STORYMIRROR

Geethasaraswathi K

Romance Inspirational Others

4  

Geethasaraswathi K

Romance Inspirational Others

ಮದುವೆ

ಮದುವೆ

1 min
290

ಮೂರಕ್ಷರದ ಬಂಧ

ಮನಸುಗಳ ಸಮ್ಮಿಲನ 

ಕುಟುಂಬ , ಬಂಧುಗಳ

ಮಕ್ಕಳ ನಡುವಿನ ಬಂಧವಿದು॥

ಸಮಾಜದ ಬಾಯಿಗೆ 

ಗ್ರಾಸವಾಗದೆ 

ಬಯಕೆಯ ದಾಂಪತ್ಯಕ್ಕೆ

ಆಧಾರವಾಗಿದೆ॥

ಸಂತಸವ ಕಾಣಲು

ಹಂಚಿಕೊಂಡು ಬದುಕಲು

ಹೊಸತನವ ನೋಡಲು

ಮದುವೆ ಕಾರಣವು॥

ಮದುವೆ ಸ್ವರ್ಗದಲ್ಲಿ 

ನಿಗದಿಯಂತೆ 

ಅರಿತು ಬಾಳಿದರೆ

ಇಲ್ಲಿಯೇ ಸ್ವರ್ಗವಂತೆ ॥

ಹೊಂದಾಣಿಕೆಯೇ 

ದಾಂಪತ್ಯದ ಅಸ್ತ್ರವಂತೆ 

ಸಮರಸವೇ 

ಜೀವನದ ತಿರುಳಂತೆ॥


Rate this content
Log in

Similar kannada poem from Romance