Natesh MG

Abstract Classics

4.2  

Natesh MG

Abstract Classics

ನನ್ನದೇ ಕಥೆ ಅಪ್ಪನ ಡೈರಿಯಲ್ಲಿ.

ನನ್ನದೇ ಕಥೆ ಅಪ್ಪನ ಡೈರಿಯಲ್ಲಿ.

3 mins
159


ಅಪ್ಪನೆಂದರೆ , ಅದೇನೋ ಅಸಹ್ಯ.


ಆತನ "ಕುಡಿತ " , ಆತನ ಜೀವನ ಶೈಲಿಯ ಬಗ್ಗೆ ...ನನಗೆ ಮೊದಲಿನಿಂದಲೂ ಒಂದು " ಕೆಟ್ಟ "ವಿಚಾರಧಾರೆ ತಲೆಯೊಳಗೆ ಕುಳಿತಿತ್ತು.   ಅಮ್ಮನ ದೂರ ಮಾಡಿದ , ಅಣ್ಣನ ಮುಖ ನೋಡದ ಹಾಗೆ ಮಾಡಿದ ಅವ.... ಯಾವತ್ತಿಗೂ ಕ್ರೂರ ನನ್ನ ಪಾಲಿಗೆ .  ಆದರೆ ಒಂದೇ ಸಂತೋಷವೆಂದರೆ , ನನಗೇನು ಕಡಿಮೆ ಮಾಡಿರಲಿಲ್ಲ. ಉತ್ತಮ ವಿದ್ಯಾಭ್ಯಾಸ , ಕಡೆಗೆ ಉತ್ತಮ ಸಂಬಂಧ ಹುಡುಕಿ ....ಮದುವೆ ಮಾಡಿ ಕೈ ತೊಳೆದುಕೊಂಡು ... ಆತನ" ಮನೆಯಲ್ಲೇ "ವಾಸ ಇದ್ದ ಅಪ್ಪ .ಒಂಟಿಯಾಗಿ

ಹಾಗೆಯೇ ಕುಡಿದು "ಕುಡಿದು" ಸತ್ತು ಹೋದಾಗ ಮಾತ್ರ , ನನ್ನಲ್ಲಿ ಆತನ ಬಗ್ಗೆ ಸಣ್ಣ ಸಂತಾಪವಿತ್ತು ಅಷ್ಟೇ.

ಮದುವೆಯಾಗಿ ಎಷ್ಟೋ ವರ್ಷದ ಬಳಿಕ , ಅಪ್ಪನ ಮನೆಯ ಬೀಗ ತೆಗೆದು ಒಳಗೆ ಹೋಗಿದ್ದೆ .  ಕಾರಣವಿತ್ತು , ಅದು ನನ್ನ ಹೆಸರಲ್ಲಿ ಇದ್ದ ಕಾರಣ .  ಮಾರಲು ಹೊರಟಿದ್ದೆ ಅದನ್ನು . ಒಳ್ಳೆಯ ದರಕ್ಕೆ . ಅಪ್ಪನ ಮನೆಯಲ್ಲಿ , ಎಲ್ಲಾ ಕಡೆಯೂ ಇದ್ದಿದ್ದು ನನ್ನ ಫೋಟೋಗಳು .  ಧೂಳು ಹಿಡಿದ" ಫೋಟೋವನ್ನು "ಸ್ವಚ್ಛ ಮಾಡಿ , ಮತ್ತೆ ನೇತು ಹಾಕಿದ್ದೆ. ಆಗ ಒಂದು ಫೋಟೋದ ಹಿಂದೆ ಸಿಕ್ಕಿತ್ತು , ಹಸಿರು ಬಣ್ಣದ ಡೈರಿಯೊಂದು.  ಅಚ್ಚರಿಯಾಗಿತ್ತು , ಡೈರಿಯ ಕಂಡು. ಧೂಳು ಹಿಡಿದ ಮನೆಯಲ್ಲೇ , ಅದನ್ನು ಹಿಡಿದುಕೊಂಡು ಹೊರಗೆ ಬಂದು ಕುಳಿತಿದ್ದೆ . ಕೆಟ್ಟ ಕುತೂಹಲ , ಡೈರಿಯ ಬಗ್ಗೆ . ಮೇಲಿದ್ದ "ಅಪ್ಪನ "ಅಕ್ಷರದ ಬಗ್ಗೆ .  ಮೊದಲ ಪುಟದಲ್ಲೇ, " ನನ್ನ ಮುದ್ದಿನ ಸ್ವಾತಿ "ಎಂದಿತ್ತು. ಓದುತ್ತಾ ಕುಳಿತೆ , ಆಶ್ಚರ್ಯದ ಭಾವದಿಂದ. ನನ್ನ "ಹೆಸರು "ಇದ್ದಿದ್ದು ನೋಡಿ .  ಯಾವುದೇ ದಿನಾಂಕ , ಇಸವಿ ಇರಲಿಲ್ಲ . ಆತನ "ಭಾವನೆ "ಮಾತ್ರ ಬರೆದಿದ್ದ ಅಪ್ಪ .  ವಾಕಿಂಗ್ ಗೆ "ಹೋದಾಗ "ಕಂಡು ಬಂದಿತ್ತು ಮಗು . ಕಸದ ತೊಟ್ಟಿಯಲ್ಲಿ . ಇನ್ನೇನು ಯಾರೋ ಹಡೆದು , ಬಿಸಾಕಿದ ಹಾಗೆ ಇತ್ತು . ಮೈ ಮೇಲಿನ "ರಕ್ತದ" ಕಲೆಗಳು ಕೂಡ ಆರಿರಲಿಲ್ಲ .  ಸಣ್ಣಗಿನ ಕೊಸರಾಟ ಮಗುವಿನದು. ಮೊದಲು , ಇಣುಕಿ ನೋಡಿದ್ದೆ . ಅದೆಷ್ಟು ಮುದ್ದಾಗಿ , ನನ್ನ ಕಡೆಯೇ ನೋಡುತ್ತಿತ್ತು ಮಗು.


