Vijaya Bharathi.A.S.

Abstract Classics Children

3  

Vijaya Bharathi.A.S.

Abstract Classics Children

ಪರೋಪಕಾರಿ

ಪರೋಪಕಾರಿ

1 min
152


ಅಂದು ರಸ್ತೆಯಲ್ಲಿ ಒಬ್ಬನೇ ನಡೆದು ಹೋಗುತ್ತಿದ್ದ ಪಾಪಣ್ಣ, ಕಾಲೇಜಿಗೆ ಹೋಗುವುದಕ್ಕೆ ಸಿಟಿ ಬಸ್ ಹಿಡಿಯಲು ಬಸ್ ಸ್ಟಾಪ್ ಕಡೆ ಸರಸರ ಹೋಗುತ್ತಿದ್ದ.  ಸದಾ ಕಾಲ ಗಿಜಿಗುಡುವ ದಟ್ಟವಾಗಿದ್ದ ರಸ್ತೆಯಲ್ಲಿಇವನೊಬ್ಬನೇ ನಡೆದುಕೊಂಡು ಹೋಗುತ್ತಿದ್ದಾಗ, ರಸ್ತೆಯ ಎದುರು ಬದಿಯಲ್ಲಿ ಒಬ್ಬ ಕುರುಡಿ, ಕೋಲನ್ನು ಕುಟ್ಟಿಕೊಂಡು ಬರುವುದನ್ನು ನೋಡಿದ ಪಾಪಣ್ಣ, ತಕ್ಷಣ ರಸ್ತೆಯ ಆ ಕಡೆಗೆ ಹೋಗಿ, ಅವಳ ಕೈ ಹಿಡಿದು ಕೊಂಡು, ಅವಳನ್ನು ಎಲ್ಲಿಗೆ ಹೋಗಬೇಕೆಂದು ಕೇಳಿ, ಅವಳನ್ನು ರಸ್ತೆಯ ಆ ಬದಿಯಿಂದ ಈ ಬದಿಗೆ ಬಿಟ್ಟ. 

ಅಷ್ಟರಲ್ಲಿ ಅವನ ಕಾಲೇಜಿಗೆ ಹೋಗುವ ಮೂರು ಬಸ್ ಗಳು ಹೊರಟು ಹೋಗಿ, ಅವನಿಗೆ ಮೊದಲೆರಡು ಕ್ಲಾಸ್ ಗಳು ಮಿಸ್ ಆದವು. 


ಆದರೆ ಪಾಪಣ್ಣನಿಗೆ ಒಬ್ಬ ಕುರುಡಿಗೆ ಸಹಾಯ ಮಾಡಿದ ಬಗ್ಗೆ ಆತ್ಮತೃಪ್ತಿ ಸಿಕ್ಕಿತ್ತು.



Rate this content
Log in

Similar kannada story from Abstract