Hurry up! before its gone. Grab the BESTSELLERS now.
Hurry up! before its gone. Grab the BESTSELLERS now.

Revati Patil

Tragedy Inspirational Others


3.1  

Revati Patil

Tragedy Inspirational Others


ಅಂತ್ಯವಲ್ಲ, ಆರಂಭ!

ಅಂತ್ಯವಲ್ಲ, ಆರಂಭ!

2 mins 219 2 mins 219

ಅಷ್ಟೇ ಹೇಳಿ ಕಣ್ಮುಚ್ಚಿದ ವಿನಯ್!


ಇನ್ನೇನು ಕೆಲವೇ ಕ್ಷಣಗಳಲ್ಲಿ ಸತಿ ಪತಿಗಳಾಗಿ ಜೀವನದ ಆರಂಭ ಮಾಡಬೇಕಿದ್ದ ವಿನಯ್, ವಿಂದ್ಯಾ ಜೀವನದಲ್ಲಿ ಅಂತ್ಯವೇ ಮೊದಲು ಕಂಡಿತ್ತು! ಯಾರ ತಪ್ಪಿಗೆ ಯಾರ ಶಿಕ್ಷೆ? ಮೈಗಂಟಿದ ಅರಿಷಿಣ ಆರುವ ಮುನ್ನವೇ ಯಮರಾಯ ವಿನಯನನ್ನು ಅಪ್ಪಿಕೊಂಡಿದ್ದ. ಅತ್ತು ಕರೆದು ಮರಳಿ ಗಂಡನ ಜೀವ ಪಡೆಯಲು ಇವಳು ಸಾವಿತ್ರಿ ಆಗಲು ಇದೋ ಕಲಿಗಾಲ! ವೈದ್ಯರೇ ಕೈ ಚೆಲ್ಲಿ ಈ ಅಂತ್ಯಕ್ಕೆ ನಾಂದಿ ಹಾಡಿದ್ದರು.


ಪ್ರಜ್ಞೆ ತಪ್ಪಿದ್ದ ವಿoಧ್ಯಾಳನ್ನು ಎಚ್ಚರಿಸಲು ಎಲ್ಲರೂ ಪ್ರಯತ್ನಿಸುತ್ತಿದ್ದರು. ವಿಂದ್ಯಾ ಮೇಲೇಳಲಿಲ್ಲ. ವೈದ್ಯರ ಚಿಕಿತ್ಸೆಗೂ ಸ್ಪಂದಿಸುತ್ತಿಲ್ಲ ಆದರೆ ಕ್ಷೀಣವಾಗಿ ಅವಳ ಎದೆಬಡಿತವಿತ್ತು. ವಿನಯನ ಸಾವು ಅವಳನ್ನು ಕೋಮಾ ಹಂತಕ್ಕೆ ತಂದು ನಿಲ್ಲಿಸಿತ್ತು. ದೈಹಿಕವಾಗಿ ಕಣ್ಣೆದುರೇ ಸತ್ತ ವಿನಯನನ್ನು ನೋಡಿ ಅಳುವುದೋ, ಮಾನಸಿಕವಾಗಿ ಸತ್ತ ವಿಂದ್ಯಾಳನ್ನು ಉಳಿಸಿಕೊಳ್ಳುವುದೋ ಎಂದು ಮನೆಯವರಿಗೆ ಗಾಬರಿ ಆಯಿತು. ಅಷ್ಟಕ್ಕೂ ವಿoಧ್ಯಾಳಿಗೆ ತನ್ನವರೆಂದು ಹೇಳಿಕೊಳ್ಳಲು ಯಾರಿದ್ದರು? ಅಪ್ಪನೋ? ಅಮ್ಮನೋ? ಅಣ್ಣ -ತಮ್ಮನೋ? ವಿಂಧ್ಯಾ ಬೆಳೆದಿದ್ದೆ ಅನಾಥಾಶ್ರಮದಲ್ಲಿ. ಆದರೆ ಅನಾಥಳಾಗಿ ಅಲ್ಲ! ಅಲ್ಲಿದ್ದವರೆಲ್ಲರೂ ಅವಳಿಗೆ ಅಕ್ಕರೆಯ ಮಹಾಪೂರವನ್ನೇ ಹರಿಸಿದ್ದರು. ಅವಳಿಗೆ ಎಲ್ಲರ ಪ್ರೀತಿಯು ಸಿಕ್ಕಿತ್ತು. ಅಪ್ಪ ಅಮ್ಮನು ಇಷ್ಟು ಪ್ರೀತಿ ಕೊಡಲಾರರೇನೋ ಎನ್ನುವಷ್ಟರ ಮಟ್ಟಿಗೆ ಅನಾಥಾಶ್ರಮದವರು ವಿಂಧ್ಯಾಳನ್ನು ನೋಡಿಕೊಂಡಿದ್ದರು. ಹೌದು, ಅಂಗವಿಕಲೆಯನ್ನು ನೋಡಿದರೆ ಯಾರಿಗಾದರೂ ಮರುಕ, ಸಿಂಪತಿ ಹುಟ್ಟುವುದು ಸಹಜವೇ ತಾನೇ!

