STORYMIRROR

Pushpa Prasad

Romance Classics Others

4  

Pushpa Prasad

Romance Classics Others

ನಾ ಕಂಡ ಕನಸು

ನಾ ಕಂಡ ಕನಸು

1 min
12

ನಿನ್ನ ನೋಟಕ್ಕೆ ನಾ ಕಳೆದುಹೊದೆ

ಕಂಪನದಿಂದ ಮನಸನ್ನು ನಿಯಂತ್ರಿಸಿ

ನೋಡುತ್ತಿರಲು ನೀನೆಲ್ಲಿ ಮರೆಯಾದೆ

ತಟ್ಟನೆ ನನ್ನೀ ಮನಸಿಗೆ ಚುಂಬಿಸಿ!!


ಅಂದು ನೀ ನನ್ನೆದುರೆ ಹಾದು ಹೋದೆ

ಬದುಕಿದೆ ಇಂದು ನನ್ನೀಜೀವ ನಿನ್ನ ಸ್ಮರಿಸಿ

ಮತ್ತೊಮ್ಮೆ ನನ್ನ ಬಳಿ ಬರಬಾರದೆ

ಕಾಯುತ್ತಲಿರುವೆ ನಿನಗಾಗಿ ನೆನೆಸಿ!!


ನನ್ನ ಹುಚ್ಚು ಪ್ರೀತಿಯು ನೀನಾದೆ

ಎಲ್ಲಿಗೆ ಹೋಗಿರುವೆ ನೀ ನನ್ನಮರೆಸಿ

ನಯನವು ನಿನ್ನ ನೋಡಲು ಕಾದಿದೆ

ನೀ ಬರುವ ದಾರಿಯ ಹರಸಿ!!


ಹೋಗುವೆ ಎಲ್ಲಿಗೆ ನನ್ನ ಸನಿಹ ಬಾರದೆ

ಕಾದಿರುವೆ ನಿನಗಾಗಿ ಹೃದಯವನ್ನಲಂಕರಿಸಿ

ಬಂದುಬಿಡು ಸ್ವಲ್ಪವೂ ತಡಮಾಡದೆ

ಕನಸಿಸೂರಿಗೆ ಮತ್ತೊಮ್ಮೆ ದಯಮಾಡಿಸಿ!!


ನೀನಿಲ್ಲದೆ ನನಗೆ ಬದುಕಲಾಗುವುದೇ

ಕನಸ ಕಾಣುತ್ತಿರುವೆ ನಿನ್ನ ಪ್ರೀತಿಸಿ

ನಾ ಕಂಡ ಕನಸು ನನಸಾಗುವುದೇ 

ಬೇಗ ಬಾ ಮುದ್ದಾಡಲು ಪ್ರೇಮಿಸಿ !!


Rate this content
Log in

Similar kannada poem from Romance