ಕೆಂಪುಗೆನ್ನೆಯ ಸೊಬಗೆ
ಕೆಂಪುಗೆನ್ನೆಯ ಸೊಬಗೆ
ಚಿಮ್ಮಿದೆ ಪ್ರೀತಿಯ ಚಿಲುಮೆ ನಿನ್ನ ಕಂಡಾಗ
ಕೆಂದುಟಿಯಲ್ಲಿ ನಿನ್ನ ನಗುವ ನೋಡಿದಾಗ
ಎಷ್ಟೊಂದು ಮಧುರ ಕಳೆದ ಆ ದಿನವು
ಕಂಗಳ ನೋಟ ಬೆರೆತಂತ ಕ್ಷಣವು!!
ಪ್ರೀತಿಯ ಗುಲಾಬಿ ಕೊಟ್ಟಾಗ ನಾ ನಿನಗೆ
ನಾಚಿ ನೀರಾದ ಕೆಂಪುಗೆನ್ನೆಯ ಸೊಬಗೆ
ನನ್ನ ಕೈಗೆ ನಿನ್ನ ಕೈ ತಾಗಿಸಿ ನಡೆದಾಗ
ಜೋಡಿ ಹಕ್ಕಿಗಳಂತೆ ಮನ ಹಾರಿತಾಗ!!
ಹೀರಿದಾಗ ಜೊತೆಯಾಗಿ ನಾವು ಹಣ್ಣಿನ ರಸ
ಮೈಯಲ್ಲಿ ರೋಮವು ಜುಮ್ಮೆಂದ ಕ್ಷಣ
ಮರೆಯಲಾರೆ ಎಂದಿಗೂ ಮೊದಲ ಭೇಟಿಯ
ಕಳೆಯೋಣ ಪ್ರತಿಕ್ಷಣ ಸವಿಯುತ್ತಾ ಬಾಳರಸ!!