Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ವೈಲೆಟ್ ಸೀರೆ

ವೈಲೆಟ್ ಸೀರೆ

2 mins
8



ಪ್ರಣತಿ ತನ್ನ ವಾರ್ಡ್ರೋಬ್ ನಲಿರುವ ಬಟ್ಟೆಗಳನ್ನೆಲ್ಲಾ ಕೆದರಿ ಗೂರಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಮಗಳ ರೂಮಿಗೆ ಬಂದ

ಅವಳ ಅಮ್ಮ ಅಂಬುಜ, 

"ಇದೇನೆ ಪ್ರಣತಿ ಹೀಗೆ ಬಟ್ಟೆಗಳನ್ನೆಲ್ಲ ಗೂರಾಡುತ್ತಿದ್ದೀಯಾ? ನನಗೆ ನಿನ್ನ ಮತ್ತು ಪ್ರತಾಪ್ ನ ವಾರ್ಡ್ ರೋಬ್ ಗಳನ್ನು ಸರಿಯಾಗಿ ಜೋಡಿಸುವುದಕ್ಕೆ ದಿನದಲ್ಲಿ ಸಮ್ಯ ಸಾಕಾಗುವುದಿಲ್ಲ, ಈಗ ಹರಡಿ ಬಿಟ್ಟಿದ್ದು ಹೆಚ್ಚಲ್ಲ, ಎಲ್ಲವನ್ನೂ ನೀಟ್ ಆಗಿ ಜೋಡಿಸಿಟ್ಟುಕೊಳ್ಳದಿದ್ದರೆ ನಾಣು ಸುಮ್ಮನಿರುವುದಿಲ್ಲ ನೋಡು" ಗದರಿದರು.

"ಅಮ್ಮಾ, ನಿಂದೊಂದು ಗೋಳು ಯಾವಾಗಲೂ ಕ್ಲೀನ್ ಕ್ಲೀನ್ ಅಂತ ಹೇಳುತ್ತಲೇ ಇರುತ್ತೀಯ , ನನಗೆ ನನ್ನ ನೇರಳೆ ಸೆರಗಿರುವ ಬಿಳಿಯ ಹೂಗಳಿಂದ ತ್ಂಬಿರುವ ನೇರಳೆ ಬಣ್ಣದ ಸೀರೆ ಇವತ್ತಿಗೆ ಬೇಕೇ ಬೇಕು, ನನಗೆ ಸ್ವಲ್ಪ ಸಹಾಯ ಮಾಡುತ್ತೀಯ?" 

ಪ್ರಣತಿ ಅಮ್ಮನನ್ನೇ ಮೊರೆ ಹೊಕ್ಕಳು.

"ಅಯ್ಯೋ ಈಗ ನಾನು ಅಡುಗೆ ಮಾಡಬೇಕು, ನೀನೇ ಹು್ಡುಕಿಕೋ ಅಲ್ಲೇಎ ಈ ನಿನ್ನ ಬಟ್ಟೆ ಗಾರ್ಬೆಜ್ ನಲ್ಲಿ ಮರೆಯಾಗಿ ಇರುತ್ತದೆ. ಆದರೆ ಒಂದು ಮಾತು,ನೀನು ನನ್ನ ವಾರ್ಡ್ ರೋಬ್ ತಂಟೆಗಂತೂ ಬರಲೇ ಬೇಡ." 

ಮಗಳಿಗೆ ತಾಕೀತು ಮಾಡೀ ಹೊರಟಾರು ಅಂಬುಜ. 


