ನಲ್ಲ
ನಲ್ಲ
ಬಳಿ ಬಾರನೇಕೆ ಮುದ್ದು ನಲ್ಲ
ಹಿಡಿಯನೇಕೆ ಮೆಲ್ಲನೆ ಗಲ್ಲ
ಎಲ್ಲಿ ಹೋದನೊ ಇನಿಯ
ಕದ್ದು ಹೋದನೊ ಮನವ
ಕಾಡು ಮೇಡು ಅಲೆದೆ ನಾನು
ಕಣ್ಣ ತಪ್ಪಿಸಿ ಓಡಿದೆ ನೀನು
ಹೇಗೆ ಹುಡುಕಲಿ ಇನ್ನು
ನೆನೆದಿದೆ ನನ್ನ ಕಣ್ಣು
ಅಂದು ನಿಂತು ಆಡಿದ ಮಾತು
ನೂರೆಂಟು ಬಯಕೆ ತಂತು
ಬಯಸಿ ಬಳಿ ಬಂದನೆಂದು
ಒಪ್ಪಿ ಅಪ್ಪಿದೆ ಅಂದು
ಕಳೆದಿರಲು ನೂರು ದಿನಗಳು
ನೆನಪಾಗಿ ಕಾಡಿದೆ ಇರುಳು
ಸಖಿಯರ ಸುಖದಲಿ ಚೆಂದಿರ
ನನ್ನ ಮರೆತೆ ಏನೊ ಸುಂದರ
ಕಾದು ಕಾದು ಸೋತು ಹೋದೆ
ಅರಿಯದಾದನೆ ರಾಧೆಯ ಬಾಧೆ
ಬಳಿ ಬಾರನೇಕೆ ಮುದ್ದು ನಲ್ಲ
ಹಿಡಿಯನೇಕೆ ಮೆಲ್ಲನೆ ಗಲ್ಲ
.

