kaveri p u

Crime Others Children

4  

kaveri p u

Crime Others Children

ಅಪರಾಧ

ಅಪರಾಧ

1 min
434


ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಅವಳು ಅಜ್ಜಿಯ ಜೊತೆ ಚಿಕ್ಕವಳಿದ್ದಾಗಿನಿಂದ ಬೆಳೆದವಳು. ಆ ಬೀದಿಯ ಆಸು ಪಾಸು ಎಲ್ಲಕಡೆ ಇವಳೆದೆ ಆಟ. ಚಿನ್ನು ಅಂದ್ರೆ ಎಲ್ಲರಿಗೂ ಬಹಳ ಆತ್ಮೀಯ ಮುದ್ದಮ್ಮಾ ಆಗಿದ್ದಳು. ಒಂದನೇ ತರಗತಿಯಿಂದ 5ನೆ ತರಗತಿಯ ವರೆಗೂ ಅವಳು ಅಜ್ಜಿಯ ಊರಲ್ಲಿ ಬೆಳೆದು ದೊಡ್ಡವಳಾಗಿದ್ದಳು. ಐದನೇ ತರಗತಿ ಇರುವಾಗ ಅವರಿಗೆಲ್ಲಾ ಸಣ್ಣ ಪಿಕ್ನಿಕ್ ಕರೆದುಕೊಂಡು ಹೋಗುವಾದಾಗಿ ಮೇಷ್ಟ್ರು ಹೇಳಿದ್ದರು.


ಎಲ್ಲರೂ ಶನಿವಾರದಂದು ಪಿಂಕ್ನಿಕ್ಗೆ ಹೋಗೋಣ ಅಂತಾ ಒಂದು ದಿನವನ್ನು ನಿಗದಿಪಡಿಸಿದರು. ಎಲ್ಲಾ ಮಕ್ಕಳ ಆಸೆಯೆಂತೆ ಹೊರಟರು. ಒಂದು ಸಣ್ಣ ಟೆಂಪುಗೆ ಮೊದಲೇ ಹೇಳಿ ಇಟ್ಟಿದ್ದರು. ಎಲ್ಲರ ಮನೆಯಿಂದಲೇ ಊಟ ತೆಗೆದುಕೊಂಡು ಬಂದಿದ್ದರು.ಚಿನ್ನುನ ಅಜ್ಜಿ ಚಕ್ಕಲಿ ರವೆ ಉಂಡಿ ಹುಳಿಬುತ್ತಿಯನ್ನು ಕಟ್ಟಿಕಳಿಸಿದ್ದರು. ದೇವಸ್ಥಾನವನ್ನು ನೋಡಿ ಹಾಗೆ ಅಲ್ಲಿನ ಕಲ್ಯಾಣಿಯಲ್ಲಿ ನೀರಾಟ ಆಡಿ ಮದ್ಯಾಹ್ನ ಊಟ ಮಾಡಿ ಸಂಜೆ ವೇಳೆಗೆ ಅಲ್ಲಿಂದ ಹೊರಟರು.

ಬರುವಾಗ ಡ್ರೈವರ್ ಮಾಡಿದ ತಪ್ಪಿನಿಂದ ಟೆಂಪು ಒಂದು ಹಳ್ಳಕ್ಕೆ ಬಿದ್ದಿತು, ಮಕ್ಕಳಿಗೆಲ್ಲಾ ಏಟುಗಳು ಬಿದ್ದಿದ್ದವು, ಮೇಷ್ಟ್ರುಗಳಿಗೆ ಕೂಡಾ ತುಂಬಾ ಪೆಟ್ಟಾಗಿತ್ತು. ಅಲ್ಲಿದ್ದವರು ಬಂದು ಅವರನ್ನು ಎಬ್ಬಿಸಿ ಹೋಸ್ಪೇಟ್ಲ್ಗೆ ಕರೆದುಕೊಂಡು ಹೋಗಿ ತೋರಿಸಿದರು. ಚಿನ್ನು ಪ್ರಜ್ಞೆಯನ್ನು ಕಳೆದುಕೊಂಡಿದ್ದಳು, 2 ದಿನದ ಬಳಿಕ ಅವಳು ಹುಷಾರಾದಳು. 

ಪೊಲೀಸ್ ಬಂದು ಡ್ರೈವರ್ನಾ ಅರೆಸ್ಟ್ ಮಾಡಿದ್ದರು.


ಸರ್ ನಾ ಏನು ಅಪರಾಧ ಮಾಡಿದೆ ಅಂತಾ ಕರ್ಕೊಂಡು ಹೋಗ್ತಿದಿರಾ?


ಬಾ ಪೊಲೀಸ್ ಠಾಣೆಗೆ ನಿನ್ನ ಅಪರಾಧವನ್ನು ತೋರಿಸುತ್ತೇನೆ.

ಚಿನ್ನು ಒಂದು ಹೇಳಿಕೆ ಕೊಡುತ್ತಾಳೆ ನಾವು ಊಟಾ ಮಾಡ್ತಾ ಆಟಾ ಆಡುವಾಗ ಡ್ರೈವರ್ ಮತ್ತೆ ಇನ್ನೊಬ್ಬ ಅಣ್ಣಾ ಏನೋ ತುಂಬಾ ಗಾಜಿನ ಬಾಟಲಿ ಇಟ್ಟುಕೊಂಡು ಕುಡಿತಾ ಇದ್ದರು. ಅವಳ ಮಾತನ್ನು ಪರಿಗಣಿಸಿ ಅವರನ್ನು ಹಿಡಿದು ಒಳಗೆ ಹಾಕಿದರು.

ಆತನ ಒಂದು ತಪ್ಪಿನಿಂದ ಮಕ್ಕಳೆಲ್ಲಾ ನೋವು ಅನುಭವಿಸುವ ಹಾಗಾಯಿತು.

ಕುಡಿದು ಗಾಡಿ ನಡೆಸುವುದು ಅಪರಾಧ ಇದನ್ನು ಮತ್ತೆ ಮತ್ತೆ ಹೇಳುವ ಹಾಗಾಗಿದೆ.



Rate this content
Log in

Similar kannada story from Crime