ಗಣೇಶೋತ್ಸವ
ಗಣೇಶೋತ್ಸವ
ಈಗಾಗಲೇ ಮಾತನಾಡಿಕೊಂಡಂತೆ
ವೀರೇಶ, ಪ್ರಶಾಂತ್, ಸಿದ್ಧೇಶ್ವರ, ಗಾಯತ್ರಿ, ಚೈತ್ರ
ಎಲ್ಲರೂ ಗಣೇಶನ ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ರಂಗೇನಹಳ್ಳಿಗೆ ಬಂದಿಳಿದರು.ಎಲ್ಲರೂ ತಮ್ಮ ಗೆಳೆಯ ರಘುವೀರ ನ ಮನೆ ಯಲ್ಲಿ ಬೀಡುಬಿಟ್ಟರು.ಬಹಳ ವರ್ಷ ಗಳ ನಂತರ ಸೇರಿದ ಹಳೆಯ ಗೆಳೆಯರಿಗೆ ತುಂಬಾ ಖುಷಿ ಯಾಯಿತು.
" ಕಳೆದ ಸುಖವೋ ಬರುವ ಸುಖವೋ ಹಳೆಯ ನನ್ನ ಗೆಳೆಯರನ್ನು ನೋಡುವಾಸೆ ಸುಖಗಳೋ"
ಎಂಬ ಎಸ್.ವಿ.ಪರಮೇಶ್ವರ ಭಟ್ ರವರ ಕವನದ ಸಾಲೊಂದರಂತೆ ಹಳೆ ಯ ಗೆಳೆಯ ರನ್ನು ನೋಡಿ, ಮಾತನಾಡಿ, ಯೋಗಕ್ಷೇಮ ವಿಚಾರಿಸುತ್ತಾ,ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಎಲ್ಲರೂ ಸ್ವಲ್ಪ ಸಮಯ ಸಂಭ್ರಮಿಸಿದರು.
ನಂತರ ಈ ಹಿಂದೆ ತಮ್ಮ ಬಾಲ್ಯದಲ್ಲಿ
"ಶ್ರೀ ವಿನಾಯಕ ಸೇವಾ ಸಮಿತಿ"ಯಲ್ಲಿ ನಡೆಸಿ ಕೊಂಡು ಹೋಗುತ್ತಿದ್ದ "ಗಣೇಶೋತ್ಸವ"ವನ್ನು
ನೆನಪಿಸಿಕೊಂಡು ಈ ಬಾರಿಯೂ ಅದೇ ಹೆಸರಿನಡಿ
"ಗಣೇಶೋತ್ಸವ" ವನ್ನು ವಿಜೃಂಭಣೆಯಿಂದ ಆಚರಿಸಬೇಕೆಂದು ಗೆಳೆಯರೆಲ್ಲಾ ಒಕ್ಕೊರಲಿನಿಂದ
ತೀರ್ಮಾನಿಸಿದರು.ಅವರು ನಡೆಸಿದ ಮೀಟಿಂಗ್ ನ ಅಜೆಂಡಾ ಹೀಗಿತ್ತು.
ಒಟ್ಟು ಮೂರು ದಿನಗಳ ಕಾರ್ಯಕ್ರಮ,
ಮೂರು ದಿನಗಳೂ ಪೂಜೆ,ಪ್ರಸಾದ್ ವಿನಿಯೋಗ
ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ಗಳು
ಮತ್ತು ಕಡೆಯ ದಿನ ಗಣೇಶನ ವಿಸರ್ಜನೆ.
ಹೀಗೆ ಮೀಟಿಂಗ್ ಮುಕ್ತಾಯವಾಯಿತು.
