ವರ್ಷಧಾರೆ
ವರ್ಷಧಾರೆ
ಪರ್ವತವನ್ನು ತಬ್ಬಿ ನಿಂತ ಹಿಮ
ಮಳೆ ಸುರಿದ ಮಣ್ಣಿನ ಘಮ
ಕೊರೆವ ಚಳಿ, ತಣ್ಣನೆ ಬೀಸುವ ಗಾಳಿ
ಹಸಿರನ್ನೇ ಹೊದ್ದು ಮಲಗಿದ ಭುವಿ
ಸುಳಿವ ತಂಗಾಳಿಗೆ ಜೋಕಾಲಿಯಂತೆ ಜೀಕುವ ಮುಂಗುರುಳು
ಚಾಚಿದ ಕೈಗಳಿಗೆ ಮುಗಿಲನ್ನೇ ಮುಟ್ಟಿದ ಭಾವ
ದಿಗಂತದಲ್ಲಿ ಸೇರಿದಂತೆ ಕಾಣುವ ಭೂಮಿ, ಭಾನು
ಕಣ್ಣನ ಸೆಳೆಯುವ ಕಾಮನಬಿಲ್ಲು
ಈ ಪ್ರಕೃತಿಯೇ ಒಂದು ವಿಸ್ಮಯ
ಈ ಸೊಬಗನ್ನು ಸವಿದವರು ತನ್ಮಯ