’ಅಯ್ಯೋ ಈ ಅಮ್ಮ ನನಗೆ ಹೆಲ್ಪ್ ಮಾಡದಿದ್ದರೂ ಸರಿ ನನ್ನ ಮೇಲೆ ಕೂಗಾಡಿ ಹೋದಳು. ನಾನೇ ಹುಡುಕಿಕೊಳ್ಳುತ್ತೇನೆ.ಆದರೆ ಇನ್ನು ಹತ್ತು ನಿಮಿಷದೊಳಗೆ ಅದು ಸಿಗಬೇಕು,ಇಲ್ಲವಾದರೆ ವಾರುಣಿ ಬಾಮ್ದು ಬಿಡುತ್ತಾಳೆ’ ಎಂದುಕೊಂಡ ಪ್ರಣತಿ, ವಾರ್ಡ್ ರೋಬ್ ನಲ್ಲಿದ್ದ ಎಲ್ಲಾ ಬಟ್ಟೆಗಳನ್ನೂ ತಳಾಮೇಲು ಮಾಡಿ ಆ ನೇರಳೆ ಬಣ್ಣದ ಸೀರೆಗೆ ಹುಡುಕುತ್ತಾ ಹೋದಳು. ಅವಳು ಹುಡುಕುತ್ತಿದ್ದಾಗ ಅವಳ ಫ಼್ರೆಂಡ್ ವಾರಿಣಿ ಬಂದೇ ಬಿಟ್ಟಳು.ಅವಳು ನೇರವಾಗಿ ಪ್ರಣತಿಯ ರೂಮಿನೊಳಗೇ ಬಂದು 

"ಇದೇನೆ ರಣತಿ ಇನ್ನು ರೆಡಿಯಾಗಿಲ್ಲವಾ? ಈಗಾಗಲೇ ಐದು ಗಂಟೆ, ಆರು ಗಂಟೆಗೆಲ್ಲಾ ಪ್ರೋಗ್ರಾಂ ಶುರುವಾಗಿ ಬಿಡುತ್ತದೆ. ಹರಿ ಅಪ್ ಯಾರ್" ಅಂತ ಒಂದೇ ಸಮನೆ ಅವಳನ್ನು ಅವಸರಿಸಿದಳು.. 

"ಅಯ್ಯೋ ವಾರಿಣಿ, ನನಗೆ ನೇರಳೆ ಸರಿಗಿನಲ್ಲಿ ಬಿಳಿ ಹೂಗೊಂಚಲಿರುವ ಆ ಸೀರೆ ಯನ್ನು ತುಂಬಾ ಹೊತ್ತಿನಿಂದ ಹುಡುಕುತ್ತಿದ್ದೇನೆ. ಸಿಗುತ್ತಿಲ್ಲ ಕಣೆ. ನನಗೆ ಆಸೀರೆಯ ಹಿಂದೆ ಅದೆಂತದೋ ಒಂದು ಎಮೋಷನಲ್ ಅಟಾಚ್ ಮೆಂಟ್ ಕಣೆ."

"ಸರಿ ಈ ಕಡೆ ಬಾ, ನಾನು ನಿನಗೆ ಹೆಲ್ಪ್ ಮಾಡುತ್ತೇನೆ." 

ವಾರುಣಿ , ಪ್ರಣತಿಯನ್ನು ಪಕ್ಕಕ್ಕೆ ಸರಿಸಿ, ಆ ಸೀರೆಗಾಗಿ ಹುಡುಕಾಡಿದಳು. 

ಕಡೆಗೂ ಆ ಸೀರೆ ಯಾವುದೋ ಸೀರೆಯ ಜೊತೆ ಜಂಟಿ ಹಾಕಿಕೊಂಡು ಇದ್ದದ್ದನ್ನು ಅವಳು ಹೊರಗೆ ತೆಗೆದು, ಪ್ರಣತಿಯ ಮುಂದೆ ಹಿಡಿದು 

"ತೋಗೊ ನಿನ್ನ ಫ಼ೇವರೇಟ್ ಸೀರೆ ಇಲ್ಲೇ ಇತ್ತಲ್ಲೇ, ಅದೇನು ಹುಡುಕಿದೆಯೋ? " ಅಂತ ಗೆಳತಿಯನ್ನು ಛೇಡಿಸುತ್ತಾ ಅವಳ ಕೈಗೆ ಕೊಟ್ಟಳು. ಸರಿ ಈಗ ನೀನು ಬೇಗ ರೆಡಿ ಆಗು,ನಾನು ಹೊರಗೆ ಆಂಟಿಯ ಜೊತೆ ಮಾತನಾಡುತ್ತಿರುತ್ತೇನೆ" ಅಂತ ಹೇಳಿ ವಾರುಣಿ 

ಹೊರಗೆ ಹೋದಾಗ, ಪ್ರಣತಿ ಆ ನೇರಳೆಬಣ್ಣದ ಮೇಲೆ ಬಿಳಿಯ ಹೂಗೊಂಚಲುಗಳಿರುವು ಸೀರೆ ಮೇಲೆ ಕೈಯ್ಯಾಡಿಸುತ್ತಾ,

ಭಾವ ಲೋಕಕ್ಕೆ ಜಾರಿದಳು.

