Kalpana Nath

Abstract Tragedy Others

4  

Kalpana Nath

Abstract Tragedy Others

ಪರಿವರ್ತನೆ

ಪರಿವರ್ತನೆ

4 mins
52


 


ಬೆಂಗಳೂರು ದಂಡು ಪ್ರದೇಶದಲ್ಲಿ ಹಿಂದೆ ಬಹಳ ಬ್ರಿಟಿಷರ ಬಂಗಲೆಗಳಿದ್ದವು ಆ ಮನೆಗಳಲ್ಲಿ ಕೆಲಸಕ್ಕೆ ಇದ್ದ ಬಟ್ಟೆ ಒಗೆದು ಇಸ್ತ್ರಿ ಮಾಡುವವರು, ವಾಹನ ಚಾಲಕರು, ಮನೆ ಕೆಲಸದವರು, ಅಡುಗೆಯವರು ಹೀಗೆ ಅನೇಕರು ತಮ್ಮ ಒಡೆಯರು ದೇಶಬಿಟ್ಟು ಬಿಟ್ಟು ಹೋಗುವಾಗ ಕೊಡುಗೆಯಾಗಿ ಅಪಾರ ಆಸ್ತಿಯನ್ನೇ ಇವರುಗಳಿಗೆ ಹಂಚಿ ಹೋದರಂತೆ. ಹಾಗಾಗಿ ಬಹಳ ಜನ ಹಣವಂತರಾದರೆಂದು ಹೇಳುತ್ತಾರೆ. ಅವರಲ್ಲಿ ಅಪಾರ ಸಂಪತ್ತುಗಳಿಸಿದ ಒಬ್ಬ ಬ್ರಿಟಿಷರ ಮನೆಯಲ್ಲಿ ಅಡುಗೆ ಮಾಡಿಕೊಂಡಿದ್ದ ಗಂಗಾಧರ ಪಿಳ್ಳೈ ನ ರೋಚಕ ಕಥೆ ಇದು. 


