STORYMIRROR

Arjun Maurya

Romance Tragedy Classics

4  

Arjun Maurya

Romance Tragedy Classics

ತುಂಬಿ

ತುಂಬಿ

1 min
383

ತಿಳಿಗಾಳಿಗೆ

ಹೂವೊಂದು

ಅರಳಿತು..

ವಿಷಯ

ತುಂಬಿದ ದುಂಬಿ

ಮರಳಿತು

ಅಧರೆಡೆಗೆ

ಚಿತ್ತ ವಿಚಿತ್ತ

ಕಾಮನೆಗಳ

ತಲೆತುಂಬಾ ಹೊತ್ತು..

ಖುಷಿಯ ನಡುಕ

ಬೆವರಿನ ಸೊಗಡು

ಮಂಜುಹನಿಗಳ

ತಂಪು ಮತ್ತಷ್ಟು

ಉರಿಸಿದ ಕಾಮನೆ

ಭೃಂಗಸ್ಪರ್ಶದಿ ಸ್ವರ್ಗ

ಪರಾಗ-ಮಕರಂದ

ವಿನ್ಯಾಸದ ಛಂದಃ

ಸ್ವಲ್ಪ ಹೊತ್ತಿನ

ರತಿರಾಗ..

ಮಧುಹೀರಿದ

ತುಂಬಿ

ಮತ್ತರಳಿದರೂ

ಮರಳದೆ

ಕೊರಗಿದ ಹೂವು

ಕಾಯುತಿದೆ...


Rate this content
Log in

Similar kannada poem from Romance