STORYMIRROR

Surabhi Latha

Romance Classics Inspirational

4  

Surabhi Latha

Romance Classics Inspirational

ಕೃಷ್ಣ

ಕೃಷ್ಣ

1 min
518

ಎಷ್ಟು ಬರೆದರೇನು ಎದೆಯ ನೋವು ಕರಗದು

ಎಷ್ಟು ಕೂಗಿ ಕರೆದರೇನು ಮನದ ದಾಹ ನೀಗದು

ಕಣ್ಣಲೆಗಳು ತುಂಬಿ ನಿನ್ನ ಮೊಗವು ಮಂಜಾಯಿತು

ಅಧರಗಳು ಅದುರಿ ಪದಗಳು ನುಡಿಯದಾಯಿತು

ಒಲುಮೆಯ ಭಾವದಲಿ ತನುವು ಮುಳುಗಿತು 


ಹರಿ ಮುಕುಂದ ಮಾಧವ ನೆನ್ನಲು ಮನಸ್ಸು ಹಗುರವಾಯಿತು

ಕಯ್ಯ ಚಾಚಿ ನಿನ್ನ ಬೇಡಲು ಎದೆಯ ಭಾರ ಇಳಿಯತು

ಪಾದಗಳು ತಾಳ ಹಾಕಿ ಕುಣಿಯೇ ಜಗವು

ಸುಂದರವಾಯಿತು


ಕಷ್ಟಗಳು ಕಮಲದಂತೆ ಮೃದುವಾಯಿತು

ಕಂದನಂತೆ ನಿನ್ನ ಮಡಿಲು ನನ್ನ ತಬ್ಬಿಯಾಯಿತು

ಕಲ್ಮಶ ವಿರದ ಬೇಡಿಕೆಯಲ್ಲಿ ನೆಮ್ಮದಿ ಕಂಡಾಯಿತು

ಮುದ್ದು ಕೃಷ್ಣ ನನ್ನ ಬಿಡೆನೆಂಬ ನಂಬಿಕೆ ಬಲವಾಯಿತು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance