ಗೋಗರ್ಭದಲ್ಲೊಂದು ಸಾವು
ಗೋಗರ್ಭದಲ್ಲೊಂದು ಸಾವು
ಕಡಲ ಅಂಚಿನ ಗುಡ್ಡದ ಮೇಲೆ ಕಾಲು ದಾರಿಯ ಇಕ್ಕೆಲದಲ್ಲಿ ಆಳೆತ್ತರಕ್ಕೆ ಬೆಳೆದ ಗಿಡಗಂಟಿಗಳು ತುತ್ತ ತುದಿಯಲ್ಲಿ ಇರುವ ಗೋಗರ್ಭ !ಎದುರಿಗೆ ಕಾಣುವ ವಿಶಾಲವಾದ ಕಡು ನೀಲಿ ಬಣ್ಣದ ಅರಬ್ಬೀ ಸಮುದ್ರ ಎತ್ತರಿಸಿ ಬಂದು ಬಂಡೆಗಪ್ಪಳಿಸುವ ಅಲೆಇಂಚಿಚಾಗಿ ಮುಳುಗುವ ಸೂರ್ಯ ಸೂರ್ಯಾಸ್ತದಲಿ ಬಾನಲ್ಲಿ ಹರಡಿರುವ ಕೆಂಪು ರಂಗು ನೀಲಿ ಕಡಲ ಮೇಲೆ ತೇಲಿ ಹೋಗುವ ಹಾಯ್ ದೋಣಿ ಮೇಲೆ ಹಾರುವ ಹಕ್ಕಿಯ ಹಿಂಡುಚದುರಿ ಹೋಗುವ ಮೋಡಗಳು ಗೋಗರ್ಭದ ಒಳಗೆ ಎಲ್ಲಿಂದಲೋ ಬಂದು ತಳ ಊರಿರುವ ಕೃಷ್ಣ ಸ್ವಾಮಿ !ವಿದೇಶಿ ಪ್ರವಾಸಿಗರ ಆಗಮನ ನಡುವೆ ಅಲ್ಲಲ್ಲಿ ಕೇಳಿಬರುವ ಲಯಬದ್ಧ ಸಂಗೀತ ನೋವು ನಲಿವಿರುವ ನಗುವಿನ ಗೂಡಿಗೆ ಎಷ್ಟೋ ಹೂಗಳು ಕಾಯುತಿರಬಹುದು ಕಡಲ ಬದಿಯ ಗಿಡದ ಎಲೆಯು ನಿನ್ನ ದಾರಿಯ ನೋಡುತಿದೆ ಮುಂಜಾನೆ ಸೂರ್ಯ ಉದಯಿಸುವ ಹೊತ್ತಿಗೆ ಗೋಗರ್ಭದಲ್ಲೊಂದು ಸಾವು !?ಯಾಕೆ ? ಹೇಗೆ ? ನಿಗೂಢ !?