1948 ಜನವರಿ ತಿಂಗಳು. ಜಾನ್ ಎಡ್ವಿನ್ ಮತ್ತು ಎಲಿಜಿಬೆತ್ ಭಾರತಬಿಟ್ಟು ಹೊರಡಲು ಸಿದ್ದವಾದ ನೂರಾರು ಜನರಲ್ಲಿ ಇವರೂ ಒಬ್ಬರು. ಬೆಂಗಳೂರಿನಲ್ಲಿ ದೊಡ್ಡ ಬಂಗಲೆ, ಕೊಡಗಿನಲ್ಲಿ ಹತ್ತು ಎಕರೆ coffee ಮತ್ತು ಏಲಕ್ಕಿ ತೋಟ. ಊಟಿಯಲ್ಲಿ ರೆಸಾರ್ಟ್ ಹೀಗೇ ಹಲವು, ಆ ಕಾಲಕ್ಕೇ ಲಕ್ಷಗಟ್ಟಲೆ ಬೆಲೆಬಾಳುವ ಆಸ್ತಿಯನ್ನ ಮನೆ ಕೆಲಸದವರಿಗೆ ಹಂಚಿ ಹೋದರು. ಈ  ಗಂಗಾಧರ ಪಿಳ್ಳೈ ಅಡುಗೆ ಭಟ್ಟನಷ್ಟೇ ಅಲ್ಲದೆ ಮಕ್ಕಳಿಲ್ಲದ ಎಡ್ವಿನ್ ಕುಟುಂಬಕ್ಕೆ ಅವರ ಸ್ವಂತ ಮಗನಂತೆಯೇ ಇದ್ದುದರಿಂದ ಮತ್ತು ಅವರಂತೆ ಆಂಗ್ಲಭಾಷೆಯಲ್ಲಿ ಚೆನ್ನಾಗಿ ಮಾತನಾಡುತ್ತಿದ್ದ ಕಾರಣ ಎರಡು ಸಲ ಇಂಗ್ಲೆಂಡ್ ಗೂ ಇವರೊಂದಿಗೆ ಹೋಗಿಬಂದಿದ್ದ . ಹಾಗಾಗಿ ಬಂಗಲೆ, ಊಟಿಯ ರೆಸಾರ್ಟ್ ಮತ್ತು ಅವರ ಪ್ರೀತಿಯ ಬೆಲೆ ಬಾಳುವ ಕಾರನ್ನೂ ಪಿಳ್ಳೈಗೆ ಕೊಟ್ಟು ಬಿಟ್ಟರು. ಈ ವಿಷಯ ರಹಸ್ಯವಾಗಿ ಇಟ್ಟಿದ್ದು ಬಹಳ ದಿನಗಳ ನಂತರವೇ ಉಳಿದ ಕೆಲಸಗಾರರಿಗೆ ತಿಳಿದದ್ದು. ಒಂದು ವರ್ಷದ ನಂತರ ಪಿಳ್ಳೈ ಜೀವನದಲ್ಲಿ ದೊಡ್ಡ ಬದಲಾವಣೆ ಆಯ್ತು . ಅಲ್ಲಿಯವರೆಗೂ ಮದುವೆ ಆಗದಿದ್ದ ಪಿಳ್ಳೈ ನಲವತ್ತನೇ ವಯಸ್ಸಿನಲ್ಲಿ ಇಪ್ಪತ್ತು ವರ್ಷ ವಯಸ್ಸಿನ ಒಬ್ಬ ಆಂಗ್ಲೋ ಇಂಡಿಯನ್ ಹುಡುಗಿಯನ್ನು ಮದುವೆ ಆದ . ಅವಳ ಹೆಸರು ಏನಿತ್ತೋ ಆದರೆ ಬೇಬಿ ಅಂತಾನೆ ಕರೀತಿದ್ದ. ಬೇಬಿ ಒಂದು ಪ್ರೈವೇಟ್ ಕಾನ್ವೆಂಟ್ನಲ್ಲಿ ಇಂಗ್ಲಿಷ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು. ಈಗ ಬೇಡವೆಂದು ರಿಸೈನ್ ಮಾಡಿ, ಗಂಡನ ಜೊತೆ ಎಲ್ಲಾ ವ್ಯವಹಾರಗಳನ್ನ ನೋಡಿ ಕೊಳ್ಳುತ್ತಿದ್ದಳು. ಇವರಿಗೆ ಒಬ್ಬ ಮಗ ಹುಟ್ಟಿದ. ಅವನ ಹೆಸರು ಬೆಂಜಮಿನ್. ಗಂಗಾಧರ ಪಿಳ್ಳೈ ನೋಡಲು ಬೆಳ್ಳಗೆ ಇದ್ದು ವಿದೇಶಿಯರ ಮನೆಯಲ್ಲೇ ಅಷ್ಟು ವರ್ಷ ಇದ್ದ ಕಾರಣ, ವೇಷ ಭೂಷಣ ನಡವಳಿಕೆ ಎಲ್ಲಾ ಒಬ್ಬ ವಿದೇಶಿ ಯಂತೆಯೇ ಪೂರ್ತಿ ಬದಲಾಯ್ತು . ಎರಡು ಸಲ ಬೇಬಿ ಜೊತೆ ಇಂಗ್ಲೆಂಡ್ ಗೂ ಹೋಗಿ ಎಡ್ವಿನ್ ದಂಪತಿಗೆ ಕೃತಜ್ಞತೆ ಸಲ್ಲಿಸಿ ಬಂದಿದ್ದ . ಮಗ ಬೆಂಜಮಿನ್ ಊಟಿಯಲ್ಲಿದ್ದ ಬೋರ್ಡಿಂಗ್ ಶಾಲೆಗೆ ಸೇರಿಕೊಂಡ. ಹೀಗೇ ದಿನಗಳು ಉರುಳಿತು. ಬೇಬಿ ಮನೆಯವರು ಬಹಳ ಬಡವರು. ಇವರ ಮನೆಗೆ ಭಾನುವಾರ ಜನ ಬರುತ್ತಾರೆಂದರೆ ಅದು ಬೇಬಿ ಮನೆಯ ಕಡೆಯವರು ಮಾತ್ರ. ಬೆಳಗ್ಗೆ ಚರ್ಚ್ ಗೆ ಹೋಗಿ ಇವರ ಬಂಗಲೆಗೆ ಬಂದರೆ , ಸಂಜೆವರೆಗೂ ಪಾರ್ಟಿ ಕುಡಿತ ಕುಣಿತ ಯಾವ ದೊಡ್ಡ ಸ್ಟಾರ್ ಹೋಟೆಲ್ ಗೂ ಕಡಿಮೆ ಇರಲಿಲ್ಲ. ಪಿಳ್ಳೈ ಗೆ ಮೊದ ಮೊದಲು ಸಂತೋಷ ವಾಗಿತ್ತು. ಅದು ನಂತರದ ದಿನಗಳಲ್ಲಿ ಹೇಸಿಗೆ ಅನಿಸಿತು. ಕಾರಣ ಇವನ ವಯಸ್ಸು ಮತ್ತು ಕುಡಿದ ನಂತರದ ಮುಚ್ಚುಮರೆಯಿಲ್ಲದ ಹೆಣ್ಣು ಗಂಡು ಭೇದವಿಲ್ಲದ ಕುಣಿತ. ಒಂದು ದಿನ ಬೇಬಿಗೆ ಇದರ ಬಗ್ಗೆ ಬೇಸರವ್ಯಕ್ತ ಪಡಿಸಿ ಹೇಳಿದಾಗ. ಇದು ನಮ್ಮ culture ಇಷ್ಟವಿಲ್ಲದಿದ್ದರೆ ನೀವು