ಇದರ ಮಧ್ಯೆ ಊರಿನ ಹಳೆಯ ಉಪಾಧ್ಯಾಯ ರುಗಳಿಂದ ಗಣೇಶೋತ್ಸವ ದ ಕುರಿತಾದ ಪ್ರವಚನ ಇಡಿಸಿದರೆ ಹೇಗೆ? ಎಂಬ ಪ್ರಶಾಂತ್ ನ ಸಲಹೆ ಯನ್ನು ಎಲ್ಲರೂ ಸಮ್ಮತಿಸಿದರು.
ಒಟ್ಟಾರೆ ವೈಭವದ ಗಣೇಶೋತ್ಸವ ಕ್ಕೆ ಹಳೆಯ ಗೆಳೆಯರು ಯೋಜನೆ ಹಾಕಿದರು.
ಇನ್ನು ಹಣಕಾಸಿನ ವಿಚಾರ ಬಂದಾಗ, ಹಳ್ಳಿಯವರು ಕೊಟ್ಟಷ್ಟು ಕೊಡಲಿ, ಉಳಿದು ದನ್ನು ನಾವೇ ಹಂಚಿ ಕೊಂಡರಾಯಿತೆಂದು ತೀರ್ಮಾನಿಸಿದರು.
ಮಾರನೇ ದಿನ ಗಣಪತಿ ಪ್ರತಿಷ್ಠಾಪನೆಗೆ ಸ್ಥಳದ ವಿಚಾರ ಬಂದಾಗ,ಈ ಹಿಂದೆ ನಡೆಸುತ್ತಿದ್ದ ರಂಗಜ್ಜಿ ಮನೆ ಯ ಪಕ್ಕದಲ್ಲೇ ಇರಲಿ ಎಂದು ತೀರ್ಮಾನಿಸಿದ ಗೆಳೆಯರು ತಕ್ಷಣವೇ ರಂಗಜ್ಜಿ ಮನೆಯ ಕಡೆ ಹೊರಟರು.
ರಥದ ಬೀದಿಯಲ್ಲಿ ದ್ದ ರಂಗಜ್ಜಿ ಮನೆ ಯ ಬಳಿ
ಹೋಗಿ ನೋಡಿದಾಗ, ಆ ಜಾಗದಲ್ಲಿ ದೊಡ್ಡ ಬಂಗಲೆ ಎದ್ದಿರುವುದನ್ನು ಕಂಡು ಗೆಳೆಯ ರಿಗೆ
ನಿರಾಶೆ ಯಾಗಿ, "ಮುಂದೇನು? " ಎಂದು
ವೀರೇಶ್ ಮತ್ತು ಪ್ರಶಾಂತ್ ಯೋಚಿಸುತ್ತಾ ಚಿಂತಿತರಾದಾಗ, ಆಹಳ್ಳಿಯಲ್ಲೇ ಉಳಿದುಕೊಂಡಿದ್ದ ರಘುವೀರ್ ಎಲ್ಲರಿಗೂ
ಧೈರ್ಯ ತುಂಬಿ ಹುರಿದುಂಬಿಸಿ ದ್ದನು.
