B S Jagadeesha Chandra

Drama Action Others

4  

B S Jagadeesha Chandra

Drama Action Others

ರೋಷನ್ , ರೇಷ್ಮಾ

ರೋಷನ್ , ರೇಷ್ಮಾ

3 mins
258


ರೋಷನ್ ಮತ್ತು ರೇಷ್ಮಾ ರಫೀಕ್, ಹೊನ್ನಳ್ಳಿ ಯ ಹುಡುಗ. ಮನೆಯಲ್ಲಿ ಅಪ್ಪ, ಅಮ್ಮ, ಮೂವರು ಅಕ್ಕಂದಿರು. ಅಕ್ಕಂದಿರಿಗೆ ಮದುವೆ ಆಗಿ ಬೇರೆ ಬೇರೆ ಊರುಗಳಲ್ಲಿದ್ದರು. ಚೆನ್ನಾಗಿ ಓದಿಕೊಂಡವನು. ಅದೇ ಊರಿನ ರೇಖಾ ಎಂಬ ಹಿಂದೂ ಹುಡುಗಿಯ ಮಿತ್ರ. ರೇಖಾಗೆ ವಯಸ್ಸಾದ ತಂದೆ ತಾಯಿ, ಒಬ್ಬ ಅಕ್ಕ, ಇಬ್ಬರು ಅಣ್ಣಂದಿರು ಇದ್ದರು. ಅಕ್ಕನಿಗೆ ಮದುವೆಯಾಗಿ ಹೊರದೇಶದಲ್ಲಿದ್ದಳು. ಇಬ್ಬರಿಗೂ ಮದುವೆ ಮಾಡಿಕೊಳ್ಳುವ ಆಸೆ, ಆದರೆ, ಮನೆ ಮಂದಿಯಿಂದ ಬಲವಾದ ವಿರೋಧ. ಹೀಗಾಗಿ ಅವರ ಆಸೆ ಒಳಗೇ ಅಡಗಿ ಕುಳಿತಿತ್ತು. ಇದರಿಂದಾಗಿ ಅವರು ಮನೆಯಲ್ಲಿ ಬಂದ ಸಂಬಂಧಗಳನ್ನು ಒಪ್ಪಿಕೊಳ್ಳುತ್ತಲೇ ಇರಲಿಲ್ಲ, ಅದಕ್ಕೆ ನಿಜವಾದ ಕಾರಣವನ್ನು ಹೇಳದೆ ಇನ್ನೇನೋ ಸಬೂಬನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಒಂದು ದಿನ ರಫೀಕ್ ಗೆ ಬೆಂಗಳೂರಿನಲ್ಲಿ ಒಂದು ಒಳ್ಳೆಯ ಕೆಲಸ ಸಿಕ್ಕಿತು. ಮನೆಯಲ್ಲಿ ಹೇಳಿ ಹೊರಟೇ ಬಿಟ್ಟ. ಮನೆಯರಿಗೂ ಖುಷಿ. ರಫೀಕ್ ಹೋದ ಕೆಲವೇ ದಿನಗಳಲ್ಲಿ ರೇಖಾಗೂ ಸಹ ಮೈಸೂರಿನಲ್ಲಿ ಒಂದು ಕೆಲಸ ಸಿಕ್ಕಿತು. ಅವಳೂ ಸಹ ಮನೆಯವರಿಗೆ ಸಮಜಾಯಿಷಿ ನೀಡಿ, ಒಪ್ಪಿಸಿ ಹೊರಟಳು. ರಫೀಕ್ ಮತ್ತು ರೇಖಾ ತಮ್ಮ ತಮ್ಮ ಕೆಲಸದ ಜಾಗದಿಂದ ಒಬ್ಬರನ್ನೊಬ್ಬರು ಭೇಟಿ ಮಾಡುತ್ತಿದ್ದರು, ಮಾತನಾಡಿ ಕೊಳ್ಳುತ್ತಿದ್ದರು. ಮನೆಯವರಿಗೆ ವಿರುದ್ಧವಾಗಿ ಮದುವೆಯಾಗಬೇಕೆಂದು ಅವರಿಗೆ ಹಠ ಇರಲಿಲ್ಲ. ಆದರೆ ಪ್ರೀತಿಸಿದವರನ್ನು