Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಮುಖವಾಡ

ಮುಖವಾಡ

2 mins
11


ನೂರಾರು ಕನಸುಗಳನ್ನು ಹೊತ್ತು,ಗಂಡನ ಮನೆಯ ಮೆಟ್ಟಕ್ಕಿ ತುಳಿದು ,ಒಳಗೆ ಹೋದ ರಮ್ಯಾಳಿಗೆ ಆ ಮನೆಗೆ ಹೋದ ದಿನದಿಂದಲೂ ಒಂದಲ್ಲ ಒಂದು ಕಿರುಕುಳ. ಮೇಲ್ನೋಟಕ್ಕೆ ಅವಳ ಗಂಡ ಮತ್ತು ಅತ್ತೆ ಇಬ್ಬರೂ ಬೆಣ್ಣೆಯಂತಹ ಮಾತುಗಳನ್ನು ಆಡುತ್ತಾ, ಹೊರಗಿನ ಜಗತ್ತಿಗೆ ಅವರಂತಹ ಒಳ್ಳೆಯವರು ಬೇರೆ ಯಾರೂ ಇಲ್ಲ ಎಂದು ತೋರಿಸಿ ಕೊಳ್ಳುತ್ತಿದ್ದರು. ಆದರೆ ಅವರಿಬ್ಬರ ಮನಸ್ಸಿನೊಳಗೆ ರಮ್ಯಾಳ ಬಗ್ಗೆ ವಿಷವನ್ನೇ ತುಂಬಿ ಕೊಂಡಿದ್ದರು.ಅವಳು ಕೂತರೆ ತಪ್ಪು,ನಿಂತರೆ ತಪ್ಪು,ಮಲಗಿದರೆ ತಪ್ಪು, ಉಂಡರೆ ತಪ್ಪು, ಏನು ಮಾಡಿದರೂ ತಪ್ಪು ತೆಗೆಯುತ್ತಾ ಒಂದಲ್ಲ ಒಂದು ಕಾರಣಕ್ಕೆ ಅವಳನ್ನು ಕಣ್ಣೀರಿನಿಂದ ಕೈ ತೊಳೆಯುವಂತೆ ಮಾಡುತ್ತಿದ್ದರು.

ಕೇವಲ ಇಪ್ಪತ್ತು ವರ್ಷದ ರಮ್ಯಾಳಿಗೆ ,ಗಂಡ ನೆಂದರೆ ಒಂದು ಸುಂದರ ಕಲ್ಪನೆ ಇತ್ತು. ಆದರೆ ಅವಳು ಪಾಲಿಗೆ ಆ ಸುಂದರ ಕಲ್ಪನೆ , ನಿಜವಾಗಲಿಲ್ಲ. ಅವಳಿಗೆ ಗಂಡ, ಮದುವೆ ಎಲ್ಲವೂ ಭ್ರಮನಿರಸನ ವಾಗತೊಡಗಿತು.

ಒಂದು ವರ್ಷದ ಒಳಗೆ ಅವಳಿಗೆ ಜೀವನದ ಬಗ್ಗೆ ನಿರುತ್ಸಾಹ ಶುರುವಾಯಿತು. ಎಷ್ಟೋ ಸಲ ತನಗೆ ಆಗುತ್ತಿರುವ ನೋವುಗಳನ್ನು ತನ್ನ ಅಮ್ಮನ ಜೊತೆಯಲ್ಲಿ ಹೇಳಿಕೊಂಡು ಅಳುತ್ತಾ ಇದ್ದಾಗ, ಅವಳ ಅಮ್ಮನಿಗೂ ತುಂಬಾ ನೋವಾಗಿ ಮಗಳ ಜೊತೆ ಕಣ್ಣೀರು ಸುರಿಸುತ್ತಿದ್ದರು. ಹೊರಗಡೆಯವರ ಕಣ್ಣಿಗೆ ಅವಳ ಗಂಡನ ಮನೆಯವರು ಸಭ್ಯರಂತೆಯೇ ಕಾಣುತ್ತಿದ್ದರಿಂದ, ಬೇರೆಯವರು ಯಾರೂ ರಮ್ಯಾ ಹೇಳಿದ್ದನ್ನು ನಂಬುತ್ತಿರಲಿಲ್ಲ. ಮಗಳ ಕಣ್ಣೀರನ್ನು ನೋಡಲಾಗದೆ ಕಡೆಗೆ ಅವಳ ಅಪ್ಪ, ಮಗಳಿಗೆ ವಿಚ್ಛೇದನವನ್ನಾದರೂ ಕೊಡಿಸಿ ಬಿಡೋಣ ಅಂತ ವಕೀಲರನ್ನು ಕೇಳಿದಾಗ, ವಿಚ್ಛೇದನಕ್ಕೆ ಪೂರಕವಾದ ಯಾವ ಅಂಶವೂ ಅವರ ಅಳಿಯ ನಲ್ಲಿ ಕಾಣುತ್ತಿರಲಿಲ್ಲ. ಹೀಗಾಗಿ ವಿಚ್ಛೇದನ ಸುಲಭವಲ್ಲ ಅಂತ ಹೇಳಿ ಬಿಟ್ಟಾಗ,ರಮ್ಯಾಳ ತಂದೆ ಗೆ ಮುಂದೇನು ಎಂಬ ಯೋಚನೆ ಅಂಟಿಕೊಂಡಿತು.ಜೊತೆಗೆ ತಾನು ರಮ್ಯಾಗೆ ವಿಚ್ಛೇದನ ಕೊಡುವುದಿಲ್ಲ ಎಂದು ಅವನ ಅಳಿಯನೂ ಪಟ್ಟು ಹಿಡಿದಿದ್ದರಿಂದ ಮಗಳ ಸಮಸ್ಯೆಗೆ ಪರಿಹಾರ ಏನೆಂದು ಹುಡುಕುತ್ತಾ ಇದ್ದರು.