"ನಾವು ಈಗಲೇ ಹೋಗಿ ಇಲ್ಲಿನ ಸರಪಂಚರನ್ನು
ಭೇಟಿಮಾಡಿ ಜಾಗದ ಬಗ್ಗೆ ಇತ್ಯರ್ಥ ಮಾಡಿಕೊಳ್ಳೋಣ" ಎಂದು ಹೇಳಿದಾಗ ಉಳಿದವರೆಲ್ಲರೂ ರಘುವೀರ ನನ್ನು ಹಿಂಬಾಲಿಸಿ ದರು. ಮೊದಮೊದಲು ಇವರ ಬಗ್ಗೆ ಅಸಡ್ಡೆ ತೋರಿದ ಸರಪಂಚರು,ನಂತರ ಇವರ ಉತ್ಸಾಹ ಹಾಗೂ ಛಲವನ್ನು ಕಂಡು,ಊರ ಮುಖ್ಯ ದ್ವಾರ ದ ಅರಳೀಕಟ್ಟಿ ಯು ಪಕ್ಕದಲ್ಲಿ ಪೆಂಡಾಲ್ ಹಾಕಿಕೊಳ್ಳಲು ಅನುಮತಿ ನೀಡಿದಾಗ, ಎಲ್ಲರಿಗೂ ನೆಮ್ಮದಿ ಯಾಯಿತು. ಜಾಗದ ಸಮಸ್ಯೆ ಪರಿಹಾರ ವಾದ ನಂತರ ಪೆಂಡಾಲ್
ಹಾಕುವುದಕ್ಕೆ ಯೋಜನೆ ಹಾಕಲು ಪ್ರಾರಂಭಿಸಿ ದರು. ರಂಗೇನಹಳ್ಳಿಯಲ್ಲಿ ಪೆಂಡಾಲ್ ಹಾಕುವುದಕ್ಕೆ ಯಾವುದೇ ವ್ಯವಸ್ಥೆ ಇರಲಿಲ್ಲ ವಾಗಿ, ಪಕ್ಕದಲ್ಲೇ ಇದ್ದ ತಾಲೂಕು ಹೆಡ್ ಕ್ವಾರ್ಟರ್ಸ್ ಬ್ರಹ್ಮ ಪುರಿ ಯಿಂದ ಪೆಂಡಾಲ್ ಹಾಕುವುದಕ್ಕೆ ವ್ಯವಸ್ಥೆ ಮಾಡಿದರು.
ಪಾಪ, ಈ ಗೆಳೆಯರಿಗೆ ರಂಗೇನಹಳ್ಳಿಯವರಿಂದ
ಯಾವುದೇ ರೀತಿಯ ಸಹಾಯ ಸಹಕಾರ ಗಳು
ದೊರೆ ಯದಿದ್ದುದ್ದರಿಂದ., ಎಲ್ಲಾ ವ್ಯವಸ್ಥೆ ಗಳನ್ನು
ಇವರೇ ನಿಭಾಯಿಸಬೇಕಾಗಿತ್ತು.
"ಈ ಹಳ್ಳಿ ಯ ವಾತಾವರಣ ಮೊದಲಿನಂತೆಯೇ ಇದೆ. ಕೆಲವು ಮನೆ ಗಳು ಬದಲಾಗಿದ್ದರೂ,ಇಲ್ಲಿಯವರ
ಮನಸ್ಥಿತಿ ಬದಲಾಗಿಲ್ಲ, ಎಲ್ಲವನ್ನೂ ಹೇಗೆ ನಿಭಾಯಿಸೋದು?" ವೀರೇಶ ಬೇಸರದಿಂದ ಬಡಬಡಿಸಿದಾಗ, "ಇರಲಿ ಬಿಡು ವೀರು,ಈ ಬಾರಿ ನಾವು ಹೇಗೋನಿಭಾಯಿಸೋಣ, ಬಿ.ಕೂಲ್. ಎಲ್ಲವೂ ನಾವಂದುಕೊಂಡಂತೆಯೇ ನಡೆಯುತ್ತದೆ" ಪ್ರಶಾಂತ್ ಅವನನ್ನು ಸಮಾಧಾನ ಪಡಿಸಿದ.
