ದಯವಿಟ್ಟು ದೇವನಡಿ ಸೇರು
ದಯವಿಟ್ಟು ದೇವನಡಿ ಸೇರು
ನೆಲದಿ ಹುದುಗಿಹ ಬೇರು ಕಾಂಬುದಾರಿಗೆ ಹೇಳು
ಎದುರಿರುವುದನೆ ಸತ್ಯವೆಂದು ಬಗೆಯುವೊಲು
ನಿಲ್ಲಲಾಗದೆ ಬೀಳೆ ವಯಸಿನಾ ಲೆಕ್ಕವನು
ಪಡೆದ ಅನುಭವವನ್ನು ಗೌರವಿಪರಿಲ್ಲ
ವಯಸು ದೇಹಕೆ ಮಾತ್ರ ಚಿಗುರುತಿಹೆ ನೋಡಿಲ್ಲಿ
ಎನುತ ಸಾಕ್ಷಿಯ ತೋರೆ ನಂಬರಲ್ಲ
ನಿಜಕು ಅನುಭವಕಿಲ್ಲ ತಿಲಮಾತ್ರ ಬೆಲೆಯಿಲ್ಲ
ಚಿಗುರು ತಾರುಣ್ಯದೆಡೆ ಲೋಕವೆಲ್ಲ
ಸ್ವಾರ್ಥ ಸೌನಿಕರಂಗಳವೆ ಕಾಂಬುವುದು
ಇಹ ತನಕ ಬಳಸಿ ಬಳಿಕ ಬಿಸುಡುವರಲ್ಲ.
ನಿನ್ನಿಂದ ಲಾಭವಿರೆ ಮಾತ್ರವೇ ನಿನಗೆ ಬೆಲೆ
ಆಸ್ತಿ ಧನದೆದುರು ಶೂನ್ಯ ಜೀವದ ಬೆಲೆ
ಮತ್ತೆ ಚಿಗುರುತ ಉಪಕರಿಸಲೇಕೆಮ್ಮ
ಅವನು ಪದದಡಿ ಬೇಡಿ ಇನ್ನು ತೆರಳಮ್ಮ
ನಿನ್ನುಪಕಾರವರಿಯದವರಿಂಗೆಷ್ಟು
ಉಪಕರಿಸಿದರು ತಿಲ ಲಾಭವಿಲ್ಲ
ಅದಕೆ ಈ ನರರಾರೂ ಅರ್ಹರಲ್ಲ