ನಿಜ ನೀವು ಕೇಳಿದ್ದು, ವಿಂದ್ಯಾ ಅಂಗವಿಕಲೆ. ಬಹುಶ ಅದೇ ಕಾರಣಕ್ಕೆ ಅವಳನ್ನು ಅವಳ ಹೆತ್ತವರು ಆಶ್ರಮಕ್ಕೆ ಬಿಟ್ಟಿದ್ದರೋ ಏನೋ, ಅವಳಂತೂ ಎಂದೂ ತನ್ನ ಹೆತ್ತವರನ್ನು ಕಂಡವಳಲ್ಲ, ಅವರಿಗಾಗಿ ಚಡಪಡಿಸಿದವಳು ಅಲ್ಲ. ವಿಂಧ್ಯಾಳಿಗೆ ಕೈ ಸ್ವಾಧೀನ ತಪ್ಪಿತ್ತು. ಕಿವಿಗಳು ಅಷ್ಟಕ್ಕಷ್ಟೇ, ತಮ್ಮ ಕೆಲಸ ಮಾಡಲು ನಿರಾಕರಿಸುತ್ತಿದ್ದವು. ಎಲ್ಲರ ಪ್ರೀತಿ ಅಕ್ಕರೆಯ ಮುಂದೆ ವಿಂದ್ಯಾ ತಾನು ಅಂಗವಿಕಲೆ ಎಂದು ಎಂದಿಗೂ ಭಾವಿಸಿರಲಿಲ್ಲ. ಬೇರೆಯವರಂತೆ ತನ್ನಿಂದ ಆಗದು ಎಂದು ಕಾರಣ ನೀಡದೆ ತನ್ನ ಬದುಕಿನ ಹಾದಿಯಲ್ಲಿ ಯಶಸ್ಸು ಕಂಡಿದ್ದಳು ವಿಂದ್ಯಾ. ಶೈಕ್ಷಣಿಕವಾಗಿ ವಿಂದ್ಯಾ ಎಂದೂ ಹಿಂದೆ ಬಿದ್ದಿರಲಿಲ್ಲ. ಸರಕಾರದ ವಿದ್ಯಾರ್ಥಿ ವೇತನ ಪಡೆದು ಮುಂದಿನ ಓದಿಗೆ ಆಯ್ಕೆ ಆಗಿದ್ದಳು. ಹೀಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಳು ದೆಹಲಿಗೆ ಹೋಗಬೇಕಿತ್ತು


ಆಶ್ರಮದವರು ಅವಳನ್ನು ಮೂರು ವರ್ಷ ಕಳಿಸಲು ತುಂಬಾ ದುಃಖಿಸಿದರು. ಆದರೆ ಸಾಧನೆಗೈಯುವ ಅವಳ ಹುಮ್ಮಸ್ಸಿನ ಮುಂದೆ ಇಂತಹ ಪ್ರೀತಿಗಳು ಒಬ್ಬರನ್ನು ಕಟ್ಟಿ ಹಾಕಬಾರದೆಂದು ಅರಿತು ಅವಳನ್ನು ಇನ್ನಷ್ಟು ಹರಸಿ ದೆಹಲಿಗೆ ಬೀಳ್ಕೊಟ್ಟಿದ್ದರು. ದೆಹಲಿಯಲ್ಲಿ ಪರಿಚಯವಾದವನೇ ವಿನಯ್!


