ಅಣ್ಣ ಕೊಟ್ಟದ್ದು
ಅಣ್ಣ ಕೊಟ್ಟದ್ದು
ಪ್ರೀತಂ ಎಂಟರ್ಪ್ರೈಸ್ ನ ರಾಜು ದಾಸ್ ಮನೆಯಲ್ಲಿ ಹೋಮ, ಹವನ ಪೂಜೆ ಹಮ್ಮಿಕೊಂಡದ್ದರಿಂದ ಮನೆಯ ತುಂಬಾ ಜನ ಸಂಭ್ರಮದಿಂದ ಓಡಾಡಿಕೊಂಡಿದ್ದರು. ರಾಜು ಅವರ ಹೆಂಡತಿ ಕೂಡ ತುಂಬಾ ಖುಷಿಯಿಂದ ಪೂಜೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಸುಮಾ ಅಂತ ಹೆಸರು. ಮನೆಗೆ ಬಂದ ಪ್ರತಿಯೊಬ್ಬರನ್ನೂ ಮಾತಾಡಿಸಿ ಆಸೀನರಾಗಿಸುತ್ತಿದ್ದರು ಸುಮಾ.
ಶ್ರೀಮಂತಿಕೆಯ ಅಹಂ ಇಲ್ಲದ ಸುಮಾ ಗಂಡನಲ್ಲೂ ಅದೇ ಭಾವನೆಯನ್ನೇ ನೆಲೆಯೂರುವಂತೆ ಮಾಡಿದ್ದರು. ಹಾಗಾಗಿ ಸುಮಾ ಎಲ್ಲರ ಕಣ್ಮಣಿಯಾಗಿದ್ದರು. ಸುಮಾ ಅವರದ್ದು ಲೆವೆಲ್ ಅಂತ ಇಟ್ಟುಕೊಂಡು ಬೇಕಾದವರನ್ನು ಅಷ್ಟೇ ಮಾತಾಡಿಸುವ ಸ್ವಭಾವವಲ್ಲ. ಅವರು ಎಲ್ಲರನ್ನೂ ಕರೆದು ತಮ್ಮ ಸಂಗಡವೇ ಇರುವಂತೆ ನೋಡಿಕೊಂಡು, ಅವರಿಗೆ ಸಾಧ್ಯವಾದ ಸಹಾಯ ಮಾಡುವವರು.
ಕೆಲವು ಶ್ರೀಮಂತಿಕೆಯ ಅಹಂಕಾರದವರು ಕೂಡ ಅವರ ಗೆಳತಿಯರು ಇದ್ದರು.
ಅಂಥವರಲ್ಲಿ ವಿಜಯಾ, ಮಾಲಿನಿ, ಜಯಪ್ರಭಾ ಮುಖ್ಯರು. ಮಾಲಿನಿ ಅಂದು ಮೊದಲು ಬಂದಳು. ಬಂದವಳೇ " ಸುಮಾ, ಒಳ್ಳೇ ಗ್ರಾಂಡ್ ಆಗಿ ಪೂಜೆ arrange ಮಾಡಿದಿರಿ. ತುಂಬಾ ಜನ ಅಲ್ವ? " ಅಂತ ಪೀಠಿಕೆ ಹಾಕಿ " ಅಲ್ಲರಿ ಸುಮಾ, ಇದ್ಯಾಕೆ ಈ ಹತ್ತಿ ನೂಲಿನ ಸೀರೆ ತೊಟ್ಟಿದೀರಿ, ಒಳ್ಳೇ ಸೀರೆ ಉಟ್ಟುಕೊಳ್ಳಬಾರದಾ?" ಅಂದರೆ ಸುಮಾ "ಅಣ್ಣ ಕೊಟ್ಟದ್ದು" ಅಂತ ಹೇಳಿ ಕಣ್ಣಲ್ಲೇ ನಗು ಚೆಲ್ಲಿ " ಬಂದೆ, ಮಾ... ಕುಳಿತಿರಿ" ಅನ್ನುತ್ತಾ ಕುರ್ಚಿ ತೋರಿಸಿ, ಬೇರೆ ಅತಿಥಿಗಳ ಕಡೆ ಗಮನ ಕೊಡುತ್ತಾಳೆ.
ಮಾಲಿನಿಗೆ ಏನೂ ಅರ್ಥ ಆಗುವುದೇ ಇಲ್ಲ. ಏಕೆಂದರೆ ಅವಳ ಗತ್ತಿನಿಂದ ತಾಯಿ ಮನೆಯವರೂ ದೂರ ಇದ್ದರು. ಅವಳಿಗೆ ಆಡಂಬರವೇ ಮುಖ್ಯ. ಈಗ ಜಯಪ್ರಭಾ ಬಂದಳು. ಅವಳ ರೀತಿ ಕೂಡ ಹೀಗೆಯೇ ಇತ್ತು. ಅವಳು ಕೂಡ ಸೀರೆಯ ಪ್ರಸ್ತಾಪ ಮಾಡಿದಾಗ ಸುಮಾ ಅದೇ ಉತ್ತರ ಕೊಟ್ಟಳು " ಅಣ್ಣ ಕೊಟ್ಟದ್ದು " ಅದೇ ನಗು. ವಿಜಯಳ ಕೂಡ ಅದೇ ಪುನರಾವರ್ತನೆ.