’ ಈ ಸೀರೆ ಅಂದರೆ ನನಗೇ ಅವನೇ ನೆನಪಾಗುತ್ತಾನೆ. ತನ್ನ ಕಾಲೇಜಿನ ಗೆಳೆಯ ನಂತರ ಪ್ರಿಯಕರನಾಗಿರುವ ಪ್ರತಾಪ್, 

ನನ್ನ ಬರ್ತ್ ಡೇಗೆ ಕೊಟ್ಟಿದ್ದ. ನನಗೆ ವೈಲೆಟ್ ಕಲರ್ ಅಂದರೆ ಇಷ್ಟವೆಂದು ಅವನ ಎದುರಿಗೆ ಹೇಳಿದಾಗ ಅವನು ಈ ಕಲರ್ ಸೀರೆ ಕೊಟ್ಟಿದ್ದ. ನಂತರ ಅವನು ಅದಕ್ಕೆ ಕಾರಣವನ್ನು ನೀಡಿದ್ದ. ತುಂಬಾ ಬುದ್ಧಿವಂತೆ ಭಾವುಕಳಗಿರುವ ನನಗೆ ಈ ವೈಲೆಟ್ ಕಲರ್ ಚೆನ್ನಾಗಿ ಒಪ್ಪುತ್ತದೆ ಅಂತ ವಿವರಣೆ ನೀಡಿದ್ದ. ಅವನ ಪ್ರೀತಿಯ ಸಂಕೇತ ಈ ಸೀರೆ. ಅದನ್ನೇ ಉಟ್ಟುಕೊಂಡರೆ ಅವನಿಗೂ ಖುಷಿಯಾಗುತ್ತದೆ.’

 ಬಣ್ಣಾ....ನನ್ನ ಒಲವಿನ ಬಣ್ಣ....ನನ್ನ ಬದುಕಿನ ಬಣ್ಣ ಅಂತ ಹಾಡು ಗುನಿಗಿಕೊಳ್ಳುತ್ತಾ, ಆ ಸೀರೆಯನ್ನು ಉಟ್ಟು ಕನ್ನಡಿಯ ಮುಂದೆ ನಿಂತು ನೂರು ಸಲ ತಿರುಗಿ ತಿರುಗಿ ನೋಡಿಕೊಳ್ಳುತ್ತಾ, ಆ ನೇರಳೆ ಬಣ್ಣಕ್ಕೆ ಹೊಂದುವ ಬಿಂದಿ, ಬಳಿ ,ಸರ ,ಕ್ಲಿಪ್ ಗಳನ್ನು ಹಾಕಿಕೊಂಡು ಹೊರಗೆ ಬಂದಾಗ, ವಾರುಣಿಗೆ ಗೆಳತಿಯನ್ನು ನೋಡಿ ಖುಷಿಯಾಗಿ,

"ಹುರ್ರೆ,.....ಅಮೇಜ಼ಿಂಗ್’ ಎಂದು ಉದ್ಗರಿಸಿದಳು, ನಂತರ ಗೆಳತಿಯರಿಬ್ಬರೂ ಕಾಲೆಜ್ ಡೇ ಗೆ ಹೊರಟರು. ಆದರೆ ಆ ನೇರಳೆ ಸೀರೆಯ ಹಿಂಮ್ದಿರುವು ಗುಟ್ಟು ಪ್ರಣತಿಯ ಅಮ್ಮನಿಗಾಗಲೀ, ವಾರುಣಿಗಾಗಲೀ ಗೊತ್ತಾಗಲೇ ಇಲ್ಲ. 


Rate this content
Log in

Similar kannada story from Abstract