ನಲ್ಲೇ ನಿನ್ನ ದಾರಿಯಲ್ಲಿ.
ನಲ್ಲೇ ನಿನ್ನ ದಾರಿಯಲ್ಲಿ.
ನೀನು ನೆಡೆಯುವ ಹಾದಿಯಲ್ಲಿ,
ಪರಿಮಳದ ಹೂವುಗಳು ಚಲ್ಲಿರಲಿ,
ಮಾಮರದ ಕೋಗಿಲೆಯು ಹೊಸ ರಾಗ ಹಾಡಲಿ,
ಗರಿ ಬಿಚ್ಚಿ ನವಿಲು ಮುಂದಾಗಿ ನಾಟ್ಯವಾಡಲಿ,
ನೀ ಬರುವ ಹಾದಿಯಲ್ಲಿ, ತಂಗಾಳಿ ತುಸು ಬೀಸಿ,
ತರು ಲತೆಗಳು ತೊನೆದಾಡಿ ತೂಗಾಡಲಿ,
ಅದರೊಂದಿಗೆ ನಿನ್ನ ನಗುವ ಮುಂಗುರುಳು,
ನನ್ನೆದೆಯ ಗೂಡಲ್ಲಿ ಕಚಗುಳಿಯ ಇಡಲಿ.
ನಲ್ಲೇ ನಿನ್ನ ನನ್ನ ಮಧುರ ಮಿಲನಕೆ,
ಸುತ್ತಲೂ ಮಂದ ಮಾರುತ ಬೀಸಲಿ,
ಕೆಂಪಾದ ನಿನ್ನ ಕದಪುಗಳ ಮೇಲೆ ,
ಸೂರ್ಯ ತನ್ನ ಹೊಂಬಣ್ಣ ಎರಚಲಿ,
ಕಣ್ಣ ಕಾಡಿಗೆಗೆ ಸವರಿರುವ ಕಡುಗಪ್ಪು,
ಕೇಶರಾಶಿಯ ಜೊತೆಗೆ ತನ್ನ ಸ್ಪರ್ಧೆ ಒಡ್ಡಿದೆ,
ನಿನ್ನೆದುರು ನಾ ಬಂದು ನಡು ಬಳಸಿ ನಿಂತಾಗ
ನೀಳ ರೆಪ್ಪೆಗಳು ನಸುನಾಚಿ ನೆಲವನ್ನೇ ನೋಡಿದೆ.

