STORYMIRROR

Shilpa Pattanshetty

Abstract Fantasy Others

4  

Shilpa Pattanshetty

Abstract Fantasy Others

ಮುಂಗಾರು ಮಳೆ

ಮುಂಗಾರು ಮಳೆ

1 min
375

ಮುಂಗಾರಿನ ಮಳೆಯಲ್ಲಿ ಜಿಗಿದಾಡಿದ ನೆನಪು

ಸಿಗದ ಆಲಿಕಲ್ಲಿಗೆ ಬಟ್ಟಲು ಹಿಡಿದು ಹುಡುಕಾಡಿದ ನೆನಪು

ಗಾಳಿಯ ಅಬ್ಬರಕ್ಕೆ ಛತ್ರಿ ಮುರಿದುಕೊಂಡು ಬಂದ ನೆನಪು

ಮೊದಲ ಮಳೆಗೆ ನೆನೆದ ಮಣ್ಣಿನ ಸುವಾಸನೆಗೆ

 ಮೈ ಮರೆತು ನಿಂತ ನೆನಪು

ಮುಂಗಾರಿನ ಸಿಂಚನಕೆ ಮನ ನವಿಲಾಗಿ

ಅಂಗಳದ ತುಂಬೆಲ್ಲ ಕುಣಿದಾಡಿದ ನೆನಪು

ಸಾಲು ಸಾಲಾಗಿ ಪುಟ್ಟ ಪುಟ್ಟ ಕಾಗದದ ದೋಣಿಗಳನ್ನು ಮಾಡಿಬಿಟ್ಟ ನೆನಪು

ಗಗನಕ್ಕೆ ವದನ ತಾಕಿಸಿ ನಿಂತು

ಚಿಟಪಟ ಮಳೆಯ ಹನಿಗಳು ಮುಖದ ಮೇಲೆ ಬಿದ್ದಾಗ ಕಚಗುಳಿ ಇಟ್ಟಂತಾಗಿ ನಕ್ಕ ನಲಿದಾಡಿದ ನೆನಪು

ಭಾರಿ ಮಳೆಗೆ ಬಿದ್ದ ಮಾವಿನಕಾಯಿಗಳನ್ನು ಕದ್ದು ತಂದು ತಿಂದ ನೆನಪು

ಮಳೆ ನಿಂತರೂ ಮರದ ಹನಿ ಹೇಗೆ ನಿಲ್ಲುವುದಿಲ್ಲವೋ

ಹಾಗೆಯೇ ಬಾಲ್ಯ ಹೋದರೂ ಬಾಲ್ಯದ ನೆನಪು ಮಾಸುವುದಿಲ್ಲ


ನೆನಪುಗಳ ನೆನಪೇ ಮಧುರ

ನೆನಪುಗಳ ಭಾವ ಎಂದಿಗೂ ಅಮರ


Rate this content
Log in

Similar kannada poem from Abstract