ಬೇರ್ಪಡಿಸುತ್ತಾರಲ್ಲಾ ಎಂಬುದಕ್ಕೆ ಅವರಿಗೆ ಬೇಸರ ವಿತ್ತು. ಆದಷ್ಟು ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳಬೇಕು ಎಂಬುದು ಅವರ ಆಸೆಯಾಗಿತ್ತು. ಈ ಲೋವ್ ಜಿಹಾದ್ ಕಾಲದಲ್ಲಿ ಅವರು ನಿಜವಾಗಿ ಪ್ರೀತಿಸುತ್ತಿದ್ದೇವೆ ಎಂದು ಹೇಳಿದರೂ ಯಾರೂ ನಂಬುತ್ತಿರಲಿಲ್ಲ. ಹೀಗಾಗಿ ಮದುವೆ ಎಂಬುದು ಅವರಿಗೆ ಗಗನ ಕುಸುಮವಾಗಿತ್ತು. ಕಡೆಗೆ ಇಬ್ಬರೂ ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು. ಇಬ್ಬರೂ ದೂರದ ವಿಶಾಖಪಟ್ಟಣದಲ್ಲಿ ಕೆಲಸವನ್ನು ಹುಡುಕಿಕೊಂಡರು. ರಫೀಕ್ ಹೊನ್ನಳ್ಳಿ ತನ್ನ ಹೆಸರನ್ನು ರೋಷನ್ ಹೊನ್ನಳ್ಳಿ ಎಂದು ಬದಲಾಯಿಸಿಕೊಂಡ. ರೇಖಾ ಈಗ ರೇಶ್ಮಾ ಹೊನ್ನಳ್ಳಿ ಆದಳು. ವಿಶಾಖಪಟ್ಟಣದಲ್ಲಿಯೇ ಇಬ್ಬರೂ ಮದುವೆಯಾಗಿ ತಾವು ಯಾವ ಜಾತಿಗೂ, ಧರ್ಮಕ್ಕೂ ಸೇರಿದವರಲ್ಲ, ಎಲ್ಲ ಧರ್ಮದಲ್ಲಿ ಏನು ಒಳ್ಳೆಯದಿದೆಯೋ ನಾವು ಅದನ್ನು ನಂಬುತ್ತೇವೆ, ಒಪ್ಪುತ್ತೇವೆ ಎಂದು ನಿರ್ಧರಿಸಿದರು. ಆರ್ಯ ಸಮಾಜ, ಬಹಾಯ್ ಧರ್ಮಗಳ ಬಗ್ಗೆ ಹೆಚ್ಚು ತಿಳಿದುಕೊಂಡರು. ತಾವು ಈಗ ಸೇರಿದ ಹೊಸ ಊರಿನಲ್ಲಿ ಜನಗಳ ನಡುವೆ ಸೇರಿ ಅವರ ಗಡಿಬಿಡಿ ಜೀವನದಲ್ಲಿ ತಾವೂ ಪಾಲುದಾರರಾದರು. ಅಲ್ಲಿನ ಜನಕ್ಕೆ ಇವರ ಹಿನ್ನೆಲೆ, ಧರ್ಮ ಯಾವುದು ಗೊತ್ತಿಲ್ಲದ ಕಾರಣ ಇವರನ್ನು ತಮ್ಮಂತೆಯೇ ಒಬ್ಬರು ಎಂದು ಸ್ವೀಕರಿಸಿದರು. ಇದೇ ಸಮಯದಲ್ಲಿ ರೇಖಾ ತನ್ನ ತಂದೆಯನ್ನು ಕಳೆದುಕೊಂಡಿದ್ದಳು. ಅಣ್ಣಂದಿರಿಗೂ ಮದುವೆ ಆಗಿ ಅತ್ತಿಗೆಯರು ಬಂದಿದ್ದರು. ಅತ್ತಿಗೆಯರೊಂದಿಗೆ ರೇಖಾಳ ಸಂಬಂಧ ಅಷ್ಟಕ್ಕಷ್ಟೇ. ಆ ಮನೆಯಲ್ಲಿ ಅವಳ ಅಮ್ಮ ಕೇವಲ ಮೂಕ ಪ್ರೇಕ್ಷಕಳಾಗಿದ್ದಳು. ಹೀಗಾಗಿ ರೇಖಾ ತನ್ನ ಮನೆಗೆ ಅಷ್ಟೊಂದು ಹೋಗುತ್ತಿರಲಿಲ್ಲ, ಅವಳ ಅಣ್ಣ ಅತ್ತಿಗೆಯರೂ ಇದಕ್ಕೆ ಆಕ್ಷೇಪಣೆ ಮಾಡುತ್ತಿರಲಿಲ್ಲ. ತನ್ನ ಅಮ್ಮನೊಂದಿಗೆ ರೇಖಾ ಆಗಾಗ್ಗೆ ಮಾತನಾಡುತ್ತಿದ್ದಳು. ಇತ್ತ ರಫೀಕ್ ನ ಮನೆಯಲ್ಲಿ ಅವನ ಅಮ್ಮ ತೀರಿಕೊಂಡಿದ್ದಳು. ರಫೀಕ್ ನ ಮದುವೆಗೆ ಹೆಚ್ಚಿನ ಆಕ್ಷೇಪಣೆ ಬರುತ್ತಿದ್ದುದು ಅವನ ಅಮ್ಮನಿಂದ. ಅವಳ ಅಪ್ಪ ಸ್ವಲ್ಪ ನಿರ್ಲಿಪ್ತ ಹಾಗೂ ವಿಶಾಲ ಮನೋಭಾವದವನು. ಈಗ ಒಬ್ಬನೇ ಇರುತ್ತಿದ್ದ. ರಫೀಕ್ ಅವನನ್ನು ಕರೆಸಿಕೊಳ್ಳುವೆ ಎಂದರೆ ಹೊನ್ನಳ್ಳಿ ಬಿಟ್ಟು ಬರಲು ಒಪ್ಪುತ್ತಿರಲಿಲ್ಲ. ಹೀಗಾಗಿ ರಫೀಕ್ ಆಗಾಗ್ಗೆ ಹೊನ್ನಳ್ಳಿಗೆ ಹೋಗಿ ಅಪ್ಪನ ಆರೋಗ್ಯವನ್ನು ವಿಚಾರಿಸಿಕೊಂಡು ಬರುತಿದ್ದ. ರೋಷನ್, ರೇಷ್ಮಾ ಮದುವೆಯಾಗಿ ಎರಡು ತಿಂಗಳು ಕಳೆದಿದ್ದವು. ಇನ್ನು ಸುಮ್ಮನಿರಲು ಆಗುವುದಿಲ್ಲ, ಮನೆಯಲ್ಲಿ ತಿಳಿಸಿಬಿಡುವುದು ಒಳ್ಳೆಯದು ಎಂದು ನಿರ್ಧರಿಸಿದರು. ರಫೀಕ್ ತನ್ನ ಅಪ್ಪನನ್ನು ತನ್ನ ಮನೆಗೆ ಕರೆದುಕೊಂಡು ಬಂದು ನಂತರ ವಿಷಯ ತಿಳಿಸುತ್ತೇನೆ ಎಂದು ನಿರ್ಧರಿಸಿದ. ರೇಷ್ಮಾ, ತಾನು ರೋಷನ್ ಎಂಬುವನನ್ನು ಮದುವೆಯಾಗಿದ್ದೇನೆ, ಒಮ್ಮೆ ಇತ್ತ ಬಂದು ತಮ್ಮನ್ನು ಆಶೀವರ್ದಿಸಿ ಎಂದಷ್ಟೇ ತಿಳಿಸಿದ್ದಳು. ಹೆಚ್ಚಿನ ವಿವರವನ್ನು ಕೊಟ್ಟಿರಲಿಲ್ಲ. ಮನೆಯಲ್ಲಿ ಅವಳ ಅಣ್ಣ ಅತ್ತಿಗೆಯರಿಗೆ ಇದರಿಂದ ಯಾವ ಪರಿಣಾಮವೂ ಆಗಲಿಲ್ಲ, ಮದುವೆಯ ಖರ್ಚು ಉಳಿಯಿತಲ್ಲ, ವರನ ಹುಡುಕಾಟ ದ ಕಾಟ ತಪ್ಪಿತಲ್ಲ ಎಂದು ಒಳಗೊಳಗೇ ಖುಷಿಯಾಯಿತು. ಹೀಗಾಗಿ ರೇಶ್ಮಾಗೂ ಸಂತೋಷವೇ ಆಯಿತು. ತನ್ನ ಅಮ್ಮನನ್ನು ಒಂದು ದಿನ ಇಲ್ಲಿಗೆ ಕರೆಸಿಕೊಂಡು ಎಲ್ಲಾ ವಿಷಯಗಳನ್ನು ತಿಳಿಸುವೆ ಎಂದು ನಿರ್ಧರಿಸಿದಳು. ಅಂತೂ ದೂರದ ಊರಿನಲ್ಲಿ ಯಾವ ತಂಟೆ ತಕರಾರಿಲ್ಲದೆ ರೇಷ್ಮಾ, ರೋಷನ್ ಮದುವೆಯಾಗಿ ಸಂತೋಷದಿಂದಿದ್ದರು. ರೋಷನ್ ನ ಅಪ್ಪ ಇವರ ಮನೆಗೆ ಬಂದಿದ್ದ. ಅಲ್ಲಿ ಬಂದಾಗ ರೇಷ್ಮಾ ತನ್ನ ಊರಿನ ರೇಖಾ ಎಂದು ಗೊತ್ತಾದಾಗ ಸ್ವಲ್ಪ ಗೊಂದಲ ವಾದರೂ ಅವರಿಬ್ಬರೂ ಸಂತೋಷವಾಗಿರುವುದನ್ನು ಕಂಡು ಜಾತಿ, ಧರ್ಮ ಬೇಧ ಮಾಡುವ ತಮ್ಮಂತಹ ಜನರನ್ನು ಕಂಡು ಅವನಿಗೆ ಜಿಗುಪ್ಸೆ ಬಂದಿತ್ತು. ಅವನು ತುಂಬು ಹೃದಯದಿಂದ ಇಬ್ಬರಿಗೂ ಆಶೀರ್ವಾದ ಮಾಡಿದ್ದ. ಅವರಿಬ್ಬರೂ ಧರ್ಮಾತೀತ ರಾಗಿದ್ದುದು ಅವನಿಗೆ ಖುಷಿಯನ್ನು ಕೊಟ್ಟಿತ್ತು. ಅವನು ಆಗಾಗ್ಗೆ ಅವರ ಬಳಿ ಬಂದು ಹೋಗುತ್ತಿದ್ದ. ಅಲ್ಲಿದ್ದಾಗ ಅವನೂ ಸಹ, ನಾವೇಕೆ ಹೀಗೆ ಆ ಧರ್ಮ, ಈ ಧರ್ಮ ಎಂದು ಕಚ್ಚಾಡಿ, ಬಡಿದಾಡಿಕೊಳ್ಳುತ್ತೇವೆ ಎಂದು ಯೋಚಿಸುತ್ತಿದ್ದ. ರೇಷ್ಮಾಳ ಅಮ್ಮ ಸಹ ಇವರ ಊರಿಗೆ ಬಂದಾಗ, ರೋಷನ್ ಬೇರಾರು ಅಲ್ಲ, ರಫೀಕ್ ಎಂದು ಗೊತ್ತಾದಾಗ ಬಹಳ ದುಃಖವಾಗಿತ್ತು. ಆದರೆ ಅವರ ಸಂತೋಷಮಯ ಜೀವನ, ಎಲ್ಲ ಧರ್ಮಕ್ಕೂ ಕೊಡುವ ಗೌರವ ಇವುಗಳನ್ನು ನೋಡಿದಾಗ ಸಂತೋಷವಾಗಿತ್ತು. ಮಗ ಸೊಸೆಯರಿಗಿಂತ ಇವರೇ ಹೆಚ್ಚು ಸುಖವಾಗಿದ್ದಾರೆ ಎನಿಸಿತ್ತು. ಅವಳೂ ಆಗಾಗ್ಗೆ ಬಂದು ಇದ್ದು ಹೋಗುತ್ತಿದ್ದಳು. ಮಗಳು ಮದುವೆಯಾದ ಮೇಲೆ ತಮ್ಮ ಧರ್ಮದಿಂದ ಹೊರ ಹೋಗಿದ್ದಾಳೆ ಎಂದು ಆಕೆಗೆ ಒಮ್ಮೆಯೂ ಅನ್ನಿಸಲಿಲ್ಲ. ಅವರಿಗೆ ಈಗ ಯಾವ ಧರ್ಮದ, ಜಾತಿಯ ಹಂಗೂ ಇರಲಿಲ್ಲ. ಇವರ ಮದುವೆಯ ವಿಷಯ ಹಳೆಯದಾದಂತೆ ಅವರ ಬಂಧುಗಳಿಗೂ ಇದರಲ್ಲಿ ಅಂತಹ ಅಂಕುಡೊಂಕುಗಳು ಕಾಣಲಿಲ್ಲ. ಅದಕ್ಕೆ ತಕ್ಕಂತೆ ಅವರಿಬ್ಬರೂ ಸಂತೋಷದಿಂದಿದ್ದುದು ಮುಖ್ಯ ಕಾರಣವಾಗಿತ್ತು. -


Rate this content
Log in

Similar kannada story from Drama