ಇಲ್ಲಿ ಬರ ನಿರಂತರ.....
ಇಲ್ಲಿ ಬರ ನಿರಂತರ.....
ಇಲ್ಲಿ ,ಈ ದೇಶದಲ್ಲಿ ಬರ ನಿರಂತರ......
ಹಸಿದ ಹೊಟ್ಟೆ , ಮೂಳೆ ಕಂದರ
ಕೋಟಿ ಕೋಟಿ ಜನರ
ಬರ ನಿರಂತರ ....
ಬೆಟ್ಟ ಕಡಿದು ಹೊಲವ ಮಾಡಿ
ಬೀಜ ಬಿತ್ತಿ ಬೆಳೆ ಬೆಳೆದರೂ
ಹೊಟ್ಟೆ ತುಂಬುತ್ತಿಲ್ಲ
ಇಲ್ಲಿ , ಈ ದೇಶದಲ್ಲಿ
ಬರ ನಿರಂತರ ....
ಅಂಗಡಿ ತುಂಬಾ ಬಟ್ಟೆ ರಾಶಿ
ವಿವಿಧ ನಮೂನೆ " ಫ್ಯಾಷನ್ ಶೋ ! "
ಝಗಝಗಿಸುವ ಬೆಳಕಿನ ನಡುವೆ
ರಾಶಿ ರಾಶಿ ಬಿದ್ದಿದೆ
ಆದರೂ ,
ಮೈ ಮುಚ್ಚುವಷ್ಟು ಸಾಲುತ್ತಿಲ್ಲ
ಇಲ್ಲಿ , ಈ ದೇಶದಲ್ಲಿ
ಬರ ನಿರಂತರ .....
ಬೆಳ್ಳಿ ಬಂಗಾರ ಸಾಕಷ್ಟು ಸಿಗುತ್ತಿದ್ದರೂ
ನಿಲ್ಲಲಿಲ್ಲ ಬರ
ಎಲ್ಲಾ ಇರುವ ಇಲ್ಲಿ
ಎಲ್ಲರಿಗೂ ದಕ್ಕುತ್ತಿಲ್ಲ, ಎಲ್ಲವೂ ಬರ !
ಬರ ನಿರಂತರ
ಇಲ್ಲಿ , ಈ ದೇಶದಲ್ಲಿ ಬರ ನಿರಂತರ ........
.