ಹೊರಗಡೆ ಇರುವ out house ನಲ್ಲಿ ಇರಿ ಅಂದಾಗ ಅಲ್ಲಿಯವರೆಗೂ ಎಂದೂ ಬೇಬಿಯ ಬಗ್ಗೆ ಕೆಟ್ಟದಾಗಿ ಯೋಚಿಸದ ಪಿಳ್ಳೈಗೆ ಹಿಂದಿನ ದಿನಗಳೆಲ್ಲಾ ನೆನೆಪಾಗಿ ತಾನು ಒಬ್ಬ ಆಂಗ್ಲೋ ಇಂಡಿಯನ್ ನ ಮದುವೆ ಮಾಡಿಕೊಂಡು ತಪ್ಪು ಎಸಗಿದ್ದೇನೆ ಎನ್ನುವ ಅರಿವಾಯ್ತು. ಅಂದಿನಿಂದ ಇವನ ಯೋಚಿಸುವ ರೀತಿ ಬೇರೆಯಾಗಿ, ಒಂದು ದಿನ ಬೇಬಿಗೆ ತಮಿಳುನಾಡಿನಲ್ಲಿ ನನ್ನ ಅಣ್ಣನ ಮಕ್ಕಳಿದ್ದಾರೆ. ಅವರನ್ನ ನೋಡಿ ಬಹಳ ವರ್ಷಗಳೇ ಆಗಿದೆ. ಹೋಗಿ ಬರ್ತೀನಿ ಅಂತ ಹೇಳಿ ಹೊರಟ. ಎಷ್ಟೋ ವರ್ಷಗಳ ನಂತರ ಇಲ್ಲಿಗೆ ಬಂದಾಗ ಬಹಳ ಪರಿವರ್ತನೆ ಆಗಿದೆ. ಆಗ ರಸ್ತೆ ದೀಪ, ತಾರಸಿ ಮನೆ ಒಂದೂ ಇರಲಿಲ..ಆದರೆ ವೇಲಾಪುರಂ ಊರಿನ ಬಣ್ಣ ಕಾಣದ ಹಳೆಯ ಬೋರ್ಡ್ ಮಾತ್ರ ಇವನನ್ನ ಸ್ವಾಗತಿಸಿತು. ಯಾರಾದರೂ ಹಳಬರ ಬಳಿ ವಿಚಾರಿದರೆ ಒಳ್ಳೆಯದೆಂದು. ಉರೆಲ್ಲಾ ಸುತ್ತಿ ಬಂದ. ಅಂತಹವರು ಯಾರೂ ಕಾಣಲಿಲ್ಲ. ಕಾರು ನಿಲ್ಲಿಸಿದ್ದ ಕಡೆ ವಾಪಸ್ ಬರುವಾಗ ಇವನ ಡ್ರೈವರ್ ಒಬ್ಬರ ಹತ್ತಿರ ಮಾತ ನಾಡುತ್ತಿದ್ದ. ಹತ್ತಿರ ಬಂದಾಗ ಇವನೇ ಗುರುತು ಹಿಡಿದ. ನೀನು ರಾಮನ್ ಪಿಳ್ಳೈ ಅಲ್ಲವೇ ಅವನಿಗೂ ಆಶ್ಚರ್ಯ. ನಿನ್ನ ಪರಿಚಯ ಇಲ್ಲ ಅಂದಾಗ ನಾನು ಗಂಗಾಧರ ಪಿಳ್ಳೈ. ದಾಮೋದರ್ ಪಿಳ್ಳೈ ಮಗ. ಓಹ್ ಎಷ್ಟು ವರ್ಷಗಳ ನಂತರ ನಮ್ಮ ಭೇಟಿ. ಒಬ್ಬರನ್ನ ಒಬ್ಬರು ಅಪ್ಪಿಕೊಂಡು ಕಣ್ಣೀರು ಸುರಿಸಿದರು. ಡ್ರೈವರ್ ಗೆ ಆಶ್ಚರ್ಯ. ಡ್ರೈವರ್ ಕಡೆ ತಿರುಗಿ ಹೇಳಿದ ನೋಡು ಇದು ನನ್ನ ಅಣ್ಣನ ಮಗ. ಯಾರಾದರೂ ಇದ್ದೇ ಇರ್ತಾರೆ ಅಂತ ನನಗೆ ಗೊತ್ತು ಅಂದ. ಮನೆಗೇ ಹೋಗೋಣ ಬಾ ಅಂದ. ಮನೆಗೇ ಹೋದರು. ಡ್ರೈವರ್ ನ ಆಚೆ ಕಳಿಸಿ ಇವನ ಪೂರ್ತಿ ಜೀವನ ಚರಿತ್ರೆ ಹೇಳಿಕೊಂಡ. ಅಣ್ಣನ ಮಗ ಬಹಳ ಬಡತನದಲ್ಲಿದ್ದಾನೆಂದು ಮನೆ ನೋಡಿತಿಳಿಯಿತು. ಆಗಲೇ ಇವರಿಗೆ ಏನಾದರೂ ಸಹಾಯ ಮಾಡಲೇ ಬೇಕುಅಂತ ಮನಸಾಯ್ತು. ಹೊರಡುವಾಗ ಉಳಿದ ಮತ್ತೊಬ್ಬ ತಮ್ಮನ ಮತ್ತು ತಂಗಿಯ ಬಗ್ಗೆ ಎಲ್ಲಾ ತಿಳಿದುಕೊಂಡು ತನ್ನ ಮನೆ ಟೆಲಿಫೋನ್ ನಂಬರ್ ಕೊಟ್ಟು , ಒಂದು ತಿಂಗಳ ಒಳಗೆ ಮತ್ತೆ ಬರುತ್ತೇನೆ ಎಂದು ಹೇಳಿ ಹೊರಟ. ಮನೆಗೆ ಬಂದ ನಂತರ ಊರಿಗೆ ಹೋಗಿ ತನ್ನವರ ಬಗ್ಗೆ ವಿಷಯ ಕಲೆ ಹಾಕಿದ್ದು ಸಮಾಧಾನವಾಗಿತ್ತು. ಊರಿಗೆ ಹೋಗಿ ಬಂದ ಮೇಲೆ ಬಹಳ ಸಂತೋಷ ವಾಗಿರುವುದನ್ನ ಗಮನಿಸಿದ ಬೇಬಿ ಗಂಡನನ್ನ ಕೇಳುವ ಬದಲು ಡ್ರೈವರ್ ಹತ್ತಿರ ವಿಚಾರಿಸಿದಳು. ಅವನು ಊರಿಗೆ ಹೋಗಿದ್ದು ನಿಜ ಆದ್ರೆ ಅಲ್ಲಿ ಯಾರೂ ಇವರ ಕಡೆಯವರು ಯಾರೂ ಇಲ್ಲ. ಬಾಸ್ ಗೆ ತಮ್ಮ ಊರನ್ನು ನೋಡಿದ ಸಂತೋಷ ಮಾತ್ರ ಅಂತ ಹೇಳಿಬಿಟ್ಟ. ಇವನಿಗೂ ಮನೆಯಲ್ಲಿ ಬೇಬಿ ಅವಳ ಕಡೆಯವರು ಭಾನುವಾರಗಳಂದು ಬಂದು ಕುಡಿದು ಗಲಾಟೆ ಮಾಡುವುದು ಇಷ್ಟವಿರಲಿಲ್ಲ. ಕಾರಣ ಇವನಿಗೆ ಯಾವ ಕೆಟ್ಟ ಅಭ್ಯಾಸವೂ ಹತ್ತಿರ ಸುಳಿದಿರಲಿಲ್ಲ. ಧೈವ ಭಕ್ತ. ಬೇಬಿ ಗೆ ಡ್ರೈವರ್ ಮಾತಲ್ಲಿ ನಂಬಿಕೆ ಬರಲಿಲ್ಲ. 


