬಿಟ್ಟರು ಅವರು . "ದೇವರು ದೇವರು ಎನ್ನುವ ನಮಗೆ ಯಾಕೆ ಇಂತಹದೊಂದು ಶಿಕ್ಷೆ ಎಂದು ". "ನೋಡೋಣ ಎಲ್ಲಿಗೆ ಕರೆದುಕೊಂಡು ಹೋಗುತ್ತೆ ಈ ನಾಗಮಣಿ ಅಂತ , ನನಗೂ ಎಲ್ಲೋ ಒಂದು ಸ್ವಲ್ಪ ಥ್ರಿಲ್ಲಿಂಗ್ ಅನಿಸ್ತಾ ಇದೆ ಅಪ್ಪಾ ...." ಎನ್ನುತ್ತಾ ಅಗಸ್ತ್ಯ "ಸುಬ್ರಮಣ್ಯಕ್ಕೆ" ಹೋಗುವುದಕ್ಕೆ ಬಟ್ಟೆ ಜೋಡಿಸಿ ಕೊಳ್ಳ ತೊಡಗಿದ .


ಮಾತೆ ಇರಲಿಲ್ಲ ಶರ್ಮಾ ದಂಪತಿಗಳಿಗೆ ಅಗಸ್ತ್ಯನ ನೋಡುವುದೊಂದು ಬಿಟ್ಟರೆ . ಆಗಲೇ "ಹತ್ತಾರು ದೇವರಿಗೆ ಹರಕೆ "ಹೊತ್ತಿದ್ದರು ಅವರು .    " ಮಗ ಸುರಕ್ಷಿತವಾಗಿ ಬರಲಿ ಎಂದು ".   ದೃಢವಾದ ನಿಶ್ಚಯದಿಂದ "ಸುಬ್ರಮಣ್ಯಕ್ಕೆ " ಬಂದು ಇಳಿದಿದ್ದ ಅಗಸ್ತ್ಯ . ಬೆಳಿಗ್ಗೆ ಅಲ್ಲಿದ್ದ "ಸಣ್ಣ ಕಲ್ಯಾಣಿಯಲ್ಲಿ "ಸ್ನಾನ ಮುಗಿಸಿ ...ದೇವರ ದರ್ಶನ ಮುಗಿಸಿ ಬಂದಿದ್ದ .

ಆದರೂ ಕೂಡ "ಜೋಯಿಸರು" ಹೇಳಿದ ಹಾಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ ...."ಅಷ್ಟರಲ್ಲೇ ಅರೆ ಹುಚ್ಚನೊಬ್ಬ ನಡೆದು ಬಂದಿದ್ದ ಇವನ ಬಳಿ ".  "ಆಕಾಶ ನೀಲಿ , ಸಮುದ್ರ ನೀಲಿ ಎಲ್ಲವೂ ನೀಲಿ ಅಲ್ವೇ ಹುಡುಗ " ಎಂದಿದ್ದ ಅವ .

ಅಲ್ಲಿಗೆ ಸುಮ್ಮನಾಗದೆ , "ನಿನ್ನ ಕಣ್ಣಲ್ಲಿ ಕೂಡ ನೀಲಿ "ಎನ್ನುತ್ತಾ ಗಹಗಹಿಸಿ ನಗತೊಡಗಿದ ಆತ . ಅಗಸ್ತ್ಯನಿಗೇ ಆತನ ಮಾತು ಕೇಳುವುದು ಅನಿವಾರ್ಯ ಆಗಿತ್ತು .


ಹತ್ತಿರದಲ್ಲೇ "ಕುಳಿತು " ಆಕಾಶ ನೋಡುತ್ತಾ ಮಾತು ಆಡುತ್ತಿದ್ದ ಅವ. "ದೂರದ ಬಳ್ಳಾರಿಯ ಸಂಡೂರಿನ ನಾಗರ ಗುಡ್ಡ , ಅಲ್ಲೇ ಇದ್ದಾಳೆ ಸೀಳು ನಾಲಿಗೆಯ ಹುಡುಗಿ "ಎನ್ನುತ್ತಾ ಮತ್ತೆ "ನಗತೊಡಗಿದ " ಆತ . ತಟ್ಟನೆ ತಲೆ ತಿರುಗಿಸಿ ನೋಡಿದ್ದ ಅಗಸ್ತ್ಯ ಹುಚ್ಚನ ಕಡೆ . ಅಷ್ಟರಲ್ಲೇ ಆತ "ಜಗವೇ ನೀಲಿ , ಮಣಿಯು ನೀಲಿ " ,  ಎನ್ನುತ್ತಾ ಸಾಗಿ ಹೋಗಿದ್ದ ಜನರ ಮದ್ಯೆ .

" ಸೀಳು ನಾಲಿಗೆ , ಮಣಿ "ಶಬ್ದ ಮಾತ್ರ ,ತಕ್ಷಣ ಕಿವಿಗೆ ರಾಚಿತ್ತು .ಆತ ಹೇಳಿದ ಮಾತಿನಲ್ಲೇ ,ತನಗೆ ಬೇಕಾದ "ಸುಳಿವು "ಇದೆ ಎಂಬುದು ಗೊತ್ತಾಗಿತ್ತು ಆಗ . ಅದೇ ಕ್ಷಣ "ದೇವಾಸ್ಥಾನದ ದೊಡ್ಡ ಗಂಟೆಗೊಂದು ಹೊಡೆದಿತ್ತು " ಆಗ . ಮುಂದೆ ಯಾವ ಆಲೋಚನೆ ಕೂಡ ಮಾಡಲು ಹೋಗಿರಲಿಲ್ಲ ಅಗಸ್ತ್ಯ .  ಕೆಟ್ಟ ಕುತೂಹ ಇತ್ತು ಅವನಿಗೆ ತಾನು ಹೊರಟ ಕೆಲಸದ ಬಗ್ಗೆ . ಬಳ್ಳಾರಿ ಕಡೆ ಹೋಗುವ ಬಸ್ ಹತ್ತಿ ಕುಳಿತಿದ್ದ . ತಲೆಯಲ್ಲಿ ಮಾತ್ರ "ಹುಚ್ಚನ "ಮಾತು , ಗುಯ್ ಗುಡುತ್ತಿತ್ತು. 

ಬಸ್ ಹತ್ತಿ ಒಂದು ದಿನದೊಳಗೆ ಬಳ್ಳಾರಿಯಲ್ಲಿ ಇಳಿದಿದ್ದ ಅವ .ಕಾದ ಕಬ್ಬಿಣದ ಮೇಲೆ ಕಾಲಿಟ್ಟಂತೆ , ಭಾಸವಾಗಿತ್ತು "ಬಳ್ಳಾರಿ "ಅವನಿಗೆ. ಸೀದಾ ಬಸ್ ಸ್ಟ್ಯಾಂಡ್ ಬಳಿ ಇದ್ದ , "ಲಾಡ್ಜ್ "ಒಂದಕ್ಕೆ ಹೋಗಿ ....ಮೊದಲು ಮೈ ಮೇಲೆ ತಣ್ಣೀರು ಹಾಕಿಕೊಂಡಿದ್ದ ಅವ .      


ಅಲ್ಲಿ ರೂಮು ಪಡೆದು . ಸಂಡೂರಿನಲ್ಲಿ ಇದ್ದ , "ನಾಗರ ಗುಡ್ಡದ "ಮಾಹಿತಿ ಬೇಕಿತ್ತು ಅವನಿಗೆ.   ಮಧ್ಯಾಹ್ನದ ಊಟದ ವೇಳೆಗೆ , ತನ್ನ ಮುಂದೆ ಊಟ ಮಾಡುತ್ತಿದ್ದ "ವಯಸ್ಕರನ್ನು" ಕೇಳಿದ್ದ ಅಗಸ್ತ್ಯ ...."ಸಂಡೂರಿನ ನಾಗರ ಗುಡ್ಡದ ಬಗ್ಗೆ ".

"ನಾಗರ ಗುಡ್ಡದ ಶಬ್ದ ಕೇಳಿದೊಡನೆ, ಒಂದು ಕ್ಷಣ ಬೆಚ್ಚಿ ಬಿದ್ದಿದ್ದ ವಯಸ್ಕ".  "ಸಾಮಿ ನೀವು ಯಾರೋ ಟಿವಿ ಅವರ ಹಾಗೆ ಕಾಣಿಸುತ್ತೀರಿ , ಇವತ್ತು ಹುಣ್ಣಿಮೆ ಬೇರೆ ..ನಾಗರ ಗುಡ್ಡದ ಸಹವಾಸ ನಿಮಗೆ ಬೇಡ " ಎಂದು , ತನ್ನ ಸಣ್ಣನೆಯ ನಡುಗುವ ಧ್ವನಿಯಲ್ಲಿ ಹೇಳಿದ ಆತ. ಜಾಸ್ತಿ ಪ್ರಶ್ನೆ ಕೇಳಲು ಹೋಗಲೇ ಇಲ್ಲ ಅಗಸ್ತ್ಯ ..ಸೀದಾ ಊಟ ಮಾಡಿದವನೇ ರೂಮ್ ಖಾಲಿ ,ಮಾಡಿ ಸಂಡೂರು ಕಡೆ ಬಸ್ ಹಿಡಿದಿದ್ದ . ಲಾಡ್ಜ್ ಮ್ಯಾನೇಜರ್ ಗೆ ಮಾತ್ರ ಸ್ವಲ್ಪ ಕಸಿವಿಸಿ . ಬಂದವ ಕೇವಲ ಎರಡು ತಾಸಿನಲ್ಲಿ ಹೊರಟ ಬಗ್ಗೆ.

