ಪತ್ರ
ಪತ್ರ
ಪ್ರಿಯ ಗೆಳೆಯ ಸಂಕೇತ್
ನೀ ಆಡುವ ಮಾತೇ ನಮ್ಮಿಬ್ಬರ ನಡುವೆ ಗೋಡೆ ನಿಲ್ಲುವಂತೆ ಮಾಡುವೆ ಕಣೊ
ನಿನ್ನ ಪ್ರೀತಿ, ಒಲವು, ಅನುಮಾನವಾಗಿ ಪರಿಣಮಿಸಿದರೆ ನಾನೇನೂ ಮಾಡಲು ಸಾಧ್ಯವಿಲ್ಲ.
ಬಾಳಲ್ಲಿ ಸಾಕಷ್ಟು ಇಂತಹ ವಿಷಯಗಳಿಂದ ನೊಂದವಳು ನಾನು. ಮತ್ತೆ ಅದೇ ಪರಿಸ್ಥಿತಿ ಗೆ ಒಳಗಾಗೆನು.
ನಾನು ನಿನ್ನೊಬ್ಬನ ಸ್ವತ್ತು ಎನ್ನುವ ರೀತಿಯಲ್ಲಿ ನೀ ನಡೆದುಕೊಂಡರೆ ಅದಕ್ಕೆ ಬದ್ದಳಾಗಿರಲು ಸಾಧ್ಯವಿಲ್ಲ .
ಸದಾ ಮಾತು ಕಥೆ ಹರಟೆಗಳಲ್ಲಿ ಕಾಲ ಕಳೆಯುವ ಹುಡುಗಿಯಂತೂ ನಾನಲ್ಲ.
ಜೀವನದಲ್ಲಿ ನನ್ನದೇ ಆದ ಧ್ಯೇಯ ವಿದೆ. ನನ್ನದೇ ಆದ ನಿಯಮಗಳಿವೆ ಅದನ್ನು ಯಾರಿಗಾಗೂ ಬಿಡಲು ಸಾಧ್ಯವಿಲ್ಲ.
ನಿನಗಾಗಿ ನಾನು ಬದಲಾಗಲಾರೆ . ಹಾಗೆ ನೀನು ಬದಲಾಗಬೇಕಿಲ್ಲ .
ಕೆಲವೊಂದು ನಡೆವ ದಾರಿ ಸರಿ ಇಲ್ಲದಾಗ ಕೆಲವು ಸಲಹೆಗಳನ್ನು ಒಬ್ಬರಿಗೊಬ್ಬರು ಕೊಡಬಹುದೇ ವಿನಃ
ಜೀವನದ ಧ್ಯೇಯಗಳನ್ನು ಬಿಟ್ಟು ಕೊಡಬಾರದು.
ಇದು ನಾನು. ನಾನು ಹೀಗೆ ಇದ್ದರೀತಿಯಲ್ಲಿ ನನ್ನ ಸ್ನೇಹ ಒಪ್ಪಿಕೊಳ್ಳುವುದಾದರೆ ನಾವು ಸ್ನೇಹಿತರಾಗಿ ಮುಂದುವರೆಯಬಹುದು.
ಅದು ಬಿಟ್ಟು ನೀನು ನನ್ನ ಮೇಲೆ ಅಧಿಕಾರ ಚಲಾಯಿಸುವ ರೀತಿಯಲ್ಲಿ ನಿನ್ನ ನಡವಳಿಕೆ ಬದಲಾದರೆ ಇಲ್ಲಿಗೆ ನಮ್ಮ ಗೆಳೆತನದ ಅಂತ್ಯವಾಗುವುದು ಸತ್ಯ.
ಯಾರ ಬಳಿ ಮಾತಾಡುವೆ? ಹೇಗೆ ಮಾತಾಡುವೆ.ಇದು ನನ್ನ ವೈಯುಕ್ತಿಕ ವಿಷಯ.
ನೀ ಆಡುವ ಚುಚ್ಚು ಮಾತು. ಅನುಮಾನದ ಪದಗಳನ್ನು ಕೇಳಿಸಿಕೊಂಡು ಹಲವು ಬಾರಿ ಸುಮ್ಮನಾದರೂ.
ಪದೇ ಪದೇ ಇದೇ ರೀತಿ ನೀ ನಡೆಯಲು ನನ್ನ ಮನಸ್ಸು ನೊಂದಿದೆ.
ನಮ್ಮಿಬ್ಬರ ನಡುವೆ ಅಂತರವೇ ಒಳಿತು ಹಂ ಹೌದು ಇದೇ ಸರಿ
ವಿದಾಯ ಗೆಳೆಯ
ನಿನ್ನ ಗೆಳತಿ
ಶರ್ಮಿಲಿ