ವಿನಯ್ ಕೂಡ ಅಂಗಹೀನ! ಪೋಲಿಯೋದಿಂದಾಗಿ ಒಂದು ಕಾಲು ಸ್ವಾಧೀನ ಕಳೆದುಕೊಂಡಿತ್ತು. ಕನ್ನಡದವನ ಸ್ನೇಹಕ್ಕೆ ಕನ್ನಡತಿಯ ಮನಸ್ಸು ಸಹಜವಾಗಿ ಹಂಬಲಿಸಿತ್ತು. ನಮ್ಮ ಭಾಷೆ, ನಮ್ಮವರು ಎನ್ನುವ ಸೆಳೆತವೇ ಅಂತಹದು, ಹತ್ತಿರಕ್ಕೆ ಸೆಳೆಯದೆ ಬಿಡದು. ಕ್ರಮೇಣ ಒಂದಾದ ವಿನಯ್-ವಿಂದ್ಯಾ ಇನ್ನಷ್ಟು ಹತ್ತಿರಾದರು. ಮುಂದಿನ ಪೂರ್ತಿ ಬದುಕಿಗೆ ಇಬ್ಬರು ಪರಸ್ಪರ ಬೆಳಕಾಗಬೇಕೆಂದು ನಿರ್ಧರಿಸಿದ್ದರು. ಮನೆಯವರು, ಆಶ್ರಮದವರು, ಗೆಳೆಯರು ಎಲ್ಲರೂ ಸಂತಸಗೊಂಡಿದ್ದರು ಇವರ ಪ್ರೀತಿಗೆ. ಒಂದು ನಿಷ್ಕಲ್ಮಶ ಪ್ರೀತಿಗೆ, ಅಂಗಹೀನತೆ ಮೀರಿ ಬದುಕಿನಲ್ಲಿ ನೆಲೆಯೂರುತ್ತ ವಿಕಲ ಚೇತನರಿಗೆ ವಿಂದ್ಯಾ-ವಿನಯ್ ಮಾದರಿಯಾಗಿದ್ದರು. ಇನ್ನೇನು ವಿದ್ಯಾಭ್ಯಾಸವೂ ಮುಗಿದು ಊರಿಗೆ ಮರಳಿ ಮದುವೆಯಾಗಲು ಸಿದ್ಧರಿದ್ದರು. ಪರೀಕ್ಷೆಗಳಲ್ಲೂ ಉತ್ತಮವಾಗಿ ತೇರ್ಗಡೆಯಾಗಿದ್ದರು.


ಮತ್ತೇ ಕರ್ನಾಟಕಕ್ಕೆ ಮರಳಿದ್ದರು ವಿಂದ್ಯಾ-ವಿನಯ್.

ವಿನಯ್ ಅಪ್ಪನ ವ್ಯವಹಾರ ಮುಂದುವರೆಸಲು ನಿರ್ಧರಿಸಿದ್ದ, ವಿಂದ್ಯಾ ಆಶ್ರಮವೊಂದಕ್ಕೆ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಳು.

ಈ ನಡುವೆ ಒಂದು ಸುಮುಹೂರ್ತದಲ್ಲಿ ವಿಂದ್ಯಾ-ವಿನಯ್ ಮದುವೆ ಮಾಡಲು ವಿನಯ್ ಮನೆಯವರು ಒಪ್ಪಿದ್ದರು.