ಸುಮಾ ಗಂಡ ಕೂಡ ಸಿಂಪಲ್ ಡ್ರೆಸ್ (ಪೂಜೆಗೆ) ಹಾಕಿ ಸುಮಾಳ ಸಂಗಡ ಪೂಜೆಗೆ ಕುಳಿತರು. ಅವರಿಗೆ ಈ ಮೂರು ಸುಮಾ ಗೆಳತಿಯರ ಮಾತು ಕೇಳಿತ್ತು. ಸುಮಾಳ ಅಣ್ಣನಿಗೂ ಕೇಳಿತ್ತು. ಅವನಿಗೆ ಯಾಕೋ ಜೀವ ಸಣ್ಣದು ಆದಂತೆ ಅನ್ನಿಸಿತು. ತಾನು ಬರಬಾರದಿತ್ತ? ಬಂದರೂ ಈ ಸಾದ ಸೀರೆ ತಂಗಿಗೆ ಕೊಡಬಾರದಿತ್ತು, ಅನ್ನಿಸಿತು. ಮುಖ ಸಣ್ಣ ಮಾಡಿ ಕುಳಿತನು. ಒಂದು ಹನಿ ನೀರು ಕಣ್ಣಿಂದ ಜಾರಿತು ಕೂಡ. ಹಾಗೇ ಒರೆಸಿಕೊಂಡನು.
ಆದರೂ ತಂಗಿ "ಅಣ್ಣ ಕೊಟ್ಟದ್ದು" ಅಂತ ಹೇಳುವ ಅಭಿಮಾನಕ್ಕೆ ಖುಷಿಪಟ್ಟನು. ನಿರಾಳವಾದನು. ಅಷ್ಟರಲ್ಲಿ ಪೂಜೆ ಮುಗಿದು, ಎಲ್ಲರಿಗೂ ಪ್ರಸಾದ ಮತ್ತು ಉಡುಗೊರೆ ಪ್ಯಾಕ್ ಕೊಟ್ಟದ್ದು ಆಯಿತು. ಸುಮಾಳನ್ನು ಹತ್ತಿರ ಕರೆದು ಈ ಮೂರು ಫ್ರೆಂಡ್ಸ್ ಮಾತಾಡಿಸುತ್ತ ಇದ್ದರು. ಅವರಿಗೆ ಎಲ್ಲರ ಎದುರು ಸುಮಾ ನಮ್ಮ ಕ್ಲೋಸ್ ಫ್ರೆಂಡ್ಸ್ ಅಂತ ತೋರಿಸಿಕೊಳ್ಳಬೇಕಾಗಿತ್ತು.
ಸುಮಾಳ ಗಂಡ ಅಲ್ಲಿಯೇ ಬಂದರು. ಅವರಿಗೂ ಸೀರೆ ಬಗ್ಗೆ ಹೇಳೆ ಬಿಟ್ಟರು, " ಏನ್ ಸಾರ್, ಹೆಂಡತಿಗೆ ಈ ನೂಲಿನ ಸೀರೆ ಉಡಿಸೋದಾ? " ಅಂತ. ಗಂಡ ಸ್ವಲ್ಪ ಖಡಕ್ ಆಗೇ ಹೇಳಿದರು " ನೋಡಿ, ಆ ಸೀರೆಯ ಬೆಲೆ ನಿಮಗೆ ಗೊತ್ತಾಗುವ ಮಾತಲ್ಲ. ಅದರಲ್ಲಿ ಅವಳ ಅಣ್ಣನ ಪ್ರೀತಿ ತುಂಬಿದೆ. ಅದಕ್ಕೆ ಬೆಲೆ ಎಷ್ಟು ಗೊತ್ತಾ? ಅದು ಯಾರಿಗೂ ಬೆಲೆ ಕಟ್ಟಲಿಕ್ಕೆ ಸಾಧ್ಯವಿಲ್ಲ. ನೀವು ಅಂಥ ಅಣ್ಣ ಕೊಟ್ಟ ಸೀರೆ ಉಟ್ಟು ಗೊತ್ತಿದ್ದರೆ ಅರ್ಥ ಆಗೋದು.
ಹೋಗ್ಲಿ ಬಿಡಿ, ಈಗ ನೀವೆಲ್ಲ ಊಟ ಮಾಡಿ ಹೋಗಿ " ಅಂತ ಮೆದು ಮಟ್ಟಕ್ಕೆ ಮಾತು ಮುಗಿಸಿದರು. ಅಲ್ಲೇ ಹತ್ತಿರದಲ್ಲೇ ಇದ್ದ ಸುಮಾ ಅಣ್ಣನಿಗೂ ಭಾವನ ಬಗ್ಗೆ ಅಭಿಮಾನ ಉಕ್ಕಿ ಬಂತು.
ಸ್ನೇಹಿತರೇ, ಅಣ್ಣ ಅನ್ನುವ ಪ್ರೀತಿ, ಅವನು ಕೊಟ್ಟ ಸಣ್ಣ ಕಲ್ಲುಗುಂಡು ಕೂಡ ಪ್ರೀತಿಯ ವಸ್ತು ತಂಗಿಗೆ. ಇದನ್ನು ಸುಖಿಸುವ ತಂಗಿಗೆ ಗೊತ್ತು ಅಣ್ಣ ಅಂದ್ರೆ ಏನು ಅಂತ. ಅವನ ಪ್ರೀತಿ ಅಂದ್ರೆ ಏನೂ ಅಂತ. ಅಲ್ಲವೇ....
ಕಾಮೆಂಟ್ ಮಾಡುತ್ತೀರಿ ಅಂತ ನಂಬಿದ್ದೇನೆ.