ಅಂತೂ ಇಂತೂ ಗೆಳೆಯ ರ ಪರಿಶ್ರಮ ದ ಫಲವಾಗಿ ಗಣೇಶೋತ್ಸವ ಕ್ಕೆ ರಂಗೇನಹಳ್ಳಿ ರಂಗೇರತೊಡಗಿತು. ಹಳ್ಳಿಯ ವರು ತಮ್ಮ ಸಹಕಾರ ನನ್ನು ನೀಡದೇ ಇದ್ದರೂ, ಅಲ್ಲಲ್ಲಿ ಇದ್ದ, ಸೋಂಬೇರಿ ಕಟ್ಟೆಗಳಲ್ಲಿ ಕುಳಿತು ಎಲ್ಲವನ್ನೂ ಗಮನಿಸುತ್ತಿದ್ದರು. ಪೆಂಡಾಲ್, ಲೈಟಿಂಗ್,ಊಟ ತಿಂಡಿಗಳ ವ್ಯವಸ್ಥೆ ಗಳು ಒಂದೊಂದಾಗಿ ಏರ್ಪಾಡಾಯಿತು. ಇದರ ನಡುವೆ ಉಪನ್ಯಾಸ ಕ್ಕಾಗಿ ಹಿರಿಯ ತಲೆಮಾರಿನ ಸಂಸ್ಕೃತ ಉಪಾಧ್ಯಾಯ ರಾದ ಶ್ರೀ ಸೋಮಯಾಜುಲು ಅವರನ್ನು ಸಭೆಗೆ ಆಹ್ವಾನಿಸುವ
ಕೆಲಸವು ಪ್ರಶಾಂತ್ ಪಾಲಿಗೆ ಬಂದಿತ್ತು.
ಅವನು ಸಂಸ್ಕೃತ ಉಪಾಧ್ಯಾಯ ರನ್ನು ಭೇಟಿಯಾಗಿ ವಿಷಯ ತಿಳಿಸಿ,ಪ್ರವಚನ ಮಾಡಲು ಬಿನ್ನವಿಸಿಕೊಂಡಾಗ,ಅವರು , ತಮ್ಮ ಅನಾರೋಗ್ಯ ದ ಕಾರಣಗಳಿಂದ ಪ್ರವಚನ ಮಾಡಲು ಸಾಧ್ಯವಿಲ್ಲ ವೆಂದು ತಿಳಿಸುತ್ತಾ, ತಮ್ಮ ಹಳೆಯ ವಿದ್ಯಾರ್ಥಿಗಳು ನಡೆಸುತ್ತಿರುವ ಈ ಸತ್ಕಾರ್ಯ ಸಾಂಗವಾಗಿ ನೆರವೇರಲಿ ಎಂದು ಆಶೀರ್ವದಿಸಿ, ಬೀಳ್ಕೊಟ್ಟರು.
ನಂತರ ಅದೇ ಶಾಲೆಯಲ್ಲಿ ಕನ್ನಡ ಪಂಡಿತ್ ಆಗಿದ್ದು ಮತ್ತೊಬ್ಬ ಹಿರಿಯ ಉಪಾಧ್ಯಾಯರಾಗಿ
ಶ್ರೀವಿದ್ಯಾ ತೀರ್ಥ ರನ್ನು ಭೇಟಿಯಾಗಿ, ಅವರನ್ನು ತಮ್ಮ ಈ ಗಣೇಶೋತ್ಸವ ದಲ್ಲಿ ,ಅದರ ವಿಶೇಷ ತೆಯ ಬಗ್ಗೆ ಪ್ರವಚನ ಮಾಡಬೇಕೆಂದು , ಪ್ರಶಾಂತ್ ಪ್ರಾರ್ಥಿಸಿಕೊಂಡಾಗ,ಅವರು ಸಂತೋಷದಿಂದ ಒಪ್ಪಿಕೊಂಡು, ತಮ್ಮ ಹಳೆಯ ವಿದ್ಯಾರ್ಥಿಗಳ ಸತ್ಕಾರ್ಯ ನನ್ನು ಶ್ಲಾಘಿಸಿ, ಬೆನ್ನು ತಟ್ಟಿ ಹರಸಿದರು.