                                 

ಸಂಡೂರು ನಲ್ಲಿ ಇಳಿಯುವಾಗ ಸಂಜೆ ದಾಟಿ ಹೋಗಿತ್ತು ."ನಾಗರ ಗುಡ್ಡ ಎಲ್ಲಿ "ಎಂಬ ಪ್ರಶ್ನೆ ತಲೆಯಲ್ಲಿ ಕೊರೆಯುತ್ತಿತ್ತು .

ತಡ ಮಾಡದೆ ಕಾಣಿಸಿದ "ಆಟೋ "ಕರೆದು ನಾಗರ ಗುಡ್ಡ ಎಂದಿದ್ದ . ಆಟೋ ಚಾಲಕ ಮಾತ್ರ ಇವನನ್ನು ಒಮ್ಮೆ ವಿಚಿತ್ರವಾಗಿ ನೋಡಿ , ಅವನನ್ನು "ನಗರದ ಹೊರವಲಯದಲ್ಲಿ ಇದ್ದ ಗುಡ್ಡದ ಬುಡಕ್ಕೆ "ತಂದು ಬಿಟ್ಟಿದ್ದ .  ವಾಪಸ್ ಹೋಗುವಾಗ ಆತನನ್ನು ಹೆದರಿಸಿದ್ದು ಅಗಸ್ತ್ಯನ ನೋಟ .  ಆತನ ಕಣ್ಣಿನಲ್ಲಿ ಏನೋ ಅದ್ಬುತ ಪಡೆದ ಹೆಮ್ಮೆ .

            

ಅಷ್ಟು ಖುಷಿಯಿಂದ ಗುಡ್ಡದ ಕಡೆಯೇ ,ನೋಡುತ್ತಾ ನಿಂತಿದ್ದ ಅವ . ರಾತ್ರಿಯ ಕಪ್ಪಿನಲ್ಲಿ "ಭೀಕರವಾಗಿ "ಕಾಣಿಸುತಿತ್ತು ಬೆಟ್ಟ . ಕಾಣಿಸಿದ ಕಾಲುದಾರಿಯಲ್ಲಿ ,ತನ್ನ ಬ್ಯಾಗ್ನಲ್ಲಿ ಇದ್ದ ಸಣ್ಣ ಬ್ಯಾಟರಿ ಹಿಡಿದು ....ಗುಡ್ಡ ಏರಲು ಶುರು ಮಾಡಿ ಬಿಟ್ಟಿದ್ದ ಅಗಸ್ತ್ಯ . ಆಗ ಗಮನಿಸಿದ ಆತ ತನ್ನ ಪಕ್ಕದಲ್ಲಿ "ಸಣ್ಣಗೆ "ಆಗಾಗ ಬರುವ ಶಬ್ದವನ್ನು ."ಹೆದರಿಕೆ" ಎಂಬುದು ಯಾವಾಗಲೂ ಗೊತ್ತೇ ಇರಲಿಲ್ಲ ಅವನಿಗೆ , ಆದರೂ ಎಚ್ಚರಿಕೆ ಇಂದ ಕಾಲು ಇಡುತ್ತಿದ್ದ .  ಆದರೂ ಕಲ್ಲು ಬಂಡೆ ಕಡೆಯಿಂದ ಸಣ್ಣದಾಗಿ "ಬುಸ್ಸ್ " ಎಂಬ ಶಬ್ದ , ಜೊತೆಗೆ ತನ್ನ ಪಕ್ಕದಲ್ಲೇ ಯಾರೋ ಬರುತ್ತಿದ್ದಾರೆ ....ಎಂದು ಅನಿಸತೊಡಗಿತು ಅವನಿಗೆ .ಆಗ ತಕ್ಷಣ ನಿಂತು , "ಬ್ಯಾಟರಿ ಬಿಟ್ಟಿದ್ದ ಪಕ್ಕಕ್ಕೆ ".


" ಜೀವಮಾನದಲ್ಲೇ ಅಷ್ಟು ದೊಡ್ಡ ನಾಗರ ಹಾವನ್ನು ನೋಡಿರಲೇ ಇಲ್ಲ ಅವ ". ಎದೆ ಒಂದು ಕ್ಷಣ ನಿಂತು ಹೋಗುವಷ್ಟು ದೊಡ್ಡ ಇತ್ತು ಅದು , ಅದರ ಕಣ್ಣುಗಳು ಬ್ಯಾಟರಿ ಬೆಳಕಿಗೆ "ಪಳ ಪಳನೆ ಹೊಳೆಯುತ್ತಿತ್ತು" .

ಒಂದು ಕ್ಷಣ ನಿಂತು , ಅದಕ್ಕೆ "ನಮಸ್ಕಾರ "ಮಾಡಿ ಮತ್ತೆ ಹತ್ತ ತೊಡಗಿದ ಬೆಟ್ಟವನ್ನು . ಸಣ್ಣದಾಗಿ ಕಾಣುವ ಕಾಲು ದಾರಿ ಮೂಲಕ . ಗುಡ್ಡದ "ಬುಡದಿಂದಲೇ "ಆತನಿಗೆ ಅರಿವಿಗೆ ಬಂದಿತ್ತು . ಈ ಗುಡ್ಡಕ್ಕೆ ಯಾಕೆ "ನಾಗರ ಗುಡ್ಡ "ಹೇಳುತ್ತಾರೆ ಎಂದು. ಎಲ್ಲಿ ನೋಡಿದರೂ "ನಾಗರದ "ಓಡಾಟದ ಸದ್ದು . ಅದರ ಬುಸ್ಸ್ ಗುಡುವಿಕೆ ......ಪ್ರತಿ ಬಂಡೆ , ಕಲ್ಲುಗಳ ಸಂದಿಯಿಂದ ಕೇಳಿಸುತ್ತಲೇ ಇತ್ತು .ಮದ್ಯೆ ಬೆಟ್ಟಕ್ಕೆ ಬರುವಷ್ಟರಲ್ಲಿ , ಸುಸ್ತಾಗಿ ಹೋಗಿದ್ದ ಅಗಸ್ತ್ಯ . ಆಗ ಕೇಳಿಸಿತ್ತು ಆತನಿಗೆ , "ಮಹಿಳೆಯ ದೊಡ್ಡ ನಗುವಿನ ದ್ವನಿಯೊಂದು ". ಗುಡ್ಡದ ತುದಿಯಿಂದ . ಆಕೆಯ ಭೀಕರ ದ್ವನಿ ,ಬಂಡೆ ಕಲ್ಲುಗಳಿಗೆ ರಾಚಿ ...ಪ್ರತಿಧ್ವನಿ ಎಬ್ಬಿಸುತ್ತಿತ್ತು . ಹುಣ್ಣಿಮೆಯ ರಾತ್ರಿಯಂದು ಕೇಳಿಸುವ ಇಂತಹ ಶಬ್ದಕ್ಕೆ , ಅಲ್ಲಿಯ ಜನ ನಾಗರ ಬೆಟ್ಟ ಎಂದರೆ ಬೆಚ್ಚಿ ಬೀಳುತ್ತಿದ್ದರು .


ಆಶ್ಚರ್ಯ ಆಗಿತ್ತು ಅಗಸ್ತ್ಯ ನಿಗೆ ಮಹಿಳೆಯ ಭೀಕರ ದ್ವನಿ ಕೇಳಿ , ದ್ವನಿ ಬಂದತ್ತ ನಿಧಾನವಾಗಿ ಬೆಟ್ಟ ಹತ್ತ ತೊಡಗಿದ ಅವ

ಸ್ವಲ್ಪ "ಹೊತ್ತಿನಲ್ಲೇ ಬೆಟ್ಟದ ಮೇಲೆ ನಿಂತಿದ್ದ "ಅವ . ತಣ್ಣಗಿನ ಗಾಳಿ ಒಮ್ಮೆ ಅವನ ಸವರಿಕೊಂಡು ಹೋಯಿತು .

 ಆಗ ಕೇಳಿಸಿತು "ಕಂದ ಬಂದೆಯ ನೀನು" ಎಂಬ ದ್ವನಿ . ಒಮ್ಮೆಲೇ ಬಂದ ದ್ವನಿ ಕೇಳಿ ಬೆಚ್ಚಿ ಬಿದ್ದಿದ್ದ ಅಗಸ್ತ್ಯ .

