STORYMIRROR

Ravindra Kumar N (CBSE)

Others

5.0  

Ravindra Kumar N (CBSE)

Others

ಶೃಂಗೇರಿ ಶಾರದಾಂಬೆಗೆ

ಶೃಂಗೇರಿ ಶಾರದಾಂಬೆಗೆ

1 min
11.6K


ಶೃಂಗ ಪುರದ ವಿಹಾರಿಣಿ

ನಿನ್ನ ಕೃಪೆಯನಿಂದು ಬೇಡುವೆ 

ನಿನ್ನ ಕರುಣೆಯ ಬಲದಲಿಂದು

ಪದ್ಯ ರಚನೆಯ ಮಾಡುವೆ


ಈಗ ತಾನೇ ಬರೆದು ಓದಲು

ಕಲಿತ ಕೋಗಿಲೆ ಮರಿಯು ನಾ 

ಪದ್ಯ ರಚಿಸಿ ಹಾಡಬೇಕೆನೆ

ನನಗಸಾಧ್ಯವು ತಿಳಿದೆ ನಾ


ನಿತ್ಯ ಸತ್ಯದ ಶುದ್ಧ ಭಾವದ

ಪದಗಳನ್ನೇ ಕರುಣಿಸು

ತೊದಲದಂತೆ ಸುಲಲಿತದಲಿ

ಎನ್ನ ಬಾಯೊಳಗಾಡಿಸು 


ನಿನ್ನ ಶಕ್ತಿಯೊಳೊಂದು ಅಂಶವ

ಹರಿಸು ನನ್ನಯ ಬುದ್ಧಿಗೆ

ನನ್ನ ರಚನೆ ಇದೆಂಬ ಅಹಮನು

ತೊಡೆದು ಕರುಣಿಸು ಏಳಿಗೆ 


Rate this content
Log in