ಒಟ್ಟಾರೆ ರಘುವೀರ್, ರುದ್ರೇಶ್, ಗಾಯತ್ರಿ, ಪ್ರಶಾಂತ್, ಚೈತ್ರ ಇವರುಗಳ ಪರಿಶ್ರಮ ದಿಂದ
"ಶ್ರೀ ವಿನಾಯಕ ಸೇವಾ ಸಮಿತಿ" ಬ್ಯಾನರ್ ಅಡಿಯಲ್ಲಿ "ಗಣೇಶೋತ್ಸವ"ಕ್ಕೆ ರಂಗೇನಹಳ್ಳಿ ಸಜ್ಜಾಗತೊಡಗಿತು.ಎಲ್ಲೆಲ್ಲೂ ಸಂಭ್ರಮ ತುಳುಕಾಡತೊಡಗಿತು.ಇದುವರೆಗೂ ಬಾಗಿಲು ಸಂಧಿಗಳಿಂದ ಇಣುಕಿ ನೋಡುತ್ತಿದ್ದವರೆಲ್ಲರೂ
ಬಾಗಿಲ ಹೊರಗೆ ಬಂದು ತಮ್ಮ ಸಹಾಯ ಸಹಕಾರಗಳನ್ನು ಸ್ವ ಇಚ್ಛೆಯಿಂದ ನೀಡತೊಡಗಿದರು.
ಹಬ್ಬದ ಹಿಂದಿನ ದಿನ ರಂಗೇನಹಳ್ಳಿ ನವವಧುವಿನಂತೆ ಸಿಂಗಾರಗೊಂಡಿತು. ದೊಡ್ಡ ದಾದ ಪೆಂಡಾಲ್ ಒಳಗೆ ವಿದ್ದ್ಯುದ್ದೀಪಗಳು ಜಗಮಗಿಸಿದವು.ಎತ್ತರವಾದ ಪೀಠದಲ್ಲಿ ಭವ್ಯ ವಾದ ಗಣೇಶ ನ ಮೂರ್ತಿಯನ್ನು
ಪ್ರತಿಷ್ಠಾಪಿಸಲಾಯಿತು. ಇಡೀ ರಂಗೇನಹಳ್ಳಿಯಲ್ಲಿ ರಂಗುರಂಗಿನ ರಂಗವಲ್ಲಿಯ ಚಿತ್ತಾರಗಳು ಹರಿದಾಡಿತು. ಹೆಂಗಸರು ಬಣ್ಣ ಬಣ್ಣದ ಉಡುಗೆ ತೊಡುಗೆ ಗಳನ್ನು ತೊಟ್ಟು ಸಂಭ್ರಮ ದಿಂದ ಸಾರ್ವಜನಿಕ ಗಣೇಶೋತ್ಸವ ದಲ್ಲಿ ಪಾಲ್ಗೊಳ್ಳಲು ಮುಂದೆ ಬಂದು, ತಮ್ಮ ತಮ್ಮ ಮನೆ ಗಳನ್ನೂ ಮರೆತು
ಓಡಾಡತೊಡಗಿದರು. ಇಡೀ ಹಳ್ಳಿ ನವನವೋನ್ಮೇಷಶಾಲಿನಿಯಾಯಿತು.
"ಗಣೇಶ ಚತುರ್ಥಿ". ದಿನ ಇಡೀ
ರಂಗೇನಹಳಿಳಿಗೆ ಹಳ್ಳಿಯೇ ಪೆಂಡಾಲ್ ನೊಳಗೆ
ಸೇರಿ ಹೋಗತ್ತು. ಮೊದಲು ಗಣಪತಿಯ ಪೂಜೆ ಸಾಂಗವಾಗಿ ನೆರವೇರಿ
"ಗಣಪತಿ ಬಪ್ಪ ಮೋರಿಯ" ಉದ್ಘೋಷ ದೊಂದಿಗೆ ಮಂಗಳಾರತಿ ಮುಗಿಯಿತು. ನಂತರ ಭೂರಿಭೋಜನ. ಸಾಯಂಕಾಲ ಹಳ್ಳಿ ಗರಿಂದ ಜನಪದ ಗೀತೆ, ಸಂಪ್ರದಾಯ ಗೀತೆ, ಭಕ್ತಿ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ.