ಇದ್ದಕ್ಕಿದ್ದ ಹಾಗೆ ಕೇಳಿಸಿದ "ದ್ವನಿಯತ್ತ "ಬ್ಯಾಟರಿ ಬಿಟ್ಟಿದ್ದ .ಕಾಣಿಸಿದ್ದು ಮಾತ್ರ ಒಂದು "ಹೆಂಗಸು". ಆಕೆಯ ತಲೆ ಇಡೀ ಶಿವನ ಜಡೆಯಂತೆ ಆಗಿತ್ತು , ಕಣ್ಣುಗಳು ಕೆಂಪು ಕಾರುತ್ತಿದ್ದವು . ಆಶ್ಚರ್ಯ ಎಂಬಂತೆ ಆಕೆ ಕೂಡ , ಗಳಿಗೆಗೆ ಒಮ್ಮೆ ತನ್ನ ನಾಲಿಗೆ ಹೊರ ಹಾಕಿ ...ಒಳಗೆ ಎಳೆದು ಕೊಳುತ್ತಿದ್ದಳು , ತನ್ನ ಸೀಳು ನಾಲಿಗೆ ಇಂದ .... ನಾಗರ ಹಾವಿನ ರೀತಿಯಲ್ಲಿ .

"ದೀಪ ಆರಿಸೋ ಹುಡುಗ "ಎಂದು ಸಿಟ್ಟಿನಲ್ಲಿ ನುಡಿದಿದ್ದಳು . ಅವಳ ಮಾತಿನ ಮದ್ಯೆ ಕೂಡ , "ನಾಗರದ "ಶಬ್ದದ ರೀತಿ ಬರುತ್ತಿತ್ತು . ಬ್ಯಾಟರಿ ಆಫ್ ಮಾಡಿ ಪಕ್ಕದಲ್ಲಿದ್ದ ಬಂಡೆಯ ಮೇಲೆ ಕುಳಿತ ಅಗಸ್ತ್ಯ.  ಅಷ್ಟರಲ್ಲೇ ಬೆವೆತು ಹೋಗಿದ್ದ ಆತ .

ವಿಜ್ಞಾನಕ್ಕೆ ನಿಲುಕದ ಬಹಳ ವಿಷಯ ಇದೆ ,ಎಂದು ಆವತ್ತು ಅರ್ಥ ಆಗಿತ್ತು ಅವನಿಗೆ.

                

"ಅದೆಷ್ಟು ವರ್ಷ ಕಾಯಿಸಿ ಬಿಟ್ಟೆ ನೀನು ಮತ್ತೆ ಹುಟ್ಟುವುದಕ್ಕೆ" ಎಂದು ಕಾರಣವಿಲ್ಲದೆ , ನಗತೊಡಗಿದಳು ಅವಳು .

 "ಆದರೂ ಹುಡುಕಿ ಬಂದುಬಿಟ್ಟೆ ಅಲ್ಲ ನೀನು". ಎನ್ನುತ್ತಾ ತಾನು ಕುಳಿತಲ್ಲಿಂದ ಎದ್ದು ಬಂದು ,ಅಗಸ್ತ್ಯನ ಕಣ್ಣನ್ನೇ ನೋಡತೊಡಗಿದಳು ಅವಳು. "ಹೌದು ಅದೇ ಕಪ್ಪು ಮಚ್ಚೆ ಬಲಗಣ್ಣಿನ ಒಳಗೆ "ಎನ್ನುತ್ತಾ ಮತ್ತೊಮ್ಮೆ , ಆತನ ತಲೆಕೂದಲಲ್ಲಿ ಕೈಯಾಡಿಸಿ "ಸಂಭ್ರಮಿಸಿದಳು "ಆಕೆ. ಆಕೆಯ ಮೈಯಿಂದ , "ಕೇದಿಗೆ ಹೂವಿನ ಪರಿಮಳ ಕಂಡು "ಒಂದು ಕ್ಷಣ ಅವಕ್ಕಾಗಿ ಹೋದ ಅಗಸ್ತ್ಯ. "ನಾಗರಹಾವುಗಳು ಸೂಸುವ ಪರಿಮಳ ಅದು". ಅಂತಹ ಕಡು ಕಪ್ಪಿನಲ್ಲಿ ಕೂಡ ತನ್ನ ಕಣ್ಣಿನಲ್ಲಿ ಇರುವ "ಕಪ್ಪುಮಚ್ಚೆಯನ್ನು "ಆಕೆ ಗುರುತಿಸಿದ್ದು ...ಆಶ್ಚರ್ಯ ಆಗಿತ್ತು ಅವನಿಗೆ. ಜೊತೆಗೆ ಸಣ್ಣ "ಭಯ "ಕೂಡ.

    " ಅದೆಷ್ಟು ವರ್ಷ ಕಾಯಿಸಿ ಬಿಟ್ಟೆ ನನ್ನನ್ನು ನೀನು " ಎನ್ನುತ್ತಾ , ಮತ್ತೊಮ್ಮೆ ಆತನ ಮುಖದ ಮೇಲೆ ಒಮ್ಮೆ ಕೈಯಾಡಿಸಿ ....ತನ್ನ ಮಕ್ಕಳನ್ನು ನೋಡಿ ಸಂಭ್ರಮಿಸಿದ ಹಾಗೇ ಸಂಭ್ರಮಿಸಿದಳು ಆಕೆ .ಆದರೆ ಅಗಸ್ತ್ಯನಿಗೆ ಆಶ್ಚರ್ಯ ತರಿಸಿದ್ದು ಮಾತ್ರ ಆ"ಕೆಯ ಕೈಗಳ ತಣ್ಣಗಿನ ಸ್ಪರ್ಶ.

ನಾಗರ ಹಾವೊಂದು ಕೆನ್ನೆಯ ಮೇಲೆ ಹರಿದ ಅನುಭವ ಅವನಿಗೆ.

    

"ನನಗೆ ಏನು ಗೊತ್ತಾಗುತ್ತಿಲ್ಲ "ಸಣ್ಣಗೆ ಗೊಣಗಿದ ಅಗಸ್ತ್ಯ ಸಣ್ಣ ಧ್ವನಿಯಲ್ಲಿ. " ನಿಜ , ನಿನಗೆ ಗೊತ್ತಾಗೋ ಸಮಯ ಈಗ ಬಂದಿದೆ . ನಿನ್ನ ಇಲ್ಲಿಗೆ ಕರೆಸಿದ್ದು ಕೂಡ ನಾನೇ ",ಎನ್ನುತ್ತಾ ಸಣ್ಣದಾಗಿ ಉಸಿರು ಬಿಟ್ಟಳು ಆಕೆ . ನಾಗರ ಹಾವಿನ "ಬುಸ್ಸ್ "ಶಬ್ದ ಸಣ್ಣದಾಗಿ ,ಆಕೆಯ ಶ್ವಾಸದಿಂದ . " ಕಂದ ನನ್ನ ಹೆಸರು ವಾಸುಕಿ , ನನ್ನ ಮಿತ್ರನೆ ನಿನಗೆ ಕನಸಲ್ಲಿ ಕಾಣಿಸುತ್ತಾ ಇದ್ದಿದ್ದು " ..ಎಂದಾಗ ಬೆಚ್ಚಿ ಬಿದ್ದ ಅಗಸ್ತ್ಯ . ಆಕೆಯ ಹೆಸರು ಕೇಳಿ , ಆಕೆಯಿಂದ ಬಂದ ಮಾತು ಕೇಳಿ . ಒಮ್ಮೆಲೆ ನಿಶ್ಯಬ್ದವಾಗಿ ಹೋಗಿತ್ತು ಪರಿಸರ , ಕೇವಲ "ಹಲವು ನಾಗರ ಹಾವುಗಳ" ಶಬ್ದ ಬಿಟ್ಟರೆ . "ನೂರಾರು ವರ್ಷ ಬದುಕಿದ ಮೇಲೆ ನಮ್ಮ ತಲೆಯ ಮೇಲೆ "ಗಂಟು" , ಒಂದು ಆಗುತ್ತೆ ಕಂದ . ಅದರಲ್ಲಿ ಇರೋದೇ" ನಾಗ ಮಣಿ ". ನಮ್ಮಲ್ಲಿಯ "ಉತ್ಕೃಷ್ಟ ಜಾತಿಯ "ಹಾವಿನಲ್ಲಿ ಇದು ಉಂಟಾಗುತ್ತೆ .


ಅಂತಹದೊಂದು ಉತ್ಕೃಷ್ಟ ಮಣಿ ನಿನ್ನ ಮುತ್ತಜ್ಜನಿಗೆ ಸಿಕ್ಕಿತ್ತು ..ಅದು ಕೂಡ ನಮ್ಮ ಕೃಪೆಯಿಂದ " . ತನ್ನ ಮನೆಯ ಸುದ್ದಿ ಕೇಳಿ ನೆಟ್ಟಗೆ ಕುಳಿತ ಅಗಸ್ತ್ಯ . ವಾಸುಕಿಯ ಕಣ್ಣುಗಳು ರಾತ್ರಿಯ ಹುಣ್ಣಿಮೆ ಬೆಳಕಲ್ಲಿ ,"ಪಳ ಪಳನೆ "ಹೊಳೆಯುತ್ತಿತ್ತು . ಪಕ್ಕದಲ್ಲಿ ಒಂದೇ ಸಮನೆ , "ಬುಸ್ಸ್ ಗುಡುತಿದ್ದ "ನಾಗರ ಹಾವುಗಳಿಗೆ ,ಒಂದು ಕ್ಷಣ ಕಣ್ಣುಬಿಟ್ಟು ಹೆದರಿಸಿದಳು ಆಕೆ . ಅವುಗಳು ಮುಂದೆ ಸದ್ದು ಮಾಡದೆ , ಬಂಡೆ ಅಡಿಯಲ್ಲಿ "ನಿಶಬ್ದವಾಗಿ ಮಲಗಿದ್ದು "ನೋಡಿ ಅಗಸ್ತ್ಯ ಅಂದುಕೊಂಡ ." ವಾಸುಕಿಯೇ ಇವುಗಳ ರಾಣಿ "ಎಂದು.


