Read a tale of endurance, will & a daring fight against Covid. Click here for "The Stalwarts" by Soni Shalini.
Read a tale of endurance, will & a daring fight against Covid. Click here for "The Stalwarts" by Soni Shalini.

Kalpana Nath

Abstract Comedy Others

4  

Kalpana Nath

Abstract Comedy Others

ವಿದೇಶದ ಅನುಭವ

ವಿದೇಶದ ಅನುಭವ

1 min
17


 


 ಒಮ್ಮೆ ಒಂದು ಹಳ್ಳಿಯ ನಾಲ್ಕು ಯುವಕರಿಗೆ ವಿದೇಶ ಪ್ರಯಾಣ ಮಾಡುವ ಯೋಗ. ಇಷ್ಟವಿಲ್ಲದಿದ್ದರೂ ಒಪ್ಪಿ ಈ ಯುವಕರು ಹೊರಡಲು ತಯಾರಾದರು. ಹಳ್ಳಿಯ ವಾತಾವರಣದಲ್ಲಿ ಬೆಳೆದು ಬೇರೆ ಭಾಷೆಯೇ ಕೇಳಿಲ್ಲದ ಎಂದೂ ನಗರ ಜೀವನದ ಅನುಭವವೇ ಇಲ್ಲದ ಇವರಿಗೆ ವಿದೇಶ ಪ್ರಯಾಣ ಭಯ ಹುಟ್ಟಿಸಿತ್ತು. ಹೇಗೋ ಹೊರಡುವ ದಿನ ವಿಮಾನ ನಿಲ್ದಾಣಕ್ಕೆಬಂದಾಯ್ತು. ಅಂತೂ ವಿಮಾನ ಹತ್ತಿ ಅಲ್ಲಿ ಕೊಟ್ಟಿದ್ದೆಲ್ಲಾ ತಿಂದು ಅಮೆರಿಕಾದ ಕೆನೆಡಿ ವಿಮಾನ ನಿಲ್ದಾಣದಲ್ಲಿ ಬಂದು ಇಳಿದರು. ಅಲ್ಲಿಂದ ಈ ನಾಲ್ಕುಜನ ಒಂದೇ ಟ್ಯಾಕ್ಸಿಯಲ್ಲಿ ಬಂದು ಇಳಿದದ್ದು ನೂರ ಐವತ್ತು ಮಹಡಿಯ ಭೃಹತ್ ಕಟ್ಟಡದ ಮುಂದೆ. . ಇವರ ರೂಮು ನೂರನೇ ಮಹಡಿಯಲ್ಲಿ. ಎಲಿವೇಟರ್ ನಲ್ಲಿ ಹೇಗೆ ಹೋಗಬೇಕು ಅಂತ ಒಬ್ಬರು ತಿಳಿಸಿಕೊಟ್ಟು ಹೊರಟುಹೋದರು. ನೂರನೆ ಮಹಡಿಗೆ ಬಂದಾಗ ಹೋಟೆಲ್ ಸಿಬ್ಬಂದಿ ಇವರಿಗೆ ಸುಸಜ್ಜಿತ ವಾದ ದೊಡ್ಡ ರೂಮ್ ತೋರಿಸಿ ಹೊರಟು ಹೋದ. ಯಾವುದೋ ಅರಮನೆಗೆ ಬಂದ ಅನುಭವ ಜೊತೆಗೆ ಭಯ. ಸಂಜೆಯಾದಾಗ ಹೊರಗಡೆ ಹೋಗಿ ಸುತ್ತಿ ನೋಡಿ ಬರುವ ಆಸೆ. ಕೆಳಗೆ ಬಂದು ಒಟ್ಟಿಗೆ ಹೋಗುವ ಬದಲು ಬೇರೆ ಬೇರೆ ಹೋದರೆ ಅವರವರ ಅನುಭವ ಹಂಚಿಕೊಳ್ಳಬಹುದು ಅಂತ ನಾಲ್ಕು ದಿಕ್ಕಿಗೂ ಒಬ್ಬೊಬ್ಬರು ನಡದೇ ಹೊರಟರು. ಎಲ್ಲರ ಜೇಬಲ್ಲೂ ಹೋಟೆಲ್ ವಿಳಾಸ ದ ಕಾರ್ಡ್ ಇತ್ತು. ರಾತ್ರಿ ಎಲ್ಲರೂ ಬಂದಾಗ ಹತ್ತು ಗಂಟೆ. ಮೇಲೆ ಹೋಗಲು ಬಂದರೆ ಅಲ್ಲಿ ಒಂದು ಬೋರ್ಡ್ ಹಾಕಿದ್ದಾರೆ. ಅಲ್ಲಿನ ಲಿಫ್ಟ್ ಕೆಟ್ಟುಹೋಗಿ ಇನ್ನೂ ಆರುಗಂಟೆ ಸಮಯ ಆಗುತ್ತೆಂದು ಹೇಗೋ ತಿಳಿಯಿತು. ಅವರಲ್ಲಿ ಒಬ್ಬ ಹೇಳಿದ ನಾವು ಹಳ್ಳಿಯವರು ಇವರಂತೆ ಅಲ್ಲ. ಮಾತಾಡ್ತಾ ಬೆಟ್ಟ ಹತ್ತೋ ಹಾಗೇ ಹತ್ತೋಣ ಅಂತ ಯೋಚಿಸಿ ಹೊರಟರು. ಕಷ್ಟ ಪಟ್ಟು ಸುಸ್ತಾಗಿ ಹೇಗೋ ತೊಂಬತ್ತರ ಮಹಡಿ 

ಹತ್ತಿರ ಬಂದಾಗ ಒಬ್ಬ ಏನೂ ಮಾತಾಡದೆ ಸುಮ್ಮನೆ ಇರೋದನ್ನ ಮೂರೂ ಜನ ಗಮನಿಸಿ ಕೇಳಿದರು ಏನಾಯ್ತು. ಯಾಕೆ ಮಾತಾಡ್ತಾ ಇಲ್ಲ. ಅದಕ್ಕೆ ಹೇಳಿದ ನಾನು ಬಾಯಿಬಿಟ್ಟರೆ ನಿಮ್ಮ ಎದೆ ಒಡದೇ 

ಹೋಗುತ್ತೆ. ಎಲ್ಲಾ ಅಲ್ಲೇ ನಿಂತು ಹೆದರಿ ಮತ್ತೆ ಕೇಳಿದ್ರು ಏನೋ ಹಾಗಂದ್ರೆ. ಅವನು ಹೇಳ್ದ ಎಲ್ಲಾ ಸ್ವಲ್ಪ ಧೈರ್ಯ ವಾಗಿರಿ ವಿಷಯ ಹೇಳ್ತೀನಿ. ಏನಪ್ಪ ಅಂದ್ರೆ ಹೊರಡೋವಾಗ ರೂಮ್ ಬೀಗ ಹಾಕಿದ್ದು ನಾನೇ ತಾನೆ. ಆದರ ಬೀಗದ ಕೈ ಎಲ್ಲೋ ಕಳೆದು ಹೋಗಿದೆ. ! ಇದನ್ನ ಕೇಳಿದ ತಕ್ಷಣ ಮೂರೂ ಜನ ಥೊಪ್ ಅಂತ ಅಲ್ಲೇ ಕುಸಿದು ಬಿದ್ದರು.


Rate this content
Log in

More kannada story from Kalpana Nath

Similar kannada story from Abstract