STORYMIRROR

ಶಿವಲೀಲಾ ಹುಣಸಗಿ

Romance

2  

ಶಿವಲೀಲಾ ಹುಣಸಗಿ

Romance

ರಂಗ ಮಂಚದಲಿ..ನಾನು ನೀನು...

ರಂಗ ಮಂಚದಲಿ..ನಾನು ನೀನು...

1 min
139

ಅವನ ನೆನಪಿಸಲು ಬಂದೆ ಬಿಟ್ಟಿತು ಹೋಳಿ

ಕಾದಿದ್ದೆಲ್ಲವೂ ಅವನ ಬಣ್ಣದ ಓಕುಳಿಯಾಗಿ

ರಂಗೇರಿದ್ದು ವಿಚಿತ್ರವೇ...

ನೀಲಿಯಾದವನು ಕಂಗಳಲಿ ಹೊಸೆದವನು

ಚುಕ್ಕಿಗಳ ಸಾಲಲ್ಲಿ ನನ್ನ ಸೆಳೆದವನು

ಹಸಿರಾದ ತುಟಿಗೆ ಕೆಂಪೆರೆಸಿ ನಲಿದವನು

ಹೂವು ಹಣ್ಣುಗಳ ಬಣ್ಣದಲಿ ಮೈಮರೆತವನು

ಬಣ್ಣವೆಂದರೆ ಚಿತ್ತಸಾಗರದ ಬಯಲಂತೆ

ಅಪ್ಪಿಕೊಂಡು ಒಪ್ಪಿಸಿದ ಶ್ಯಾಮ ವರ್ಣವಿದು

ಬಣ್ಣಯಾವುದಾದರೇನು? ಒಳಗಣ್ಣು ಬೇಕು

ರಂಗಮಂಚದಲಿ ನಾನು ನೀನು ಬರೆಯೋಣ

ನಿನ್ನೊಡಣೆ ಬೆರೆತ ಬಣ್ಣಕೆ ಸಾಕ್ಷಿ ಈ ಬಾನು

ಕಂಗಳ ಹೊಯ್ದಾಟದಲಿ ಮನ ಬಯಸಿದೆಯಿಂದು

ರಂಗನೆರೆಚುತ ಓಲೈಸೋಣ ಬಾರೋ ಸಖಾ...

ಮುತ್ತಿನ ಹಾರದೊಳು ನಿನ್ನ ಅಲಂಕರಿಸುವೆ 

ರಂಗಮಂಟಪದಲಿ ರಂಗೇರುವಾ...ಬಾರೋ ಸಖಾ..

ನೀನ ಇರದಾ ಕ್ಷಣಗಳಿಗೆ ಚೈತನ್ಯವಿಲ್ಲ...

ಹೋಳಿಯಲಿ ಹೋಳಾಗಿ ಬೆಸೆಯೋಣ ಬಾ ಸಖಾ...



Rate this content
Log in

Similar kannada poem from Romance