"ನಿನ್ನ ಮುತ್ತಜ್ಜನ ಬಳಿ ಇದ್ದ ನಾಗಮಣಿಯನ್ನು ಕಳ್ಳನೊಬ್ಬ ಕದ್ದು ಬಿಟ್ಟ ."ಅದನ್ನು ಹೈದರಾಬಾದಿನ ನವಾಬನಿಗೆ ಮಾರಿದ "ಅವ . ಅದೇ "ಸಂಕಟದಲ್ಲಿ "ನಿನ್ನ ಮುತ್ತಜ್ಜ ತೀರಿಕೊಂಡ . "ನಾಗಮಣಿ ಇಂದ ನಾಗರಗಳಿಗೆ ದೊರಕುವ ,ಪೂಜೆ-ಪುನಸ್ಕಾರ ನಿಂತುಹೋಯಿತು ಆವತ್ತಿನಿಂದ" . ಈಗ ಅದು "ನವಾಬನ "ವಂಶಸ್ಥನ ಬಳಿ ಇದೆ . "ನಿನ್ನಿಂದ ನಾಗಮಣಿ , ಒಂದು "ನಮ್ಮ ಬಳಿ "ಸೇರಬೇಕು ಅಥವಾ , "ನಿಮ್ಮ ಮನೆಯ ದೇವರ ಪೀಠ ಹತ್ತಬೇಕು ".  ಸರಿಯಾಗಿ ಅರ್ಥವೇ ಆಗಲಿಲ್ಲ ಅಗಸ್ತ್ಯನಿಗೆ . ನೂರಾರು ವರ್ಷ ತನಗಾಗಿ ಕಾದಿರುವುದು ಯಾಕೆ ? , ನವಾಬನ ಬಳಿ ಇರುವ ನಾಗ ಮಣಿ ತರುವುದು ಹೇಗೆ ?.

     

ಈಗ ಅದರ "ಅವಶ್ಯಕತೆ ಯಾರಿಗೆ ಇದೆ "ಎಂಬುದೇ ಅರ್ಥ ಆಗಿರಲಿಲ್ಲ . "ನವಾಬನ ವಂಶಸ್ಥರಿಗೆ "ಗರುಡ ರೇಖೆ "ಒಂದು ವರವಾಗಿ ಬರುತ್ತಿದೆ ಪೀಳಿಗೆಗೆ .ಆದರೆ ಈಗಿರುವ ನವಾಬನಿಗೆ ಗರುಡ ರೇಖೆಯ ಅದೃಷ್ಟ ಒಲಿದಿಲ್ಲ "ಎಂದು ನಗತೊಡಗಿದಳು ವಾಸುಕಿ . ಈ ಬಾರಿಯ ಅವಳ "ನಗು "ಇಡೀ ಬೆಟ್ಟ ,ಗುಡ್ಡದ ಕಲ್ಲುಗಳನ್ನು ತಾಕಿ ಪ್ರತಿಧ್ವನಿಸುತ್ತಿತ್ತು ಮಧ್ಯರಾತ್ರಿಯ ವೇಳೆಗೆ.  ಅಗಸ್ತ್ಯನ ಮನಸ್ಸಿನಲ್ಲಿ ಏಳುವ "ಪ್ರಶ್ನೆಯ " ಅರಿವಾದಂತೆ ಇತ್ತು ವಾಸುಕಿಗೆ .

      

"ಕಂದ , ನಾಗ ಮಣಿ ಎಂಬುದು "ಶೋಕಿಯ" ವಸ್ತು ಅಲ್ಲ , ಸಾವಿರ ಜನಕ್ಕೆ "ಉಪಯೋಗ "ಆಗುವ ಔಷದ ಅದು .

ಎಂತಾ "ವಿಷ "ಸಮೇತ ಹೀರಬಲ್ಲದು ಅದು . ಹಾಗೆ ಅದರ ಪೂಜೆಯಿಂದ ನಮ್ಮ ಸಂತತಿಗೆ ವಿಶೇಷ ಶಕ್ತಿ ಕೂಡ ದೊರೆಯುತ್ತದೆ . ನವಾಬನಿಂದ ಅದನ್ನು ತರುವ ಬಗ್ಗೆ ಆಲೋಚಿಸು ನೀನು . ಅದಕ್ಕೆ ನನ್ನ ಎಲ್ಲಾ ಸಮಸ್ತ ನಾಗರ ಸೇನೆ ,ನಿನ್ನ ಬೆಂಬಲಕ್ಕೆ ನಿಲ್ಲುತ್ತೆ "...ಎಂದು ತನ್ನ ಕಡೆಯ ಮಾತೆಂಬಂತೆ ಹೇಳಿ ....ವಾಸುಕಿ ಆತನ ಕೈಯಲ್ಲಿ ಒಂದು ನೀಲ ಮಣಿಯನ್ನು ಇಟ್ಟಿದ್ದಳು . "ಇದು ಅದರಂತೆ ಇರುವ "ಮಣಿ ", ಮುಂದೆ ನಿನಗೆ ಬದಲಾಯಿಸಲು ಅನುಕೂಲ ಆಗಬಹುದು "ಎಂದಿದ್ದಳು .  ಎಲ್ಲವೂ ಕನಸಿನಂತೆ ಭಾಸವಾಗಿತ್ತು ಅಗಸ್ತ್ಯನಿಗೆ . ಆದರೆ ಕೈಯಲ್ಲಿದ್ದ ಮತ್ತೊಂದು ಮಣಿ ಮಾತ್ರ , ಇದು ಕನಸಲ್ಲ ಎಂದು "ಬುಸ್ " ಗುಡುತ್ತಿತ್ತು. ಅವಳಿಗೆ ಕೈ ಮುಗಿದು ನಿಧಾನಕ್ಕೆ ಬೆಟ್ಟ ಇಳಿಯ ತೊಡಗಿದ ಅಗಸ್ತ್ಯ .

ಆಗ ಕೇಳಿ ಬಂದಿತ್ತು ವಾಸುಕಿಯ ದ್ವನಿ .  "ಹಿಂದಿನಿಂದ " "ನಿನಗೇನು ಬೇಕು ಎಂಬುದು , ನೀನು ಸಣ್ಣಗೆ ಹೇಳಿದರೂ ಕೂಡ ನನಗೆ ಅದು ಮುಟ್ಟುತ್ತೆ ಕಂದ , ಮುಂದಿನ ವ್ಯವಸ್ಥೆ ನಾನು ಮಾಡಿಕೊಡಬಲ್ಲೆ " ಎಂದು.


ಈಗಿನ ಕಾಲದಲ್ಲಿ ಕೂಡ ತನ್ನ ಕಥೆ ಪೌರಾಣಿಕ ಕಥೆಯ ತರಹ ಆಗಿದ್ದು ನೆನೆದು ,ಒಂದು ಕ್ಷಣ ಅಗಸ್ತ್ಯನ ಮುಖದಲ್ಲಿ ಮಂದಹಾಸ . ಕತ್ತಲಲ್ಲಿ ಕೂಡ ಅವನ "ಮಂದಹಾಸ "ಕಂಡು ವಾಸುಕಿಗೆ ಖಚಿತವಾಗಿತ್ತು , ಈತ "ನಾಗ ಮಣಿಯನ್ನು "ತಂದೇ ತರುತ್ತಾನೆ ಎಂದು.  ನಿಧಾನಕ್ಕೆ ಬೆಟ್ಟ ಇಳಿದು ಕೆಳಗೆ ಬರುವಷ್ಟರಲ್ಲಿ "ಸಣ್ಣಕ್ಕೆ "ಮೂಡಣದಲ್ಲಿ ಬೆಳಕು ಮೂಡತೊಡಗಿತ್ತು . ಅಗಸ್ತ್ಯ ಸೀದಾ ನಡೆದಿದ್ದ ಪಟ್ಟಣದ ಲಾಡ್ಜ್ ಒಂದಕ್ಕೆ . ನಿದ್ದೆಯಿಲ್ಲದ ಕಣ್ಣು ಆಗಲೇ "ಕೆಂಪು "ಹೊರಸೂಸುತ್ತಿತ್ತು . ತಲೆಯಲ್ಲಿ ವಾಸುಕಿಯ ಮಾತು ಪ್ರತಿಧ್ವನಿಸುತ್ತಿತ್ತು . ರೂಮಿಗೆ ಹೋಗಿ , ಮುಖ ತೊಳೆದು" ಹಾಸಿಗೆಯ "ಮೇಲೆ ಉರುಳಿದ . ಆವತ್ತು ಸಂಜೆಯ ತನಕ "ಗಾಢ ನಿದ್ದೆ "ಅವನಿಗೆ , ಮೊಟ್ಟ ಮೊದಲ ಬಾರಿಗೆ "ಕನಸು "ಕಾಣಲಿಲ್ಲ ಆತ .


