STORYMIRROR

murali nath

Abstract Children Stories Others

3  

murali nath

Abstract Children Stories Others

ತಂದೆಯಂತೆ ಮಗ

ತಂದೆಯಂತೆ ಮಗ

2 mins
29



ಒಂದೂರಿನಲ್ಲಿ ಒಬ್ಬ ಅಗಸ . ಅವನಿಗೊಬ್ಬ ಮಗನಿದ್ದ.ಅವನ ಬಳಿ ಒಂದು ಕತ್ತೆ . ಹೀಗೆ ಜೀವನ ಸಾಗಿಸುತ್ತಿದ್ದ.ಒಂದು ಸಾರಿ ರಾಜನ ಬಟ್ಟೆಗಳನ್ನ ಒಗೆಯುವಾಗ ಹರಿದುಹೋಯ್ತು. ಬಹಳ ಹೆದರಿ ವಿಷಯ ತಿಳಿಸಿದಾಗ ಅದು ರಾಜನ ಬಹಳ ನೆಚ್ಚಿನ ದಿರಿಸು ಆಗಿದ್ದರಿಂದ ರಾಜನ ಕೋಪಕ್ಕೆ ತುತ್ತಾಗಿ ಊರೇ ಬಿಡಬೇಕಾಯಿತು.ಕತ್ತೆ ಮತ್ತು ಅವನ ಮಗನ ಜೊತೆ ಊರು ಬಿಟ್ಟು ಹೊರಟ . ಮುಂದಿನ ಜೀವನ ಹೇಗೆಂದು ಯೋಚಿಸುತ್ತಾ ಬರುತ್ತಿದ್ದಾಗ ಅಲ್ಲೊಂದು ಹಳೆಯ ಗುಡಿಸಲು ಕಂಡು ಅದರಲ್ಲೇ ಕೆಲವು ದಿನ ಕಳೆಯಬಹುದೆಂದು ಯೋಚಿಸಿ ಅದರಲ್ಲಿದ್ದಾಗ ಒಂದುದಿನ ಅವನ ಕತ್ತೆ ಮರಿ ಹಾಕಿ ಸತ್ತು ಹೋಯಿತು. ಮಗ ಬಹಳ ಚಿಕ್ಕವನಾದ್ದರಿಂದ ಅವನನ್ನ ಹೊರಗೆ ಕಳಿಸಿ ಸತ್ತ ಕತ್ತೆಯನ್ನ ಸಮಾಧಿ ಮಾಡಿಬಿಟ್ಟ.   ಕತ್ತೆ ಮರಿಯನ್ನ ಹೊರಗೆ ಕಟ್ಟಿಹಾಕಿ ಬೇಸರದಿಂದ ಕುಳಿತಿದ್ದಾಗ ಯಾರೋ ಬಂದು ಇವನು ಮಣ್ಣು ಮುಚ್ಚಿರುವುದನ್ನ ಏನೆಂದು ಕೇಳಿದರು. ನಮ್ಮ ಗುರುಗಳ ಸಮಾಧಿ . ಅವರ ಕೊನೆಯ ಆಸೆಯಂತೆ ಇಲ್ಲೇ ಸಮಾಧಿಯಾಗಿದ್ದಾರೆ ಎಂದು ಬಿಟ್ಟ. ಜೇಬಿನಿಂದ ಎರಡು ಬೆಳ್ಳಿ ನಾಣ್ಯಗಳ ತೆಗೆದು ಅದರ ಮೇಲಿಟ್ಟು ನಮಸ್ಕಾರ ಮಾಡಿ ಹೊರಟುಹೋದ .ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಊರಿನ ಜನರಷ್ಟೇ ಅಲ್ಲದೆ ಅಕ್ಕಪಕ್ಕ ಊರಿನವರು ಬರತೊಡಗಿ ಸಾಕಷ್ಟು ಹಣ ದೊರೆತು ಗುಡಿಸಲ ಸ್ಥಳ ಪುಣ್ಯ ಕ್ಷೇತ್ರವಾಯಿತು .