ಎತ್ತಿಕೊಂಡಾಗ , ನನ್ನ ಕಿರು ಬೆರಳನ್ನು ಹಿಡಿದುಕೊಂಡಿದ್ದ ಆಶ್ಚರ್ಯ . ಸೀದಾ ಮನೆಗೆ ಎತ್ತಿಕೊಂಡು ಬಂದಿದ್ದೆ ,ಸಂತೋಷದಿಂದ. "ದೇವರ ಲಕ್ಷ್ಮಿ ಪ್ರಸಾದವೆಂದು ". ಮನೆಯಲ್ಲಿ , ನಾ ಎತ್ತಿ ಕೊಂಡು ಬಂದ ಮಗುವನ್ನು ತೋರಿಸಿದ್ದೆ ನನ್ನವಳಿಗೆ .   "ನೋಡು , ಮನೆಗೆ ಲಕ್ಷ್ಮಿ ಬಂದಳು "ಎಂದು . ಬದಿಯಲ್ಲಿ ನಿಂತು ನೋಡುತಿದ್ದ , ಮಗನ ಕರೆದು ತೋರಿಸಿದ್ದೆ ...."ನಿನ್ನ ತಂಗಿ ಬಂದಳು "ಎಂದು .  ಒಳಗೆ ನಡೆದು , ಬಿಸಿ ನೀರಿನಲ್ಲಿ ಮಗುವನ್ನು ಒರೆಸಿ ...ಅದನ್ನು ಬೆಚ್ಚಗಿನ ನನ್ನ ಶಾಲ್ ಅಲ್ಲಿ ಹಿಡಿದುಕೊಂಡು ಬಂದಿದ್ದೆ . ಆದರೆ ನಿಜಕ್ಕೂ "ಆಘಾತ" ಆಗಿದ್ದು , ನನ್ನವಳ ನೋಟದಿಂದ .

ನೇರವಾಗಿ ಕೇಳಿದ್ದಳು , "ನಿಮ್ಮದೇ ಅಲ್ಲವೇ ಮಗು ಇದು .. ಅನುಮಾನ ಇತ್ತು ನನಗೆ ...ನೀವು ರಾತ್ರಿ ಲೇಟ್ ಬರ ತೊಡಗಿದಾಗ "ಎಂದಿದ್ದಳು . ನಿಂತು ಬಿಟ್ಟಿದ್ದೆ "ನನ್ನವಳ "ಮಾತು ಕೇಳಿ .ಮಗ ಎಲ್ಲವನ್ನೂ "ಅರ್ಥ "ಮಾಡಿ ಕೊಳ್ಳುವಷ್ಟು ದೊಡ್ಡವ.  ಏನನ್ನೂ "ಅರ್ಥ "ಆಗದಷ್ಟು ಕೂಡ ಸಣ್ಣವ. ಅಮ್ಮನ ಮಾತು ಕೇಳಿ , ನನ್ನಡೆಗೆ ಬಿರುಗಣ್ಣು ಬೀರಿದ್ದ.   ನನ್ನ ಮಾತು ಕೇಳುವ ತಾಳ್ಮೆ , ಯಾರಿಗೂ ಇರಲಿಲ್ಲ . ನನ್ನ ಕೈ "ಬೆರಳು "ಹಿಡಿದು ಕೊಂಡಿದ್ದ ಪುಟ್ಟ ಮಗುವಿನ ಹೊರತು.   ನಾಲ್ಕೇ ದಿನದಲ್ಲಿ ನನ್ನವಳು ತವರಿಗೆ ಹೋಗಿದ್ದಳು , ನನ್ನ ಮಗನ ಕರೆದುಕೊಂಡು .