ಎಷ್ಟೋ ವರ್ಷ ನಿದ್ದೆಗೆಟ್ಟವನಂತೆ ಸಂಜೆ ಎದ್ದು, ಹೊಟ್ಟೆಗೆ ಒಂದಷ್ಟು ಉಪಹಾರ ಸೇವಿಸಿ ಮತ್ತೆ ನಿದ್ದೆ ಹೋಗಿದ್ದ ಅಗಸ್ತ್ಯ ಆದರೆ ಅವ ಗಮನಿಸದ ದೃಷ್ಯವೇನೆಂದರೆ ...ಅವನ ರೂಮಿನ ಕಿಟಕಿಯ ಬಳಿಯೇ , ಅವನನ್ನೇ ಗಮನಿಸುತ್ತಾ ಇತ್ತು ,"ಮಿರೀ ಮಿರಿ ಮಿಂಚುತ್ತಾ ಇದ್ದ ನಾಗರ "ಒಂದು .  ಬೆಳಿಗ್ಗೆ ಎದ್ದವನೇ ತನ್ನ "ಮೊಬೈಲ್ "ತೆಗೆದು ಹೈದರಾಬಾದ್ ನವಾಬನ ಬಗ್ಗೆ ಹುಡುಕಿದ್ದ .      ಹೈದರಾಬಾದ್ ನ ನಗರದ ಹೊರವಲಯದಲ್ಲಿ ಇರುವ "ಐಷಾರಾಮಿ ಕೋಟೆಯ ಒಳಗೆ ತನ್ನ ವಾಸ್ತವ್ಯ ಏರ್ ಪಡಿಸಿಕೊಂಡಿದ್ದ ಆತ ". ಆತನ ಬಳಿಯಿಂದ "ನಾಗಮಣಿ "ತರುವುದು ಸುಲಭ ಅಲ್ಲವೆಂದು ತಕ್ಷಣವೇ ಗ್ರಹಿಸಿದ್ದ ಅಗಸ್ತ್ಯ . ಆದರೂ ಕೂಡ , ಎಲ್ಲೋ "ವಾಸುಕಿ "ತನ್ನ ಮೇಲಿಟ್ಟ ನಂಬಿಕೆಗೆ , ದ್ರೋಹ ಮಾಡಲು ಮನಸು ಇರಲಿಲ್ಲ ಅವನಿಗೆ . ಮೊದಲು ತಾನು ನವಾಬನ ಮನೆ ಸೇರಬೇಕೆಂದು ಕೊಂಡು , ಉಳಿದಿದ್ದು ಕಡೆಗೆ ಎಂಬಂತೆ ತಕ್ಷಣವೇ ರೂಮ್ ಖಾಲಿ ಮಾಡಿ ಹೊರಟಿದ್ದ ಹೈದರಾಬಾದ್ ಕಡೆ . ವಿಷಯ ತಿಳಿದಂತೆ "ವಾಸುಕಿ "ಕೂಡ ಸಣ್ಣದಾಗಿ ಫೋತ್ಕರಿಸಿದಳು. "ಖುಷಿಯಿಂದ ".

         

ಹೈದರಾಬಾದ್ ಎಂಬ ಮಹಾ ಪಟ್ಟಣದಿಂದ , ಇಪ್ಪತ್ತು ಮೈಲಿ ಹೊರಗೆ ಇರುವುದು ನವಾಬನ ಕೋಟೆ .

ಈಗಿನ ನವಾಬನ ಹೆಸರು "ಮೆಹಮೂದ್ ಖಾನ್" .     ವಯಸ್ಸು ಅರವತ್ತು ಆದರೂ , ಹಿಂದೆ ಗರಡಿಯಲ್ಲಿ ಪಳಗಿದ ಶರೀರ ಆತನದು . ಯಾವಾಗ "ಸರದಾರ್ ವಲ್ಲಬಾಯಿ ಪಟೇಲರು " ....ಹೈದರಾಬಾದ್ ನಿಜಾಮನ ಆಡಳಿತ ಕೊನೆ ಗೊಳಿಸಿ , ಅಖಂಡ ಭಾರತಕ್ಕೆ ಅದನ್ನು ಸೇರಿಸಿದ ಕೂಡಲೇ ,ನಿಜಾಮನ ವಂಶಸ್ಥರು ಸೀದಾ ನಗರದಿಂದ ದೂರದಲ್ಲಿ ಇರುವ ಈ ಕೋಟೆಗೆ ಬಂದು ವಾಸ್ತವ್ಯ ಹೂಡಿದ್ದರು .


ಅಕ್ಕ ಪಕ್ಕದ ಎಲ್ಲಾ ಭೂಮಿ ಅವರಿಗೆ ಸೇರಿದ್ದು ಕೂಡ , ಅವರು ಅಲ್ಲಿಗೆ ಹೋಗಲು ಕಾರಣವಾಗಿರಬಹುದು .

ಇಡೀ ಊರು ಈಗಲೂ ಕೂಡ ಅವರ ಹಿಡಿತದಲ್ಲಿ ಇರುವುದು ಗೊತ್ತಾಗಿತ್ತು ಅಗಸ್ತ್ಯನಿಗೆ , ಅಲ್ಲಿಗೆ ಬಂದ "ಸರಕಾರಿ ಅಧಿಕಾರಿಗಳಿಗೆ "ಮತ್ತು ಊರ "ಹೊಸಬರಿಗೆ ನವಾಬನ "ಆತಿಥ್ಯ ಕಡ್ಡಾಯವಾಗಿ ಸ್ವೀಕರಿಸಬೇಕಿತ್ತು . ಅದು ಅಲ್ಲಿನ "ಸಂಪ್ರದಾಯ" ಕೂಡ ಆಗಿತ್ತು . ಅವನ "ಪ್ರತಿಷ್ಠೆಯ "ಸಂಕೇತ ಕೂಡ.  ಎಲ್ಲರಕಿಂತ ಅಗಸ್ತ್ಯನ ಆಕರ್ಷಿಸಿದ್ದು ನವಾಬನ ಉದ್ಯಾನವನ . ಜಗತ್ತಿನ ಎಲ್ಲಾ ತಳಿಯ ಮರ ಗಿಡಗಳು ತನ್ನ ಬಳಿಯೇ ಇರಬೇಕೆಂಬ ಹುಚ್ಚು .


ಆಗ ಹೊರಟಿದ್ದ ಅಗಸ್ತ್ಯ ನವಾಬನ ಕೋಟೆಯ ಕಡೆ , "ತಾನೊಬ್ಬ ಗಿಡ ಮರಗಳ ಬಗ್ಗೆ ನಡೆಸುವ ಸಂಶೋಧಕನ "ಹಾಗೆ .

                               

ಪೇಟೆಯಿಂದ "ಜನ್ನತ್ ನಗರದಲ್ಲಿ " ಆಟೋ ಇಳಿದಿದ್ದ .ಇಳಿದವನಿಗೆ ಕಾಣಿಸಿದ್ದು , ಮೈಲಿ ಉದ್ದದ ದೊಡ್ಡ ಕೋಟೆ .

ಅದಕ್ಕೆ ಇರುವ ದೊಡ್ಡ ಬಾಗಿಲು , ಹೊರಗೆ ಬಾಗಿಲು ಕಾಯುತ್ತಿರುವ ಆತನ ಸಿಬ್ಬಂಧಿಗಳು . ಸೀದಾ "ಕೋಟೆ ಬಾಗಿಲಿಗೆ ಹೋಗಿ "ತನ್ನ ಪರಿಚಯ ಹೇಳಿಕೊಂಡಿದ್ದ ಅಗಸ್ತ್ಯ . ಆಗ ತೆರೆದಿದ್ದರು "ಹಳೆಯ ಕಾಲದ ದೊಡ್ಡ ಮರದ ಬಾಗಿಲನ್ನು ".

ಒಳಗೆ ಹೋದವನಿಗೆ ಮೊದಲು ಕಂಡಿದ್ದು ಅತ್ಯಂತ ಸುಂದರ ಉದ್ಯಾನವನ . ಅದರ ಆಚೆಗೆ ಹುಲುಸಾಗಿ ಬೆಳೆದು ನಿಂತ "ಬೃಹತ್ " ಗಾತ್ರದ ಮರಗಳು . ಅಲ್ಲಲ್ಲಿ ಕೆಲಸ ಮಾಡುತ್ತಿರುವ ನೌಕರರು...ಅದೆಲ್ಲವನ್ನೂ ದಾಟಿ ಮುಂದೆ ನಡೆದಿದ್ದ , ದೊಡ್ಡದಾದ ಹಳೆಯ "ಪಾಳೆಗಾರಿಕೆಯ ಮನೆ "ಸಿಗುವರೆಗೆ .