ಎರಡನೇ ದಿನವೂ ಪೂಜೆ,ಪ್ರಸಾದ ವಿನಿಯೋಗ,
ಸಾಯಂಕಾಲ ಗೆಳೆಯ ರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಕರತಾಡನಗಳು ಕಿವಿಗಡಗಿಚ್ಚಿದವು. ಮೂರನೇ ದಿನ ಬೆಳಿಗ್ಗೆ ಪೂಜೆ,ಪ್ರಸಾದ್ ವಿನಿಯೋಗ ವಾದ ನಂತರ, ಶ್ರೀ ವಿದ್ಯಾ ತೀರ್ಥರಿಂದ ಪ್ರವಚನ. ಅವರು ಸಾರ್ವಜನಿಕ ಗಣೇಶೋತ್ಸವ ನು ಮೊದಲು
ಮಹಾ ರಾಷ್ಟ್ರ ದಿಲ್ಲಿ ಬಾಲಗಂಗಾಧರ ತಿಲಕ್ ರವರಿಂದ ಪ್ರಾರಂಭಗೊಂಡ ವಿಷಯ ನನ್ನು ತಿಳಿಸಿ, ಗಣೇಶ ನ ಮಹಿಮೆ ಯನ್ನು ತಿಳಿಸಿ,ಈ ಬಾರಿ ಇಂತಹ ವೈಭವದ ಗಣೇಶೋತ್ಸವ ವನ್ನು ನೆರವೇರಿ ಸಿದ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು. ಶ್ಲಾಘಿಸಿ ದರು. ವೀರೇಶ ನ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.
ಕಡೆ ಯದಾಗಿ ಮೆರವಣಿಗೆ ಯೊಂದಿಗೆ ರಂಗೇನಹಳ್ಳಿಯ ದೊಡ್ಡ ಕೆರೆಯಲ್ಲಿ ಗಣೇಶನ ವಿಸರ್ಜನೆಯೊಂದಿಗೆ ಗಣೇಶೋತ್ಸವ ಮುಕ್ತಾಯ ಗೊಂಡಿತು. ಗೆಳೆಯ ರೆಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಧನ್ಯರಾದರು.
ರಂಗೇನಹಳ್ಳಿಯ ಪ್ರಮುಖ ರೆಲ್ಲರೂ ತಮ್ಮ ಹಳ್ಳಿಯ ಹಳೆಯ ವಿದ್ಯಾರ್ಥಿಗಳನ್ನು ಶ್ಲಾಘಿಸುತ್ತ, ಪ್ರತಿ ವರ್ಷ ವರ್ಷವೂ ಇದೇ ರೀತಿ ಗಣೇಶೋತ್ಸವ ವವನ್ನು ಆಚರಿಸಬೇಕೆಂದು ಕೇಳಿ ಕೊಂಡಾಗ, ಗೆಳೆಯರೆಲ್ಲರೂ ಸಂತೋಷದಿಂದ ಸಮ್ಮತಿಸಿದರು.
ಬಹಳ ವರ್ಷಗಳ ನಂತರ ತಾವು ವಿದ್ಯಾಭ್ಯಾಸ ಮಾಡಿ ದ್ದ ರಂಗೇನಹಳ್ಳಿಯಲ್ಲಿ ಮತ್ತೆ ವೈಭವದ ಗಣೇಶೋತ್ಸವ ಆಚರಿಸಿದ ಬಗ್ಗೆ ವೀರೇಶ್, ಪ್ರಶಾಂತ್, ರಘು ವೀರ್, ಗಾಯತ್ರಿ, ಚೈತ್ರ ಎಲ್ಲರಿಗೂ ತೃಪ್ತಿ ತಂದಿತ್ತು. ಎಲ್ಲರೂ
ಸಂತೋಷದಿಂದ ತಮ್ಮ ತಮ್ಮ ಊರುಗಳಿಗೆ ಹೊರಟರು.
. ವಿಜಯಭಾರತೀ.ಎ.ಎಸ್
