STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಗೆಳೆಯರು

ಗೆಳೆಯರು

1 min
160


ಗೆಳೆಯರಿರಬೇಕು

ಎಲ್ಲಾ ಕಾಲದೊಳು

ಎಲ್ಲಾ ಮನುಜರಿಗು

ಉತ್ಸಾಹ ಉಲ್ಲಾಸ

ಉಕ್ಕೇರಿ ಹರಿಯಲು

ಗೆಳೆಯರಿರಬೇಕು

ಬಾಲ್ಯದೊಳಾಡಲು

ಹದಿ ಹರೆಯದಲಿ

ಹೃದಯ ನಿವೇದನಗೆ

ಮುಪ್ಪಿನೊಳೋ ?

ಮನದಳಲ ಹೊರಗೆಡಹಲು

ಇರಬೇಕು ಎಲ್ಲರಿಗೂ

ಗೆಳೆಯರಿರಬೇಕು

ಮನದಾಳದ ಮಾತುಗಳ

ಅಂತರಾಳದ ಗುಟ್ಟುಗಳ

ಅರುಹಲು ತಡಕುವವು

ಸಮಾನ ಹೃದಯಗಳಿಗೆ

ಸಹೃದಯ ಗೆಳೆಯರಿಗೆ

ಇರಬೇಕು ಎಂದೆಂದಿಗೂ

ಪರಮಾಪ್ತ ಗೆಳೆಯರು

ರಕುತ ಸಂಬಂಧಗಳ

ಬಂಧಗಳ ಮೀರಿಸುವ

ಅನುಬಂಧವಡಗಿಹುದು

ಈ ಸ್ನೇಹಬಂಧದೊಳು

ಈ ಬಿಗಿ ಬಂಧನಕೆ

ಇರಬೇಕು ಇರಬೇಕು

ಗೆಳಯರಿರಬೇಕು

ಗೆಳೆಯರಿಲ್ಲದ ಸಮಾರಂಭವಿಲ್ಲ

ಗೆಳೆಯರಿಲ್ಲದ ವಿಹಾರಗಳಿಲ್ಲ

ಗೆಳೆಯರಿಲ್ಲದ ಜೀವಿಗಳಿಲ್ಲ

ಗೆಳೆಯರಿಲ್ಲದ ಜೀವನವಿಲ್ಲ

ಇರಬೇಕು ಇರಬೇಕು

ಜೀವಕೆ ಜೀವ ಕೊಡುವ

ಜೀವದ ಗೆಳೆಯರು



Rate this content
Log in

Similar kannada poem from Abstract