ಅಗಸ್ತ್ಯನ ಮುಖ ಕಂಡು ಅವನತ್ತಲೇ ನಡೆದು ಬಂದಿದ್ದ , ನವಾಬನ ಜವಾನ . ಬಂದವನೇ ಅಗಸ್ತ್ಯ ನನ್ನು ಪಡಸಾಲೆಯ ಖುರ್ಚಿಯಲ್ಲಿ ಕೂರಲು ಹೇಳಿ ..ಅವನ ಬೇಟಿಯ ಬಗ್ಗೆ ವಿಚಾರಿಸಿದ್ದ. " ನಾನು ಕರ್ನಾಟಕದ ಮೂಲೆಯ ಹಳ್ಳಿಯವನು , ಓದುತ್ತಿರುವುದು ಸಸ್ಯ ಶಾಸ್ತ್ರ . ನಿಮ್ಮಲ್ಲಿ ಅಪರೂಪದ ಸಸ್ಯಗಳು ಇದೆ ಎಂದು ಗೊತ್ತಾದ ಬಳಿಕ ಹೊರಟು ಬಂದೆ ಸರ್ "ಎಂದು ವಿನಮ್ರನಾಗಿ ಹೇಳಿದ್ದ . "ತೊಂದರೆ ಇಲ್ಲ ನಮಗೆ , ಇಲ್ಲಿ ಇರುವಷ್ಟು ದಿನ ನೀವು ನಮ್ಮ ನವಾಬನ ಆತಿಥ್ಯ ಸೇವಿಸಬೇಕು "ಎಂದು ಗತ್ತಿನಲ್ಲಿ ನುಡಿದಿದ್ದ ಆತ . ಅಷ್ಟರಲ್ಲೇ "ನವಾಬನ "ಆಗಮನ ಆಗಿತ್ತು ,ಪಡಸಾಲೆಗೆ ಎದ್ದು ನಿಂತಿದ್ದ ಅಗಸ್ತ್ಯ , ನವಾಬನ ಆಗಮನದಿಂದ . ಮೊದಲ ದೃಷ್ಟಿಯಲ್ಲೆ ನವಾಬನಿಗೆ ಕಾಣಿಸಿದ್ದು ,ಇಪ್ಪತ್ತೈದರ ಕಟ್ಟುಮಸ್ತಿನ , ಆರು ಅಡಿಯ ಮೇಲಿನ ಎತ್ತರದ ಸ್ಫುರದ್ರೂಪಿ ಯುವಕ . ಕಣ್ಣು ಮಾತ್ರ ,ಎಂತಹವರನ್ನೂ ಕೂಡ ಸೆಳೆಯುವ ಹಾಗಿತ್ತು .

ಒಂದು ಮಾತು ಆಡದೆ ಎದ್ದು ನಿಂತಿದ್ದ , ಅಗಸ್ತ್ಯನ ಸಂಪೂರ್ಣ ಅಳೆದುಬಿಟ್ಟಿದ್ದ . ಆಗ ಆತನಿಗೆ ಕಾಣಿಸಿದ್ದು , "ತೆಳ್ಳನೆಯ ಬಟ್ಟೆಯಲ್ಲಿ ಅಡಗಿ ಕುಳಿತ ಅಗಸ್ತ್ಯನ ಜನಿವಾರದ ನೂಲು".


ಸಣ್ಣ "ಮಂದಹಾಸ "ನವಾಬನ ಮುಖದಲ್ಲಿ ಅಗಸ್ತ್ಯನ ನೋಡಿ .  ಅದನ್ನು ನೋಡಿ ಅಗಸ್ತ್ಯ ಗಾಬರಿ ಆಗಿ ಹೋಗಿದ್ದ.

ಅಷ್ಟರಲ್ಲೇ ನುಡಿದಿದ್ದ ನವಾಬ್ " ವಿಷಯ ತಿಳಿಯಿತು ನೀನು ಬಂದ ಬಗ್ಗೆ . ನೀನು ಇಲ್ಲಿ ಇರುವ ತನಕ ,ನಮ್ಮ ವಿಶೇಷ

ಅತಿಥಿ ". ಮಾತಿನಲ್ಲಿ ರಾಜನ ಗತ್ತು ಇತ್ತು ."ಹಿಂದೆ ಹೊತ್ತಿಗೆ , ಸಾವಿರ ಬ್ರಾಹ್ಮಣರಿಗೆ ಊಟ ಹಾಕುತ್ತಿದ್ದ ಕುಟುಂಬ ನಮ್ಮದು " ಎಂದು ಗತ್ತಿನಲ್ಲಿ ನುಡಿದಿದ್ದ ಆತ .  ತನ್ನದೇ ದೊಡ್ಡ ಕುರ್ಚಿಯಲ್ಲಿ ಕುಳಿತು , ಅಗಸ್ತ್ಯನ ಬಗ್ಗೆ ಮತ್ತಷ್ಟು ವಿಚಾರಿಸಿ , ತಮ್ಮ ವಂಶದ ಸಾಹಸದ ಬಗ್ಗೆ ಬಹಳಷ್ಟು ಹೇಳಿ , ಅವನಿಗೆ ಪಕ್ಕದಲ್ಲಿ ಇರುವ, " ಗೆಸ್ಟ್ ಹೌಸ್ ನಲ್ಲಿ ಇರಬಹುದು "ಎಂದು ನುಡಿದಿದ್ದ . ಜೊತೆಗೆ ಊಟ , ಉಪಹಾರದ ವಿಷಯವನ್ನು ,ಕೋಟೆಯ "ಬ್ರಾಹ್ಮಣ ಅಡುಗೆಯವನು "ನೋಡಿ ಕೊಳ್ಳುತ್ತಾನೆ ಎಂದು ನುಡಿದು , ತನ್ನ "ಘನತೆಯನ್ನು "ಮೆರೆದಿದ್ದ ನವಾಬ್ ಮೆಹಮೂದ್ .

      

ಆಶ್ಚರ್ಯ ಆಗಿತ್ತು ಅಗಸ್ತ್ಯ ನಿಗೆ , ತಾನು ಬ್ರಾಹ್ಮಣ ಎಂದು ಇವ ಹೇಗೆ ಕಂಡು ಹಿಡಿದ ಎಂದು . ನಾಲ್ಕು ದಿನ ಕಳೆದುಹೋಗಿತ್ತು , ಅಗಸ್ತ್ಯ ಜನ್ನತ್ ನಗರದ ಕೋಟೆ ಸೇರಿ . ಪ್ರತಿ ದಿನ ಪಕ್ಕದ ಕಾಡಿನಲ್ಲಿ ಓಡಾಡುತ್ತಿದ್ದ ಅವ ...ತನ್ನ ಮೇಲೆ "ಯಾವುದೇ ಅನುಮಾನ ಬಾರದಂತೆ ". ಯಾವುದಾದರೂ ಮಾರ್ಗ ಕಂಡು ಹಿಡಿಯಲೇ ಬೇಕಿತ್ತು ಅವ "ನಾಗಮಣಿಯ "ಸಲುವಾಗಿ . "ಪ್ರತಿ ದಿನ , ಪ್ರತಿ ಕ್ಷಣ ನಾಗರ ಹಾವುಗಳು "ತನ್ನನ್ನು ಹಿಂಬಾಲಿಸುತ್ತಾ ,ಇರುವುದು ಗಮನಕ್ಕೆ ಬಂದಿತ್ತು ಅವನಿಗೆ . ಸಂಜೆಯ ವೇಳೆಗೆ ನವಾಬನ ಕೋಟೆ ತುಂಬಿ ತುಳುಕುತ್ತಿತ್ತು , ಅವನ ಸ್ನೇಹಿತರಿಂದ .

ರಾಜ್ಯ ಕಳೆದುಕೊಂಡರೂ ಕೂಡ ರಾಜನಂತೆ ಬಾಳುತ್ತಿದ್ದ ನವಾಬ್ . "ನೂರಾರು ಕೆಲಸಗಾರರು , ಹತ್ತಾರು ಅಂಗ ರಕ್ಷಕರು ದೂರದಲ್ಲಿ ಇರುವ ಕುದುರೆ ಲಾಯ ,ಅವನ ಅಂತಸ್ತನ್ನು ಜಾಸ್ತಿ ಮಾಡಿತ್ತು .


ಆವತ್ತು ಸಂಜೆ ಒಳಗೆ ಒಂದು ತೀರ್ಮಾನಕ್ಕೆ ಬಂದಿದ್ದ ಅಗಸ್ತ್ಯ . ನವಾಬನ ಬಳಿ "ನೀಲಮಣಿ "ಕೇಳುವ ಪ್ರಶ್ನೆಯೇ ಇರಲಿಲ್ಲ

ನೀಲಮಣಿ ಗೆ ತಾನು ಬಂದಿದ್ದು ಎಂದು ಗೊತ್ತಾದರೆ , ನವಾಬ "ಅಲ್ಲಿಯೇ ಅವನನ್ನು ಹುಗಿದು ಹಾಕುವುದರಲ್ಲಿ ಯಾವ ಸಂಶಯವೂ ಇರಲಿಲ್ಲ ". ಅದಕ್ಕೆ ಅವನಿಂದ ನೀಲಮಣಿ ಹೊರತರುವ ಹೊಸದೊಂದು ,ಯೋಜನೆ ಹಾಕಿಕೊಂಡಿದ್ದ ಅಗಸ್ತ್ಯ .  ಅದೇ ದೊಡ್ಡ "ನಾಗರವೊಂದು "ಆತನಿಗೆ ಕಚ್ಚಿ ವಿಷ ಬಿಡುವುದು.  ಅದನ್ನೇ ತನ್ನ ಪಕ್ಕ ಸುಳಿದಾಡುತ್ತಿದ್ದ , ನಾಗರಕ್ಕೆ ಬಾಯಿಬಿಟ್ಟು ಸಣ್ಣಗೆ ಉಸುರಿದ್ದ . "ನಿಜಕ್ಕೂ ನಾಗರಹಾವಿಗೆ ಅದು ಕೇಳಿಸಿತೋ ಇಲ್ಲವೋ ಎಂಬ ಪ್ರಶ್ನೆಗೆ ...ಅವನಿಗೆ ಮರುದಿನ ಮಧ್ಯಾಹ್ನ ಉತ್ತರ ಸಿಗುತ್ತಿತ್ತು ".


