Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prajna Raveesh

Tragedy Classics Others

4  

Prajna Raveesh

Tragedy Classics Others

ಅಂದು _ ಇಂದು

ಅಂದು _ ಇಂದು

1 min
248


ಅಂದಿನಂತಿಲ್ಲ ಇಂದಿನ ಜೀವನ

ಅಂದು ಬಡತನವಿದ್ದರೂ ಪ್ರೀತಿಗಿರಲಿಲ್ಲ ಯಾವುದೇ ಕೊರತೆ

ಇಂದು ಸಿರಿವಂತಿಕೆಯಿದ್ದರೂ ಹುಡುಕಬೇಕಾಗಿದೆ ಪ್ರೀತಿಯ ಒರತೆ!!


ಅಂದು ಹಣೆಯ ಮೇಲೆ ಇರುತ್ತಿತ್ತು ಅಗಲವಾದ ಬೊಟ್ಟು

ಇಂದು ಹಣೆಯ ಮೇಲೆ ಕಾಣುತ್ತಿಲ್ಲ ಯಾವುದೇ ಸಣ್ಣ ಬೊಟ್ಟು!!


ಅಂದು ಸೀರೆಯನುಟ್ಟು, ಕೈ ತುಂಬಾ ಬಳೆಯ ತೊಟ್ಟು, ಮುಡಿ ತುಂಬಾ ಹೂವನಿಟ್ಟು ನಾಚುತಿದ್ದಳು ನಾರಿ

ಇಂದು ಆಧುನಿಕ ಶೈಲಿಯ ಉಡುಪು ತೊಟ್ಟು, ಬೋಳು ಕೈ, ಸಣ್ಣ ಮುಡಿಯಲಿ ಹೂವು ಇಡದೇ ಇರುವಳು ನಾರಿ!!


ಅಂದು ಗಂಡು ಹೊಲದ ತುಂಬಾ ಬೆವರು ಹರಿಸಿ ದುಡಿದರೂ ಕೂಡ ತನ್ನ ಹೆಂಡತಿ, ಮಕ್ಕಳಿಗಾಗಿ ತುಸು ಸಮಯವನ್ನು ಖಾದಿರಿಸಿ, ಪ್ರೀತಿ ನೀಡುತ್ತಿದ್ದ

ಇಂದು ಗಂಡು ಬೆವರು ಸುರಿಸದೆ ಎಸಿಯ ಕೆಳಗೆ ಕುಳಿತು ಉದ್ಯೋಗ ಮಾಡುವುದಾದರೂ ಕೂಡ ಮೊಬೈಲ್, ಟಿವಿಯೇ ತನ್ನ ಬಳಗವೆಂಬಂತೆ ಇರುತ್ತಾನೆ ಹೆಚ್ಚಿನ ಸಮಯವನ್ನು ಅದರಲ್ಲಿಯೇ ಕಳೆಯುತ್ತಾ!!


ದಾಂಪತ್ಯದಲ್ಲಿ ವಿರಸವಾದರೂ ಕೂಡ ಇಬ್ಬರೂ ಒಬ್ಬರಿಗೊಬ್ಬರು ಅರಿತುಕೊಂಡು ತಾಳ್ಮೆಯಿಂದ ಜೀವನ ಸಾಗಿಸುತ್ತಿದ್ದರು ಅಂದು

ದಾಂಪತ್ಯದಲ್ಲಿ ವಿರಸವಾದೊಡೆ ಹೊಂದಾಣಿಕೆ ಕಷ್ಟವಾಗಿ ವಿಚ್ಛೇದನದನದವರೆಗೂ ತಲುಪುವರು ಇಂದು!!



Rate this content
Log in

Similar kannada poem from Tragedy