ಸ್ತ್ರೀ ಶಕ್ತಿ
ಸ್ತ್ರೀ ಶಕ್ತಿ
ಅವಳು ಜನನಿ
ಅವಳು ಧರಣಿ
ಅವಳು ಸೃಷ್ಟಿಯ ಮೂಲ
ಅವಳು ಚಲಿಸುವ ಕಾಲ
ಅವಳದು ಮಮತೆಯ ಮಡಿಲು
ಅವಳದು ಕರುಣೆಯ ಕಡಲು
ಅವಳು ಆಸರೆಯ ಹೆಗಲು
ಅವಳು ಎಲ್ಲದಕ್ಕೂ ಮಿಗಿಲು
ಅವಳು ಶಕ್ತಿಯ ನಾನಾ ರೂಪ
ಅವಳು ಮನೆಯ ದೀಪ
ಅವಳು ಸ್ತ್ರೀ
ಹೌದು!!..ಅವಳು ಸ್ತ್ರೀ
ಶಕ್ತಿಯ ಸಮಾನಾರ್ಥಕ ಪದ