ಒಲ್ಲದ ಗಂಡ, ಕಿರಿಕಿರಿ ಯ ಅತ್ತೆ, ಅಸಹಾಯಕ ಮಾವನೊಂದಿಗೆ ರಮ್ಯಾ ದಿನವನ್ನು ದೂಡುತ್ತಿದ್ದಳು.

ಬರಬರುತ್ತಾ ರಮ್ಯಾಳಿಗೆ , ಅತ್ತೆಯ ಮತ್ತು ಗಂಡನ ಮತ್ತೊಂದು ಮುಖ ಅನಾವರಣವಾಗುತ್ತಾ ಹೋಯಿತು.

ತನ್ನ ಅಪ್ಪ ಅವರ ಹೆಸರಿನಲ್ಲಿ ಇದ್ದ ಮನೆಯನ್ನು ತನ್ನ ತಮ್ಮನಿಗೆ ಮಾಡಿದ್ದು, ತನ್ನ ಗಂಡ ಮತ್ತು ಅತ್ತೆ ಗೆ ಇಷ್ಟ ವಾಗಲಿಲ್ಲ ವೆಂಬ ಸತ್ಯ ಗೊತ್ತಾಯಿತು. ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿರುವ ಬಗ್ಗೆ ಮಾತನ್ನು ತೆಗೆದು, ರಮ್ಯಾಳಿಗೆ ಕಿರಿಕಿರಿ ಮಾಡುತ್ತಿದ್ದರು.

ಆದರೆ ರಮ್ಯಾ ಇವರ ಮಾತುಗಳಿಗೆ ಕಿವಿಗೊಡದೇ ಸುಮ್ಮನಿರುತ್ತಿದ್ದರೆ ಅದನ್ನು ಸಹಿಸುತ್ತಿರಲಿಲ್ಲ.

ಹೊರಗಡೆ ಯ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಮದುವೆ ಮುಂಜಿ ಗೃಹಪ್ರವೇಶ ಗಳಲ್ಲಿ ಪಾಲ್ಗೊಳ್ಳಲು ಹೆಂಡತಿಯನ್ನು ಶೋ ಪೀಸ್ ಐಟಂ ತರಹ ಕರೆದೊಯ್ಯುವ ರಮ್ಯಾಳ ಗಂಡ ಮನೆಗೆ ಬಂದಾಗ ತನ್ನ ಮನಸ್ಸಿನ ಕಹಿಯನ್ನು ಕಕ್ಕುತ್ತಿದ್ದ.

ನಡೆಯೊಂದು ಪರಿ ನುಡಿಯೊಂದು ಪರಿ, ಡಂಭಕತನದ ಮುಖವಾಡ ತೊಟ್ಟ ಗಂಡನ ಮೇಲೆ ರಮ್ಯಾಳಿಗೆ ತುಂಬಾ ಜುಗುಪ್ಸೆ ಬಂದು, ಕಡೆಗೂ ಧೈರ್ಯ ಮಾಡಿ ವಿಚ್ಛೇದನಕ್ಕೆ ಅರ್ಜಿ ಹಾಕಿಯೇ ಬಿಟ್ಟಳು.ಕೇವಲ ಹೆಂಡತಿಯಾಗಿ ಮನೆಯ ಸೊಸೆಯಾಗಿ, ಎರಡು ಹೊತ್ತಿನ ಕೂಳಿಗೆ ತೊತ್ತಿನ ಆಳಾಗಿ ಸದಾ ದುಡಿಯುವ ಯಂತ್ವಾಗಿ ಜೀವಚ್ಛವ ದಂತೆ ಬದುಕುವ ಬದಲು, ಈ ವಿಷವರ್ತುಲದಿಂದ ಹೊರಗೆ ಬಂದು ಸ್ವತಂತ್ರವಾಗಿ ಇರಬೇಕೆಂದು ನಿರ್ಧರಿಸಿದ್ದಳು.

ಆದರೆ ರಮ್ಯಾ ಳ ಗಂಡ ಅವಳಿಗೆ ವಿಚ್ಛೇದನ ಕೊಡಲು ಬಡಪೆಟ್ಟಿಗೆ ಒಪ್ಪಲಿಲ್ಲ. ಅವಳು ತನಗೆ ಅವನಿಂದ ಯಾವ ಜೀವನಾಂಶ ವೂ ಬೇಡವೆಂದು ಬರೆದುಕೊಟ್ಟ ನಂತರ, ಅವನು ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿದ.

ಅಕಾಡೆಮಿಯ ಪದವಿಗಳನ್ನು ಪಡೆದು, ಗಣ್ಯ ವೃತ್ತಿಯಲ್ಲಿ ಇದ್ದೂ ಸಹ ಮನಸ್ಸಿನ ತುಂಬಾ ವಿಷ ತುಂಬಿಕೊಂಡಿದ್ದ ತನ್ನ ಗಂಡನಿಂದ ವಿಚ್ಛೇದನ ಪಡೆದು ಸ್ವತಂತ್ರ ಳಾದ ರಮ್ಯಾ, ನೆಮ್ಮದಿಯ ನಿಟ್ಟುಸಿರು ಬಿಟ್ಟಳು.ಮನಸ್ಸಿನೊಳಗಿರುವ ವಿಷಕ್ಕೆ ಯಾವ ಔಷಧಿ ಇದೆ?


Rate this content
Log in

Similar kannada story from Abstract