ಈಗ ಪಿಳ್ಳೈಗೆ ಎಪ್ಪತ್ತು ವರ್ಷ . ಬೇಬಿಗೆ ತಿಳಿಯದೆ ದೇವಸ್ಥಾನಕ್ಕೆ ಹೋಗೋದು, ಬಡವರಿಗೆ ಸಹಾಯ ಮಾಡೋದು ಆಗಾಗ ಮಾಡ್ತಿದ್ದ. ಒಂದು ದಿನ ಇವನ ಹಣೆಯಲ್ಲಿ ವಿಭೂತಿ ಕಂಡು ಬಟ್ಟೆ ತಂದು ಅಳಿಸಿ ದಾಗ ಪಕ್ಕದಲ್ಲೇ ಇದ್ದ ಕಾರ್ ಡ್ರೈವರ್ ಅವಳ ಕೈ ಹಿಡಿದ. ಅವಳಿಗೆ ಕೋಪ ನೆತ್ತಿಗೇರಿ ಡ್ರೈವರ್ ಗೆ ಕೆಟ್ಟ ಭಾಷೆ ಯಲ್ಲಿ ಬೈದು ಕಪಾಳಕ್ಕೆ ಹೊಡೆದಾಗ, ಪಿಳ್ಳೈಗೆ ಕೋಪ ತಡೆಯಲಾಗದೆ ಎಂದೂ ಕೈ ಮಾಡದವನು ಬೇಬಿಯ ಕೆನ್ನೆಗೆ ಹೊಡೆದ. ಬೇಬಿ ಸೀದ ವರಾಂಡಕ್ಕೆ ಬಂದು ಫೋನ್ ಮಾಡಿದಳು. ಮೊದಲು ಯಾರಿಗೆ ಮಾಡು ತ್ತಿದ್ದಾಳೆಂದು ತಿಳಿಯಲಿಲ್ಲ. ಅರ್ಧ ಘಂಟೆಯಲ್ಲಿ ಹತ್ತುಜನ ಅವಳ ಕಡೆಯವರು ರೌಡಿಗಳಂತೆ ನುಗ್ಗಿ ಪಿಳ್ಳೈಗೆ ಥಳಿಸಿದಾಗ ಕೆಳಗೆ ಬಿದ್ದು ಬಿಟ್ಟ. ಬೇಬಿ kick kick ಅಂತಿದ್ದಳೇ ಹೊರತು ಹೊಡಿ ಬೇಡಿ ಸಾಕು ಅಂತ ಹೇಳಲಿಲ್ಲ. ಡ್ರೈವರ್ ತನ್ನಿಂದಲೇ ಇಷ್ಟೆಲ್ಲಾ ರಾದ್ಧಾಂತ ವಾಯ್ತಲ್ಲಾ ಅಂತ ನೊಂದು ಯಜಮಾನನ್ನ out house ಗೆ ಕರೆದುಕೊಂಡು ಹೋಗ್ತಿದ್ದಾಗ, ಹೊರಗೇ ಇದ್ದ ಒಬ್ಬ ಬಂದು ಡ್ರೈವರ್ ತಲೆಗೆ ಜೋರಾಗಿ ಹೊಡೆದ. ಅವನೂ ಜ್ಞಾನ ತಪ್ಪಿ ಕೆಳಗೆ ಬಿದ್ದ. ಸ್ವಲ್ಪ ಸುಧಾರಿಸಿಕೊಂಡ ಪಿಳ್ಳೈ out house ವರೆಗೂ ಹೇಗೋ ಹೋಗಿ ಪೊಲೀಸ್ ಗೆ ಫೋನ್ ಮಾಡಿದ. ಹತ್ತು ನಿಮಿಷದಲ್ಲಿ ಬಂದು ಮಾಹಿತಿ ಪಡೆದು ಬೇಬಿಯನ್ನ ಎಳೆದುಕೊಂಡು ಹೋದರು. ಈ ವಿಷಯ ಊಟಿ ಯಲ್ಲಿದ್ದ ಮಗನಿಗೆ ಬೇಬಿ ತಿಳಿಸಿ ಕರೆಸಿ ಕೊಂಡಳು. 

