STORYMIRROR

mamta km

Fantasy Inspirational Children

4  

mamta km

Fantasy Inspirational Children

ಬಾರೇ ನನ್ನ ಮಲ್ಲಿಗೆ.

ಬಾರೇ ನನ್ನ ಮಲ್ಲಿಗೆ.

1 min
386

ಕಟ್ಟಲೇನು ಎರಡು ಜಡೆಯ, ಮಾಡಲೇನು ಮಲ್ಲೆ ಮುಡಿಯ,

ಶಾಲೆ ಇನ್ನೂ ದೂರ ಇಹುದು, ಭಯವು ಬೇಡ ಬೈವರೆಂದು.

ಬಾರೇ ಬೇಗ ಇಲ್ಲಿಗೆ.. ನನ್ನ ಮುದ್ದು ಮಲ್ಲಿಗೆ,

ರಜೆಯ ಮಜೆಯಾ ಸವಿದು ಬಿಡುವ, ಅಲ್ಲಿ ಇಲ್ಲಿ ಹೋಗಿ ಬರುವ,

ಕೂದಲನ್ನು ಕಟ್ಟಿ ಇಡುವ,ಗಾಳಿಗೆಲ್ಲ ಹಾರಿ ಗಂಟು,

ಆಗಿ ಬಿಡುವುದು.

ಪುಟ್ಟ ಮಗಳೇ ಬಾರೆ ಇಲ್ಲಿ,ನಿನ್ನ ಕೂದಲಂದ ಕಂಡು,

ನನ್ನ ಬಾಲ್ಯ ನೆನಪು ಆಗಿ, ಕಳೆದ ದಿನದ ನೆನಪುಗಳು

ಇಂದು ಕಾಡುತಿರುವುದು.

ಎಣ್ಣೆ ಹಚ್ಚಿ, ಮುಡಿಯ ಬಾಚಿ, ಎರಡು ಜಡೆಯ ಬೇಗ ಹಾಕಿ,

ಹೂವ ಮೂಡಿಸಿ ಅಮ್ಮ ಅಂದು, ನನಗೆ ದೃಷ್ಟಿ 

ತೆಗೆಯುತ್ತಿದ್ದಳು,


ಇಂದು ನಾನು ಅವಳ ಹಾಗೆ, ನೀನು ಜಾಣೆ ನನ್ನ ಹಾಗೆ,

ನಿನ್ನ ದಟ್ಟ ಹೆರಳ ಅಂದ, ನಿನ್ನ ಪ್ರೀತಿ ರಾಶಿ ಚಂದ,

ನಿನ್ನ ಮಗಳನಾಗಿ ಪಡೆದ, ನಾನೇ ಎನಿತು ಧನ್ಯವು.



Rate this content
Log in

Similar kannada poem from Fantasy