ಮರುದಿನ ಬೆಳಿಗ್ಗೆಯಿಂದ ಎಲ್ಲಿಗೂ ಅಲೆದಾಡಲು ಹೋಗದೆ ,ತನ್ನ ಗೆಸ್ಟ್ ಹೌಸ್ ನಲ್ಲಿ ಉಳಿದಿದ್ದ ..."ಸಾಕಷ್ಟು ಬರೆಯುವ ನೆಪ ಹೇಳಿ" . ಆತನ ಗುಂಡಿಗೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು ಮಧ್ಯಾಹ್ನದ ಸಮಯ ಬಂದಾಗ. ಅದೇ ಮಧ್ಯಾಹ್ನದ ಸಮಯಕ್ಕೆ ಮೆಹಮೂದ್ ನವಾಬ್ ಖಾನ್, ತನ್ನ ಮೂರನೇ ಮಡದಿಯನ್ನು ಭೇಟಿಯಾಗಿ , ಮನೆಯ ಮಹಡಿಯನ್ನು ಇಳಿಯುತ್ತಿದ್ದ . ಆಗ ಮಹಡಿಯ ಕೊನೆ ಮೆಟ್ಟಿಲ ಮೇಲೆ ಮಲಗಿದ್ದ ಬಿಳಿ ನಾಗರಹಾವೊಂದು , ನವಾಬನ ಹೆಬ್ಬೆರಳ ಸಂದಿಗೆ ದೊಡ್ಡದಾದ ಕಾಟು ಹಾಕಿತ್ತು . ನವಾಬ ಗಾಬರಿಯಾಗಿ ಕಾಲು ಹಿಂದೆ ತೆಗೆಯುವಷ್ಟರಲ್ಲಿ ,ಮತ್ತೊಮ್ಮೆ ತನ್ನ ಹೊಡೆತವನ್ನು ಕಿರುಬೆರಳಿಗೆ ಹಾಕಿ ....ಒಮ್ಮೆ ತನ್ನ "ಹೆಡೆಬಿಚ್ಚಿ "ಫೋತ್ಕರಿಸಿ ,ಅಲ್ಲೇ ಸಂದಿಯಲ್ಲಿ ನುಸುಳಿ ಹೋಗಿತ್ತು ಅದು.


ಆಗ ಕೂಗಿಕೊಂಡ ನವಾಬ ದೊಡ್ಡದಾಗಿ , "ಹಾವು ಹಾವು "ಎನ್ನುತ್ತಾ . "ಬಿಳಿ ನಾಗರದ ವಿಷ ಹೇಗಿತ್ತೆಂದರೆ , ನವಾಬ ಹೊರಗಿನ "ಪಡಸಾಲೆಗೆ "ಕೂಗುತ್ತಾ ಬರುವಷ್ಟರಲ್ಲಿ ಸುಸ್ತಾಗಿ ಕಂಪಿಸ ತೊಡಗಿದ್ದ ". ಆತನ ಮನೆ ಮಂದಿ , ಅಂಗರಕ್ಷಕರು , ಸುತ್ತಲಿನ ಕೆಲಸಗಾರರು ಓಡಿ ಬರುವಷ್ಟರಲ್ಲಿ .....ನವಾಬ ಪಡಸಾಲೆಯಲ್ಲಿ "ಕುಳಿತು "ತನ್ನ ಕಾಲನ್ನು ಬಿಗಿ ಹಿಡಿದಿದ್ದ , ಹಗ್ಗ ತರುವಂತೆ ಆಜ್ಞಾಪಿಸಿ . ಅದೇ ಸಮಯಕ್ಕೆ "ಕಿರುಚಾಟದ "ಧ್ವನಿ ಕೇಳಿ ಅಗಸ್ತ್ಯ ನವಾಬನ ಪಡಸಾಲೆಗೆ ಕಾಲಿಟ್ಟಿದ್ದ. ತಕ್ಷಣಕ್ಕೆ ಯಾರೋ ಹಗ್ಗವನ್ನು ತಂದು ಕಾಲಿಗೆ ಬಿಗಿದು ಕಟ್ಟಿದ್ದರು . ಆದರೂ ಕೂಡ ಸಣ್ಣಗೆ "ವಿಷ "ಏರುತ್ತಾ ಇರುವುದು ನವಾಬನ ಉಸಿರಾಟದಲ್ಲಿ ಗೊತ್ತಾಗುತ್ತಿತ್ತು .


ಆಗ ನವಾಬನ "ಪಕ್ಕದಲ್ಲಿ "ಹೋಗಿ ಕುಳಿತಿದ್ದ ಅಗಸ್ತ್ಯ . " ಸರಿಯಾಗಿ ಬೆರಳ ಸಂಧಿಗೆ ಕಾಟು ಹಾಕಿಬಿಟ್ಟಿದೆ ಹಾವು , ನಮ್ಮಲ್ಲಿ ಇಂತಹದೊಂದು ಘಟನೆ ಆದರೆ ,ತಕ್ಷಣಕ್ಕೆ ಔಷಧ ಸಿಗುತ್ತೆ ಊರ ಪಂಡಿತರಲ್ಲಿ , ಯಾಕೆಂದರೆ ಅವರ ಮನೆಯಲ್ಲಿ ನಾಗಮಣಿ ಉಂಟು "ಎಂದಷ್ಟೇ ಹೇಳಿ ,ನವಾಬನ ಮುಖ ನೋಡತೊಡಗಿದ ಅಗಸ್ತ್ಯ . ನಿಧಾನವಾಗಿ "ವಿಷ ಏರಲು "ಶುರುವಾಗಿತ್ತು ನವಾಬನಿಗೆ . ಹಾವು ಕಚ್ಚಿದ್ದು ಒಂದಲ್ಲ ಎರಡು ಕಡೆಗೆ ಎಂಬುದು ಗೊತ್ತಾಗಿತ್ತು ಅವನಿಗೆ .

ಕಾಲು ನೀಲಿ ಗಟ್ಟ ತೊಡಗಿದ್ದು ನೋಡಿ , ಗಾಬರಿಯಾಗಿತ್ತು... ಜೊತೆಗೆ ಮೈಯಲ್ಲಿ ಸೇರಿದ "ವಿಷ " ತನ್ನ ಪ್ರಭಾವ ತೋರಿಸಿಕೊಳ್ಳ ತೊಡಗಿತ್ತು . ಆಗ "ನೆನಪಾಗಿದ್ದು "ಅಗಸ್ತ್ಯ , ಹೇಳಿದ ಮಾತು. ಅವನಿಗೂ ಕೂಡ ಗೊತ್ತಿತ್ತು "ನೀಲಮಣಿ ಇಂದ ವಿಷವನ್ನು ತೆಗೆಯಬಹುದು "ಎಂದು . ನಿಧಾನವಾಗಿ "ಓಲಾಡುತ್ತ "ಪಡಸಾಲೆಯಿಂದ , ಮನೆಯ ಒಳಗಿನ ನೆಲಮಾಳಿಗೆ ಹೋಗಿದ್ದ ನವಾಬ . ಯಾರಿಗೂ ಪ್ರವೇಶವಿಲ್ಲದ "ಗುಪ್ತ "ಜಾಗಕ್ಕೆ ಹೋಗಿ ಹತ್ತು ನಿಮಿಷದಲ್ಲಿ ಹಿಂತಿರುಗಿದ್ದ.

ಆತನ ಕೈಯಲ್ಲಿ ಮಿರಿಮಿರಿ ಮಿಂಚುತ್ತಿದ್ದ , "ನೀಲಿಬಣ್ಣದ ನಾಗಮಣಿ".   ಆದರೆ ಅದರ ಉಪಯೋಗ ಹೇಗೆ , ಎಂಬ ಬಗ್ಗೆ ಸ್ವಲ್ಪವೂ ಮಾಹಿತಿ ಇರಲಿಲ್ಲ ಆತನಿಗೆ . ಅಗಸ್ತ್ಯ ನಿಗೆ ಕೂಡ. ಆಗಸ್ತ್ಯ ನ ಕೈಯಲ್ಲಿ ನಾಗ ಮಣಿ ಇಟ್ಟು , ಹಿಂದೆ ಸರಿದು ...ಗೋಡೆಗೆ ಒರಗಿ ಕುಳಿತಿದ್ದ ಆತ .


ಆಗ ಒಮ್ಮೆಲೇ ನೆನಪು ಆಗಿತ್ತು ಆತನ ತಂದೆ ಸಣ್ಣವ ಇರಬೇಕಾದರೆ ಹೇಳಿದ ಕಥೆ.ಅಗಸ್ತ್ಯ ನಿಗೆ    ಕಚ್ಚಿದ" ಗಾಯದ "ಮೇಲೆ ನಾಗಮಣಿ ಇಟ್ಟು , ಕೂಗಿ ಹೇಳಿದ "ಹಾಲನ್ನು "ತರುವುದಕ್ಕೆ. ಅಷ್ಟರಲ್ಲಿಯೇ ನವಾಬ ಅರೆ ಎಚ್ಚರದ ಸ್ಥಿತಿ ತಲುಪಿದ್ದ .

