STORYMIRROR

Lakumikanda Mukunda

Tragedy Crime

2  

Lakumikanda Mukunda

Tragedy Crime

ಸೋತು ಸತ್ತವಳು..

ಸೋತು ಸತ್ತವಳು..

1 min
84

ಕಾಣದ ಕೈಗಳಡಿಯಲ್ಲಿ ನಿಸ್ತೇಜಳಾಗಿ ಬಿದ್ದವಳು

ಆದ ಅನ್ಯಾಯಕ್ಕಾಗಿ ಹೋರಾಡಿ ಸೋತವಳು 

ಆರದ ಆಘಾತಕ್ಕೆ ನಲುಗಿ ನೊಂದು ಸತ್ತವಳು

ಅರಿಯದೆ ಮುಗ್ದೆ ನಾನು, ಮೋಸಕ್ಕಿಡಾದವಳು


ಪರಿಚಿತರೆ ಪರಂಗಿಹಣ್ಣೆಂದು ಭ್ರಮಿಸಿದರೆಣ್ಣ

ಮಗಳೆಂಬುದ ಮರೆತು ಮೇಲೆ ಬಿದ್ದರೆಲ್ಲ

ಅದೆಷ್ಟು ಬೇಡಿದರೂ ತೀರದ ದಾಹ ಅವರದು

ನನ್ನ ಕೂಗು ಸತ್ತು ಅದೆಷ್ಟೋ ದಿನಗಳಾಯ್ತು


ಅವರು ಒಳತೂರಿದ ಹನಿಗಳೆಷ್ಟೋ ಎನೋ

ಕಣ್ಣಿರಿಟ್ಟರೂ ನೆಕ್ಕಿ ಹಾಕಿದರೆನ್ನ ನಾಯಂತೆ

ಕನಸು ಕಮರಿ ಕುಂದಿ ಸಾಯಲಾರಂಬಿಸಿವೆ

ಭಯದ ಬಾಳು ನನ್ನದು,ಹೋಳಿಯಾಡಿಹರು


ನ್ಯಾಯ ದೇವತೆಯ ಜಾಗದಲ್ಲೂ ಆ ನೀಚರೆ..

ರಕ್ಷಕರೆ ಭಕ್ಷಕರಾಗಿ ದಾಹ ತೀರಿಸಿಕೊಂಡರು

ನ್ಯಾಯ ನೀಡುವ ಭರದಲ್ಲಿ ಅಬ್ಬರಿಸಿ ಉಂಡರು

ಕರಿಛಾಯೆ ಹೊರೆಸಿ ನನ್ನ ಹೊರಗಟ್ಟಿಬಿಟ್ಟರು


ಬದುಕಿದ್ದೆನೆ ಇದ್ದು ಇಲ್ಲದಂತೆ ಹೆಣವಾಗಿಯೇ

ನ್ಯಾಯ ಸಿಗಲಿಲ್ಲ,ಆ ದೇವರೆನ್ನ ಪಾಲಿಗುಳಿದಿಲ್ಲ

ಸಾಕು ಕಾಮವಾಸನೆಯ ಶ್ವಾನಗಳ ಸಹವಾಸ

ಬೇಕಿದೆ ಚಿರಶಾಂತಿ ದಿಕ್ಕಾರವಿರಲಿ ಕಾಮುಕರಿಗೆ



Rate this content
Log in

Similar kannada poem from Tragedy