ಮದುವೆಯನ್ನೇ ಕನಸು ಕಾಣದ ಎಷ್ಟೋ ಅಂಗವಿಕಲರ ಬಾಳಲ್ಲಿ ವಿಂದ್ಯಾಳ ಮದುವೆ ಸುದ್ದಿ ಕೇಳಿ ಆಶ್ರಮದವರು ಹರ್ಷಪಟ್ಟಿದ್ದರು. ಅನಾಥರ ಬದುಕಿಗೆ ಸಂಬಂಧವೊಂದು ಬಂಧನವಾಗುವುದಿತ್ತು. ಅಂದುಕೊಂಡಂತೆ ಲಗ್ನಪತ್ರಿಕೆ ಹಂಚಿಯಾಗಿತ್ತು. ಮೈಗೆ ಅರಿಶಿಣ ಮೆತ್ತಿಯಾಗಿತ್ತು. ನೂರಾರು ಕನಸುಗಳೊಂದಿಗೆ ಮದುವಣಗಿತ್ತಿಯಾಗಿ ವಿಂದ್ಯಾ ಹಸೆ ಮಣೆ ಏರುವವಳಿದ್ದಳು. ಬೆಳಗ್ಗೆ ಮೂಹೂರ್ತವಿತ್ತು. ಅರುಂಧತಿ ನಕ್ಷತ್ರ ತೋರಿಸುವುದು ಬಾಕಿ ಇತ್ತು. ಇದರ ಜೊತೆಯಲ್ಲೇ ಹೇಳದೆ ಕೇಳದೆ ಬಂದ ಹೃದಯಾಘಾತಕ್ಕೂ ಸ್ಥಾನ ಕೊಡಬೇಕಿತ್ತು. ಅಷ್ಟೇ, ಸತಿಗೆ ಪತಿಯಾಗಬೇಕಿದ್ದ ವಿನಯ್, ತಾನಿರದಿದ್ದರೂ ವಿಂದ್ಯಾ ಜೀವನ ನಡೆಸಬೇಕು, ನಾಲ್ಕು ಜನರಿಗೆ ಉಪಕಾರ ಮಾಡಬೇಕು ಎಂದವನೇ ಶವವಾಗಿದ್ದ!


ಒಂದುಸಲ ಏದುಸಿರು ಬಿಟ್ಟಳು ವಿಂದ್ಯಾ! ಕೋಮಾದಲ್ಲಿದ್ದರೂ ತನ್ನೆಲ್ಲ ಜೀವನವನ್ನು ಕನಸಿನಂತೆ ನೆನಪಿಸಿಕೊಂಡಿದ್ದಳು. ವೈದ್ಯರು ಮತ್ತೇ ಚಿಕಿತ್ಸೆಗಿಳಿದಿದ್ದರು. ಹಲವು ಪ್ರಯತ್ನಗಳಿಗೆ ವಿಂದ್ಯಾ ಬದುಕಿದಳು. ಹೀಗೆ ತಿಂಗಳುಗಳು ಉರುಳಿದವು.


---------------------------


ಆರು ತಿಂಗಳುಗಳ ನಂತರ


ಮನೆಯವರೆಲ್ಲರ ಒತ್ತಾಯಕ್ಕೆ ಮಣಿದು ವಿಂದ್ಯಾ ಮತ್ತೇ ಆಶ್ರಮಕ್ಕೆ ಆಡಳಿತಾಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದಳು. ಆಶ್ರಮದ ವಾತಾವರಣ ಅವಳಿಗೆ ತವರಿನ ಕಂಪು ನೀಡಿತ್ತು. ತನ್ನವನ ಮಾತಿನಂತೆ ನಾಲ್ಕು ಜನರಿಗೆ ಉಪಕಾರ ಆಗುವ ಅವಳ ಮತ್ತೊಂದು ಬದುಕು ಈಗಿನ ಇದೀಗ ಆರಂಭವಾಗಿತ್ತು.Rate this content
Log in

More kannada story from Revati Patil

Similar kannada story from Tragedy