ನವಾಬನ ಕಾಲಿನ ಬಳಿಯೇ ಕುಳಿತು ,ನಾಗಮಣಿಯನ್ನು "ಗಾಯದ "ಮೇಲೆ ಇಟ್ಟು ಸ್ವಲ್ಪ ಹೊತ್ತಿನ ನಂತರ ..ಅದನ್ನು "ಹಾಲಿನಲ್ಲಿ "ಹಾಕುತ್ತಾ ಕುಳಿತ ಅಗಸ್ತ್ಯ . ಹಾಲಿಗೆ ಹಾಕಿದ "ಮಣಿ "ತಕ್ಷಣಕ್ಕೆ , ನೀಲಿ ಮಿಶ್ರಿತ ಹಸಿರು ಬಣ್ಣವನ್ನು ಬಿಡತೊಡಗಿತ್ತು.  ಹೊಸ ಅನುಭವ ಇದು ಅಗಸ್ತ್ಯನಿಗೆ , ಆಶ್ಚರ್ಯಗೊಂಡರು ಕೂಡ , ಯಾರಿಗೂ ತೋರ್ಪಡಿಸದೆ ಮತ್ತೆ ಮತ್ತೆ ....ಅದೇ ಕೆಲಸ ಮಾಡತೊಡಗಿದ ಆತ . ಸುಮಾರು ಒಂದು ತಾಸು ಅದೇ ಕೆಲಸ ಮಾಡಿದ ಮೇಲೆ ,ಹೊಸ ಹಾಲಿನಲ್ಲಿ ಹಾಕಿದ "ನಾಗಮಣಿ "ಯಾವ ಬಣ್ಣವನ್ನು ಬಿಡಲಿಲ್ಲ . ಆಗ ಅರ್ಥವಾಯಿತು ಅವನಿಗೆ , ನವಾಬನ ಮೈಯಲ್ಲಿರುವ "ವಿಷ ಹೊರ ಬಂದಿದೆ "ಎಂದು.


ಸುತ್ತಲೂ ಇದ್ದ ನವಾಬನ ಪರಿವಾರ ಮತ್ತು ಆತನ ಸಹಚರರು ನಿಟ್ಟುಸಿರು ಬಿಟ್ಟಿದ್ದರು . ನವಾಬ ಮಾತ್ರ ಸುಸ್ತಿನಿಂದ ಕಣ್ಣುಮುಚ್ಚಿ ಕುಳಿತಿದ್ದ .ಆಗ ತನ್ನ ಬಳಿಯಿದ್ದ ,"ಅದೇ ಗಾತ್ರದ ನೀಲಿ ಮಣಿಯನ್ನು ಬದಲಾಯಿಸಿ ಬಿಟ್ಟ ಅಗಸ್ತ್ಯ ಹಾಲಿನ ತಟ್ಟೆಯ ಒಳಗೆ ".ಅದೇ ಸಮಯಕ್ಕೆ ನಾಗರ ಗುಡ್ಡದಲ್ಲಿ , ವಾಸುಕಿ ಗಹಗಹಿಸಿ ನಕ್ಕಿದ್ದಳು ಇಡೀ "ಬೆಟ್ಟಕ್ಕೆ "ಕೇಳಿಸುವಂತೆ.

ಇನ್ನೇನು ತೊಂದರೆ ಇಲ್ಲ ನವಾಬರಿಗೆ ಎಂದು ,ತನ್ನ ಹತ್ತಿರವಿದ್ದ "ನೀಲಿ ಮಣಿಯನ್ನು "ಅರೆ ಪ್ರಜ್ಞೆಯಲ್ಲಿ ಇದ್ದ ನವಾಬನ ಕೈಯಲ್ಲಿ ತುರುಕಿ , ಎದ್ದು ಹೊರಬಂದಿದ್ದ .


ನಿಜವಾದ "ನಾಗ ಮಣಿ ", ಅಗಸ್ತ್ಯ ನ ಜೇಬಿನಲ್ಲಿ ಬದ್ರವಾಗಿ ಕುಳಿತಿತ್ತು. ಸ್ವಲ್ಪಹೊತ್ತಿನಲ್ಲೇ ನವಾಬನಿಗೆ ಸಂಪೂರ್ಣ ಎಚ್ಚರವಾಗಿತ್ತು. ಕೈಯಲ್ಲಿ ನಾಗಮಣಿ ಇತ್ತು . ಒಂದೇ ಅಂಶವೆಂದರೆ ರಾತ್ರಿ ಇಡೀ "ಎಚ್ಚರವಾಗಿರ ಬೇಕಿತ್ತು "ಅವ .

ಅಗಸ್ತ್ಯ ತನಗೆ ಮಾಡಿದ ಉಪಚಾರವನ್ನು, ಕೇಳಿ ತಿಳಿದುಕೊಂಡಿದ್ದ ಆತ ರಾತ್ರಿಯ ವೇಳೆಗೆ .


ಮರುದಿನ ನವಾಬನನ್ನ ಮಾತನಾಡಿಸಿ , ಆತನ "ಯೋಗಕ್ಷೇಮ "ವಿಚಾರಿಸಿ ತನ್ನ ಮನೆಯತ್ತ ಹೊರಟಿದ್ದ ಅಗಸ್ತ್ಯ .

ಆದರೆ ನವಾಬ ಆತನನ್ನು "ಸುಲಭಕ್ಕೆ "ಹೋಗ ಕೊಡಲಿಲ್ಲ . ಅಗಸ್ತ್ಯನನ್ನು ಒಳಗೆ ಕರೆದು, " ಬೆಳ್ಳಿತಟ್ಟೆಯಲ್ಲಿ ಹಣ್ಣುಹಂಪಲನ್ನು ಇಟ್ಟು ಬೀಳ್ಕೊಟ್ಟಿದ್ದ" . ಜೊತೆಗೆ "ಬಸ್ಟಾಂಡ್ "ತನಕ ಆತನನ್ನು ಸುರಕ್ಷಿತವಾಗಿ ಬಿಟ್ಟುಬರಲು, ಆಜ್ಞಾಪಿಸಿದ ತನ್ನ ಅನುಚರನಿಗೆ .


ಹುಣ್ಣಿಮೆಯ ಬೆಳಕಲ್ಲಿ ತನ್ನದೇ ಪ್ರಭೆಯನ್ನು ಸೂಸಿಸುವ ನಾಗಮಣಿ, ಅಗಸ್ತ್ಯನ ಜೇಬಿನಲ್ಲಿ ಭದ್ರವಾಗಿ ಕುಳಿತಿತ್ತು , ಅವನ ಮನೆಯ "ದೇವರ ಪೀಠ "ಹತ್ತುವುದಕ್ಕೆ ಸಿದ್ಧವಾಗಿ.  ಆದರೆ "ನವಾಬ್ ಮೆಹಮೂದ್ ಖಾನ್ " ಮೊದಲೇ ಕಂಡುಹಿಡಿದು ಬಿಟ್ಟಿದ್ದ . ತನ್ನ ಬಳಿ ಇರುವುದು ನಾಗಮಣಿ ಅಲ್ಲವೆಂದು ...ಆದರೂ ಹಿಂದಿನ ದಿನ "ಶ್ರದ್ದೆಯಿಂದ "ತನ್ನ ಜೀವ ಉಳಿಸಿದ ಅಗಸ್ತ್ಯನ ಕೋರಿಕೆಗೆ , ಅಡ್ಡ ಬಂದಿರಲಿಲ್ಲ ಅವ . ರಂಜಾನ್ ದಿನ , "ಮುಲ್ಲಾ " ಒಬ್ಬ ಹೇಳಿದ ಭವಿಷ್ಯ ಸರಿ ಆಗಿತ್ತು .

ಮನೆ ಬಾಗಿಲಿಗೆ ಬಂದ ಮುಲ್ಲಾನೊಬ್ಬ , ನವಾಬನ ಮುಖ ನೋಡಿದೊಡನೆ ಹೇಳಿದ್ದ ."ನಿನ್ನ ವಜ್ರ ವೈಢೂರ್ಯದ ಮದ್ಯೆ ಬೇರೆಯವರ ದೇವರಿದೆ , ಇನ್ನೊಂದು ತಿಂಗಳಲ್ಲಿ ನಿನ್ನ ಜೀವಕ್ಕೆ ಆಪತ್ತು ಇದೆ "ಎಂದು .


ತನ್ನ ವಂಶದ ನಿಧಿಯ ಮದ್ಯೆ , ಒಂದು ನಾಗಮಣಿ ಅವನದೇ ಪ್ರಾಣ ಉಳಿಸಿ , ಅವನಿಂದ ದೂರ ಆದ ಬಗ್ಗೆ ಆತನಿಗೆ ಸ್ಪಷ್ಟವಾಗಿ ತಿಳಿದು ಹೋಗಿತ್ತು. "ದೇವರ ಮಣಿ ಯಾವುದೆಂದು'


Rate this content
Log in

Similar kannada story from Horror