STORYMIRROR

ಹೃದಯ ಸ್ಪರ್ಶಿ

Tragedy Classics Others

4  

ಹೃದಯ ಸ್ಪರ್ಶಿ

Tragedy Classics Others

ನೆನಪುಗಳ ಮಾಯೆ

ನೆನಪುಗಳ ಮಾಯೆ

1 min
221

ನೆನಪುಗಳ ಗಂಟಿದು

ಬಿಡದ ಭಾವ ನಂಟು


ಮೌನ ಮಗುವಾಗಿ

ಮಲಗಿರಲು

ನೆನಪುಗಳ ಹಾವಳಿ

ಜೋರಾಗಿದೆ


ಸುರಿಯುವ ಸೋನೆಯಲೂ

ಅದೇ ಹಳೆಯ ನೆನಪು

ಮತ್ತೆ ಹಸಿರಾಗಿದೆ

ಬಯಕೆಯ ಬಯಲಲಿ


ಮುಗುಳು ನಗೆಯಲ್ಲೂ

ಇಣುಕಿದೆ

ಅದೇ ಬಾಲ್ಯದ ಕಲರವ


ಸ್ನೇಹಿತರ ಸ್ನೇಹ

ಪ್ರೀತಿಯ ಪರ್ವ

ನೆನಪುಗಳಲಿ ಯಾವುದೂ

ಬದಲಾಗಿಲ್ಲ


ಆದರೂ ನನ್ನ ದಾರಿ 

ಬದಲಾಗಿದೆ.. ಮತ್ತೆ

ತಿರುಗಿ ಹೋಗುವ ಹಾದಿ

ಮುಚ್ಚಿ ಹೋಗಿ


ನಡುರಾತ್ರಿಯ ನಿದ್ದೆ ಬಿಟ್ಟೂ

ಎದ್ದು ಕೂರುವೆ

ಸಿಹಿ ಕಹಿ ನೆನಪುಗಳಲಿ

ಕಳೆದು ಹೋಗುತಾ


ಈಗ ಅರಿವಾಗುತಿದೆ ಬಿಡದ

ಈ ನೆನಪುಗಳ ನಂಟು

ಚಂದಿರನ ಅಂಗಳದಲಿ ಆಡುವ

ಕನಸಿನಂತೆ ಬರೀ ಮಾಯೆ

ಕೈಗೆ ಸಿಗದು ಅನುಭವಿಸಲಾಗದು..!



Rate this content
Log in

Similar kannada poem from Tragedy