STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ನಾನು ನೀನು

ನಾನು ನೀನು

1 min
166

ನನಗೆ ನೀನು

ನಿನಗೆ ನಾನು

ಒಟ್ಟು ಗೂಡಿ

ವಚನ ಇತ್ತು

ಸಪ್ತ ಪದಿಯ

ಅಡಿಯನಿಟ್ಟು

ಜೀವ ಜೀವ

ಬೆಸೆದುಕೊಂಡು

ನಿನ್ನ ಒಲವೆ

ನನ್ನ ಗೆಲುವು ಎಂದು ಹೇಳಿ

ಮುಂದೆ ನಡೆದ

ನಮ್ಮ ಬದುಕು

ನೀನು ಇರದೆ

ಇಂದು ಶೂನ್ಯ


ನಾನು ನೀನು 

ಸೇರಿಕೊಂಡು

 ಕಟ್ಟಿ ಕೊಂಡ

ನಮ್ಮ ಮನೆಯು

ನೀನು ಇರದೆ

ಇಂದು ಶೂನ್ಯ

ನಾನು ನೀನು

ಕೂಡಿ ಕಂಡ

ಕನಸು ಇಂದು

ಕಳೆದು ಹೋಗಿ

ಮನವು ಖಾಲಿ

ನೀನು ಇರದೆ

ನನಗೇನಿದೆ ?

ಜೀವದ ಜೀವ

ಓ ನನ್ನ ಇನಿಯ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract