ಸತ್ಯ ಘಟನೆ
ಸತ್ಯ ಘಟನೆ


ಒಂದು ಊರಿನಲ್ಲಿ ಒಬ್ಬ ನಿವೃತ್ತ ಮಾಸ್ತರು ಮಳೆಯಲ್ಲಿ ಛತ್ರಿ ಹಿಡಿದು ಮನೆಗೆ ಹೋಗ್ತಿದ್ರು ರಸ್ತೆಯಲ್ಲಿ ಮಳೆ ನೀರು ಅಲ್ಲಲ್ಲಿ ನಿಂತಿತ್ತು. ಜೋರಾಗಿ ಒಂದು ದೊಡ್ಡ ಕಾರ್ ಪಕ್ಕದಲ್ಲೇ ಹೋಗಿದ್ದರಿಂದ ಇವರ ಬಟ್ಟೆಗೆಲ್ಲಾ ಕೆಸರು ನೀರು ಹಾರಿ ಗಲೀಜು ಆಯ್ತು . ಕೋಪ ಬಂದು ಬೈದರು. ಕಣ್ಣು ಕಾಣಲ್ಲ ದುರಹಂಕಾರ ಜನಕ್ಕೆ ಹಣದ ಮದ ಅಂತ ಕೂಗಾಡಿದರು. ಸ್ವಲ್ಪದೂರ ಹೋಗಿ ನಿಂತ ಕಾರಿನಿಂದ ಒಬ್ಬ ಯುವಕ ಇಳಿದು ಬಂದು ಕ್ಷಮಿಸಿ ಸಾರ್ ನೋಡಲಿಲ್ಲ ತಪ್ಪಾಯ್ತು ಬನ್ನಿ ನಿಮ್ಮ ಮನೆ ಎಲ್ಲಿದೆ ನಾನೇ ಡ್ರಾಪ್ ಕೊಡ್ತೀನಿ ಅಂತ ಹೇಳಿದ . ಏನು ಬೇಡ ಇವಾಗ ಹೀಗೆ ಮಾತ ನಾಡೋ ಬದಲು ಮೊದಲೇ ಎಚ್ಚರಿಕೆ
ಇರಬೇಕಾಗಿತ್ತು ಅಂತ ಹೇಳಿದರು. ಅಲ್ಲಿದ್ದ ಜನರೆಲ್ಲ ಹೋಗಿ ಸಾರ್ ಮನೇವರೆಗೂ ಬಿಡ್ತಾರೆ ಕೋಪ ಮಾಡ್ಕೋ ಬೇಡಿ ಏನೋ ತಪ್ಪಾಯ್ತು ಒಳ್ಳೆಯವರು ಅಂತ ಕಾಣುತ್ತೆ ಇಲ್ಲದೆ ಇದ್ರೆ ಏಕೆ ನಿಲ್ಲಿಸಿ ಹಿಂದೆ ಬರ್ತಿದ್ರು ಅಂತ ಹೇಳಿ ಸಮಾಧಾನ ಮಾಡಿ ಹೇಗೋ ಕಾರ್ ಹತ್ಸಿದ್ರು. ಯುವಕ ಸೀದಾ ಒಂದು ಹೋಟೆಲ್ ಮುಂದೆ ತಂದು ನಿಲ್ಲಿಸಿ , ಸಾರ್ ತುಂಬಾ ಚಳಿ ಇದೆ ಒಂದು ಲೋಟ ಕಾಫೀ ಕುಡಿಯೋಣ ಆಮೇಲೆ ನಿಮ್ಮ ಮನೆಗೆ ಬಿಡ್ತೀನಿ ಬನ್ನಿ ಅಂದ . ಆಯ್ತು ಬೇಗ ಮನೆಗೆ ಹೋಗಬೇಕು ಅಂತ ಹೇಳಿ ಒಪ್ಪಿದರು. ಯುವಕನಿಗೆ ಹೋಟೆಲ್ ಓನರ್ ಪರಿಚಯ ಇದ್ದುದರಿಂದ ಒಳಗೆ ಹೋಗಿ ದೊಡ್ಡ ಪ್ಲೇಟ್ ನಲ್ಲಿ ಬಿಸಿ ಬಿಸಿ ಈರುಳ್ಳಿ ಪಕೋಡ ತಂದು ಕೊಡಕ್ಕೆ ಹೇಳಿದ.
ಸರ್ ಇಲ್ಲಿ ಈರುಳ್ಳಿ ಪಕೋಡ ಬಹಳ ರುಚಿಯಾಗಿರುತ್ತೆ ನಾನು ಬಂದಾಗೆಲ್ಲ ತಿಂತೀನಿ ಅನ್ನೋ ಹೊತ್ತಿಗೆ ಬಂದೇ ಬಿಡ್ತು ಪಕೋಡ .ಬೇಡ ಬೇಡ ಅಂತ ಹೇಳಿ ನಂತರ ಒಂದೇ ಒಂದು ತೋಗೋ ತೀನಿ ಅಂತ ಒಂದು ಎರಡು ಆಯ್ತು. ಪರವಾಗಿಲ್ಲ ಚೆನ್ನಾಗಿದೆ ಅಂತ ಇನ್ನೊಂದು ಸ್ವಲ್ಪ, ಮಾತಾಡ್ತಾ ಮಾತಾಡ್ತಾ ಪೂರ್ತಿ ಬೌಲ್ ಖಾಲಿ ಆಯ್ತು. ದೊಡ್ಡ ಲೋಟ ಕಾಫಿ ಬಂತು ಚೆನ್ನಾಗಿದೆ ಅಂತ ಬಿಸಿ ಕಾಫೀ ನೂ ಕಾಲಿ ಮಾಡಿದ್ರು.ಸಾರ್ ಸ್ವಲ್ಪ ಮಳೆ ಕಡಿಮೆ ಆಯ್ತು ಪಕ್ಕದಲ್ಲೇ ನಮ್ಮ ಮನೆ ಇದೆ .ನಮ್ಮಮನೆಗೆ ಹೋಗಿ ನಿಮ್ಮ ಮನೆಗ
ೆ ಹೋಗೋಣ ನೀವು ತಪ್ಪು ತಿಳಿದೇ ಇದ್ರೆ ಮಾತ್ರ ಅಂದ. ಒಪ್ಪಿದರು. ದೊಡ್ಡ ಬಂಗಲೆ. ಕಾರ್ ಹಾರ್ನ್ ಮಾಡಿದ ತಕ್ಷಣ ವಾಚ್ ಮ್ಯಾನ್ ಗೇಟ್ ತೆಗೆದು ಸಲಾಂ ಹೊಡೆದ . ಒಳಗಿನಿಂದ ಯುವಕನ ಹೆಂಡತಿ ಬಂದು ಹಿರಿಯರ ಕಾಲಿಗೆ ನಮಸ್ಕಾರ ಮಾಡಿದಳು.ಒಳಗೆ ಕರೆದರು. ಮೊದಲೇ ಯುವಕ ಎಲ್ಲವಿಷಯ ಹೆಂಡತಿಗೆ ಫೋನ್ ಮಾಡಿ ತಿಳಿಸಿದ್ದ. ಹೊರಡುವಾಗ ಒಂದು ಜೊತೆ ಬಿಳಿ ಪಂಚೆ ಶರ್ಟು ಶಾಲು ಹಣ್ಣು ಒಂದು ತಟ್ಟೆಯಲ್ಲಿ ಇಟ್ಟು ಇಬ್ಬರೂ ನಮಸ್ಕಾರ ಮಾಡಿದ್ರು.ಇವರಿಗೆ ಏನು ಮಾತನಾಡಬೇಕಂತಾನೆ ಗೊತ್ತಾಗ್ಲಿಲ್ಲ. ಅಲ್ಲಿಂದ ಮನೆಗೆ ಹೊರಟರು. ವಿಳಾಸ ಕೇಳಿ ಸರಿಯಾಗಿ ಇವರ ಮನೆಗೆ ಬರುವ ಹೊತ್ತಿಗೆ ಮಳೆ ನಿಂತಿದ್ದರೂ ಕರೆಂಟ್ ಇಲ್ಲದೆ ಎಲ್ಲಾಕಡೆ ಕತ್ತಲಾಗಿತ್ತು . ಕಾರಿನಿಂದ ಇಳಿದು ಮನೆಗೆ ಬಂದರು ಬಾಗಿಲು ತಟ್ಟಿದಾಗ ಒಳಗಿನಿಂದ ವಯಸ್ಸಾದ ಅವರ ಹೆಂಡತಿ ಬಂದು ಬಾಗಿಲು ತೆಗೆದು ಏನ್ರೀ ಇಷ್ಟೊತ್ತಾಯ್ತು ಮಳೆ ಬೇರೆ ಎಲ್ಲಿಗೆ ಹೋಗಿದ್ರಿ ಮನೇಲಿ ನಾನು ಒಬ್ಬಳೇ ಎಷ್ಟು ಹೆದರಿದ್ದೆ ಎಲ್ಲಿ ಹುಡ್ಕೋದು ನಿಮ್ಮನ್ನ .ಅಂತ ಒಂದೇ ಸಮ ಜೋರು ಧ್ವನಿಯಲ್ಲಿ ಕೂಗಾಡಿದರು. ಅಷ್ಟರಲ್ಲಿ ಎಲ್ಲಾ ಹೇಳ್ತೀನಿ ಈ ಹುಡುಗನನ್ನ ಒಳಕ್ಕೆ ಕರಿ ಅಂದರು ಯಾವ ಹುಡುಗ ಅಂತ ಮುಖದ ಹತ್ತಿರ ಕ್ಯಾಂಡಲ್ ಹಿಡಿದು, ಏ ಏನೋ ನೀನು ರಮೇಶ ಅಲ್ವೇ ಇವರು ಎಲ್ಲಿ ಸಿಕ್ಕಿದ್ರು ನಿನಗೆ , ಅಂದ ತಕ್ಷಣ ಮಾಸ್ಟರು ಯಾವ ರಮೇಶಾನೇ ಅಂತ ಕೇಳಿದ್ರು. ನಮ್ಮ ಮನೆಗೆ ತುಮಕೂರಿನಲ್ಲಿದ್ದಾಗ ಟ್ಯೂಷನ್ ಗೆ ಬರ್ತಿರ್ಲಿಲ್ಲವೇ ಅವನೇ ಅಂದ್ರು. ಅಯ್ಯೋ ಅದಕ್ಕೆ ಇವನು ಎನ್ಮಾಡಿದಾನೆ ಗೊತ್ತಾ ಒಳಗೆ ನಡಿ ಹೇಳ್ತೀನಿ. ನನಗೆ ಪಕೋಡ ಇಷ್ಟ ಅಂತ ತುಂಬಾ ಕೊಡಿಸಿ ದೊಡ್ಡಲೋಟ ಬಿಸಿ ಕಾಫಿ ಕೊಡ್ಸಿ ಮನೆಗೂ ಕರೆದು ಏನು ಕೊಟ್ಟಿದ್ದಾನೆ ನೋಡು ಅಂತ ಟೇಬಲ್ ಕಡೆ ಕೈ ತೋರ್ಸಿದ್ರು. ಸಾರ್ ನಾನು ಜೋರಾಗಿ ಮಳೆಯಲ್ಲಿ ಬಂದಾಗ ನಿಮಗೆ ನೀರು ಹಾರಿದ್ದು ಗಮನಿಸಿದೆ ಕೆಳಗೆ ಇಳಿದು ಬಂದಾಗಲೇ ಗೊತ್ತಾಯ್ತು ನೀವು ಯಾರು ಅಂತಾ ಆದ್ರೆ ಹೇಳ್ಲಿಲ್ಲ ಅಷ್ಟೇ ಸಾರ್ ಅಂದ. ಪರವಾಗಿಲ್ಲ ನೀನು ಅದೇ ರೀತೀ ಇದ್ದಿಯೇ ಸ್ವಲ್ಪನೂ ಬದಲಾವಣೆ ಆಗಿಲ್ಲ. ಸಂತೋಷ ಅಂದರು ಮೇಷ್ಟ್ರು.