ಬೆಂಜಮಿನ್ ಬೆಂಗಳೂರಿಗೆ ಬಂದವನೇ ಪೊಲೀಸ್ ಸ್ಟೇಶನ್ ಗೆ ಹೋಗುವ ಬದಲು ಮನೆಗೆ ಬಂದ. ಅಲ್ಲಿ ಮನೆಯ ಮುಂದೆ ಕಾವಲು ಇದ್ದ ಪೋಲೀಸಿನವನನ್ನ ಕೇಳಿದ. ಅವನಿಗೆ ಇವನ ಭಾಷೆತಿಳಿಯಲಿಲ್ಲ. ಸೆಕ್ಯೂರಿಟಿ ಗಾರ್ಡ್ ಬಂದುನಡೆದ ವಿಷಯ ತಿಳಿಸಿದ. ಒಳಗೆ ಹೋಗಲು ನೋಡಿದಾಗ. ಇಲ್ಲ ಪಿಳ್ಳೈ ಸಾಹೇಬರು ಬೌರಿಂಗ್ ಆಸ್ಪತ್ರೆ ಯಲ್ಲಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಪೊಲೀಸ್ ಕಾವಲು ಎಂದೂ ತಿಳಿಸಿದ. ಅಲ್ಲಿಂದ ಆಸ್ಪತ್ರೆ ಗೆ ಹೊರಟ ಅಲ್ಲಿ ತಂದೆಯ ಸ್ಥಿತಿ ಬಹಳ ಕೆಟ್ಟದಾಗಿತ್ತು. ನೋಡಿ ಬೆಂಜಮಿನ್ ಅಳುತ್ತಾ ನಿಂತ. ಹತ್ತಿರ ಕರೆದು ನನಗೆ ಹೆಚ್ಚಾಗಿ ಮಾತನಾಡಲು ಆಗಲ್ಲ. ನಿನ್ನ ತಾಯಿ ಒಳ್ಳೆಯವಳಲ್ಲ. ಅಂತ ಹೇಳಿದ.ಅದೇ ಕೊನೆಯ ಮಾತಾಯ್ತು . ಅಮ್ಮನಿಗೆ ವಿಷಯ ತಿಳಿಯಿತು. ಓಡಿ ಬಂದು ಎಲ್ಲರ ಮುಂದೆ ನಾಟಕ ಮಾಡಿ ತನ್ನ ಧರ್ಮದಂತೆ ಅಂತ್ಯ ಸಂಸ್ಕಾರ ಮಾಡ ಬೇಕೆಂದಾಗ ಅಲ್ಲೇ ನಿಂತಿದ್ದ ಬೆಂಜಮಿನ್, No ಮಮ್ಮಿ dad is ಹಿಂದು. ಅವರ ಇಚ್ಛೆಯಂತೆ ಹಿಂದು ಸಂಸ್ಕಾರ ಮಾಡೋಣ ಎಂದಾಗ ಅವಳು ಒಪ್ಪಲಿಲ್ಲ. ಅವಳ ಕಡೆಯವರು ಕಂಠ ಪೂರ್ತಿ ಕುಡಿದು ಬಂದಿದ್ದರು. ಗಲಾಟೆಗೆ ಪೊಲೀಸರು ಅವಕಾಶ ಕೊಡಲಿಲ್ಲ. ಮಗನ ಇಷ್ಟದಂತೆ ಪೊಲೀಸರು ಅಂತ್ಯ ಸಂಸ್ಕಾರಕ್ಕೆ ಒಬ್ಬ ಹಿಂದು ಪೂಜಾರಿಯನ್ನ ಕರೆದುತಂದಾಗ ಬೆಂಜಮಿನ್ ಒಬ್ಬ ಹಿಂದುವಿನಂತೆ ತಂದೆಯ ಸಂಸ್ಕಾರ ಮಾಡಿದ. Shit ಅಂತ ಹೊರಗೆ ಹೋದಳು ಬೇಬಿ. ಹೋಗುವಹಾಗಿಲ್ಲವೆಂದು ಹೇಳಿ ಪೊಲೀಸರು ಬೇಬಿಯನ್ನ ಮತ್ತೆ ಪೊಲೀಸ್ ಸ್ಟೇಶನ್ ಗೆ ಕರೆದುಕೊಂಡು ಹೋಗುವಾಗ ಅವಳ ಕಡೆಯವರುಬಹಳ ಗಲಾಟೆ ಮಾಡಿ ಎಲ್ಲರೂ ಜೈಲು ಸೇರಬೇಕಾಯ್ತು. ನಾಲ್ಕೈದು ದಿನಗಳ ನಂತರ ಪಿಳ್ಳೈ ಸಾವಿನ ಸುದ್ದಿ ಪೇಪರ್ ನಲ್ಲಿ ಓದಿದ ಲಾಯರ್ ಒಬ್ಬರು ಮನೆಗೆ ಬಂದು ಬೆಂಜಮಿನ್ ಗೆ ಹೇಳಿದರು. ಗಂಗಾಧರ್ ಪಿಳ್ಳೈ ತಮ್ಮಆಸ್ತಿಯ ಉಯಿಲು ಬ್ಯಾಂಕ್ ಲಾಕರ್ ನಲ್ಲಿ ಇರಿಸಿದ್ದಾರೆ. ನಿನ್ನ ಅಥವ ನಿಮ್ಮತಾಯಿಯ ಮುಂದೆ open ಮಾಡ ಬಹುದೆಂದಾಗ ತಾನೇ ಅವರ ಜೊತೆ ಹೋಗಿ ನೋಡಿದ. ಕಾರು ಬಂಗಲೆ ಹಣ ಒಡವೆ ಎಲ್ಲಾ ಬೆಂಜಮಿನ್ ಹೆಸರಿಗೂ, ಉಳಿದ ಆಸ್ತಿಯೆಲ್ಲ ತನ್ನ ತಮ್ಮಂದಿರ ಮಕ್ಕಳ ಹೆಸರಿಗೂ ಮಾಡಿದ್ದ. ಬೆಂಜಮಿನ್ ಗೆ ಸಂತೋಷವೇ ಆಯ್ತು. ಡ್ರೈವರ್ ಗೆ ಕೈ ತುಂಬಾ ಹಣ ಕೊಟ್ಟು. ನನಗೆ ಒಂದು ವಾರದಲ್ಲಿ ಪರೀಕ್ಷೆ ಇದೆ ಮುಗಿದ ಮೇಲೆ ಬರ್ತೀನಿ ಅಂತಹೇಳಿ ಊಟಿಗೆ ಹೊರಟ. ತಾಯಿಯನ್ನ ನೋಡಲು ಏಕೋ ಮನಸ್ಸಾಗಲೇ ಇಲ್ಲ. ತಾಯಿಗೂ ಮಗನನ್ನ ನೋಡುವ ಮನಸಿರಲಿಲ್ಲ.


Rate this content
Log in

Similar kannada story from Abstract