     

ದೇವರ ಮೇಲೆ "ಆಣೆ "ಮಾಡಿ ಹೇಳಿದ್ದೆ . ಯಾರೂ ನಂಬಲಿಲ್ಲ ನನ್ನ . ಹಾಗೆಯೇ ನಡೆದು ಹೋಗಿತ್ತು , ಇದೊಂದೇ ಕಾರಣದಿಂದ ಡೈವರ್ಸ್ ...ಪರಿಹಾರ ಎಲ್ಲವೂ.  ಒಮ್ಮೆ ಕರೆದುಕೊಂಡು ಬಂದ , ಹುಟ್ಟಿದ ಮಗುವಿನ "ಆರೈಕೆ "ಮಾಡಲೇಬೇಕಿತ್ತು.  ಎಲ್ಲಿಯೋ ಬಿಟ್ಟು "ಬರುವುದಕ್ಕೆ "ಮನಸು ಆಗಲಿಲ್ಲ ನನಗೆ , ಈ ಪುಟ್ಟ ಲಕ್ಷ್ಮಿಯನ್ನು .

ಒಂದೇ ಘಟನೆ , ಸಂಭ್ರಮ ಪಡುವ ವಿಷಯ ನನ್ನ ಬಾಳಿನಲ್ಲಿ ....ಬಿರುಗಾಳಿ ಎಬ್ಬಿಸಿ ಹೋಗಿತ್ತು.

       

ಬೆಳೆಸಿದೆ ನನ್ನ ಪುಟ್ಟ ಲಕ್ಷ್ಮಿಯನ್ನು , ಸ್ವಾತಿ ಎಂದು ನಾಮಕರಣ ಮಾಡಿ.    ಓತ್ತಿದ್ದ ನನಗೆ "ಎದೆಬಡಿತ" ಜಾಸ್ತಿಯಾಗಿತ್ತು.

ನಾನೇ ಆ ಸ್ವಾತಿ. ಯಾಕೋ "ತಲೆ "ತಿರುಗ ತೊಡಗಿತ್ತು .ಅಪ್ಪನ ಅಕ್ಷರಗಳನ್ನು ಓದುತ್ತಾ .   ಮಂಜಾಗಿ ಕಾಣಿಸತೊಡಗಿತು ಅಕ್ಷರಗಳು. ಇನ್ನೊಂದು ಪುಟ ಮಾತ್ರ ಇತ್ತು , ಅಪ್ಪ ಬರೆದಿದ್ದು . ಸಂಕಟದಿಂದ ತೆರೆದೆ ಅದನ್ನು .

ಕೈ ಹಿಡಿದು ಬಂದ ಹೆಂಡತಿ , ಮುದ್ದಿನ ಮಗ ದೂರ ಆಗಿದ್ದರು .  ಕೇವಲ ಅನುಮಾನದಿಂದ . ಆಗ" ಆಸರೆಗೆ "ಬಂದಿದ್ದು ಕುಡಿತ . ಕುಡಿತ ನನ್ನ ದುಃಖವನ್ನು ಮರೆಸಿತ್ತು ಸ್ವಲ್ಪ , ಸ್ವಾತಿ ನನಗೆ ಜೀವದಂತೆ ಬೆಳೆದು ಬರುತ್ತಿದ್ದಳು .ಕುಡಿದು "ಹಾಳು "ಆಗುತ್ತಿದ್ದ ನನ್ನ ದೇಹವನ್ನು ಉಳಿಸಿದ್ದು , ಒಂದೇ ಆಸೆ . ಅದೇ ನನ್ನ ಕಿರು ಬೆರಳು ಹಿಡಿದು ಎದ್ದುಬಂದ ಮಗುವನ್ನು , ದೊಡ್ಡ ಮಾಡಿ ....ಮತ್ತೊಬ್ಬರ ಕೈಯಲ್ಲಿ ಹಾಕಬೇಕು ....ಆಗಲೇ ನನಗೊಂದು ತೃಪ್ತಿ .ನನ್ನ ಬದುಕು ಹಾಳಾಗಿದ್ದು , ಎಲ್ಲವೂ ಕೂಡ ಮರೆಸಬಲ್ಲ ಆನಂದ ಅದು . ಅದಕ್ಕೆ "ಕಡಿಮೆ "ಮಾಡಿದ್ದೆ ಕುಡಿತವನ್ನು . ಸ್ವಾತಿ ಅಮ್ಮನ ಬಗ್ಗೆ ಕೇಳಿದಾಗ , ನನ್ನವಳ ಫೋಟೋ ತೋರಿಸಿದ್ದೆ . "ಅಣ್ಣ ಇವನು "ಎಂದಿದ್ದೆ , ಮಗನ ತೋರಿಸಿ . ಎದೆಗೆ ಅವುಚಿ ಬೆಳೆಸಿದ್ದೆ ಮಗುವನ್ನು. ನನ್ನ ಎಲ್ಲಾ ದುಃಖವ ಮರೆತು . ಆಕೆಯ ಓದು ಮುಗಿದು , ಅವಳಿಗೊಂದು ಒಳ್ಳೆಯ ಗಂಡು ಹುಡುಕಿ ಮದುವೆ ಮಾಡಿದಾಗಲೇ ....ಸಮಾಧಾನವಾಗಿದ್ದು.   ಆಕೆ ಈ ಮನೆ ಬಿಟ್ಟು , ಮತ್ತೊಂದು ಮನೆಯ ದೀಪ ಹಚ್ಚಲು ಸಾಗಿದ್ದಳು. ನನ್ನ ಜೊತೆ ಹೆಜ್ಜೆ ಇಟ್ಟು ಬಂದಿದ್ದ ಹೆಂಡತಿ , ಮಗ ದೂರ ಆಗಿದ್ದು .....ನನ್ನ ಕಿರು ಬೆರಳು ಹಿಡಿದು ಬೆಳೆದು ಬಂದ ಮಗಳು ... ಹೊರಟು ಹೋದಾಗ ಮಾತ್ರ , ಆಸರೆಗೆ ಬಂದಿದ್ದು ಕುಡಿತ. ಅಪ್ಪನ "ಅಕ್ಷರಗಳು "ಪೂರ್ತಿ ಸಾಲಾಗಿ ಅಳಿಸಿ ಹೋಗುತ್ತಿತ್ತು . ನನ್ನ ಕಣ್ಣೀರಿನಿಂದ. ಕಸದತೊಟ್ಟಿಯಲ್ಲಿ ಸಿಕ್ಕಿದ ನನ್ನನ್ನು ಕೈಹಿಡಿದ ತಪ್ಪಿಗೆ , ಆತನ ಕೈಯನ್ನು "ಎಲ್ಲರೂ "ಬಿಟ್ಟು ಹೋಗಿದ್ದರು. ನಾ ಕೂಡ , ಅಪ್ಪನ ದ್ವೇಷಿ ಆಗಿಯೇ ಬೆಳೆದಿದ್ದು. "ಅಮ್ಮನ ಆತ ಹೊರಗೆ ಕಳುಹಿಸಿದ" ಎಂದು .   "ಆತ ಕುಡುಕ" ಎಂದು . ಎಲ್ಲವನ್ನೂ ಕೊಟ್ಟಿದ್ದ ಆತ , ತನ್ನ ಇಡೀ ಸಂಸಾರವನ್ನು ಕಳೆದುಕೊಂಡು .

ಆದರೂ "ಅರ್ಥ "ಆಗಿರಲಿಲ್ಲ ಅಪ್ಪ . ಅಪ್ಪನ ಅಕ್ಷರ ಈಗ ಅರ್ಥ ಮಾಡಿಸಿದ್ದು , ನಾನೆಂತ ಕ್ರೂರಿ ಎಂದು .

ಇಡೀ ಅವನ ಜೀವನ ಅಡವಿಟ್ಟಿದ್ದ , ನನ್ನ ಕರೆದುಕೊಂಡು ಬಂದ ತಪ್ಪಿಗೆ.  


ಮನೆ "ಮಾರುವುದಿಲ್ಲ "ಎಂದು ತೀರ್ಮಾನಿಸಿದ್ದೆ . ಅಪ್ಪನ ಫೋಟೋ ನೆನಪಿಗೆ ಬಂದು , ಒಳಗೆ ಕಾಲಿಟ್ಟಿದ್ದೆ.  ಅಪ್ಪನ" ಡೈರಿ "ಹಿಡಿದುಕೊಂಡು.


Rate this content
Log in

Similar kannada story from Abstract