ಓ ಚೆಲುವೆ.....
ಓ ಚೆಲುವೆ.....
ಓ ಚೆಲುವೇ........
ಅಷ್ಟು ಚಂದದಲಿ ಸೀರೆಯುಟ್ಟ
ಎಲೆ ನೀರೆ ನನ್ನ ಹೃದಯದೊಳು
ಪ್ರೇಮಾಗ್ನಿ ಕುಂಡವನೆ ಹಚ್ಚಿದೆಯಲ್ಲೆ
ಪ್ರತಿ ಮೆಟ್ಟಿಲನಿಳಿಯುತ ನನ್ನೆದೆಯ
ಬಡಿತವನು ಹೆಚ್ಚಿಸಿದೆಯಲ್ಲೆ ,
ನಿನ್ನ ಘನ ಚೆಲುವಿಂದ ನಾ ನಿನ್ನ
ಹಿಂಬಾಲಿಸುವ ತೆರದಿ ಮಾಡಿದೆಯಲ್ಲೆ
ಸಪ್ತಪದಿ ತುಳಿವುದಕಿದಭ್ಯಾಸವೆಂಬುದು
ನನಗರಿವಾಗದೇ ಹೋಯ್ತಲ್ಲೆ
ನಿನ್ನ ನೋಡುತ್ತಲೆ ಕಲ್ಪನಾ ಲೋಕದಲ್ಲೇ
ವಿಹರಿಸುವಂತೆ ಮಾಡಿದೆಯಲ್ಲೆ
ಕಾಲದರಿವನೇ ನನ್ನಿಂದ ಕಸಿದೆಯಲ್ಲೇ
ನನಗರಿವಿರದೇ ನನ್ನೆದೆಯ ರಾಣಿಯಾದೆಯಲ್ಲೇ
ನಿನ್ನ ರಾಜನಾಗಿಯೂ ನಾನಿನ್ನ ಸೇವಕನಂತಾದೆನಲ್ಲೇ
ಏಕಿಂತು ಗೈದೆಯೇ ಓ ನನ್ನ ನಲ್ಲೇ ಓ ನನ್ನ ನಲ್ಲೆ