ಸ್ವತಂತ್ರರಾದರೂ ತಪ್ಪಿಲ್ಲ
ಸ್ವತಂತ್ರರಾದರೂ ತಪ್ಪಿಲ್ಲ
ವೀರಮಣಿಯರ ತ್ಯಾಗ ಬಲಿದಾನದಿ
ಸ್ವಾತಂತ್ರ್ಯ ಸಿಕ್ಕಿದ ಶುಭದಿನದಿ
ಸಂಭ್ರಮದಿ ಆಚರಿಸುತ ನೆನೆಯುತ
ಕೆಚ್ಚೆದೆಯ ಭಾರತೀಯರು ನಾವು
ಹೆಮ್ಮೆಯ ಭಾರತಾಂಬೆಯ ಮಕ್ಕಳು ನಾವು
ಭಾರತ ಪುಣ್ಯ ಭೂಮಿಯಿದು
ಸ್ವಾತಂತ್ರ ಸಿಕ್ಕಿದ ದಿನವಿದು
ಸ್ವತಂತ್ರವಾಯಿತು ಪರಕೀಯರಿಂದ
ಅಸ್ಥಿರವಾಗಿದೆ ಸ್ವಜನ ಆಡಳಿತದಿಂದ
ನಿಸ್ವಾರ್ಥದಿ ಹೋರಾಡಿದರು ಅಂದು
ಸ್ವಾರ್ಥದಿ ಹೋರಾಡುವರು ಇಂದು
ಅಂದು ಇಂದು ಬದಲಾವಣೆ ಒಂದು
ಗೋಮುಖ ವ್ಯಾಘ್ರಗಳು ಇರುವರು ಇಂದು.