ಕೆಲವು

ವರ್ಷಗಳು ಕಳೆದು ಕತ್ತೆ ಮರಿಯೂ ದೊಡ್ಡ ದಾಗಿ ಅಪ್ಪ ಮಗನಿಗೆ ಹಣದ ವ್ಯವಹಾರದಲ್ಲಿ ಗಲಾಟೆಯಾಗಿ ಅವನು ಆ ಕತ್ತೆಯೊಂದಿಗೆ ಎಲ್ಲೋ ಹೊರಟು ಹೋದ.ಇವನಿಗೂ ವಯಸ್ಸಾಯಿತು ಅಷ್ಟೊಂದು ವ್ಯವಹಾರ ಮಾಡಲು ಕಷ್ಟವಾಯ್ತು. ಒಂದುದಿನ ಒಬ್ಬ ದೊಡ್ಡ ಮನುಷ್ಯ ಬಂದು ನಿಮಗೂ ವಯಸ್ಸಾಯಿತು ಮಗನೂ ನಿಮ್ಮೊಂದಿಗಿಲ್ಲ ವ್ಯವಹಾರವನ್ನು ನಾನು ನೋಡಿಕೊಂಡು ನಿಮ್ಮ ಖರ್ಚಿಗಾಗಿ ಸ್ವಲ್ಪ ಹಣ ಕೊಡುತ್ತೇನೆಂದು ಹೇಳಲು ಅದೇ ಸರಿಯಾದ ಸಲಹೆ ಎಂದು ಒಪ್ಪಿಕೊಂಡ. ತಾನು ಮತ್ತೊಂದು ಇಂತಹದೇ ಸಮಾಧಿಯ ವ್ಯವಹಾರವನ್ನುನೋಡಿಕೊಳ್ಳುತ್ತಿದ್ದೇನೆ ಬಂದು ನೋಡಿ ಎಂದಾಗ ಹೋಗಿ ನೋಡಿದ. ಅವನಿಗೆ ಆಶ್ಚರ್ಯ ಈ ಸಮಾಧಿ ಯಾರದೆಂದು ಕೇಳಿದಾಗ ನಿಮಗೆ ಮಾತ್ರ ತಿಳಿಸುತ್ತೇನೆ ಯಾರಿಗೂ ಗೊತ್ತಿಲ್ಲ ಇದು ನನ್ನ ಬಳಿ ನಮ್ಮ ಅಪ್ಪ ಕೊಟ್ಟ ಕತ್ತೆ ಒಂದಿತ್ತು ಅದು ಸತ್ತುಹೋದಾಗ ನನಗೆ ನಮ್ಮ ಅಪ್ಪ ಮಾಡುತ್ತಿದ್ದ ವ್ಯವಹಾರ ನೆನಪಾಗಿ ಇದನ್ನು ಮಾಡಿದೆ ಸಾಕಷ್ಟು ಹಣ ಗಳಿಸಿದೆ. ನಿಮ್ಮ ಬಗ್ಗೆ ಯಾರೋ ಹೇಳಿದ್ದರಿಂದ ನಿಮಗೆ ಸಹಾಯ ಮಾಡಲು ಒಪ್ಪಿಕೊಂಡೆ ಅಂದ ತಕ್ಷಣ ತಂದೆಗೆ ಹಿಂದಿನದೆಲ್ಲಾ ನೆನಪಾಗಿ ನೀನು ತಂದೆಗೆ ತಕ್ಕ ಮಗ ಎಂದು ಹೇಳಿ ನಾನು ಮಾಡಿರುವ ಸಮಾಧಿ ಇದರ ಅಮ್ಮನದು ಎಂದು ಇಷ್ಟು ವರ್ಷಗಳು ಮುಚ್ಚಿಟ್ಟಿದ್ದ ಸತ್ಯವನ್ನು ತಿಳಿಸಿದ.

 (ಶ್ರೀ ಶ್ರೀ ಶಿವಾನಂದ ಸ್ವಾಮಿಗಳ ಭಾಷಣದಿಂದ)

 . 



Rate this content
Log in

Similar kannada story from Abstract